ದೀಪದಿಂದ ದೀಪವ, ಹಚ್ಚಬೇಕು ಮಾನವ..!

Posted: ಮಾರ್ಚ್ 28, 2009 in ಮಾಹಿತಿ
nambike
ಕೆಲಸಗಳನ್ನು ಮಾಡುತ್ತಾ ಕಂಪ್ಯೂಟರ್ ಮುಂದೆ ಧ್ಯಾನಸ್ಥರಂತೆ ಕುಳಿತುಕೊಳ್ಳುವವರು ಮಧ್ಯೆ ಮಧ್ಯೆ ಮೇನಕೆಯರನ್ನು ನೋಡುವಂತೆ ಸ್ಕ್ರೀನ್ ಸೇವರ್ ನಲ್ಲಿನ ಕತ್ರೀನಾ ಕೈಫ್ ಳನ್ನು ಕದ್ದು ನೋಡಿ ’ಮನಸ್ಸಿಗೆ ರಿಲ್ಯಾಕ್ಸ್ ಆಗಲಿಕ್ಕಾಗಿ ಅಲ್ಲವೇ ಹೀಗೆ ಮಾಡುವುದು ಪರವಾಗಿಲ್ಲ’ ಅಂದುಕೊಂಡು ಸಮಾಧಾನವಾಗುತ್ತಾರೆ.
ಅದರ ಬದಲಿಗೆ ಇದೇ ಸ್ಕ್ರೀನ್ ಸೇವರ್ ನಲ್ಲಿ ಒಳ್ಳೆಯ ಕವಿವಾಣಿ, ಡಿ.ವಿ.ಜಿ.ಯವರ ಅದ್ಭುತ ಪುಸ್ತಕವಾದ “ಮಂಕುತಿಮ್ಮನ ಕಗ್ಗ” ದ ಸಾಲುಗಳಿದ್ದರೆ ಎಷ್ಟು ಮುದವಾಗುತ್ತದೆ, ಅಲ್ಲವೆ? ಬಾಸಿನ ಘನಗಂಭೀರ ಮೈಲ್ ನೋಡಿ ತಲೆಕೆಟ್ಟರೆ ಒಂದು ಅಡಿಗರ ಸಾಲು ಸಾಕು ಮನಸ್ಸು ಮತ್ತೆ ಚಿಗುರಲು, ಚುರುಕಾಗಿ ಮತ್ತೆ ಕೆಲಸ ಮಾಡಲು ಇನ್ನಿಲ್ಲದಷ್ಟು ಉಮೇದು ಮೂಡುತ್ತದೆ.
 
ಇಂಥದ್ದೊಂದು ಒಳ್ಳೆಯ ಕಾರ್ಯವನ್ನು ಒಂದು ಗುಂಪು ಕಳೆದ ೨ ವರುಷಗಳಿಂದ ನಡೆಸಿಕೊಂಡು ಬರುತ್ತಿದೆ. ಕಳೆದ ಎಂಟು ತಿಂಗಳಿಂದ ನಾನು ಸಹಿತ ಇದರ ಲಾಭ ಪಡೆಯುತ್ತಿದ್ದೇನೆ. ಕಾವ್ಯ ಸವಿಯನ್ನು, ಮನಸ್ಸನ್ನು ಹಕ್ಕಿಯನ್ನಾಗಿ ಮಾಡುವ ಸಾಲುಗಳನ್ನು ಬೇಸರಾದಾಗೆಲ್ಲ ಸವಿಯುತ್ತ ಬಂದಿದ್ದೇನೆ. ಮಂಕುತಿಮ್ಮನ ಸಾಲುಗಳಲ್ಲದೇ, ಸರ್ವಜ್ಞವಚನಗಳು, ಗೋಪಾಲಕೃಷ್ಣ ಅಡಿಗರ ಕವಿತೆಯ ಸಾಲುಗಳು, ಮರುಳಮುನಿಯನ ಕಗ್ಗ, ರಾಜರತ್ನಂ ಗೀತೆಯ ಸಾಲುಗಳು, ಬೀchi, ಹೀಗೆ ಇನ್ನೂ ಮುಂತಾದ ಕವಿವರ್ಯರ, ವಚನಕಾರರ ಸಾಹಿತ್ಯವನ್ನು ಅದರ ಕಠಿಣ ಪದದ ಅರ್ಥದ ವಿವರದ ಜತೆ ಒಂದು ಚಂದದ ಚಿತ್ರದ ಮೂಲಕ ವಾರಕ್ಕೆ ಐದು ದಿನ ಹಂಚುತ್ತಿದ್ದಾರೆ. ಬಾಳಿಗೊಂದು ನಂಬಿಕೆ ಎಂದು ಹೆಸರಿರಿಸಿಕೊಂಡಿರುವ ಅವರು ತಮ್ಮ ಮೈಲುಗಳಲ್ಲಿ ತಮ್ಮನ್ನು ತಾವು “ಬಾಳ ಬೆಳಕಲ್ಲಿ ನಂಬಿದವರು” ಅಂತಲೇ ಕರೆದುಕೊಳ್ಳುತ್ತಾರೆ. ಅರಿವಿನ ಸಿಹಿಗಾಳಿಯನ್ನು ಮೆಲ್ಲಗೆ ಹಬ್ಬುತಿರುವ, ಸಾಹಿತ್ಯದ ಸುಧೆಯನ್ನು ಎದೆಯಿಂದೆದೆಗೆ ಹರಿಸುತಿರುವ ನಂಬಿಕೆ ಬಳಗದವರಿಗೆ ಸುಮ್ಮನೆ ಅಭಿನಂದನೆ ಎಂದರೆ  ಕಡಿಮೆ ಆದೀತು. ಸಧ್ಯಕ್ಕೆ ಬಳಗದ ಒಳಗೆ ನಾನೂ ಹೆಮ್ಮೆಯ ಸದಸ್ಯ.
 
ಆರ್ಕುಟ್ ನಲ್ಲಿ ನಂಬಿಕೆ ಬಳಗದವರು ಬರೆದುಕೊಂಡಿದ್ದು ಹೀಗೆ:
 
>>ಚಹಾ ಸಮಯದ ನಮ್ಮ ನಮ್ಮ ನಡುವಿನ ಮಾತಿನ ಮಧ್ಯೆ ಮೊಡಿದ ಕನಸು ” ಬಾಳಿಗೊಂದು ನಂಬಿಕೆ ” ಯ ರೂಪದಲ್ಲಿ ದಿನವು ನಿಮ್ಮ ಮುಂದೆ ಮೊಡಿಬರುವಂತಾಗುವಲ್ಲಿ ನಮಗೆ ನಮ್ಮ ಮೇಲಿದ್ದ ನಂಬಿಕೆಗಿಂತ ಹೆಚ್ಚಾಗಿ ನಮ್ಮ ಸಾಹಿತ್ಯದಲ್ಲಿರುವ ಮೌಲ್ಯಗಳ ಮೇಲಿರುವ ನಂಬಿಕೆಯೇ ಕಾರಣ. ದಿನವೂ ಮಿಂಚೋಲೆಯ ಮೊಲಕ ಮಿಂಚಿ ಹೋಗುವ ” ಬಾಳಿಗೊಂದು ನಂಬಿಕೆ ” ಮನದಲ್ಲೇನಾದರು ಪ್ರಶ್ನೆಗಳನ್ನೋ,ವಿಚಾರಗಳನ್ನೋ,ಕೂತುಹಲವನ್ನೋ ಸೃಷ್ಟಿಸಿದ್ದರೇ….ಅವೆಲ್ಲದರ ಕುರಿತು ಮುಕ್ತ ಚರ್ಚೆಗೆ ವೇದಿಕೆಯಾಗಲಿ ಆರ್ಕುಟ್ ನ ಈ ವೇದಿಕೆ ಎಂಬುದೆ ನಮ್ಮ ಆಶಯ.

ನಮ್ಮ ಕುತೂಹಲಗಳನ್ನು ತಣಿಸುವದಷ್ಟಕ್ಕೆ ಸೀಮಿತವಾಗದೆ ಈ ವೇದಿಕೆ ವಿಚಾರ ಮಂಥನಕ್ಕೆ ಎಡೆಮಾಡಿಕೊಟ್ಟದ್ದಾದಲ್ಲಿ ಅದಕ್ಕಿಂತ ಹೆಮ್ಮೆಯ ವಿಚಾರ ಬೇರೊಂದಿಲ್ಲ ನಮಗೆ. ಅವರವರ ನಂಬಿಕೆ ಅವರವರದಾದರೂ ಯಾರಿಗೂ ನೋವುಂಟು ಮಾಡದಂತೆ ಚರ್ಚಿಸುವುದರಲ್ಲಿ ತಪ್ಪೇನು ? ದಾಸರೇ ಹೇಳಿಲ್ಲವಾ..ನಂಬಿ ಕೆಟ್ಟವರಿಲ್ಲವೆಂದು , ಬನ್ನಿ “ಬಾಳ ನಂಬಿಕೆ” ಯನ್ನು ಉಳಿಸಿಕೊಳ್ಳೋಣ,ಬೆಳಸಿಕೊಳ್ಳೋಣ.<<

ನಂಬಿಕೆಬಳಗ ಇ-ಮೈಲ್ ವಿಳಾಸ : nambike@gmail.com

ಟಿಪ್ಪಣಿಗಳು
 1. ಸುನಾಥ ಹೇಳುತ್ತಾರೆ:

  ರಂಜಿತ್,
  ಬಾಳಲ್ಲಿ ನಂಬಿಕೆ ಇಟ್ಟವರ ಬಗೆಗೆ ಓದಿ ಸಂತೋಷವಾಯಿತು.
  “ತಮಂಧ ಘನ ಜ್ಯೋತಿ ಕಿರಿದೆನ್ನಬಹುದೆ?” ಎನ್ನುವ ಬಸವಣ್ಣನವರ ವಚನ ನೆನಪಾಯ್ತು.

 2. ಶರಶ್ಚಂದ್ರ ಕಲ್ಮನೆ ಹೇಳುತ್ತಾರೆ:

  ನಂಬಿಕೆಯೋಂದೇ ಅಲ್ಲವೇ ನಮ್ಮನ್ನು ಬಾಳಿನುದ್ದಕ್ಕೂ ತೇಲಿಸಿಕೊಂಡು ಹೋಗುವುದು..ಮಾಹಿತಿಗೆ ಧನ್ಯವಾದಗಳು ರಂಜಿತ್.

  – ಶರಶ್ಚಂದ್ರ ಕಲ್ಮನೆ

 3. raviyatike ಹೇಳುತ್ತಾರೆ:

  nimma baraha odi santoshavaayitu.. thank you..

 4. ರಂಜಿತ್ ಹೇಳುತ್ತಾರೆ:

  ಥ್ಯಾಂಕ್ಸ್ ಸುನಾಥ್,

  ಯಾವುದೇ ಇಸ್ಮ್ ಗಳಿಗೆ ಒಳಗಾಗದ ಶುದ್ಧ ಗ್ರೂಪ್ ಅದು. ಒಳ್ಳೆಯ ಕಲ್ಪನೆಯೊಂದರ ಸಾಕಾರತೆ. ಇಂಥದ್ದನ್ನೆಲ್ಲಾ ನಾನು ಮಾಡಲಿಲ್ಲವಲ್ಲ ಎಂಬ ಹೊಟ್ಟೆಉರಿಯಿದ್ದರೂ ಕೊನೆ ಪಕ್ಷ ನಂಬಿಕೆಯನ್ನ ಹಬ್ಬಿಸೋಣ ಅಂತ ಈ ಲೇಖನ.

  ಧನ್ಯವಾದಗಳು ಸರ್.

 5. ರಂಜಿತ್ ಹೇಳುತ್ತಾರೆ:

  ಕಲ್ಮನೆಯವರೇ ಥ್ಯಾಂಕ್ಯೂ.

  ಒಳ್ಳೆಯದನ್ನ ಪ್ರೋತ್ಸಾಹಿಸದೇ ಹೋಗುವುದು ಕೂಡ ಕೆಟ್ಟದ್ದನ್ನು ಮೆಚ್ಚಿಕೊಂಡ ಲೆಕ್ಕ ಅಲ್ಲವೇ.

  ಬಳಗದ ಕೆಲಸಕ್ಕೆ ಮೆಚ್ಚುಗೆ ಸೂಚಿಸಬೇಕೆನ್ನಿಸುತ್ತುತ್ತು. ಸ್ವಲ್ಪ ತಡವಾಗಿಯಾದರು ಈಗ ಬರೆದ ತೃಪ್ತಿ.

  ಥ್ಯಾಂಕ್ಸ್.

 6. ರಂಜಿತ್ ಹೇಳುತ್ತಾರೆ:

  ರವಿಯತಿಕೆಯವರೇ,

  ನೀವು ಮೆಚ್ಚಿಕೊಂಡಿದ್ದು ಸಂತೋಷ. ಹೀಗೆ ಓದುತ್ತಿರಿ.

  ಧನ್ಯವಾದಗಳು.

 7. Sowmya ಹೇಳುತ್ತಾರೆ:

  Balige Nambike Thumba mukya .Nambi Kettavarillavo ennuvudu aksharasaha sathya. thank u, Ranjith

 8. ಸಂತೋಷ ಹೇಳುತ್ತಾರೆ:

  ನಮಸ್ಕಾರ ರಂಜಿತ್,

  “ನಂಬಿಕೆ”ಯ ಬಗ್ಗೆ ಬರೆದ ನಿಮ್ಮ ನಲ್ಮೆಯ ನುಡಿಗಳಿಗೆ ಧನ್ಯವಾದಗಳು.

  ” ಬಾಳಿನಲ್ಲಿ ನಂಬಿಕೆಯನ್ನು ಬೆಳೆಸಿಕೊಳ್ಳುವುದು ಸುಲಭಸಾಧ್ಯವಲ್ಲದ ಮಾತು ಅದಕ್ಕಿಂತಲೂ ಬೆಳೆಸಿಕೊಂಡ ನಂಬಿಕೆಗಳನ್ನು ಉಳಿಸಿಕೊಳ್ಳುವುದು ಕಷ್ಟ. ನಾವು ನಂಬಿದ ನಂಬಿಕೆಗಳು ಬುಡಮೇಲಾದಾಗ ಹೊಸ ನಂಬುಗೆಯನ್ನು ಹುಡುಕಿಕೊಳ್ಳುವುದು ಅತಿ ಅಗತ್ಯ. ಜ್ಞಾನದ ಓರೆಗಲ್ಲಿಗೆ ಹಚ್ಚದ ನಂಬಿಕೆಗಳು ಕಾಲಕ್ರಮೇಣ ಮೂಡನಂಬಿಕೆಗಳಾಗಿ ಹೆಚ್ಚು ಅಪಾಯಕಾರಿಯಾಗುವ ಸಂಭವವೇ ಹೆಚ್ಚು. “ನಾವು ನಂಬಿದ್ದಷ್ಟೆ ಸತ್ಯ” ಎನ್ನುವುದನ್ನು ಬಿಟ್ಟು “ನಾವು ನಂಬಿದ್ದು ಎಷ್ಟು ಸತ್ಯ ?” ಎಂಬ ಸತ್ಯಶೋಧನೆಯ ಅಗತ್ಯ ಎಂದೆಂದಿಗೂ ಇದ್ದೆ ಇದೆ ” ಎಂದು ನಂಬಿದವರು ನಾವು.

  ಹಾಗಾಗಿ ಬರೇ ಹೊಗಳಿಕೆಯ ಮಾತಿಗಿಂತ ನೀವು ನಮ್ಮ ನಂಬಿಕೆಯನ್ನು ಜ್ಞಾನದ ಓರೆಗಲ್ಲಿಗೆ ಹಚ್ಚಲು ಸಹಾಯ ಮಾಡಿ.

  ೨೦೦೬ ರ ನವೆಂಬರ್ ೨ ನೇ ತಾರೀಖಿನಿಂದ ಇಂದಿನವರೆಗೆ “ಬಾಳಿಗೊಂದು ನಂಬಿಕೆ” ಸರಣಿ ಇನ್ನು ಜೀವಂತವಾಗಿದೆ ಅಂದರೆ ಅದಕ್ಕೆ ಕಾರಣ ನಿಮ್ಮಂತಹವ ನಂಬಿಕಸ್ಥರು.

  -ಧನ್ಯವಾದಗಳು
  ಸಂತೋಷ
  ( ನಂಬಿಕೆ ಬಳಗದ ಪರವಾಗಿ )

 9. ರಂಜಿತ್ ಹೇಳುತ್ತಾರೆ:

  ಸರಿಯಾಗಿ ಹೇಳಿದಿರಿ ಸೌಮ್ಯಾ ಅವರೇ,

  ಥ್ಯಾಂಕ್ಯೂ..!

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s