ಸನಿಹದ ಮಹತ್ವ ತಿಳಿಯುವುದು ದೂರದಲ್ಲಿರುವಾಗಲೇ..!

Posted: ಮಾರ್ಚ್ 4, 2009 in ಲೇಖನ

canadas-on-nest-7-4-071

ಓದುವುದಕ್ಕಾಗಿಯೋ, ಕೆಲಸ ಸಿಕ್ಕ ಕಾರಣಕ್ಕೋ ಮನೆಯಿಂದ ಹೊರಗೆ ಮನೆ ಮಾಡಲು ಹೊರಟಾಗ ಕಾಡುವ ಮನದ ವಿರಹಕ್ಕೆ, ಒಂದು ಜಾತಿಯ ಖಾಯಿಲೆಗೆ ‘ಹೋಂ ಸಿಕ್‌ನೆಸ್’ ಅಂತ ಹೆಸರು. ಪ್ರತಿಯೊಬ್ಬರೂ ಬಾಳಿನ ಯಾವುದೋ ಘಟ್ಟದಲ್ಲಿ ಅನುಭವಿಸಬೇಕಾದ ತಹತಹವಿದು.

ಹುಟ್ಟಿದಾಗಿನಿಂದ ‘ಪರಾವಲಂಬಿ’ ಸಸ್ಯವನ್ನು ಮನದಲ್ಲಿ ಪೋಷಿಸುತ್ತಿರುವವರೇ ಎಲ್ಲರೂ. ಮಗುವಾಗಿದ್ದಾಗ ಆಹಾರದಿಂದ ಹಿಡಿದು ಎಲ್ಲ ಕೆಲಸಕ್ಕೂ ತಾಯಿಯ ಸಹಾಯಬೇಕು. ಬೆಳೆಯುತ್ತಾ ಹೋದಂತೆ ಸ್ವಲ್ಪ ಸ್ವಲ್ಪವಾಗಿ ತಮ್ಮ ಕೆಲಸ ತಾವೇ ಮಾಡುವಷ್ಟಕ್ಕೆ ಬಂದರೂ ಮಾನಸಿಕವಾಗಿ ಪರಿವಾರದೊಡನೆ ಅವಲಂಬಿತವಾಗಿರಲೇಬೇಕು. ತಾತ್ಕಾಲಿಕವಾಗಿ ಯಾವುದೇ ಕಾರಣಕ್ಕೆ ಮನೆ ಬಿಟ್ಟು ಬೇರೆಡೆ ವಾಸಿಸಬೇಕಾದಾಗ ಮಾನಸಿಕವಾಗಿ ಅದಕ್ಕೆ ನಾವು ತಯಾರಿರುವುದಿಲ್ಲ. ಪರಾವಲಂಬಿ ಸಸ್ಯ ಮರವಾಗಿರುತ್ತದೆ. ಜೀವನ ಯುದ್ಧಕ್ಕೆ ಅಣಿಯಾದಾಗ, ಒಮ್ಮೆಲೇ ಆ ಮರವನ್ನು ಕಡಿಯಬೇಕಾದಾಗ ನೋವಾಗುವುದು ಸಹಜ. ನಿಜವಾಗಿಯೂ ಆ ನೋವು ತಮ್ಮ ಕೆಲಸ ತಾವೇ ಮಾಡಿಕೊಳ್ಳಬೇಕಲ್ಲ ಎಂಬ ಆಲಸ್ಯದಿಂದ ಹುಟ್ಟಿದ ನೋವಲ್ಲ. ಸುತ್ತ ಮುತ್ತಲೆಲ್ಲಾ ತಮ್ಮನ್ನೇ ಪ್ರೀತಿಸುವ ಜನರಿರುವ ಪರಿಸರವನ್ನು ಬಿಟ್ಟು ಬೇರೊಂದು ವಿಚಿತ್ರ ವಿಶ್ವಕ್ಕೆ ಕಾಲಿರಿಸಿದಾಗ ಉಂಟುಆಗುವ ಮನಸ್ಸಿನ ಬೇಗೆ ಅದು. ಆ ವಿಶ್ವದಲ್ಲಿ ಎಲ್ಲರೂ ತಂತಮ್ಮ ಕೆಲಸ ಮಾಡಿಕೊಂಡು ಹೋಗುವವರೇ.

ಕಾಲೇಜಿನಿಂದ ಬಂದಾಗ ‘ಹಸಿವಾಗ್ತಿದೆಯೇನೋ ಮಗಾ?’ ಎಂದು ಕೇಳುವ ಅಮ್ಮ ಇಲ್ಲದೇ, ಸದಾ ಜಗಳಾಡುವ ತಮ್ಮನಿಲ್ಲದೆ , ಚಿಕ್ಕ ಚಿಕ್ಕ ವಿಷಯಕ್ಕೂ ಅಳುವ ತಂಗಿಯ ಸಂತೈಸಲಾಗದೆ, ಫಕ್ಕನೆ ಹಣಕ್ಕೆ ತೊಂದರೆ ಬರಲು ನೀಡಲು ತಂದೆಯಿಲ್ಲದೆ ಮನೆಯ ನೆನಪುಗಳು ಸೂಜಿಯಂತೆ ಚುಚ್ಚುವ ಅವಧಿಯಿದು. ಒಂದು ರೀತಿ ‘ಟೆಂಪರರಿ ಅನಾಥ’ರೆನ್ನುವ ಭಾವ ಮೂಡಿಸುವ ಘಳಿಗೆಗಳು!

ನಿರ್ಧಾರಗಳನ್ನು ತೆಗೆದುಕೊಳ್ಳಲು ಸ್ವಾತಂತ್ರ್ಯವಿದ್ದರೂ ಆ ಪ್ರತಿ ನಿರ್ಧಾರಗಳಲ್ಲೂ ತಂದೆ ತಾಯಿ ಇಣುಕದೆ ಇರುವುದಿಲ್ಲ. ಹೊಸ ಗೆಳೆಯರು ಸಿನೆಮಾಕ್ಕೆ ಕರೆದಾಗ ‘ಹೂಂ’ ಅಂದರೂ ‘ಅಪ್ಪ ಇದ್ದಿದ್ದರೆ ಬಯ್ಯುತ್ತಿದ್ದರೇನೋ’ ಅಂತ ಅನ್ನಿಸಿ ಮನಸ್ಸಿಗೆ ಕಿರಿಕಿರಿ ಉಂಟಾಗಬಹುದು. ನಂತರ ಅದೇ ಅಭ್ಯಾಸ ಬಲವಾಗಿ ಅತಿ ಸ್ವಾತಂತ್ರ್ಯ ಬಾಳಿಗೆ ಮುಳುವಾದರೂ ಅಚ್ಚರಿಯಿಲ್ಲ. ಏಕೆಂದರೆ ಹದಿಹರೆಯ, ಬದುಕನ್ನು ಎತ್ತಬೇಕಾದರೆ ಅತ್ತ ಎಸೆಯಬಲ್ಲ ಬಿರುಗಾಳಿ. ಇಂತಹ ಸಮಯದಲ್ಲಿ ಪಾಲಕರು ದೂರದಲ್ಲಿದ್ದರೂ ಮಕ್ಕಳ ಮೇಲೆ ಕಣ್ಣಿರಿಸಬೇಕಾದ್ದು ಅಗತ್ಯ ಮತ್ತು ಅನಿವಾರ್ಯ.

ಮನಸ್ಸಿನ ಮರುಕಕ್ಕೆ ಮತ್ತೊಂದು ಕಾರಣವಾಗಿರುವುದು ಆರೋಗ್ಯ. ಮನೆಯಲ್ಲಾದರೆ ಅಮ್ಮನ ಪ್ರೀತಿಯ ಔಷಧಿಯಿದೆ; ಇಲ್ಲಿ ಅನಾರೋಗ್ಯವಾದರೆ ಏನು ಗತಿ? ಎಂಬ ಪ್ರಶ್ನೆ ಹಾಸ್ಟೆಲಿಗೆ ಬರುವ ಪ್ರತಿ ಹುಡುಗನನ್ನೂ ಕಾಡದೆ ಇರದು.

ಹಾಸ್ಟೆಲ್ಲುಗಳೆಂದರೆ ಹೋಂ ಸಿಕ್‌ನೆಸ್ ನ ಗೂಡು. ಹಾಸ್ಟೆಲ್ಲಿನ ಪ್ರತಿಗೋಡೆಗೂ ನೂರಾರು ಕತೆಗಳು ಗೊತ್ತು. ತವರಿನ ಹಂಬಲ ತಾಳಲಾರದೆ ರಾತ್ರೋ ರಾತ್ರಿ ಮನೆಗೆ ಫೋನ್ ಮಾಡಿ ಗಳ ಗಳನೆ ಅತ್ತು ನೂರಾರು ರೂಪಾಯಿ ಬಿಲ್ ಮಾಡಿದ ಹುಡುಗರು; ಸುತ್ತಲೂ ಪ್ರೀತಿಯಿರದೆ, ಪ್ರೀತಿಗಾಗಿ ನಾಲಿಗೆ ಚಾಚುವ ಮನಕ್ಕೆ ಯಾವುದೋ ಹುಡುಗಿಯ ಚಿಕ್ಕ ಮಾತು ಪ್ರೀತಿಯಂತಾಗಿ ಮೋಸಹೋಗುವ ಹುಡುಗರು; ಮನೆಯ ನೆನಪು ಕಾಡಿ ಕಾಡಿ ಓದಿನ ಮೇಲೆ, ಕಡೆಗೆ ಬದುಕಿನ ಮೇಲೆ ವೈರಾಗ್ಯ (ತಾತ್ಕಾಲಿಕ!) ತಾಳುವ ಹುಡುಗರೂ ಕಡಿಮೆಯಿಲ್ಲ. ಹುಡುಗಿಯರಿಗೂ ಈ ಎಲ್ಲಾ ಮಾತುಗಳು ಅನ್ವಯವಾಗುತ್ತವೆ.

‘ಹೋಂ ಸಿಕ್ ನೆಸ್’ ಎಂಬುದು ಎಷ್ಟು ನೋವುದಾಯಕ ಎನ್ನಿಸಿದರೂ ಅದು ಪ್ರತಿ ವ್ಯಕ್ತಿಗೂ ತನ್ನ ಮೇಲೆ ತಾನು ಅವಲಂಬಿತನಾಗಲು ಮೊದಲ ಮೆಟ್ಟಿಲು. ಸೈಕಲ್ ಕಲಿಯುವಾಗ ಪ್ರಾರಂಭದಲ್ಲಿ ಬೀಳುವುದು ತಪ್ಪದು. ಆ ನೋವು ಇಲ್ಲದೆ ಕಲಿಯಲಾಗದು. ಹಾಗೆ ಬದುಕನ್ನು ಕಲಿಯಲು – ಅರಿಯಲು ನೋವುಗಳು ಅಗತ್ಯ.

ಒಬ್ಬರ ಸಾಂಗತ್ಯದಲ್ಲಿರಲು ಅಲ್ಲಿದ್ದ ಪ್ರೀತಿಯ ಘಮ ಮನಕ್ಕೆ ಅಡರುವುದಿಲ್ಲ. ಅವರಿಲ್ಲದಾಗಲೇ ಅವರ ಇರುವಿನ ಮಹತ್ವ, ಆ ಪ್ರೀತಿಯ ಗಂಧ ಅರಿವಾಗುವುದು. ಮನೆಯಲ್ಲಿ ಸದಾ ಜಗಳಾಡುವ ಮಗ ದೂರದ ಹಾಸ್ಟೆಲಿನಲ್ಲಿದ್ದಾಗ ಪ್ರೀತಿಯಿಂದ ಪತ್ರ ಬರೆಯುವುದಕ್ಕೂ, ಫೋನಿನಲ್ಲಿ ಮಾತು ಮೃದುವಾಗುವುದಕ್ಕೂ ಅದೇ ಕಾರಣ. ದೂರ ಸನಿಹದ ಮಹತ್ವ ಸೂಚಿಸುತ್ತದೆ.

ಮನುಷ್ಯ ಹರಿವ ನೀರಿನಂತಾಗಬೇಕು. ಹೊಸ ಮಣ್ಣು, ಹೊಸ ಗಾಳಿಗೆ ಒಗ್ಗಿಕೊಳ್ಳಬೇಕು. ಹೊಸತೆನ್ನುವುದು ಎದೆಯೊಳಗಿಳಿಯುತ್ತಿದ್ದಂತೆಯೇ ‘ಹೋಂ ಸಿಕ್ ನೆಸ್’ ಇಲ್ಲವಾಗುತ್ತದೆ. ಯಾವ ಮನುಷ್ಯನೂ ಪ್ರತಿಭೆ ಇಲ್ಲದೆ ಹುಟ್ಟಿರಲಾರ. ಅದನ್ನು ಹೊಸ ಜಗದೆಡೆಗೆ ತೋರಿಸಿದರೆ ಜಗತ್ತು ನಿಬ್ಬೆರಗಾಗಿ ನೋಡುತ್ತದೆ. ಹೊಸ ಜಗತ್ತಿನ ಮಂದಿ ಇಷ್ಟ ಪಡುತ್ತಾರೆ. ಇಷ್ಟ ಪ್ರೀತಿಯಾಗಿ ಮನುಷ್ಯರ ನಡುವಿನ ಕೊಂಡಿಯಾಗುತ್ತದೆ!

***********************

ಇದು ಸಡಗರ ಮಾಸಿಕಕ್ಕೆ ಬರೆದ ಲೇಖನ.

ಟಿಪ್ಪಣಿಗಳು
 1. manasu ಹೇಳುತ್ತಾರೆ:

  ರಂಜಿತ್,
  ನಿಮ್ಮ ಈ ಲೇಖನ ಸೂಚಿಸುತ್ತಿರುವುದು ನೂರಕ್ಕೆ ನೂರು ಸತ್ಯ, ಮನೆಯಿಂದ ದೂರಾದಾಗ ಅಗೋ ನೋವು ಬಹಳ ತನ್ನವರಿಂದ ದೂರದಾವೆಂದು ಕಂಗೆಟ್ಟು ಕೂತರೆ ಜೀವನ ಸಾಗೋಲ್ಲ ಎಲ್ಲವನ್ನು ನೀಗಿ ನಡೆದರೆ ಜೀವನ ಸುಲಭ.. ಆದರು ಎಲ್ಲರ ಸಾಮಿಪ್ಯ ಸುಖ ನೀಡುತ್ತೆ… ಮತ್ತೆ ನಮ್ಮಿಂದ ದೂರ ಇರೋ ವಸ್ತುವಿನ ಮಹತ್ವ ಹೆಚ್ಚು ಇರುತ್ತೆ… ಅಮ್ಮನ ಹತ್ತಿರವಿದ್ದರೆ ನೂರೆಂಟು ಹೇಳುತ್ತೇವೆ ಅದೇ ಅಮ್ಮ ದೂರವಿದ್ದರೆ ಅವಳ ಇರುವಿಕೆ ಅರ್ಥವಾಗೋದು..

  ನಮಗೂ ಈ ಅನುಭವಾಗಿದೆ ತಾಯ್ನಾಡ ಬಿಟ್ಟು ದೂರವಿದ್ದೀವಲ್ಲ ಹಾಗಾಗಿ ತಾಯ್ನಾಡ ಬಗ್ಗೆ ಹತ್ತು ಹಲವು ಅನುಭವಗಳಾಗಿವೆ………..
  ಮದುವೆಯಾಗಿ ಗಂಡನ ಮನೆಗೆ ಹೋದಾಗ ಅದು ಒಂದು ರೀತಿ ಹೋಂ ಸಿಕ್ ಮಾಡಿಸಿರುತ್ತೆ.. ಅಪ್ಪ ಅಮ್ಮನ ನೆನಪು ಅಲ್ಲಿನ ವಾತಾವರಣದ ನೆನಪು ಕಾಡುತ್ತೆ….ಎಲ್ಲದರ ಅನುಭವ ನನಗಿದೆ…

  ಇನ್ನು ಹೆಚ್ಚಿನ ಲೇಖನಗಳು ಬರಲಿ..ವಂದನೆಗಳು ಹಾಗು ಧನ್ಯವಾದಗಳು ಈ ಲೇಖನದಿಂದ ನನ್ನ ಹೋಂ ಸಿಕ್ ನೆನಪುಮಾಡಿಸಿದ್ದಕ್ಕೆ…..

 2. ಅನಾಮಿಕ ಹೇಳುತ್ತಾರೆ:

  ರಂಜಿತ್ ಸರ್,

  ನಿಮ್ಮ್ ಲೇಖನದ ಅಂಶಗಳು ನನಗೆ ತುಂಬಾ ಇಷ್ಟವಾಯಿತು…..ನೀವೇಳುವ ಹೋಮ್ ಸಿಕ್‌ನೆಸ್ ವಿಚಾರದಲ್ಲಿ ನಾನು ಬಚಾವ್…..ನಾನು ಎಲ್ಲಿ ಇದ್ದರು ಅದಕ್ಕೆ ಬೇಗ ಹೊಂದಿಕೊಂಡುಬಿಡುತ್ತೇನೆ…ಮತ್ತು ಮೊದಲಿನಿಂದಲೂ ನನ್ನ ಕೆಲಸವನ್ನು ನಾನೇ ಮಾಡಿಕೊಳ್ಳುವುದರಿಂದ ಇದು ಸಾಧ್ಯವಾಗಿದೆಯೇನೋ….ಅದರೂ ಮದುವೆಯಾದ ಮೇಲೆ ಈಗ ಹೆಚ್ಚಾಗಿ ಹೆಂಡತಿಯನ್ನು ಅವಲಂಬಿಸಿರುವುದು ನಿಮ್ಮ ಲೇಖನ ಓದಿದ ಮೇಲೆ ಅರಿವಿಗೆ ಬಂತು….
  ಒಂದೆರಡು ದಿನ ಹೊರಗಿದ್ದರೆ ಹೆಂಡತಿಯ ನೆನಪು ಕಾಡುತ್ತದೆ…..ಅವಳಿಗೂ ಹಾಗೆ ಆಗುತ್ತದಂತೆ…ಇದನ್ನೇ ಅಲ್ಲವೇ ಹೋಂ ಸಿಕ್‌ನೆಸ್ ಅನ್ನುವುದು…..

 3. shivu.k ಹೇಳುತ್ತಾರೆ:

  ರಂಜಿತ್ ಸರ್,

  ನಿಮ್ಮ್ ಲೇಖನದ ಅಂಶಗಳು ನನಗೆ ತುಂಬಾ ಇಷ್ಟವಾಯಿತು…..ನೀವೇಳುವ ಹೋಮ್ ಸಿಕ್‌ನೆಸ್ ವಿಚಾರದಲ್ಲಿ ನಾನು ಬಚಾವ್…..ನಾನು ಎಲ್ಲಿ ಇದ್ದರು ಅದಕ್ಕೆ ಬೇಗ ಹೊಂದಿಕೊಂಡುಬಿಡುತ್ತೇನೆ…ಮತ್ತು ಮೊದಲಿನಿಂದಲೂ ನನ್ನ ಕೆಲಸವನ್ನು ನಾನೇ ಮಾಡಿಕೊಳ್ಳುವುದರಿಂದ ಇದು ಸಾಧ್ಯವಾಗಿದೆಯೇನೋ….ಅದರೂ ಮದುವೆಯಾದ ಮೇಲೆ ಈಗ ಹೆಚ್ಚಾಗಿ ಹೆಂಡತಿಯನ್ನು ಅವಲಂಬಿಸಿರುವುದು ನಿಮ್ಮ ಲೇಖನ ಓದಿದ ಮೇಲೆ ಅರಿವಿಗೆ ಬಂತು….
  ಒಂದೆರಡು ದಿನ ಹೊರಗಿದ್ದರೆ ಹೆಂಡತಿಯ ನೆನಪು ಕಾಡುತ್ತದೆ…..ಅವಳಿಗೂ ಹಾಗೆ ಆಗುತ್ತದಂತೆ…ಇದನ್ನೇ ಅಲ್ಲವೇ ಹೋಂ ಸಿಕ್‌ನೆಸ್ ಅನ್ನುವುದು…..

 4. ಸುನಾಥ ಹೇಳುತ್ತಾರೆ:

  ನಿಮ್ಮ ಮಾತು ನೂರಕ್ಕೆ ನೂರು ಸತ್ಯ!

 5. ರೋಹಿಣಿ ಹೇಳುತ್ತಾರೆ:

  ನಮಸ್ತೆ ಗುರುಗಳೇ
  ನೀವು ಹೇಳಿದ ಮಾತು ನಿಜ ಮನೆ ಬಿಟ್ಟು ಹೊರಗಡೆ ಇರೋ ಎಲ್ಲರಿಗೂ ಇಂತಹ ಒಂದು ಭಾವನೆ ಒಂದಲ್ಲ ಒಂದು ದಿನ ಕಡೋದು ಸತ್ಯ

 6. kallare ಹೇಳುತ್ತಾರೆ:

  ಹೀಗೆ ವಿಷ್ಯ… ನಂಗೆ ಈ ಹೋಮ್ ಸಿಕ್ ನೆಸ್ ಎಲ್ಲ ಗೊತ್ತಿಲ್ಲಾ ಸಾಮಿ.ಆಗಾಗ ಬೆಂದಕಾಳೂರಲ್ಲೇ ಉಳಕೊಂಡ್ರೂ, ತಿಂಗಳಲ್ಲಿ ಮೂರು ವಾರನಾದ್ರೂ ಮನೆಗೆ ಹೋಗ್ತೀನಿ 🙂

 7. ರಂಜಿತ್ ಹೇಳುತ್ತಾರೆ:

  ಮನಸು,

  ನಿಮ್ಮ ಕಾಮೆಂಟು ಓದಿ ಬಹಳ ಖುಷಿಯಾಯಿತು. ಈ ಹೋಮ್ ಸಿಕ್ ನೆಸ್ಸ್ ಖಾಯಿಲೆ, ಕೀಳರಿಮೆ ಜತೆಗೂಡಿ ನನ್ನನ್ನು ವರ್ಷಾನುಗಟ್ಟಲೆ ಹಿಂಸಿಸಿವೆ. ಅದರ ಮೇಲೆ ಸುಂದರ ಸೇಡನ್ನು ಈ ಲೇಖನದ ಮೂಲಕ ತೀರಿಸಿಕೊಂಡಿರುವೆ.

  ಹೀಗೇ ಪ್ರೋತ್ಸಾಹಿಸುತ್ತಿರಿ.

 8. ರಂಜಿತ್ ಹೇಳುತ್ತಾರೆ:

  ಶಿವು ಸರ್,

  ಹೊಂದಿಕೊಳ್ಳುವುದನ್ನು ಕಷ್ಟಪಟ್ಟಾದರೂ ಕಲಿತಿರಬೇಕಾದ್ದು ಅನಿವಾರ್ಯ.
  ಮಕ್ಕಳಿಗೆ ಚಿಕ್ಕಂದಿನಲ್ಲೇ ಹೊಸ ಸ್ಥಳಗಳಿಗೆ ಹೊಂದಿಕೊಳ್ಳುವುದನ್ನು ಪ್ರೀತಿಸುವುದನ್ನು ಕಲಿಸಿದರೆ ಮುಂದೆ ಈ ತೊಂದರೆಗಳಿಂದ ಬಚಾವಾಗುತ್ತಾರೆ.

  ಅಂದ ಹಾಗೆ ನಿಮ್ಮ ಹಾಗೂ ನಿಮ್ಮ ಹೆಂಡತಿಯದ್ದು ಅದ್ಯಾವ ಹೋಮ್ ಸಿಕ್ ನೆಸ್ಸೂ ಅಲ್ಲಾ ಸರ್.. ಅದು ಡೆಫಿನೆಟ್ಟಾಗಿ ಪ್ರೀತಿಯೇ..:)

 9. ರಂಜಿತ್ ಹೇಳುತ್ತಾರೆ:

  ಸುನಾಥ್ ,

  ಧನ್ಯವಾದಗಳು ನಿಮ್ಮಭಿಪ್ರಾಯಕ್ಕೆ. ಪ್ರೋತ್ಸಾಹಿಸುತ್ತಿರಿ ಹೀಗೆ.

  ಅಂದ ಹಾಗೆ ಸ್ವಾನುಭವದಿಂದ ಸಮ್ಮತಿಯಾ ಸರ್:)?

 10. ರಂಜಿತ್ ಹೇಳುತ್ತಾರೆ:

  ರೋಹಿಣಿ,

  ಮದುವೆಯಾದರೆ ನಿಮಗೆ ಇದು ಕಾಡುವ ಸಂಭವನೀಯತೆಯಿದೆ. ಅಂಥ ಸಮಯ ಹತ್ತಿರದಲ್ಲಿದೆಯೆ?

 11. ರಂಜಿತ್ ಹೇಳುತ್ತಾರೆ:

  ಕಲ್ಲಾರೆಯವರೇ,

  ತಿಂಗಳಲ್ಲಿ ಮೂರು ಸರತಿ ಅಂತ ಹೇಳಿ ಹೊಟ್ಟೆ ಉರಿಸುತ್ತಿದ್ದೀರಲ್ಲಾ ಸರ್?

 12. Shruthi ಹೇಳುತ್ತಾರೆ:

  Hi ranjith,

  My Kannada is poor so can’t write in comments in Kannada.(kshme iralli)

  But i must tell you whatever u are telling is 100 % true.
  i know what is home sickness.
  Sometimes being more independent also is dangerous i think u will loose the emotional values of life,family attachment feelings.

  From past 6yrs I’m staying outside my life gone through so many situations where i felt very alone and needed my parents and loved ones.
  sometimes i feel if my parents and my loved ones are not there when i needed them badly whats the use.

  i feel in some point of time we are all loosing that society culture,social living.
  i think enviornment,the way of living are the resaons.
  Really i miss those days when i use sit hours together and chat with my parents and my sisters.
  somewhere i feel we are loosing the love essence of the releationships.
  whom to balme is the question soceity?ourself? really can’t find the answer.

  Shruthi

 13. ರಂಜಿತ್ ಹೇಳುತ್ತಾರೆ:

  Hi Shruthi,

  I’m really pleased to receive the comments like yours. It’s ok if you didn’t write in Kannada. Communicating the emotion is important, not the language.

  By living away from home in the childhood we may not get the love, care from parents is the biggest minus I must agree. In the other view, even when we get the job there will be a necessity created to go out of home, leaving our kingdom.

  It makes me guilty to be away from home and parents when they really need us with them.

  Your words are 100% true. There is a drastic change in the last 10 years in relationships, the behavior, the way in which enjoying the life. Unfortunately, we cannot do anything except being a silent watcher.

  But it’s all part and parcel of the life. You have to miss the time spent with your parents to make sure your children’s shouldn’t lose those happy times with you.;-)

  And I hope next time you will comment in Kannada, definately that effort would make me more happy!..:)

  Thanks!

  – Ranjith.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s