ನಿಮ್ಮಿಂದಲೇ!

Posted: ಮಾರ್ಚ್ 7, 2009 in ಬ್ಲಾಗ್ ನ ಬಗ್ಗೆ..

 

blue20flower

ಆರು ತಿಂಗಳ ಹಿಂದೆ ನೀಲಿಹೂವನ್ನು ಶುರುಮಾಡುವಾಗ ಬಹಳಷ್ಟು ಗೊಂದಲಗಳಿದ್ದವು. ಈ ಬ್ಲಾಗನ್ನು ಓದುತ್ತಾರಾ, ಇಲ್ಲಿನ ಬರಹಕ್ಕೂ ಮಾನ್ಯತೆಯಿದೆಯಾ, ಅಥವಾ ನಿರಾಸಕ್ತಿ ಮೂಡಿ ಅಪ್ ಡೇಟ್ ಆಗದೇ ನಿಂತ ನೀರಂತಿರುವ ಸಾವಿರ ಸಾವಿರ ಬ್ಲಾಗುಗಳಲ್ಲಿ ಇದೂ ಒಂದಾಗಿ ಬಿಡುತ್ತದಾ ಎಂಬ ಭಯಮಿಶ್ರಿತ ಅನುಮಾನಗಳಿದ್ದವು. ಎಲ್ಲಾ ಪತ್ರಿಕೆಗಳಲ್ಲೂ ಕಡಿಮೆಯೆಂದರೆ ಒಮ್ಮೆಯಾದರೂ ಬರೆದ ಅನುಭವವಿದ್ದರೂ ಈ ಬ್ಲಾಗ್ ಎಂಬ ಮಾಯಾಲೋಕದ ಅನುಭವವೂ ಬೇಕನ್ನಿಸಿತ್ತು. ಮತ್ತೊಂದು ಕಾರಣವೆಂದರೆ ಕರ್ನಾಟಕದಲ್ಲಿದ್ದಿದ್ದರೆ ಬರೆದುದನ್ನು ಯಾವುದಾದರೂ ಪತ್ರಿಕೆಗೆ ಕಳುಹಿಸಿ ಖುಷಿಪಡುತ್ತಿದ್ದೆ. ಈ ದೇಶಕ್ಕೆ ಬಂದ ಮೇಲೆ ಅದೂ ಸಾಧ್ಯವಾಗದೇ ಹೋದುದು ಬ್ಲಾಗು ತೆರೆಯಲೇಬೇಕೆಂಬ ಅನಿವಾರ್ಯತೆ ಸೃಷ್ಟಿಸಿತ್ತು.

ಇಲ್ಲಿ ಬರೆಯಲು ಶುರುಮಾಡಿದ ಮೇಲೆ, ಮಗುವಿಗೆ ಸ್ವಲ್ಪ ಬೆನ್ತಟ್ಟಿದೊಡನೆ ಹೇಗೆ ಮತ್ತಷ್ಟು ಉತ್ಸಾಹದಿಂದ ಮುಂದುವರೆಯುತ್ತದೋ ಹಾಗೆ ಒಂದು ವರ್ಗದ ಗೆಳೆಯರ ಬಹಳ ಪ್ರೋತ್ಸಾಹದಿಂದ ಬರವಣಿಗೆ ಮತ್ತಷ್ಟು ವೇಗ ಪಡೆಯಿತು. ಈ ಚಿಕ್ಕ ಹುಡುಗನನ್ನು (?!) ಅಣ್ಣಾ ಎನ್ನುವ, ಗುರುಗಳೇ ಎನ್ನುವ ಒಂದಿಷ್ಟು ಒಳ್ಳೆಯ ಮನಸ್ಸಿನ ಗೆಳೆಯ ಗೆಳತಿಯರೂ ದೊರಕಿದರು. ಅಲ್ಲದೇ ಬ್ಲಾಗಿಂಗ್ , ಜಾಗಿಂಗ್ ದೇಹವನ್ನು ಫಿಟ್ ಆಗಿಡುವಂತೆ ನನ್ನ ಬರಹದ ಬೊಜ್ಜಿಗೆ ಒಂದು ನಿಯಮಿತ ವ್ಯಾಯಾಮದಂತೆ ಕಾಪಾಡುತ್ತಿದೆ. ಹೀಗೆ ಕಳೆದಾರು ತಿಂಗಳಿನಿಂದ  ನನ್ನೊಳಗಿನ ಬರಹಗಾರನನ್ನು ತಣಿಸುತ್ತಿರುವ, ಸೃಜನಶೀಲತೆಯನ್ನು ಕಾಪಾಡುತ್ತಿರುವ ನೀಲಿಹೂವು  ನಿಧಾನವಾಗಿ ನನಗೊಂದು ಐಡೆಂಟಿಟಿ ಕೂಡ ನೀಡಿದೆ.

ಈಗ ಇಷ್ಟು ಕಡಿಮೆ ಅವಧಿಯಲ್ಲಿ ನೀಲಿಹೂವಿಗೆ 10,000 ಹಿಟ್ಸ್!!.

ಈ ಹಿಟ್ಸ್ ಎಂಬುದು ಬ್ಲಾಗ್ ನ ಗುಣಮಟ್ಟ ಅಳೆಯುವ ಮಾನ ಅಲ್ಲ ಎಂದು ತಿಳಿದಿದ್ದರೂ, ಅದೇನೋ ಹೇಳಲಾಗದ ಖುಷಿ ನೀಡುವುದೂ ,ಇದು ನನ್ನ ಬರಹವೂ ಓದಲ್ಪಡುತ್ತಿದೆ ಎಂಬ ಭಾವ ಮೂಡಿಸುವುದೂ ಸುಳ್ಳಲ್ಲ.

ನಿಮ್ಮೆಲ್ಲರ ಪ್ರೋತ್ಸಾಹ, ಪ್ರೀತಿ ಇರದೇ ಹೋಗಿದ್ದರೆ ಬರೆಯುವ ಉಮೇದು ಕೊಂಚವೂ ಇರುತ್ತಿರಲಿಲ್ಲ.  ಕಾಮೆಂಟಿಸಿ, ಮೈಲ್ ಮಾಡಿ, ಫೋನ್ ಮಾಡಿ “ಚೆನ್ನಾಗಿ ಬರೀತಿದ್ದೀರಿ” ಎಂದು ಅಭಿನಂದಿಸಿದವರಿಗೂ, ಮೌನವಾಗಿಯೇ ಮೆಚ್ಚುಗೆ ಸೂಚಿಸುತಿರುವವರಿಗೂ, ಹೊಗಳುವ- ತೆಗಳುವ ಎಲ್ಲರಿಗೂ ನನ್ನ ಹೃತ್ಪೂರ್ವಕ ವಂದನೆಗಳು.

Advertisements
ಟಿಪ್ಪಣಿಗಳು
 1. svatimuttu ಹೇಳುತ್ತಾರೆ:

  all the best anna.. heege baritiri….

 2. ಸುನಾಥ ಹೇಳುತ್ತಾರೆ:

  ರಂಜಿತರೆ,
  ಈ ಹತ್ತುಸಾವಿರ ಗುದ್ದುಗಳಲ್ಲಿ ನನ್ನವೂ ಅಷ್ಟು ಇವೆ ಸಾರ್!

 3. nagtalwar ಹೇಳುತ್ತಾರೆ:

  ಚಂದ ಬರಿತೀರಿ..ಇನ್ನೂ ಬರಿರಲ್ಲಾ..? ಒಳ್ಳೇದಾಗ್ಲಿ ನಿಮಗೆ..!
  -ನಾಗು,ತಳವಾರ್.

 4. ವಿಜಯರಾಜ್ ಕನ್ನಂತ ಹೇಳುತ್ತಾರೆ:

  congraats… 6 tingalinalli 10,000….really gud number….

  10 saavirada saradaararu neeveega….
  ide speedu munduvarisidre…. eegina form continue aadre… neevu lakshaadheesharaguva dinagalu doora illa….

  nija neevu heliddu nija…hittugaLu blog na guNamattada maanadanda allade iddaroo jaasti janakke talupitu andre namage khushi aagodu sahaja.

  nimma blog nalli hit mel hit mel hit…. aaglikke kaarana
  nimma barahagaLu adarallu ondu saalina kathegalu mattu hanigavanagaLu suuuuer aagirode kaarana

  anda haage nanna blog ge march 24kke huTTida habbada sambhrama…

 5. Prakash ಹೇಳುತ್ತಾರೆ:

  Indu ..10000..naale ..100000 ..munde 10000000 aagali endu haaraisuva..
  Inthi,
  NeeliHoovu Abhimani,

 6. pavankir ಹೇಳುತ್ತಾರೆ:

  Congraats….Ranjith..

  Nijakku santhoshada vishaya…naanu nimma barahagalannu bahala istapattu oduttene…yakandre a barahagala proudime nannannu seleyuttade…maatravalla nimma barahada tone nimmanu nimma blogannu nannobba atmeeya sakanendu tilidu preetisuvantaagide..bahala dinadinda comment bareyabeku anta andkondru bareyo dairya irlilla..yakandre navilina naatyavannu vimarshisuvava natya praveenanaagira bekallave….

  Any how…all the best…nimma mattastu barahada niriksheyalli

  Pavan kirankere

 7. Sushrutha ಹೇಳುತ್ತಾರೆ:

  congratsooo.. 🙂

 8. Gururaj ಹೇಳುತ್ತಾರೆ:

  I’ve also contributed to this, you should be thankful to me as well 🙂

  Jes Joking… Congrats!!! You really write lots of good stuff, keep it up 🙂

  Good Luck!

 9. kallare ಹೇಳುತ್ತಾರೆ:

  gud goingu saaru…. innoo chanda aagli neelihiivu 🙂

 10. Rajesh Manjunath ಹೇಳುತ್ತಾರೆ:

  ರಂಜಿತ್,
  ಒಂದು ಮೂಟೆಯಷ್ಟು ಅಭಿನಂದನೆಗಳು… ನೀಲಿ ಹೂವಿನ ಘಮ ಎಂತವರನ್ನು ಆಕರ್ಷಿಸುತ್ತದೆ, ಹೀಗೆ ಮುಂದುವರೆಯಲಿ ಬರವಣಿಗೆ….

 11. ರಂಜಿತ್ ಹೇಳುತ್ತಾರೆ:

  ಇಂಚರ (ಸ್ವಾತಿಮುತ್ತು),

  ಥ್ಯಾಂಕ್ಸ್ ಕಣಮ್ಮ..:)

  ನೀವೆಲ್ಲಾ ಬರುತ್ತಾ ಇದ್ದರೆ ನಾನು ಬರೆಯುತ್ತಿರುತ್ತೇನೆ..:)

 12. ರಂಜಿತ್ ಹೇಳುತ್ತಾರೆ:

  ಸುನಾಥ್ ಸರ್,

  ಹೂವಿನ ತೋಟದಲ್ಲಿ ನೀಡಿದ ಗುದ್ದುಗಳೆಲ್ಲ ಸೇರಿ ಸೇರಿ ಹತ್ತು ಸಾವಿರ ಮುದ್ದುಗಳಾಗಿವೆ ನೋಡಿ ..:)

  ನಿಮ್ಮ ಪ್ರೋತ್ಸಾಹ, ಪ್ರೀತಿ ಸದಾ ಇರಲಿ.

 13. ರಂಜಿತ್ ಹೇಳುತ್ತಾರೆ:

  ನಾಗು,

  ನಾನು ಬರ್ದಿದ್ದು ನಿಮ್ಗೆ ಇಷ್ಟ ಆಗ್ತಿರೋದು ಖುಷಿ ಕೊಟ್ಟಿದೆ.

  ನೀವು ಮೆಚ್ಚಿದರೆ ಒಳಗಿನ ಬರಹಗಾರನಿಗೆ ತುಪ್ಪದೂಟ..!

 14. ರಂಜಿತ್ ಹೇಳುತ್ತಾರೆ:

  ಥ್ಯಾಂಕ್ಸ್ ವಿಜಯ್ರಾಜ್ ಜಿ.

  ಬ್ಲಾಗು ಶುರುಮಾಡುವಾಗ ನಮ್ಮಲ್ಲಿ ಬಹಳಷ್ಟು ಗೊಂದಲಗಳಿರ್ತದೆ. ಬಹುಶಃ ಆಗ ನೀಡುವ ಪ್ರೋತ್ಸಾಹಕ್ಕೆ ಬೆಲೆ ಹೆಚ್ಚು.

  ನೀವಂತೂ ಮೊದಲ ಬರಹದಿಂದಲೂ ತಿದ್ದುತ್ತ, ಮೆಚ್ಚುತ್ತ ಬಂದಿದ್ದೀರಿ. ನಿಮಗೆ ಋಣಿ ನಾನು.

  ನಿಮ್ಮ ಬ್ಲಾಗಿನ ಹುಟ್ಟುಹಬ್ಬಕ್ಕೆ ನನ್ನ ಅಡ್ವಾನ್ಸ್ ಶುಭಾಶಯಗಳು..!

 15. ರಂಜಿತ್ ಹೇಳುತ್ತಾರೆ:

  ಪ್ರಕಾಶ್ ,

  ನಿಮ್ಮ ಅಭಿಮಾನ, ಪ್ರೀತಿಗೆ ಋಣಿ.

  ಹೀಗೆ ಬೆನ್ತಟ್ಟುತ್ತಿರಿ

 16. ರಂಜಿತ್ ಹೇಳುತ್ತಾರೆ:

  ಪವನ್ ,

  ಖುಷಿ ಆಯ್ತು ನಿಮ್ಮ ಅನಿಸಿಕೆ ಓದಿ.

  ನಿಮ್ಮ ಅನಿಸಿಕೆಯನ್ನು ನೀವು ತಿಳಿಸಲು ಧೈರ್ಯ ಎಲ್ಲಾ ಯಾಕೆ ಬೇಕು?

  ಈ ಬ್ಲಾಗಿಗೆ ಬಿಂದಾಸ್ ಆಗಿ ಬಂದು ಆರಾಮ್ ಆಗಿ ಅಭಿಪ್ರಾಯ ತಿಳಿಸಿ..:)

 17. ರಂಜಿತ್ ಹೇಳುತ್ತಾರೆ:

  Gururaj,

  Not only for the “hits”, I need to thank you for helping me to shape up my blog.

  And the title of this article says it all..!

  Thank you very much!

 18. ರಂಜಿತ್ ಹೇಳುತ್ತಾರೆ:

  ಸುಶ್ರುತ,

  ಥ್ಯಾಂಕ್ಯೂ

 19. ರಂಜಿತ್ ಹೇಳುತ್ತಾರೆ:

  ಕಲ್ಲರೆಯವರೇ,

  ಖಂಡಿತಾ. ನೀವು ಬರುತ್ತಿದ್ದರೆ ಅದಾಗೇ ಚಂದವಾಗುತ್ತೆ..

 20. ರಂಜಿತ್ ಹೇಳುತ್ತಾರೆ:

  ರಾಜೇಶ್,

  ಥ್ಯಾಂಕ್ಸ್..!

 21. Reshma ಹೇಳುತ್ತಾರೆ:

  Congrats Ranjith 🙂

 22. ರಂಜಿತ್ ಹೇಳುತ್ತಾರೆ:

  ಥ್ಯಾಂಕ್ಸ್ ರೇಶ್ಮಾ..:)

 23. hemapowar123 ಹೇಳುತ್ತಾರೆ:

  ನಮ್ಮದು ಒಂದು ಇಟ್ಕೊಳ್ರಿ…. ’ಕಂಗ್ರಾಟ್ಸ್’ …… ನಿಮ್ಮ ಬರಹಗಳ, ಬ್ಲಾಗಿನ, ಕವಿತೆಗಳ ಅಭಿಮಾನಿ (ನಿ?!) ಗಳು ಹೆಚ್ಚಾಗ್ತಿದಾರೆ ಅದಕ್ಕೂ ಕಂಗ್ರಾಟ್ಸ್ 😉

 24. Gnanamurthy ಹೇಳುತ್ತಾರೆ:

  ಕಂಗ್ರಾಜುಲೇಶನ್ಸ್ ಗುರುಗಳೇ,

  ಒಳ್ಳೆಯದಾಗಲಿ, ಇನ್ನಷ್ಟು ಹಿಟ್ ಗಳು ಸಿಗಲಿ.. ಹೀಗೆ ಬರೀತಾ ಇರಿ…

  ಜ್ಞಾನಮೂರ್ತಿ….

 25. ನೀಲಾಂಜಲ ಹೇಳುತ್ತಾರೆ:

  ರಂಜಿತ್,
  -ಹತ್ತು ಸಾವಿರ ಹಿಟ್ಸುಗಳಿಗೆ ಕಂಗ್ರಾಟ್ಸ್ .
  -ನನಗೆ ನಿಮ್ಮ ಹೆಡ್ಡಿಂಗ್ ನೋಡಿ ನನ್ನ ಹೆಡ್ಡಿಂಗ್ ( ನಿಮ್ಮೊಂದಿಗೆ ) ನೆನಪಾಯಿತು. ಐಡೆಂಟಿಟಿ ಬಗ್ಗೆ ನೀವು ಬರೆದಿದ್ದಿರಾ 😀

 26. ರಂಜಿತ್ ಹೇಳುತ್ತಾರೆ:

  ಪವಾರ್ ಮೇಡಮ್,

  ನಿಮ್ಮ ಕಂಗ್ರಾಟ್ಸ್ ಗುಚ್ಚಗಳಿಗೆ ಥ್ಯಾಂಕ್ಸ್.

  ಅಂದ ಹಾಗೆ ನನ್ನ ಮುಖಾರವಿಂದ ನೋಡಿ ಓಡಿ ಹೋಗಿ ಅಭಿಮಾನಿನಿಯರು ಕಡಿಮೆ ಆಗಲಿ ಎಂದೇ ಫೋಟೋ ಹಾಕಿಕೊಂಡಿದ್ದೇನೆ, ಗಮನಿಸಲಿಲ್ವೇ ತಾವು?:)

 27. ರಂಜಿತ್ ಹೇಳುತ್ತಾರೆ:

  ಜ್ಞಾನಮೂರ್ತಿಯವರೇ,

  ನನ್ನ ಬ್ಲಾಗಿಗೆ ಸ್ವಾಗತ, ಮತ್ತು ಧನ್ಯವಾದಗಳು ನಿಮ್ಮ ಅನಿಸಿಕೆಗೆ.

 28. ರಂಜಿತ್ ಹೇಳುತ್ತಾರೆ:

  ಸೌಪರ್ಣಿಕಾ ಮೇಡಮ್,

  ನಿಮ್ಮ ಹೆಡ್ಡಿಂಗ್ ನೋಡಿ ಅದರ ಪ್ರೇರಣೆಯಿಂದಲೇ “ನಿಮ್ಮಿಂದಲೇ” ಇಟ್ಟಿದ್ದು ನಿಜ.

  ತಾನು ಸಚಿನ್ ಆಗಬೇಕೆಂದು ಎಷ್ಟು ಪ್ರಯತ್ನಿಸಿದರೂ ಅವನ ಶೈಲಿಯನ್ನು ಎಷ್ಟು ಕಾಪಿ ಮಾಡಿದರೂ ಸೆಹವಾಗ್, “ಸ…ಚಿ..ನ್ ” ಆಗಲು ಸಾಧ್ಯವಿಲ್ಲ ಅಲ್ವೆ?:)

  ಅಂದ ಹಾಗೆ ನೀಲಾಂಜಲ ಹೆಸರು ಕೂಡ ನೀಲಿಹೂವಿಗೆ ಹೋಲುವಂತಿದೆಯಲ್ಲಾ ಅಂತ ಪ್ರಶ್ನೆ ಮಾಡದಿರಿ…
  🙂

 29. neelanjala ಹೇಳುತ್ತಾರೆ:

  ರಂಜಿತ,
  -ನನ್ನ ಹೆಡ್ಡಿಂಗ್ ಪ್ರೇರಣೆಯಿಂದ ಇಟ್ಟಿದ್ದಾ, ಆ!! ಒಳ್ಳೆದಾಗಲಿ.
  -ಯಾಕೋ ಸಚಿನ್ ಮತ್ತು ಸೆಹವಾಗ್ ಉದಾಹರಣೆ ಹಿಡಿಸಲಿಲ್ಲ. ಕ್ರಿಕೇಟ್ ಬಗ್ಗೆ ನಂಗೆ ಅಷ್ಟು ಗೊತ್ತು ಇಲ್ಲ ಬಿಡಿ.
  -ನಾನೆಲ್ರಿ ನಿಮ್ಮ ಬ್ಲಾಗ್ ಹೆಸರ ಬಗ್ಗೆ ಕೇಳಿದೆ? ಎರಡು ಹೆಸರು ಬೇರೆ ಬೇರೆನೆ. ಉಚ್ಚಾರ ಸಹ. ಹೊರ ಹೊಮ್ಮುವ ಅರ್ಥ ಸಹ.
  -‘ನಿಮ್ಮೊಂದಿಗೆ’ ಮತ್ತು ‘ನಿಮ್ಮಿಂದಲೇ’ ಈ ಎರಡು ಬರಹದಲ್ಲಿ ಬ್ಲಾಗ್ ಹಿಟ್ಟುಗಳ ಬಗ್ಗೆ ಇದೆ. ಎರಡು ಸಹ ಓದುಗರ ಜೊತೆಗಿನ ಮಾತು ಕತೆ. ಜೊತೆಗೆ ಐಡೆಂಟಿಟಿ ಶಬ್ಧವನ್ನು ನೀವು ಬಳಸಿದ್ದು ನೋಡಿ ನನಗೆ ನಾನು ಬರೆದಿದ್ದರ ನೆನಪಾಯಿತು. ಇದು ತಪ್ಪು ಎಂದು ನಾನು ಹೇಳಿಲ್ಲ. ಇಬ್ಬರಿಗೂ ಒಂದೇ ರೀತಿ ಅನ್ನಿಸಿರಬಹುದು ಬಿಡಿ. ಕಾಕತಾಳೀಯ.

 30. ರಂಜಿತ್ ಹೇಳುತ್ತಾರೆ:

  ನೀಲಾಂಜಲ,

  ನಿಮಗೆ ಹಿಡಿಸದ ಉಪಮೆ ನೀಡಿದ್ದಕ್ಕೆ, ನಿಮ್ಮ ಬರಹಕ್ಕೆ ಹೋಲಿಕೆಯಿರುವುದಕ್ಕೆ ಕ್ಷಮೆ ಇರಲಿ.

 31. Guru ಹೇಳುತ್ತಾರೆ:

  ಹಾಯ್ ರಂಜಿತ್,
  ನಿಜವಾಗ್ಲೂ ತುಂಬ ಚೆನ್ನಾಗಿ ಇದೆ ನಿಮ್ಮ ಬ್ಲಾಗಿನ articles, ಇನ್ನು ಮೇಲೆ ನಾನು ನಿಮ್ಮ ಬ್ಲಾಗಿನ ಅಥಿತಿ ಆಗಿದೇನೆ,,
  wish you all the best for your feature ಬ್ಲಾಗ್ಸ್ ಲೇಖನಗಳಿಗೆ.

  ಗುರು

 32. ರಂಜಿತ್ ಹೇಳುತ್ತಾರೆ:

  ಗುರು ಅವರೇ,

  ಬ್ಲಾಗು ನಿಮಗಿಷ್ಟವಾಗಿದ್ದು ಸಂತೋಷವಾಯಿತು. ಮೊದಲ ಭೇಟಿ ಅನ್ನಿಸುತ್ತದೆ ನೀಲಿಹೂವಿಗೆ.

  ಸ್ವಾಗತ ನಿಮಗೆ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s