ಒಂದು ಹಗಲಿನ ಹೂವು!

Posted: ಮೇ 4, 2009 in ಹನಿಗಳು...
flower-sun-eclipse-pc08cad2ego176-sw
ಜಗದ ಮನುಜರೆಲ್ಲರೂ ಸೇರಿ ಮಾಡಿದರೂ ಘಾಸಿ
ಕ್ಷಣಮಾತ್ರದಲ್ಲಾಗುವುದು ವಾಸಿ
ಏಕೆಂದರೆ
ಓ ನನ್ನೊಲವಿನ ಹೆಣ್ಣೇ
ನಿನ್ನ ಕಣ್ಣೇ
ನನಗೆ ನೋವಿನೆಣ್ಣೆ!

*********

ನಿನ್ನ ನೆನಪೆಂದರೆ
ಬಿರುಬೇಸಿಗೆಯಲಿ ಅಚಾನಕ್ ಆಗಿ
ಬೀಳುವ ನಾಕು
ಹನಿ ಮಳೆ..

ನನ್ನ ಹೃದಯವೆಂದರೆ
ಬಿದ್ದ ನಾಕು ಹನಿಗಳನ್ನೇ
ಮಳೆಗಾಲವೆಂದು ಭ್ರಮಿಸಿ
ಕನಸುಗಳ ಚಿಗುರೊಡೆಸಿ
ಮೋಸಹೋಗುವ ಇಳೆ…

**********

ನನ್ನ ತೊರೆವ
ಕುರುಹಿಂದ
ಜೇಡಿಮಣ್ಣಾಗಿಸಿದ್ದೆ ಎದೆಯ..

ನಿರ್ಲಜ್ಜ ಹೆಜ್ಜೆಯ
ಗುರುತಿಂದಲೇ
ಇನ್ನೂ ಬದುಕಿದ್ದೇನೆ!

*********

ಇರುಳ ಸೆರಗ ಹಿಂದೆ
ನಿದಿರಿಸಿದ್ದ ಭುವಿಯನು ಮೆಚ್ಚಿಸಲು
ನೇಸರನು ನೀಡುತ್ತಿದ್ದಾನೆ
ಒಂದು ಹಗಲಿನ ಹೂವು!

******

ಈ ಹನಿಗಳು ಇಂದು (೪/೦೫/೦೯) ರ ವಿಜಯಕರ್ನಾಟಕದಲ್ಲಿ ಪ್ರಕಟವಾಗಿದೆ.

ಟಿಪ್ಪಣಿಗಳು
 1. supreeth.k.s ಹೇಳುತ್ತಾರೆ:

  🙂
  ಕಂಗ್ರ್ಯಾಟ್ಸ್
  ಅದೆಷ್ಟು ಸಲಿಸಾಗಿ ಕವನಗಳು ನಿಮಗೆ ಒಲಿಯುತ್ತವೆ ಎಂಬ ಎಂದಿನ ಗೊಣಗಿನೊಂದಿಗೆ ಈ ಪೋಸ್ಟನ್ನು ಓದಿ ಮುಗಿಸಿದೆ!

 2. manasu ಹೇಳುತ್ತಾರೆ:

  ellavu ondikkinda ondu tumba chennagide… heege bareyuttaliri…

 3. Geeta Hegde ಹೇಳುತ್ತಾರೆ:

  tumba chennagide…

 4. svatimuttu ಹೇಳುತ್ತಾರೆ:

  anna ella superb..:)

 5. ಅನಿಕೇತನ ಹೇಳುತ್ತಾರೆ:

  ಗೆಳೆಯ,
  ಎಷ್ಟು ಚೆಂದಾಗಿ ಬರೆದಿದ್ದೀರಲ್ಲ…
  ಹಸಿ ಹಸಿ ಭಾವನ್ಗೆಗಳ ಧಾರೆ,ಪ್ರಾಸಗಳ ನವಿರಾದ ಬಳಕೆ.
  ತುಂಬಾ ಅಂದ್ರೆ ತುಂಬಾ ಇಷ್ಟ ಆದವು ರಂಜಿತ್.
  ದಯವಿಟ್ಟು ಇನ್ನಷ್ಟು ಬರೀರಿ…
  ಪ್ರೀತಿಯಿಂದ,
  ಸುನಿಲ್.

 6. ಸುನಾಥ ಹೇಳುತ್ತಾರೆ:

  ಉತ್ಕಟ ಭಾವನೆಯ ಕವನಗಳಿವು.

 7. ಶೆಟ್ಟರು (Shettaru) ಹೇಳುತ್ತಾರೆ:

  ರಂಜಿತ್,

  ಮಸ್ತ ಅದಾವ್ರಿ ಕವನಗಳು…

  ಹಿಂಗ್ ಮುಂದುವರೆಯಲಿ ಕವನಗಳ ಜಾತ್ರೆ

  -ಶೆಟ್ಟರು

 8. ಪ್ರದೀಪ್ ಹೇಳುತ್ತಾರೆ:

  “ಓ ನನ್ನೊಲವಿನ ಹೆಣ್ಣೇ
  ನಿನ್ನ ಕಣ್ಣೇ
  ನನಗೆ ನೋವಿನೆಣ್ಣೆ!”
  ….
  ಸೂಪರ್ ಕಣ್ರೀ! ಸೂಪರ್!!! 😀

 9. Roopa ಹೇಳುತ್ತಾರೆ:

  Hi Ranjith,

  Soooper aagive…. ellaaa kavanagalu….
  aadraalloo tumbaane sooper aagirodu idu
  ನಿನ್ನ ನೆನಪೆಂದರೆ
  ಬಿರುಬೇಸಿಗೆಯಲಿ ಅಚಾನಕ್ ಆಗಿ
  ಬೀಳುವ ನಾಕು
  ಹನಿ ಮಳೆ..

  ನನ್ನ ಹೃದಯವೆಂದರೆ
  ಬಿದ್ದ ನಾಕು ಹನಿಗಳನ್ನೇ
  ಮಳೆಗಾಲವೆಂದು ಭ್ರಮಿಸಿ
  ಕನಸುಗಳ ಚಿಗುರೊಡೆಸಿ
  ಮೋಸಹೋಗುವ ಇಳೆ…
  🙂

 10. Laxmikanth ಹೇಳುತ್ತಾರೆ:

  ಮೂರನೇ ಕವನ ತುಂಬಾ ಚೆನ್ನಾಗಿದೆ.
  ಹೀಗೇ ಬರೆಯುತ್ತಿರಿ. ಹಗಲಿನ ಹೂವು ಹಸಿರಾಗಿರಲಿ…

 11. ರಂಜಿತ್ ಹೇಳುತ್ತಾರೆ:

  ಸುಪ್ರೀತ್,

  ಕವಿತೆ ಹಡೆಯಲು ಕೆಲವೊಮ್ಮೆ ತಿಣುಕಾಡಬೇಕಾಗುತ್ತದೆ.

  ಬರೆದಾದ ಮೇಲೂ ಗೆಳೆಯರಿಗೆ ತೋರಿಸಿ ಅಭಿಪ್ರಾಯ ಪಡೆದುಕೊಳ್ಳುವ, ಸ್ವಲ್ಪ ಚೆನಾಗಿರದಿದ್ದರೂ ಮೂಲೆಗೆಸೆವ ತಿಣುಕಾಟಗಳೂ ನಿಮಗೆ ತಿಳಿಯದ್ದಲ್ಲ..:)

  ಥ್ಯಾಂಕ್ಸು..:)

 12. ರಂಜಿತ್ ಹೇಳುತ್ತಾರೆ:

  ಮನಸು,

  ನಿಮ್ಮ ಅಭಿಪ್ರಾಯಕ್ಕೆ ಮೆಚ್ಚುಗೆಗೆ ಶರಣು.

  ಪ್ರೋತ್ಸಾಹಿಸುತ್ತಿರುವಿರಾದರೆ ಬರೆಯುತ್ತಿರುತ್ತೇನೆ..:)

 13. ರಂಜಿತ್ ಹೇಳುತ್ತಾರೆ:

  ಗೀತಾ ಹೆಗ್ಡೆಯವರೇ,

  ನೀಲಿಹೂವಿಗೆ ಸ್ವಾಗತ. ಬರುತ್ತಿರಿ.

  ಇಂಚರ,

  ಥ್ಯಾಂಕ್ಸ್ ಕಣಮ್ಮ.

 14. ರಂಜಿತ್ ಹೇಳುತ್ತಾರೆ:

  ಸುನಿಲ್,

  ನಿಮ್ಮ ಆತ್ಮೀಯತೆಗೆ, ಪ್ರೀತಿಗೆ ಋಣಿ.

  ಬರೆಯುತ್ತಿರುತ್ತೇನೆ

  ಧನ್ಯವಾದಗಳು.

 15. ರಂಜಿತ್ ಹೇಳುತ್ತಾರೆ:

  ಸುನಾಥ್ ಮತ್ತು ಶೆಟ್ಟರೇ,

  ನಿಮ್ಮ ಅನಿಸಿಕೆ ನನಗೆ ಮತ್ತಷ್ಟು ಹುರುಪು ನೀಡುತ್ತೆ ಬರೆಯಲು.

  ಪ್ರೋತ್ಸಾಹಕ್ಕೆ ಧನ್ಯವಾದಗಳು.

 16. Reshma ಹೇಳುತ್ತಾರೆ:

  Superb… 🙂

 17. Divya ಹೇಳುತ್ತಾರೆ:

  ತುಂಬಾನೇ ಇಷ್ಟವಾದವು ರಂಜಿತ್… ನಾಕು ಸಾಲುಗಳಲ್ಲಿ, ನಲವತ್ತು ಸಾಲಿನ ಅರ್ಥ ಕೊಡುವ, ಪ್ರಾಸಬದ್ಧ ಕವನಕ್ಕೆ ಅಭಿನಂದನೆಗಳು !
  -ದಿವ್ಯಾ

 18. ರಂಜಿತ್ ಹೇಳುತ್ತಾರೆ:

  ಪ್ರದೀಪ್ , ರೂಪ,

  ಠ್ಯಾಂಕ್ಸ್ ನೀವು ಮೆಚ್ಚುಗೆ ಸೂಚಿಸಿದ್ದಕ್ಕೆ. ಖಂಡಿತಾ ಇದು ಹೆಚ್ಚು ಬರೆಯಲು ಉಮೇದು ನೀಡುತ್ತೆ.

 19. ರಂಜಿತ್ ಹೇಳುತ್ತಾರೆ:

  ರೇಶ್ಮಾ,

  ಥ್ಯಾಂಕ್ಯೂ.

  ಲಕ್ಷ್ಮೀಕಾಂತ್ ಮತ್ತು ದಿವ್ಯಾ,

  ಮೊದಲ ಬಾರಿಯ ಭೇಟಿ ಬ್ಲಾಗಿಗೆ ಅನ್ನಿಸುತ್ತದೆ. ಸ್ವಾಗತ. ನಿಮ್ಮ ಮೆಚ್ಚುಗೆಗೆ ನನ್ನ ಒಂದು ನನ್ನಿ.

 20. shivu.k ಹೇಳುತ್ತಾರೆ:

  ರಂಜಿತ್ ಸರ್,

  ತುಂಬಾ ಚೆನ್ನಾದ ಚುಟುಕು ಕವನಗಳು.

  ನನ್ನ ಹೃದಯವೆಂದರೆ
  ಬಿದ್ದ ನಾಕು ಹನಿಗಳನ್ನೇ
  ಮಳೆಗಾಲವೆಂದು ಭ್ರಮಿಸಿ
  ಕನಸುಗಳ ಚಿಗುರೊಡೆಸಿ
  ಮೋಸಹೋಗುವ ಇಳೆ…

  ಈ ಪದ್ಯವನ್ನೋದಿ ಸಿಕ್ಕಾಪಟ್ಟೆ ಖುಷಿಯಾಯ್ತು. ಇಂದಿನ ಪಡ್ಡೆ ಹುಡುಗರ ಪರಿಸ್ಥಿತಿ ಇದಕ್ಕಿಂತ ಭಿನ್ನವೇನಲ್ಲ…

  ಧನ್ಯವಾದಗಳು

 21. ರಂಜಿತ್ ಹೇಳುತ್ತಾರೆ:

  ಶಿವು,

  ನಾನೂ ಪಡ್ಡೆ ಹುಡುಗ್ರ ತರಹಾನೇ ಸರ್..:)

  ಈ ಪ್ರೀತಿ ಅನ್ನೋದು ಪಡ್ಡೆ ಹುಡುಗರನು ಕೆಡವೋ ಖೆಡ್ಡಾ ನೆ ಅಲ್ವೆ?;)

  ಥ್ಯಾಂಕ್ಯೂ ನಿಮ್ಮ ಮೆಚ್ಚುಗೆಗೆ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s