ಹೂವಿಗೊಂದು ಸಾಲು ಆರಿಸುವಿರಾ?

Posted: ಮಾರ್ಚ್ 31, 2009 in ಬ್ಲಾಗ್ ನ ಬಗ್ಗೆ..

’ಖಾಲಿ ಹಾಳೆ ನನ್ನನ್ನು ಆತಂಕಕ್ಕೀಡು ಮಾಡುತ್ತದೆ” ಎನ್ನುತ್ತಾನೆ ನೋಬೆಲ್ ಪ್ರಶಸ್ತಿ ವಿಜೇತ, ಅದ್ಭುತ ಕಾದಂಬರಿಕಾರ, ಗ್ಯಾಬ್ರಿಯೆಲ್ ಗಾರ್ಸಿಯಾ ಮಾರ್ಕ್ವೆಜ್.

ಬಹುತೇಕ ಎಲ್ಲಾ ಲೇಖಕರನ್ನೂ ಖಾಲಿ ಹಾಳೆ ಕಾಡಿದೆ ಅನ್ನಿಸುತ್ತದೆ. ಪ್ರೊಫೆಷನಲ್ ಲೇಖಕನಲ್ಲದೇ ಹೋದರೂ ಜಿ ಮೈಲ್ ನಲ್ಲಿ ಆನ್ ಲೈನ್ ಆಗುವಾಗ ಸ್ಟೇಟಸ್ ಮೆಸೇಜ್ ನಲ್ಲಿನ ಖಾಲಿ ಜಾಗ ನನ್ನನ್ನೂ ಕಾಡುತ್ತದೆ. ಆನ್ ಲೈನ್ ಆದ ಮರುಕ್ಷಣವೇ ಚಡಪಡಿಕೆ ಶುರು. ಏನಾದರೊಂದು ಆಕರ್ಷಕ ಸಾಲು ಪಕ್ಕದಲ್ಲಿಲ್ಲದಿದ್ದರೆ ಕೆಲಸದ ಉತ್ಸಾಹ ಇಳಿಮುಖ. ದಿನ ಡಲ್ಲು.

ಹೀಗೆ ದಿನಕ್ಕೊಂದು ಸಾಲು ಬರೆದು ಬರೆದು ಅದನ್ನು ಹನಿ ಎಂದು ಹೆಸರಿಸಿ ಬ್ಲಾಗಿನಲ್ಲಿ ಬಡಿಸಿದರೆ ನೀವೆಲ್ಲಾ ರುಚಿ ರುಚಿಯಾಗಿದೆಯೆಂದು ಸವಿದು ಹರಸಿದ್ದೀರಿ.

“ಎಲ್ಲಾ ನೋವುಗಳನ್ನು ನಮ್ಮದಾಗಿಸಿಕೊಂಡು ನಲಿವಾಗಿಸಬೇಕು” ಎಂಬುದು ನೀಲಿಹೂವಿನ ಟ್ಯಾಗ್ ಲೈನ್ ಆಗಿದೆ. ಈ ಥಿಯರಿ ಹಳೆಯದಾಯ್ತು ಮಾರಾಯ.. ನೋವುಗಳಿಗೂ ಎಲ್ಲಾ ಅರ್ಥವಾಗಿದೆ, ತನ್ನನ್ನು ನಮ್ಮದಾಗಿಸಿಕೊಳ್ಳಲು ಬಿಡುತ್ತಿಲ್ಲ ಅಂತ ಗೆಳೆಯರು ಕಿಚಾಯಿಸುತ್ತಿದ್ದಾರೆ!

ಈಗ ಬ್ಲಾಗಿನ ಎಪ್ಪತ್ತೈದನೇ ಪೋಸ್ಟಿನಲಿ ಇದನ್ನು ಬದಲಿಸೋಣ ಅಂದುಕೊಂಡಿದ್ದೇನೆ. ಒಂದಿಷ್ಟು ಸಾಲುಗಳನ್ನು ಎದುರು ಹರವಿಕೊಂಡು ಕುಳಿತಿದ್ದೇನೆ. ಕೆಲವು ಸಾಲುಗಳು ಇದೇ ಬ್ಲಾಗಿನಲ್ಲಿ ನೀವು ಓದಿರುವುದೇ. ಎಲ್ಲಾ ಸಾಲುಗಳೆಡೆಗೆ ನನಗೆ ಒಂದೇ ಸಮನಾದ ಪ್ರೀತಿಯಿದೆ. ಎಲ್ಲವೂ “ನನ್ನನ್ನು ಹಾಕ್ಕೊಳ್ರೀ.. ಪ್ಲೀಸ್!” ಅಂತ ಬೇಡುತ್ತಿವೆ.

ದಯವಿಟ್ಟು ಕೆಳಗೆ ನೀಡಿದ ಐದು ಸಾಲುಗಳಲ್ಲಿ ಯಾವುದು ಚೆನ್ನಾಗಿದೆ ನೀಲಿಹೂವಿಗೆ ಟ್ಯಾಗ್ ಲೈನ್ ಹಾಕಲು ಅಂತ ಸೂಚಿಸುವಿರಾ?

೧. ಪ್ರೀತಿಯಲಿ ಚಿರವಿರಹಿ; ಬದುಕಿನಲಿ ಕಡು ವ್ಯಾಮೋಹಿ!

೨. ಜಗತ್ತಿನಲಿ ಅತ್ಯಂತ ಸುಂದರವಾದ್ದು ಸಾವಿನ ಬೆನ್ನು ಮತ್ತು ಬದುಕಿನ ಮುಖ!

೩.  ಎದೆ ಸೀಳಿದ ನೋವು ಒಳಗಿನೊಲವನ್ನು ಕಂಡು ಬೆಚ್ಚಿಬಿದ್ದಿದೆ!

೪. ಚಿವುಟಿಕೊಂಡು ನೋಡದಿರಿ; ಮುಂದುವರಿಯಲಿ ಕನಸು ಬದುಕಿನುದ್ದಕ್ಕೂ!

೫. ಮೇಲೆ ನಗೆಮುಗುಳು; ಒಳಗೆ ನೋವಿನೆಸಳು!

ಧನ್ಯವಾದಗಳೊಂದಿಗೆ,

ರಂಜಿತ್.

Advertisements
ಟಿಪ್ಪಣಿಗಳು
 1. ಶರಶ್ಚಂದ್ರ ಕಲ್ಮನೆ ಹೇಳುತ್ತಾರೆ:

  ನನಗೆ ಇಷ್ಟವಾದ ಎರಡು ಸಾಲುಗಳು ಇವು ರಂಜಿತ್…

  “ಜಗತ್ತಿನಲಿ ಅತ್ಯಂತ ಸುಂದರವಾದ್ದು ಸಾವಿನ ಬೆನ್ನು ಮತ್ತು ಬದುಕಿನ ಮುಖ! ” ಮತ್ತು “ಚಿವುಟಿಕೊಂಡು ನೋಡದಿರಿ; ಮುಂದುವರಿಯಲಿ ಕನಸು ಬದುಕಿನುದ್ದಕ್ಕೂ!”

  ನಿಜ ಹೇಳಬೇಕೆಂದರೆ “ಎಲ್ಲಾ ನೋವುಗಳನ್ನ ನಮ್ಮದಾಗಿಸಿಕೊಂಡು ನಲಿವಾಗಿಸಬೇಕು” ಇದು ತುಂಬಾ ಅರ್ಥಪೂರ್ಣವಾಗಿದೆ, ಸಾಧ್ಯವಾದರೆ ಬದಲಾಯಿಸದೆ ಅದನ್ನೇ ಇಡಿ 🙂

 2. Nandana ಹೇಳುತ್ತಾರೆ:

  1. ಮೇಲೆ ನಗೆಮುಗುಳು; ಒಳಗೆ ನೋವಿನೆಸಳು!

  2. ಪ್ರೀತಿಯಲಿ ಚಿರವಿರಹಿ; ಬದುಕಿನಲಿ ಕಡು ವ್ಯಾಮೋಹಿ!

  idu nanage ista vadaddu.. adarallu 1 ne salu ista aytu…

 3. Sowmya ಹೇಳುತ್ತಾರೆ:

  ಎಲ್ಲಾ ನೋವುಗಳನ್ನ ನಮ್ಮದಾಗಿಸಿಕೊಂಡು ನಲಿವಾಗಿಸಬೇಕು EE Salu Bahala arthagarbhithavagide. aadru select madabeku andre

  ಪ್ರೀತಿಯಲಿ ಚಿರವಿರಹಿ; ಬದುಕಿನಲಿ ಕಡು ವ್ಯಾಮೋಹಿ! idu nanna choice.
  Modalenayadu eke andre Janara novannu nimma Hoovina kampu dooravagisuthide. Good Work.

 4. manasu ಹೇಳುತ್ತಾರೆ:

  ಪ್ರೀತಿಯಲಿ ಚಿರವಿರಹಿ; ಬದುಕಿನಲಿ ಕಡು ವ್ಯಾಮೋಹಿ!
  Good one!!

 5. kallare ಹೇಳುತ್ತಾರೆ:

  ellaadu chennaagide saar.. aadre idna tag line madi:

  ‘neeli baduku;Kadu neeli Parimala’ – yenge?

 6. Prakash ಹೇಳುತ್ತಾರೆ:

  “ಚಿವುಟಿಕೊಂಡು ನೋಡದಿರಿ; ಮುಂದುವರಿಯಲಿ ಕನಸು ಬದುಕಿನುದ್ದಕ್ಕೂ”

  ee line chennagide… Neeli..andare rathriya kathhalu bimbisuva baNNa allave.

  Kanasu..Raathri..badaku ..thumba anyonya allave

 7. Gnanamurthy ಹೇಳುತ್ತಾರೆ:

  “ಚಿವುಟಿಕೊಂಡು ನೋಡದಿರಿ; ಮುಂದುವರಿಯಲಿ ಕನಸು ಬದುಕಿನುದ್ದಕ್ಕೂ!”
  ಎಲ್ಲಾ ಸಾಲುಗಳು ಚನ್ನಾಗಿವೆ ಅದರಲ್ಲೂ ಈ ಸಾಲುಗಳು ತುಂಬಾ ಚನ್ನಾಗಿದೆ….

 8. Bala ಹೇಳುತ್ತಾರೆ:

  ರಂಜಿತ್,
  ನನಗೆ ಮೆಚ್ಚಿಗೆಯಗಿದ್ದು, ನೋವು ಒಲವನ್ನ ತೋರಿಸುವ ದಾರಿ ಹಾಗು ಒಲವು ಎಲ್ಲ ನೋವಿಗೂ ಮದ್ದು ಎಂಬ ಅರ್ಥ ಬರುವ “ಎದೆ ಸೀಳಿದ ನೋವು ಒಳಗಿನೊಲವನ್ನು ಕಂಡು ಬೆಚ್ಚಿಬಿದ್ದಿದೆ” ಎಂಬ ಸಾಲು

 9. ಪ್ರದೀಪ್ ಹೇಳುತ್ತಾರೆ:

  “ಮೇಲೆ ನಗೆಮುಗುಳು; ಒಳಗೆ ನೋವಿನೆಸಳು!”
  ಇದುವೇ ಐದರಲ್ಲಿ ಚೆನ್ನಾಗಿದೆಯೆಂದೆನಿಸುತ್ತದೆ..

 10. supreeth.k.s ಹೇಳುತ್ತಾರೆ:

  🙂
  ನಿಮ್ಮ ಎಲ್ಲಾ ಸಾಲುಗಳಿಗೂ ನನ್ನದೂ ಸಮಾನ ಪ್ರೀತಿಯನ್ನು ಹಂಚಿದ್ದೇನೆ. ನಿಮಗೆ ಬೇಕಾದ್ದನ್ನು ಆರಿಸಿಕೊಳ್ಳಿ

 11. navilugari ಹೇಳುತ್ತಾರೆ:

  ಎದೆ ಸೀಳಿದ ನೋವು ಒಳಗಿನೊಲವನ್ನು ಕಂಡು ಬೆಚ್ಚಿಬಿದ್ದಿದೆ

 12. Rajesh Manjunath ಹೇಳುತ್ತಾರೆ:

  ರಂಜಿತ್,
  “ಪ್ರೀತಿಯಲಿ ಚಿರವಿರಹಿ; ಬದುಕಿನಲಿ ಕಡು ವ್ಯಾಮೋಹಿ!”
  ಈ ಸಾಲು ಜೀವನ್ಮುಖಿಯಾಗಿದೆ ಹಾಗಾಗಿ ನನಗೆ ತುಂಬಾ ಇಷ್ಟವಾಗಿದೆ.

 13. ranjanahegde ಹೇಳುತ್ತಾರೆ:

  ರಂಜೀತ್, ನಿಮ್ಮ್ ಎಲ್ಲ ಲೇಖನ, ಕವನಗಳನ್ನು ಓದಿದ ಮೇಲೆ ನನಗೆ ಅನ್ನಿಸಿದ್ದು, ೪. ಚಿವುಟಿಕೊಂಡು ನೋಡದಿರಿ; ಮುಂದುವರಿಯಲಿ ಕನಸು ಬದುಕಿನುದ್ದಕ್ಕೂ! ಈ ಟೈಟಲ್ ನಿಮ್ಮ ಬ್ಲಾಗ್ ಗೆ ಸರಿ ಹೋಗುತ್ತೆ ಅಂತ. ಕನಸುಗಳು ಯಾವಾಗಲು, ಜೀವನದುದ್ದಕ್ಕೂ ಮುಂದುವರಿಯಲಿ ಅನ್ನುವುದು ನನ್ನ ಆಸೆ. ( ಮುಖ್ಯವಾಗಿ ನಾನು ಜೀವನದಲ್ಲಿ ಕನಸುಗಳ ಜೊತೆ ಸ್ನೇಹ ಸಂಪಾದಿಸಿದವಳು) ಯೋಚಿಸಿ ನೋಡಿ….ಚಿವುಟ ಬೇಡಿ ನಿಮ್ಮ ಕನಸುಗಳನ್ನು ನೋವಿನ ಕತ್ತಿಯಲಿ……..

 14. ಅನಾಮಿಕ ಹೇಳುತ್ತಾರೆ:

  Hi Ranjith,

  ” ಚಿವುಟಿಕೊಂಡು ನೋಡದಿರಿ; ಮುಂದುವರಿಯಲಿ ಕನಸು ಬದುಕಿನುದ್ದಕ್ಕೂ! ”
  ee salugalu chanda idave, nim blog purthi kanasugale thumbive, adara payana hige sagali 🙂

 15. Ranjitha Veena ಹೇಳುತ್ತಾರೆ:

  Hi Ranjith,

  ” ಚಿವುಟಿಕೊಂಡು ನೋಡದಿರಿ; ಮುಂದುವರಿಯಲಿ ಕನಸು ಬದುಕಿನುದ್ದಕ್ಕೂ! ”
  ee salugalu chanda idave, nim blog purthi kanasugale thumbive, adara payana hige sagali

 16. ವಿಜಯರಾಜ್ ಕನ್ನಂತ ಹೇಳುತ್ತಾರೆ:

  ಜಗತ್ತಿನಲಿ ಅತ್ಯಂತ ಸುಂದರವಾದ್ದು ಸಾವಿನ ಬೆನ್ನು ಮತ್ತು ಬದುಕಿನ ಮುಖ! idakkinta bere saalu bEka…. nan aayke idE saalu

 17. raaghavam ಹೇಳುತ್ತಾರೆ:

  ನಮಸ್ತೆ,

  ಕನ್ನಡದ ಎಲ್ಲ ಯುವ ಕವಿಗಳನ್ನು ಒಂದು ಗೂಡಿಸಲು ವೇದಿಕೆಯಾಗಿ ಯುವ ಕವಿ ಯನ್ನು ಪ್ರಾರಂಭಿಸುತ್ತಿದ್ದೇವೆ. ಕನ್ನಡದ ಎಲ್ಲ ಕವಿಗಳು ಮತ್ತು ಕಾವ್ಯ ಪ್ರೇಮಿಗಳು ಜೊತೆಸೇರಿ ಕಾವ್ಯವನ್ನು ಓದೋಣ, ಕಾವ್ಯವನ್ನು ಚರ್ಚಿಸೋಣ. ನಮ್ಮೊಡನೆ ಸೇರಿ..
  http://yuvakavi.ning.com/

 18. Aveen ಹೇಳುತ್ತಾರೆ:

  ಚಿವುಟಿಕೊಂಡು ನೋಡದಿರಿ; ಮುಂದುವರಿಯಲಿ ಕನಸು ಬದುಕಿನುದ್ದಕ್ಕೂ

 19. ಶೆಟ್ಟರು (Shettaru) ಹೇಳುತ್ತಾರೆ:

  ರಂಜಿತಾ,

  ಕನಸಿಲ್ಲದ ಬದುಕುಂಟೆ, ಹೀಗಾಗಿ

  ” ಚಿವುಟಿಕೊಂಡು ನೋಡದಿರಿ; ಮುಂದುವರಿಯಲಿ ಕನಸು ಬದುಕಿನುದ್ದಕ್ಕೂ! ”

  -ಶೆಟ್ಟರು

 20. dharithri ಹೇಳುತ್ತಾರೆ:

  ಜಗತ್ತಿನಲಿ ಅತ್ಯಂತ ಸುಂದರವಾದ್ದು ಸಾವಿನ ಬೆನ್ನು ಮತ್ತು ಬದುಕಿನ ಮುಖ!

  ೩. ಎದೆ ಸೀಳಿದ ನೋವು ಒಳಗಿನೊಲವನ್ನು ಕಂಡು ಬೆಚ್ಚಿಬಿದ್ದಿದೆ!
  ಈ ಎರಡು ಸಾಲುಗಳು
  ಇಷ್ಟವಾದುವು. ಮತ್ತೆ ಹೇಳಬೇಕಂದ್ರೆ ಎಲ್ಲಾ ಸಾಲುಗಳು ಚೆನ್ನಾಗಿವೆ. ಶುಭಾಶಯಗಳು
  -ಧರಿತ್ರಿ

 21. Roopa ಹೇಳುತ್ತಾರೆ:

  Hi Ranjith,

  E-saalugaLu tumbaa chennaagive…

  1. ಪ್ರೀತಿಯಲಿ ಚಿರವಿರಹಿ; ಬದುಕಿನಲಿ ಕಡು ವ್ಯಾಮೋಹಿ….
  2. ಚಿವುಟಿಕೊಂಡು ನೋಡದಿರಿ; ಮುಂದುವರಿಯಲಿ ಕನಸು ಬದುಕಿನುದ್ದಕ್ಕೂ….

  pratiyondu saalinallu arthagarbhitha novu tumburuvudanthu kanditha…..

  nanagansutte, ellaaa saalugaLigoo compare maadidre..,
  e-saalu “ಚಿವುಟಿಕೊಂಡು ನೋಡದಿರಿ; ಮುಂದುವರಿಯಲಿ ಕನಸು ಬದುಕಿನುದ್ದಕ್ಕೂ ”
  sweet, sensuous, silent killing and positive approach ide.

  What say!??!

 22. minchulli ಹೇಳುತ್ತಾರೆ:

  ಎದೆ ಸೀಳಿದ ನೋವು ಒಳಗಿನೊಲವನ್ನು ಕಂಡು ಬೆಚ್ಚಿಬಿದ್ದಿದೆ”

 23. H.S.ARUNKUMAR ಹೇಳುತ್ತಾರೆ:

  ಜಗತ್ತಿನಲಿ ಅತ್ಯಂತ ಸುಂದರವಾದ್ದು ಸಾವಿನ ಬೆನ್ನು ಮತ್ತು ಬದುಕಿನ ಮುಖ!
  ಸಾಲು ತುಂಬಾ ಚನ್ನಾಗಿದೆ.
  ಸಾವಿಗೆ ಬೆನ್ನು ಹಾಕಿ ಬದುಕಿದರೆ ತಾನೇ ಬದುಕ ನೋಡುವುದು.
  ಬದುಕು ಬಗವಂತ ನೀಡಿದ ಬಿಕ್ಷೆ.

 24. ಅನಿಕೇತನ ಹೇಳುತ್ತಾರೆ:

  Badalaavane tumba chennagide.
  well done.
  Sunil.

 25. Pavithra ಹೇಳುತ್ತಾರೆ:

  thumba muddagide.

 26. Pavithra ಹೇಳುತ್ತಾರೆ:

  ಎದೆ ಸೀಳಿದ ನೋವು ಒಳಗಿನೊಲವನ್ನು ಕಂಡು ಬೆಚ್ಚಿಬಿದ್ದಿದೆ!

 27. usharani ಹೇಳುತ್ತಾರೆ:

  “ಚಿವುಟಿಕೊಂಡು ನೋಡದಿರಿ; ಮುಂದುವರಿಯಲಿ ಕನಸು ಬದುಕಿನುದ್ದಕ್ಕೂ!”
  ಈ ಸಾಲುಗಳು ತುಂಬಾ ಚನ್ನಾಗಿದೆ….

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s