ಜಗತ್ತಿನ ಅದ್ಭುತ ಪ್ರೇಮ ಕ(ವಿ)ತೆ!

Posted: ಮಾರ್ಚ್ 12, 2009 in ಕವಿತೆ

boy2020girl

 

ಕನ್ನಡಿ ಮುಂದೆ ಇಂದು
ಮುಕ್ಕಾಲು ಘಂಟೆ
ಅಲಂಕರಿಸಿಕೊಂಡಿದ್ದರೂ
ಅವನು ನನ್ನತ್ತ ಕಿಂಚಿತ್ತೂ ನೋಡಲಿಲ್ಲ
ಎಂದು ಬೇಸರಿಸಿಕೊಂಡ ಹುಡುಗಿ..
 
 
ಅವಳನ್ನು ಹಾಗೆ ತಿನ್ನುವ ಹಾಗೆ
ನೋಡುತ್ತಿದ್ದಾನೆಂದು ತಿಳಿದರೆ
ಅವಳೆಲ್ಲಿ ತನ್ನನ್ನು
ಜೊಲ್ಲುಬುರುಕ
ಅಂದುಕೊಂಡುಬಿಡುವಳೋ
ಎಂದು ಹೆದರಿ ಡೀಸೆಂಟ್ ಆಗಿ
ತಲೆ ತಗ್ಗಿಸಿ ಕುಳಿತ ಹುಡುಗ..
 
ಜಗತ್ತಿನ ಅದ್ಭುತ ಪ್ರೇಮಕತೆಯೊಂದು
ಹೀಗೆ ಶುರುವಾಗುವ
ಮೊದಲೇ ಕೊ(ಲೆ)ನೆಯಾಯಿತು…!!
Advertisements
ಟಿಪ್ಪಣಿಗಳು
 1. ವಿಜಯರಾಜ್ ಕನ್ನಂತ ಹೇಳುತ್ತಾರೆ:

  chennagide ranjit… aadroo nimma endina touch swalpa bittu hogide idarlli

 2. ಪ್ರದೀಪ್ ಹೇಳುತ್ತಾರೆ:

  ಚೆನ್ನಾಗಿದೆ ಸಾರ್! ಜಗತ್ತಿನ ಅದ್ಭುತ ಪ್ರೇಮಕಥೆ 🙂
  ಆದ್ರೆ, ಕವಿತೆಗಿಂತಾ ಇದು ಕಥೆಯೇ ಸರಿ…

 3. shivu.k ಹೇಳುತ್ತಾರೆ:

  ರಂಜಿತ್ ಸರ್,

  ಕವನ ಹೇಳುವಂತೆ ನಡೆಯುವುದೇ ಹೆಚ್ಚು….ಪ್ರಪಂಚವೇ ಹಾಗಲ್ಲವೇ…

  ಈ ರೀತಿ ಹೇಳುವುದು…ನಿಮ್ಮ ಪುಟಾಣಿ ಕತೆ….

 4. doddappa ಹೇಳುತ್ತಾರೆ:

  THIS IS VERY NICE
  SIR PLZ TELL ME HOW TO WRITE IN KANNADA
  THE KANNADA FOMTS NOT TYPE WAT SOFTWEAR NECESERY TO THIS

 5. ರೋಹಿಣಿ ಹೇಳುತ್ತಾರೆ:

  ನಮಸ್ತೇ ಫ್ರೆಂಡು
  ಎನ್ರಿ ಪ್ರೇಮ ಕತೆ ಆರಂಭ ಆಗುವ ಮೊದಲೇ ಕೊಲೆ ಮಾಡಿಬಿಟ್ರಲ್ರಿ
  ಈಗ ಹೆಚ್ಚಾಗಿ ನಡೆಯುವುದು ಹೀಗೆ ಅಲ್ವ ಫ್ರೆಂಡು

 6. minchulli ಹೇಳುತ್ತಾರೆ:

  beautiful…

 7. ಶರಶ್ಚಂದ್ರ ಕಲ್ಮನೆ ಹೇಳುತ್ತಾರೆ:

  ಕತೆಯೋ.. ಕವಿತೆಯೋ… ನಿಜವನ್ನೇ ಹೇಳಿದ್ದೀರಿ ರಂಜಿತ್ 🙂 ಪುಟ್ಟದಾಗಿ ಚನ್ನಾಗಿ ಬರೆದಿದ್ದೀರಿ.

 8. NANDANA ಹೇಳುತ್ತಾರೆ:

  Super agide anna….

 9. ಮನಸು ಹೇಳುತ್ತಾರೆ:

  ಚೆನ್ನಾಗಿದೆ… ಪ್ರೇಮ ಕವಿತೆ…ಕತೆ ಹೀಗೆ ಬರೆಯುತ್ತಲಿರಿ.
  ವಂದನೆಗಳು.

 10. ಸುನಾಥ ಹೇಳುತ್ತಾರೆ:

  ನೂರಕ್ಕೆ ನೂರು ಸತ್ಯವಾದ ಕ(ವಿ)ತೆ!

 11. Roopa ಹೇಳುತ್ತಾರೆ:

  HI Ranjith,
  As mentioned to you, its an awesome poem.!!!

 12. ramesha ಹೇಳುತ್ತಾರೆ:

  Hey its really nice.

  I enjoyed reading every line of u r blog.

  I liked it…

  Get back to me on mesha.chin@gmail.com

 13. svatimuttu ಹೇಳುತ್ತಾರೆ:

  nice poem anna…

 14. ರಂಜಿತ್ ಹೇಳುತ್ತಾರೆ:

  ವಿಜಯ ರಾಜ್ ಸರ್,

  ಹಿಂದಿನದಕ್ಕಿಂತ ಈ ಸಲ ಏನಾದರೂ ವಿಭಿನ್ನವಾಗಿ ಬರೆಯೋಣ ಅಂತ ಬರೆದಿದ್ದು.

  ನನಗಿಷ್ಟವೆನ್ನಿಸಿತು.

  ಮುಂದಿನ ಕವಿತೆಗಳು ನಿಮಗೂ ಇಷ್ಟವಾಗಬಹುದು, ನನ್ನ ಪ್ರಯತ್ನ ಜಾರಿಯಲ್ಲಿಡುವೆ.

 15. ರಂಜಿತ್ ಹೇಳುತ್ತಾರೆ:

  ಪ್ರದೀಪ್,

  ಅದಕ್ಕೇ ಶೀರ್ಷಿಕೆಯಲ್ಲಿ ಕ(ವಿ)ತೆ ಅಂತ ಹಾಕಿದ್ದು. ಮಧ್ಯದ “ವಿ” ನನ್ನನು ಉಳಿಸಿದೆ ಅನ್ನಿಸುತ್ತದೆ!

  ಧನ್ಯವಾದಗಳು ನಿಮ್ಮಭಿಪ್ರಾಯಕ್ಕೆ.

 16. ರಂಜಿತ್ ಹೇಳುತ್ತಾರೆ:

  ಶಿವು,

  ಹೌದು. ಸಭ್ಯಸ್ಥನ ಸೋಗಿನಡಿ ಎಷ್ಟು ಪ್ರೇಮಕತೆಗಳು ಮುಚ್ಚಿಹೋಗಿದೆಯೋ!:)

 17. ರಂಜಿತ್ ಹೇಳುತ್ತಾರೆ:

  ದೊಡ್ಡಪ್ಪನವರೇ,

  ದಯವಿಟ್ಟು ಮೊದಲು ಬರಹ.ಕಾಮ್ ಗೆ ಹೋಗಿ ಡೌನ್ ಲೋಡ್ ಮಾಡಿಕೊಳ್ಳಿ.

  ಅಲ್ಲಿನ ಹೆಲ್ಪ್ ವಿಭಾಗದಲ್ಲಿ ಎಲ್ಲ ಮಾಹಿತಿಗಳೂ ಸಿಗುತ್ತವೆ ನಿಮಗೆ.

 18. ರಂಜಿತ್ ಹೇಳುತ್ತಾರೆ:

  ರೋಹಿಣಿ , ಶಮಾ, ನಂದನ, ಹೇಮಶ್ರೀ, ಮನಸು , ಸುನಾಥ್, ಇಂಚರ

  ಕ(ವಿ)ತೆ ಇಷ್ಟಪಟ್ಟಿದ್ದಕ್ಕೆ ಥ್ಯಾಂಕ್ಸ್.

  ಹೇಮಶ್ರೀ ಯವರೇ ಈ ಬ್ಲಾಗಿಗೆ ಸ್ವಾಗತ!

 19. ರಂಜಿತ್ ಹೇಳುತ್ತಾರೆ:

  ಕಲ್ಮನೆಯವರೇ,

  ಮೊದಲೇ ಅಂದಂತೆ ಮಧ್ಯದ “ವಿ” ಅಕ್ಷರ ನನ್ನ ಬರಹವನ್ನುಳಿಸಿದೆ!

  ಧನ್ಯವಾದಗಳು.

 20. ರಂಜಿತ್ ಹೇಳುತ್ತಾರೆ:

  ರಮೇಶ್,

  ನಿಮ್ಮ ಮೆಚ್ಚುಗೆಗೆ ಖುಷಿಯಾಯಿತು.

  ನಮಗೆ ಬರೆಯಲು ಸ್ಪೂರ್ತಿ ನಿಮ್ಮೆಲ್ಲರ ಬೆನ್ತಟ್ಟುವಿಕೆಯೇ.

  ಥ್ಯಾಂಕ್ಸ್.

 21. ರಂಜಿತ್ ಹೇಳುತ್ತಾರೆ:

  ಗೋರೆಯವರೇ ನೀಲಿಹೂವಿಗೆ ಆತ್ಮೀಯ ಸ್ವಾಗತ.

  ರೂಪ ಮೇಡಮ್.. ನೀವು ಮೆಚ್ಚಿದ್ದು ತುಂಬ ಖುಷಿಯಾಯ್ತು. ಬರುತ್ತಿರಿ ಹೀಗೆ.

 22. Sumantha Shanubhag ಹೇಳುತ್ತಾರೆ:

  ಇದು ಅನ್ಯಾಯ… ಮೊದಲ ಪ್ಯಾರಾ ಓದಿ ಫುಲ್ Tempt ಆಗಿ ಆರಾಮದಿದಂದ ಮುಂದೆ ಓದೋಣ ಎಂದು 4 ಚಿಪ್ಸ್ paket 2 sprite ಬಾಟಲ್ ತಂದು ಕೂತು scroll ಮಾಡಿದರೆ ಕವನ ಶುರುವಾಗುವುದಕ್ಕೆ ಮೊದಲೇ ಮುಗಿದಿದೆ .
  ಪಾತಕಿ !!!!! ಕವನದ ಕೊಲೆಗೈದೆಯಾ ???
  ವಿಕಟಕವಿ

 23. ರಂಜಿತ್ ಹೇಳುತ್ತಾರೆ:

  ವಿಕಟಕವಿಗಳೆಗೆ ಬ್ಲಾಗಿಗೆ ಸ್ವಾಗತ,

  ನಿಮ್ಮ ೪ ಪ್ಯಾಕೆಟ್ ಚಿಪ್ಸ್ ಮತ್ತು ೨ ಬಾಟಲ್ sprite ನಷ್ಟಕ್ಕೆ ನನ್ನ ಒಂದು ಬಾಟಲ್ ಸಂತಾಪವಿದೆ.

  ಕವನದ ಕೊಲೆಯಾಯಿತೇ? ಅದನ್ನು ಓದುಗ ಮಹಾಶಯರೇ ತಿಳಿಸಬೇಕು.

  ನಿಮಗೆ ನನ್ನ ಮೇಲೆ ಉಂಟಾದಷ್ಟೇ ಕೋಪ-ತಾಪ ನನಗೆ ಅದರಲ್ಲಿನ ಪ್ರೀತಿಯ ಕೊಲೆಗೆ ಕಾರಣರಾದ ಹುಡುಗ-ಹುಡುಗಿಯ ಬಗ್ಗೆ ಇದೆ.

  ಆದರೇನು ಮಾಡುವುದು ಇದು ರಸ್ತೆ-ರಸ್ತೆಯ ಗಲ್ಲಿ ಗಲ್ಲಿಗಳಲ್ಲಿ ಸಾಮನ್ಯವಾಗಿ ನಡೆಯುತ್ತಿರುವುದು.

  ಅಲ್ಲವೇ ವಿ ಕಟ(ಟು)ಕ ವಿಗಳೇ?

 24. ranjanahegde ಹೇಳುತ್ತಾರೆ:

  ಸ್ವಾರಸ್ಯವಾಗಿದೆ ನಿಮ್ಮ್ ಪುಟ್ಟ ಕಥೆ….

 25. sathya ಹೇಳುತ್ತಾರೆ:

  hi friend
  nice and cute

 26. Rathnakar ಹೇಳುತ್ತಾರೆ:

  truly nice..

 27. ರಂಜಿತ್ ಹೇಳುತ್ತಾರೆ:

  ರಂಜನಾ ಹೆಗ್ಡೆ, ಸತ್ಯ, ರತ್ನಾಕರ್,

  ಈ ಪದಗುಚ್ಚವನ್ನು ಮೆಚ್ಚಿಕೊಂಡಿದ್ದಕ್ಕೆ ಧನ್ಯವಾದಗಳು.

  ಪ್ರೋತ್ಸಾಹವಿರಲಿ ಸದಾ.

 28. girish gowda ಹೇಳುತ್ತಾರೆ:

  edu satya – haage nitya, pratiyobbara jeevanadallada sanna vedane neevedane…
  nimma sundara pada balake manassigidisitu……….

 29. PRAMOD ಹೇಳುತ್ತಾರೆ:

  no words i love to read more poems of you can u help me

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s