ಹೊರಟು ನಿಂತ ಮನಸ್ಸು…

Posted: ಮಾರ್ಚ್ 23, 2009 in ಕವಿತೆ
ಗಾಡಿಯ ತುಂಬಾ ಮನೆ
ಜಾತ್ರೆ ಗದ್ದಲ ಮಾಡುತ್ತಿರುವ ಸಾಮಾನುಗಳು
ನಡುವೆ ಹೊರಟು ನಿಂತ ಸಂಸಾರ
ಅತ್ತ ಸ್ಥಾವರವೂ ಅಲ್ಲ
ಇತ್ತ ಜಂಗಮವೂ..
ಸಮಸ್ತವನ್ನೂ ತನ್ನೊಳಗಿಟ್ಟುಕೊಂಡ
ಮೈವಾಸನೆಯ ಹಾಸಿಗೆ
ಸುರುಳಿಯಾಗಿ ಸಪ್ಪೆಯಾಗಿ ಮಲಗಿ
ಅನಾಥ ನೋಟ ಬೀರಿದೆ
 
ಮನೆಯೊಡತಿಯ ಅಂದಕ್ಕೆ ಗುರುತಾದ
ಊದ್ದನೆಯ ಕನ್ನಡಿ
ಯಾವುದೋ ಪಾತ್ರೆ ರಾಶಿಯ ಪಕ್ಕ
ಅಸಡ್ಡೆಯ ಮುಖಮಾಡಿ ನಿಂತಿದೆ
 
ಹೊಸ ಗೋಡೆಗೆ ಆತುಕೊಳ್ಳುವ
ಮೂರು ಮುಳ್ಳಿನ ಸಮಯ
ಸಾಧಕ ಮೌನ ಆಚರಿಸುತ್ತಿದ್ದಾನೆ
ಇನ್ನು ನಡೆಯುವುದಿಲ್ಲವೆಂಬಂತೆ.

ಹೊರಟ ನಂತರವೂ ಏನೋ ಅನುಮಾನ
ಏನೋ ಹುಡುಕುತ್ತಾಳೆ
ಒಳಗೊಳಗೇ ಚಡಪಡಿಸುತ್ತಾಳೆ
ಗಂಡನ ಕರ್ಚೀಫಿನಲಿ
ಹಣೆಯ ಮೇಲಿನ ಬೆವರು ಒರೆಸುತ್ತಾಳೆ.

ಏನೂ ಉಳಿದಿಲ್ಲ

ಪ್ರತಿಯೊಂದೂ ಕಟ್ಟಿಕೊಂಡಾಗಿದೆ ಬಿಡದೆ.
ಒಳಮನೆಯ ದೇವರ ಆಶೀರ್ವಾದ,
ಬೆಡ್ಡ್ ರೂಮಿನ ಪ್ರೀತಿಯ ಕ್ಷಣ,
ಕಪಾಟಿನ ಅತ್ತರ ಪರಿಮಳ,
ಒದ್ದೆ ಅಂಗಳದ ಪುಟ್ಟ ಪಾದದ ಗುರುತು
ಹಾಗೂ
ಅವನೊಂದಿಗಿನ ಜೀವಂತ
ಕ್ಷಣಗಳ ನೆನಪಿನ ಹೊರತು.
 
 
-(ಕಲ್ಲರೆ ಮಹೇಶ ರ ಸಹಾಯದಿಂದ)
Advertisements
ಟಿಪ್ಪಣಿಗಳು
 1. svatimuttu ಹೇಳುತ್ತಾರೆ:

  last 2 pyaras tumbaa meaningfull and heart touching agide anna……

 2. manasu ಹೇಳುತ್ತಾರೆ:

  tumba chenagide arthagarbhita kooda….

 3. Nagu.Talwar ಹೇಳುತ್ತಾರೆ:

  ಹೊರಟು ನಿಂತ ಮನಸ್ಸು ಓದಿ, ನನ್ನ ಮನಸ್ಸು ನಿಂತಲ್ಲೇ ನಿಂತಿದೆ. ನಿಜಕ್ಕೂ ಚಂದ ಮೂಡಿ ಬಂದಿದೆ.ಸಲಹೆ ಕೊಟ್ಟ ಮಹೇಶ್ ರವರಿಗೂ ಅಭಿನಂದನೆಗಳನ್ನ ತಿಳಿಸಿ.
  -ನಾಗು,ತಳವಾರ್.

 4. Roopa ಹೇಳುತ್ತಾರೆ:

  awesome!! tumbaa chennagide ranjit..

 5. shivu.k ಹೇಳುತ್ತಾರೆ:

  ರಂಜಿತ್ ಸರ್,

  ಮನೆ ಕಾಲಿ ಮಾಡುವ ವಿಚಾರಕ್ಕೂ ಒಂದು ಕವನವೇ….ಸೂಪರ್ ಕಣ್ರಿ….ಪದಗಳ ಅರ್ಥಪೂರ್ಣ ಚಿತ್ರಗಳು ಹಾಗೇ ತೇಲಿಹೋಗುತ್ತವೆ….
  ಧನ್ಯವಾದಗಳು…

 6. ರಂಜಿತ್ ಹೇಳುತ್ತಾರೆ:

  ಸ್ವಾತಿಮುತ್ತಿನ ಇಂಚರ,

  ಥ್ಯಾಂಕ್ಸು. ನೀವೂ ಚೆನ್ನಾಗಿ ಬರೀತೀರಿ. ಇನ್ನೂ ಚೆನ್ನಾಗಿ ಬರೆಯಲು ಪ್ರಯತ್ನಿಸಿ.

 7. ರಂಜಿತ್ ಹೇಳುತ್ತಾರೆ:

  ಮನಸು, ಸುನಾಥ್, ರೂಪ

  ಮೆಚ್ಚುಗೆಗೆ ಧನ್ಯವಾದಗಳು. ಖುಷಿಯಾಗಿದೆ ನಿಮ್ಮ ಅನಿಸಿಕೆ ತಿಳಿದು.

 8. ರಂಜಿತ್ ಹೇಳುತ್ತಾರೆ:

  ನಾಗು ತಳವಾರ್,

  ಮಹೇಶ್ ಬ್ಲಾಗಿನಲ್ಲರಳುತ್ತಿರುವ ಒಳ್ಳೆಯ ಪ್ರತಿಭೆ. ಅವರ ಸಲಹೆ, ಸೂಚನೆ ದೊರಕುವುದು ನನಗೂ ಸಂತೋಷ.ಈ ಕವಿತೆಯಲ್ಲಿ ಭಾಷೆಯಲ್ಲಿ ಮೆಚ್ಯೂರ್ಡ್ ಅನ್ನಿಸಿದ್ದರೆ ಅದಕ್ಕೆ ಮಹೇಶ್ ಕಾರಣ.

  ನಿಮಗೂ ವಂದನೆಗಳು ಅನಿಸಿಕೆ ಮತ್ತು ಮೆಚ್ಚುಗೆಗೆ.

 9. ರಂಜಿತ್ ಹೇಳುತ್ತಾರೆ:

  ಶಿವು ಸರ್,

  ನಾನು ಕಡಿಮೆ ಎಂದರೆ ೧೫ ರಿಂದ ೨೦ ಸಲ ಮನೆಖಾಲಿ ಮಾಡಿದ್ದೇನೆ. ಆಗೆಲ್ಲಾ ಆ ಸ್ಥಳದ ನೆನಪುಗಳ ಕುರಿತು ತುಂಬಾ ಭಾವುಕನಾಗುತ್ತಿದ್ದೆ. ಈಗಲೂ ನೆನೆದರೆ ಮನದ ತುಂಬಾ ನಾಸ್ಟಾಲ್ಜಿಯಾ ಆವರಿಸುತ್ತದೆ.

  ಅಂದ ಹಾಗೆ ಮನೆಖಾಲಿ ಮಾಡುವ ವಿಷಯವನ್ನೇ ಜಯಂತ್ ಕಾಯ್ಕಿಣಿ ಕೂಡ ಅದ್ಭುತವಾಗಿ ಚಿತ್ರಿಸಿದ್ದಾರೆ. ಅವರ ಬಟನ್ ಮೊಲ ಓದಿದರೆ ನನ್ನ ಕವನ ಮೂಲೆಗುಂಪಾಗಿಸುತ್ತೀರಿ ನೀವು, ಅಷ್ಟು ಆಪ್ತವಾಗಿಸಿದ್ದಾರೆ ಜಯಂತ್ ಸರ್. “ನೀಲಿಮಳೆ” ಕವನ ಸಂಗ್ರಹದಲ್ಲಿದೆ. ಸಾಧ್ಯವಾದರೆ ಓದಿ ಅಭಿಪ್ರಾಯ ತಿಳಿಸಿ.

  ನಿಮ್ಮ ಅನಿಸಿಕೆಗೆ ಥ್ಯಾಂಕ್ಸು.

 10. Sunil ಹೇಳುತ್ತಾರೆ:

  Hey Ranjith,
  Nijakoo heart touching maaraya 🙂
  inthavu innashtu mattashtu huttali 🙂
  Sunil.

 11. ರಂಜಿತ್ ಹೇಳುತ್ತಾರೆ:

  ಸುನಿಲ್,

  ನೀವು ಇಷ್ಟು ಪ್ರೋತ್ಸಾಹ ನೀಡಿದರೆ ಸಾಕು, ಮತ್ತಷ್ಟು ಬರೆಯಲು ಮನಸ್ಸಾಗುತ್ತದೆ.

  ಮೆಚ್ಚಿದ್ದಕ್ಕೆ ಧನ್ಯವಾದಗಳು!

 12. H.S.ARUNKUMAR ಹೇಳುತ್ತಾರೆ:

  ಒಳಮನೆಯ ದೇವರ ಆಶೀರ್ವಾದ,
  ಬೆಡ್ಡ್ ರೂಮಿನ ಪ್ರೀತಿಯ ಕ್ಷಣ,
  ಕಪಾಟಿನ ಅತ್ತರ ಪರಿಮಳ,
  ಒದ್ದೆ ಅಂಗಳದ ಪುಟ್ಟ ಪಾದದ ಗುರುತು
  ಹಾಗೂ
  ಅವನೊಂದಿಗಿನ ಜೀವಂತ
  ಕ್ಷಣಗಳ ನೆನಪಿನ ಹೊರತು.

  ಸೊಗಸಾಗಿದೆ ಕವನ.

  ಕೆಲವ ವಸ್ತುಗಳ ನೆನಪು ಮಾತ್ರ ನಮ್ಮ ಜೊತೆಗೆ.

 13. ರಂಜಿತ್ ಹೇಳುತ್ತಾರೆ:

  ಹೌದು ಅರುಣ್ ಕುಮಾರ್.

  ಬ್ಲಾಗಿಗೆ ಭೇಟಿ ನೀಡಿದ್ದಕ್ಕೆ ಧನ್ಯವಾದಗಳು.

 14. prasad.g ಹೇಳುತ್ತಾರೆ:

  hey its nice

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s