ನಿನ್ನ ಸೆರಗಿನ ಜಗ!

Posted: ಮೇ 25, 2009 in ಕವಿತೆ
477f_2
ಜಗದ ಅದ್ಭುತ
ಸೌಂದರ್ಯಗಳೆಡೆ
ದಟ್ಟ ನಿರ್ಲಕ್ಷ್ಯ..
ಕಣ್ಣೆದುರು ಸದಾ
ನಗುಮೊಗದ
ದಿವ್ಯ ಲಾಸ್ಯ…
 
ಮಾಡದ ತಪ್ಪಿಗೆ
ಊರಜನರೆಲ್ಲಾ ಸೇರಿ
ನೀಡುವ ವಿಧವಿಧ ಶಿಕ್ಷೆ..
ಮನ ಬೇಡುವುದು ನಿನ್ನ
ಕಣ್ಣ ತೀರ್ಪು..
 
ಹೊರಗಡಿ ಇಟ್ಟಾಗೆಲ್ಲ
ಹೆಜ್ಜೆ ಹೆಜ್ಜೆಗೂ ವಿಷ..
ಒಳಗೆ ಕಾಯುವುದು
ನಿನ್ನ ಮುತ್ತಿನಮೃತ…
 
ಬದುಕೆತ್ತೆತ್ತಿ ಎಸೆವಾಗ
ನೀಡುವುದು ಬೆಚ್ಚಗಿನಾಶ್ರಯ
ನಿನ್ನ ಸೆರಗಿನ ಜಗ!
ಟಿಪ್ಪಣಿಗಳು
 1. svatimuttu ಹೇಳುತ್ತಾರೆ:

  ಮಾಡದ ತಪ್ಪಿಗೆ
  ಊರಜನರೆಲ್ಲಾ ಸೇರಿ
  ನೀಡುವ ವಿಧವಿಧ ಶಿಕ್ಷೆ..
  ಮನ ಬೇಡುವುದು ನಿನ್ನ
  ಕಣ್ಣ ತೀರ್ಪು.

  ಈ ಸಾಲು ಮನಮುಟ್ಟಿತು… ಅಣ್ಣ…… ಮುದ್ದಾದ ಕವನ………….

 2. Gnana Murthy ಹೇಳುತ್ತಾರೆ:

  ರಂಜಿತ್ ಗುರುಗಳೇ ,

  ಮಾಡದ ತಪ್ಪಿಗೆ
  ಊರಜನರೆಲ್ಲಾ ಸೇರಿ
  ನೀಡುವ ವಿಧವಿಧ ಶಿಕ್ಷೆ..
  ಮನ ಬೇಡುವುದು ನಿನ್ನ
  ಕಣ್ಣ ತೀರ್ಪು.

  ಈ ಸಾಲುಗಳು ತುಂಬಾ ಇಷ್ಟವಾದವು….

 3. shivu.k ಹೇಳುತ್ತಾರೆ:

  ರಂಜಿತ್ ಸರ್,

  ಕವನ ಸ್ವಲ್ಪ ವಿಭಿನ್ನವೆನಿಸುತ್ತೆ…..ಹೇಳುವ ವಿಚಾರದಲ್ಲಿ ಹೊರಗಿನ ಸಮಾಜವನ್ನು ಬಳಸಿಕೊಂಡಿದ್ದೀರಿ….

  ಬದುಕೆತ್ತೆತ್ತಿ ಎಸೆವಾಗ
  ನೀಡುವುದು ಬೆಚ್ಚಗಿನಾಶ್ರಯ
  ನಿನ್ನ ಸೆರಗಿನ ಜಗ!

  ಈ ಪದ್ಯವಂತೂ ವಿಶಿಷ್ಟ ಪ್ರಯೋಗವೆನಿಸುತ್ತೆ…

  ಮುಂದುವರಿಯಲಿ…ಧನ್ಯವಾದಗಳು.

 4. prakash hegde ಹೇಳುತ್ತಾರೆ:

  ನೀಲಿ ಹೂ…

  ಪಾಕಿಸ್ತಾನದಲ್ಲಿ ಗೆಳೆಯನ ಸಂಗಡ ತಾಲಿಬಾನಿಗಳಿಗೆ
  ಸಿಕ್ಕಿಬಿದ್ದ ಮಹಿಳೆಯ..
  ಘಟನೆ ನೆನಪಾಯಿತು..

  ಅಸಹಾಯಕ ಪ್ರೇಮದ ಎಳೆಯನ್ನಿಟ್ಟು ರಚಿಸಿದ ಈ ಕವನ
  ಮನದಲ್ಲಿಳಿಯುತ್ತದೆ…

  ಕೊನೆಯ ಸಾಲುಗಳು ಬಹಳ ಇಷ್ಟವಾದವು…

 5. manasu ಹೇಳುತ್ತಾರೆ:

  ಕೊನೆಯ ಸಾಲುಗಳು ಬಹಳ ಇಷ್ಟವಾದವು…

  ವಿಶಿಷ್ಟವೆನಿಸಿದೆ ಕವನದ ಭಾವನೆಗಳು… ತುಂಬ ಹಿಡಿಸಿತು

 6. ಶೆಟ್ಟರು (Shettaru) ಹೇಳುತ್ತಾರೆ:

  ಎಂದಿನಂತೆ ಅದ್ಭುತ ಸಾಲುಗಳು
  -ಶೆಟ್ಟರು

 7. vinayaka kodsara ಹೇಳುತ್ತಾರೆ:

  ಕೊನೆಯ ಪ್ಯಾರ ತುಂಬಾ ಇಷ್ಟವಾಯಿತು. ಚೆಂದದ ಕವಿತೆ…

 8. ಪ್ರದೀಪ್ ಹೇಳುತ್ತಾರೆ:

  ನೀಲಿ ಹೂದೋಟದ ಸೊಗಸಾದ ಹೂಗಳಲ್ಲೊಂದು ಬಲು ಸೊಗಸಾದ ಹೂವಿದು…… 🙂

 9. ಅನಿಕೇತನ ಹೇಳುತ್ತಾರೆ:

  Tumba chennagide Ranjith.
  Abhinandanegalu.
  Sunil.

 10. roopa satish ಹೇಳುತ್ತಾರೆ:

  Ranjith,
  Tumbaa beautiful aagide lines….
  nanage tumba ishtavaagida saalugaLu

  “ಮಾಡದ ತಪ್ಪಿಗೆ
  ಊರಜನರೆಲ್ಲಾ ಸೇರಿ
  ನೀಡುವ ವಿಧವಿಧ ಶಿಕ್ಷೆ..
  ಮನ ಬೇಡುವುದು ನಿನ್ನ
  ಕಣ್ಣ ತೀರ್ಪು”

  keep rocking 🙂

 11. ರಂಜಿತ್ ಹೇಳುತ್ತಾರೆ:

  ಇಂಚರ,

  ಆ ಸಾಲು ಇಷ್ಟಪಟ್ಟಿದ್ದಕ್ಕೆ ಥ್ಯಾಂಕ್ಸ್. ಒಟ್ಟಾರೆ ಕವನ ಹಿಡಿಸಲಿಲ್ವೇ?

 12. ರಂಜಿತ್ ಹೇಳುತ್ತಾರೆ:

  ಜ್ಞಾನಮೂರ್ತಿಗಳೇ,

  ಅಪರೂಪದ ಬ್ಲಾಗಿನ ಭೇಟಿಗೆ, ಮತ್ತು ಮೆಚ್ಚುಗೆಗೆ ಧನ್ಯವಾದಗಳು.

 13. ರಂಜಿತ್ ಹೇಳುತ್ತಾರೆ:

  ಶಿವೂ,

  ಪ್ರತೀ ಸಲ ಬರೆಯುವುದಕ್ಕಿಂತ ವಿಭಿನ್ನ ಭಾವದಲ್ಲಿ ಬರೆಯುವ ಪ್ರಯತ್ನ ಮಾಡಿದ್ದು ಹೌದು. ಹಾಗೆ ಮೂಡಿದ್ದೂ ಹೌದಾದರೆ ನನಗೆ ಖುಷಿ. ಕವನ ಒಬ್ಬೊಬ್ಬರಿಗೆ ಒಂದೊಂದು ವಿಧದ ಅನುಭೂತಿ ನೀಡುತ್ತದೆ ಎಂದು ನನ್ನ ನಂಬುಗೆ. ಇನ್ನೊಂದು ಮನಸ್ಥಿತಿಯಲ್ಲಿ ಓದಿದರೆ ಬೇರೆ ರೀತಿ ಅನ್ನಿಸಬಹುದಾ ಎಂದು ನೀವೇ ತಿಳಿಸಬೇಕು.
  ಎಂದಿನಂತೆ ನಿಮ್ಮ ಮೆಚ್ಚುಗೆಗೆ ನನ್ನ ನನ್ನಿ.

 14. ರಂಜಿತ್ ಹೇಳುತ್ತಾರೆ:

  ಪ್ರಕಾಶ್ ಹೆಗ್ಡೆ,

  ಜೋಗಿಯವರು ಒಂದು ಕಡೆ ’ಈಗಿನ ಕವಿತೆಗಳು, ನನ್ನನ್ನು ಓದುವುದಕ್ಕೆ ನೀನು ಸಿದ್ಧತೆ ಮಾಡಿಕೊಂಡಿದ್ದೀಯಾ ಅಂತ ಓದುಗನನ್ನು ಕೇಳುತ್ತದೆ’ ಅಂತಾರೆ. ಪರೀಕ್ಷೆಯಲಿ ಎಷ್ಟು ಓದಿದ್ದರೆ ಅಷ್ಟು ಮಾರ್ಕ್ಸು ಬರುವಂತೆ ಕವಿತೆ ಓದಲು ನೀನೆಷ್ಟು ಸಿದ್ಧನಾಗಿದ್ದೀಯೋ ಅಷ್ಟು ಮಾತ್ರ ಕವಿತೆ ನಿನಗೆ ದಕ್ಕುತ್ತದೆ ಅನ್ನುವ ರೀತಿ. ನೀವು ಕವಿತೆ ಓದುವ ರೀತಿ ನೋಡಿ ಅಸೂಯೆಯಾಯಿತು. ಹಾಗೆ ಮೂಲ ಪ್ರೇರಣೆ ಕುರಿತ ಮಾತಿಗೆ ಅಚ್ಚರಿಯೂ.
  ನಿಮ್ಮ ಹೆಜ್ಜೆಗುರುತು ನೀಲಿಹೂವಿನ ತೋಟದಲ್ಲಿ ಮೂಡುತಿರಲಿ.
  ಧನ್ಯವಾದಗಳು.

 15. ರಂಜಿತ್ ಹೇಳುತ್ತಾರೆ:

  ಮನಸು ಮೇಡಮ್,

  ನಿಮ್ಮ ಹುರುಪು ನೀಡುವ ಹೊಗಳಿಕೆಗಳಿಗೆ ಋಣಿಯಾಗಿರುವೆ. ಮತ್ತಷ್ಟು ಬರೆಯಲು ಇಂಥ ಸಣ್ಣ ಪ್ಯಾಟಿಂಗ್ (ಬೆನ್ತಟ್ಟುವಿಕೆ) ಗಳೇ ಕಾರಣ.

 16. ರಂಜಿತ್ ಹೇಳುತ್ತಾರೆ:

  ಶೆಟ್ಟರೇ,

  ಬ್ಲಾಗಿನ ಒಳ್ಳೆಯಬರಹಗಳಿಗೆ, ಹೊಸ ಪ್ರಯೋಗಗಳಿಗೆ ಮಾತ್ರ ಪ್ರೋತ್ಸಾಹಿಸಿ ಪ್ರೇರಣೆ ನೀಡುತ್ತಾ ಬಂದಿದ್ದೀರಿ.
  ಧನ್ಯವಾದಗಳು.

 17. ರಂಜಿತ್ ಹೇಳುತ್ತಾರೆ:

  ವಿನಾಯಕ ಕೊಡ್ಸರ,

  ಮೊದಲಿಗೆ ನೀಲಿಹೂವಿಗೆ ಸ್ವಾಗತ. ಮತ್ತು ಕವಿತೆ ಮೆಚ್ಚಿಕೊಂಡಿದ್ದಕ್ಕೊಂದಿಷ್ಟು ನನ್ನಿ.

 18. ರಂಜಿತ್ ಹೇಳುತ್ತಾರೆ:

  ಸುನಿಲ್,

  ಧನ್ಯವಾದಗಳು.

  ರೂಪ ಸತೀಶ್,

  ನಿಮ್ಮ ಬ್ಯುಸಿ ಶೆಡ್ಯೂಲ್ ಗಳಲ್ಲಿ ಬ್ಲಾಗಿಗೆ ವಿನಿಯೋಗಿಸಿದ ಸಮಯ ನಿಮಗೆ ಖುಷಿ ನೀಡಿದರೆ ತೋಟದ ಮಾಲಿಗೆ ಸಂಬಳ ಸಿಕ್ಕಂತೆಯೇ!
  ಈ ಕವಿತೆ ನಿಮ್ಮ ಆರ್ಕುಟ್ ನ 3K ಕಮ್ಯೂನಿಟಿಯಲ್ಲಿ ಮೊದಲು ಪ್ರಕಟವಾಗಿ ಅಲ್ಲಿ ಮೆಚ್ಚುಗೆ ಗಳಿಸಿಕೊಂಡ ಮೇಲಷ್ಟೇ ಬ್ಲಾಗಿಗೆ ಹಾಕಲು ನಿರ್ಧರಿಸಿದ್ದೆ. ನಿಮಗೂ ಧನ್ಯವಾದಗಳನ್ನು ಹೇಳಲೇಬೇಕಾಗಿದೆ..

  ಹೀಗೇ ಬರುತ್ತಿರಿ.

 19. Rajesh Manjunath ಹೇಳುತ್ತಾರೆ:

  ಕವಿವರ್ಯ,
  ಕವನ ಸೂಪರ್… ಪ್ರತಿ ಸಾಲುಗಳು ಇಷ್ಟವಾಗಿವೆ, ಮಾಲ್ಡಿವ್ಸ್ ದ್ವೀಪದಂಚಿನಲ್ಲಿ ಹೆಕ್ಕಿ ಪೋಣಿಸಿದ ಮುತ್ತುಗಳೆನು (ನಾಮ ಪದ 🙂 ) ಇವುಗಳು.

 20. svatimuttu ಹೇಳುತ್ತಾರೆ:

  ಅಣ್ಣ,
  ಕವನನೂ ಹಿಡಿಸಿತು.. ಆದರೆ ಆ ಸಾಲು ತುಂಬಾ ಹಿಡಿಸಿತು….

 21. ವಿಜಯರಾಜ್ ಕನ್ನಂತ ಹೇಳುತ್ತಾರೆ:

  Ranjith….swalpa busyy yaagidde.. haagaagi yaava blog kadegoo hecchige hogoke aaglilla… nan blog goo Enoo bareede tingaLaaythu…

  nimma ee iDee kavana, aadara pratee saaalooo…. sakkat ishTa aaythu…

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s