ಹೇಗೆ ಅನಿಸಿದ್ದೋ, ಹಾಗೆ ಹನಿಸಿದ್ದು.!

Posted: ಮಾರ್ಚ್ 16, 2009 in ಹನಿಗಳು...

 

 

 

 

 

rain20drops

 

 

 

 

ಇದ್ದ ಬದ್ದ
ದೀಪವೆಲ್ಲಾ
ಉರಿಸಿಯಾಯಿತು,
ಒಳಗಿನ್ನೂ
ಕತ್ತಲು !
 
*****
 
 
ಎದೆ ಸೀಳಿದ ನೋವು
 
ಒಳಗಿನೊಲವನ್ನು ಕಂಡು
 
ಬೆಚ್ಚಿಬಿದ್ದಿದೆ..
 
 
 
*****
 
 
ಚಿವುಟಿಕೊಂಡು ನೋಡದಿರು
 
ಮುಂದುವರೆಯಲಿ
 
ಕನಸುಗಳು
 
ಬದುಕಿನುದ್ದಕ್ಕೂ!
 
 
*****
 
 
ಕನಸಲಿ
 
ಇತ್ತ ಮುತ್ತು
 
ತಲುಪಿರಬೇಕು
 
ಹುಡುಗಿ
 
ನಿದಿರೆಯಲ್ಲೇ ನಗುತ್ತಿದ್ದಾಳೆ..!
 
 
*****
 
ಹೊಡೆದಾಡುತ್ತಿರುವವರಿಗೆ
 
ತಪ್ಪಿಸುವವರು
 
ಇಲ್ಲದಿರುವುದೇ
 
ಶಾಂತಿ !
 
 
*****
ಟಿಪ್ಪಣಿಗಳು
 1. shivu.k ಹೇಳುತ್ತಾರೆ:

  ರಂಜಿತ್ ಸರ್,

  ಕವನ ಚೆನ್ನಾಗಿದೆ…ಅದರಲ್ಲೂ ಈ ಕೆಳಗಿನ ಸಾಲುಗಳು ಇಷ್ಟವಾದವು…

  ಕನಸಲಿ

  ಇತ್ತ ಮುತ್ತು

  ತಲುಪಿರಬೇಕು

  ಹುಡುಗಿ

  ನಿದಿರೆಯಲ್ಲೇ ನಗುತ್ತಿದ್ದಾಳೆ..!

  ಮತ್ತೆ ನನ್ನ ಬ್ಲಾಗಿನಲ್ಲಿ ಚಿಟ್ಟೆಯ ಡೆಲಿವರಿಯಾಗಿದೆ…ನೋಡಲು ಬರುತ್ತಿರಲ್ಲ…..

 2. ಸುನಾಥ ಹೇಳುತ್ತಾರೆ:

  ಉತ್ತಮ ಗಝಲುಗಳು.

 3. kallare ಹೇಳುತ್ತಾರೆ:

  ರಂಜಿತ್,

  ಮಸ್ತ್…

  ಇದು ನಿಮಗೆ. ಹಾಗೇ ಸುಮ್ಮನೆ:

  ಚಿವುಟಿಕೊಂಡು ನೋಡದಿರು.
  ಕನಸುಗಳು ಕಮರದೇ
  ಬೆಳೆಯುತ್ತಿರಲಿ
  ದಿನದಿಂದ ದಿನಕ್ಕೆ
  ಬದುಕಿನುದ್ದಕ್ಕೆ…

 4. kallare ಹೇಳುತ್ತಾರೆ:

  ರಂಜಿತ್,

  ಮಸ್ತ್…

  ಇದು ನಿಮಗೆ. ಹಾಗೇ ಸುಮ್ಮನೆ:

  ಚಿವುಟಿಕೊಂಡು ನೋಡದಿರು.
  ಕನಸುಗಳು ಕಮರದೇ
  ಬೆಳೆಯುತ್ತಿರಲಿ
  ದಿನದಿಂದ ದಿನಕ್ಕೆ
  ಬದುಕಿನುದ್ದಕ್ಕೆ…

 5. ಪ್ರದೀಪ್ ಹೇಳುತ್ತಾರೆ:

  “ಎದೆ ಸೀಳಿದ ನೋವು

  ಒಳಗಿನೊಲವನ್ನು ಕಂಡು

  ಬೆಚ್ಚಿಬಿದ್ದಿದೆ..

  ……

  ಚೆನ್ನಾಗಿದೆ.. 🙂

 6. manasu ಹೇಳುತ್ತಾರೆ:

  kavana chenagide..

 7. Avinash ಹೇಳುತ್ತಾರೆ:

  ರಂಜಿತ್,
  ಕನಸಲಿ ಇತ್ತ ಮುತ್ತು ತಲುಪಿರಬೇಕು…. ಕಲ್ಪನೆ ತುಂಬ ಚೆನ್ನಾಗಿದೆ.

 8. nagtalwar ಹೇಳುತ್ತಾರೆ:

  ಅದೇನ್ರೀ ರಂಜಿತ್ ಜೀ, ಶೀಷಿ೯ಕೆ ಕೊಡೋದರಲ್ಲಿ ನನ್ನ ಪಾಲಿಗೆ ಅದ್ಭುತ ಅನಿಸಿಬಿಟ್ಟಿದ್ದಿರಾ…!ಮುಂದ ಹುಟ್ಟಿ ಬರೋ ನನ್ನ ಮಗುವಿಗೆ ನೀವೇ ಹೆಸರನ್ನ ಹುಡಿಕಿಡ್ರಲ್ಲಾ..? ಹಂಗತ ನಿಮ್ಮ ಬಾಬೀ ಗೆ ಹೇಳಿರ್‍ತೀನಾ ಮತ್ತ..? ಹೆಸರು ಹುಡುಕೋದನ್ನ ಮರ್‍ತೀರಾ..ಜ್ವಾಕಿ..!
  -ನಾಗು,ತಳವಾರ್.

 9. shivu.k ಹೇಳುತ್ತಾರೆ:

  ರಂಜಿತ್ ಸರ್,

  ಮತ್ತೆ ಒಂದೊಂದೆ ಪದ ಪ್ರಯೋಗ ಸೂಪರ್….ಸಿಕ್ಕಾಪಟ್ಟೇ ಇಷ್ಟವಾಗುತ್ತೆ…ಅದರಲ್ಲೂ…

  ಕನಸಲಿ

  ಇತ್ತ ಮುತ್ತು

  ತಲುಪಿರಬೇಕು

  ಹುಡುಗಿ

  ನಿದಿರೆಯಲ್ಲೇ ನಗುತ್ತಿದ್ದಾಳೆ..!

  ಇದಂತೂ ವಾಹ್ !! ಮತ್ತೇನು ಹೇಳಲಾರೆ !!

 10. svatimuttu ಹೇಳುತ್ತಾರೆ:

  ರಂಜಿತ್ ಅಣ್ಣ,
  ೧,೩,೪….. ಇಷ್ಟ ಆಯ್ತು….
  ಚೆನ್ನಾಗಿದೆ….

 11. ರಂಜಿತ್ ಹೇಳುತ್ತಾರೆ:

  ಶಿವು,

  ನಿಮ್ಮ ಫೋಟೋಗ್ರಫಿ ಹವ್ಯಾಸಕ್ಕೆ ಅಂತರಾಷ್ಟ್ರೀಯ ಮನ್ನಣೆ ದೊರಕಿದ್ದಕ್ಕೆ ನಿಮಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು

  ಕವನ ಮೆಚ್ಚಿದ್ದಕ್ಕೆ ಧನ್ಯವಾದಗಳು

 12. ರಂಜಿತ್ ಹೇಳುತ್ತಾರೆ:

  ಕಲ್ಲರೆ,

  ನಿಮ್ಮ ಹಾರೈಕೆಗೆ ಧನ್ಯವಾದಗಳು.

  ಕಳೆದ ಆರು ತಿಂಗಳಿಂದ (ಬ್ಲಾಗು ತೆರೆದಾಗಲಿಂದ)ಚಿವುಟಿ ನೋಡಿಕೊಳ್ಳುತ್ತಿಲ್ಲ…

  ಕನಸುಗಳು ಮುಂದುವರಿಯುತಲಿದೆ.

 13. ರಂಜಿತ್ ಹೇಳುತ್ತಾರೆ:

  ಸುನಾಥ್, ಮನಸು, ಪ್ರದೀಪ್, ಅವಿನಾಶ್, ಇಂಚರ

  ನಿಮ್ಮ ಪ್ರೋತ್ಸಾಹ, ಪ್ರೀತಿ ಹೀಗೇ ಇರಲಿ.

  ಧನ್ಯವಾದಗಳು.

 14. ರಂಜಿತ್ ಹೇಳುತ್ತಾರೆ:

  ನಾಗಣ್ಣ,

  ಹೆಸ್ರಿದ್ದು ಉದ್ದ್ ಪಟ್ಟಿನೇ ತಯಾರೈತೆ.

  ಆದ್ರೆ ಹೆಸರಿಟ್ಟ್ ಮ್ಯಾಕೆ ಸಂಭಾವನೆ ರೂಪ್ದಾಗೆ ಒಂದ್ ಹೊತ್ತಿನ್ ಭರ್ಜರಿ ಊಟ ಬೇಕಾಗ್ತದೆ ನೋಡ್ರಿ

 15. H.S.ARUNKUMAR ಹೇಳುತ್ತಾರೆ:

  ಕನಸಲಿ

  ಇತ್ತ ಮುತ್ತು

  ತಲುಪಿರಬೇಕು

  ಹುಡುಗಿ

  ನಿದಿರೆಯಲ್ಲೇ ನಗುತ್ತಿದ್ದಾಳೆ..!

  ತುಂಬಾ ಚನ್ನಾಗಿದೆ ರಂಜಿತ್.

 16. ರಂಜಿತ್ ಹೇಳುತ್ತಾರೆ:

  ಥ್ಯಾಂಕ್ಸ್ ಅರುಣ್!

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s