ಸಂಜೀವಿನಿ..!

Posted: ಮೇ 30, 2009 in ಕವಿತೆ
umbrella-man_rain_sherbourne_night
ತನ್ನ ಜೀವವುಳಿಸುವ ಪ್ರಯತ್ನದ ಕುರುಹು ದೊರೆತರೆ
ಬ್ರಹ್ಮ ಎಲ್ಲಿ ಹಣೆಬರಹ ಮತ್ತೆ ಬದಲಾಯಿಸುವನೋ
ಎನ್ನುವ ಭಯದಿಂದಲೇ ಅನ್ನುವಂತೆ
ಮೆಡಿಕಲ್ ಶಾಪಿನವನಿಗೆ ಮಾತ್ರ ಅರ್ಥವಾಗುವ
ಭಾಷೆಯಲಿ ಡಾಕ್ಟರು ಚೀಟಿಯಲೇನೋ ಬರೆದುಕೊಟ್ಟಿದಾನೆ

ಕೈಯ್ಯಲಿ ಸಂಜೀವಿನಿ ಹೊತ್ತಂತೆ ಔಷಧಿ
ಚೀಟಿಯನು ಆ ಪುಟ್ಟ ಪೋರ ಒಯ್ಯುತಿರುವಾಗ
ಅವನ ಅಮ್ಮನಿಗೇನೂ ಆಗದು ಎಂಬ ನಂಬಿಕೆಯೇ
ತಂಗಾಳಿಯಾಗಿ ಮಿದು ಅಂಗೈಯೊಳಗಿನ
ಬೆವರನ್ನು ಹಿತವಾಗಿ ಇಂಗಿಸುತಿತ್ತು!

ಟಿಪ್ಪಣಿಗಳು
 1. Dr. BR. Satyanarayana ಹೇಳುತ್ತಾರೆ:

  ಕವಿತೆ ಅರ್ಥಗರ್ಭಿತವಾಗಿದೆ. ಇಷ್ಟವಾಯಿತು

 2. shivu.k ಹೇಳುತ್ತಾರೆ:

  ಮೊದಲನೆಯದು ನಗುಬಂತು, ಎರಡನೇಯದು ಗಂಭೀರವಾಗಿದೆಯೆನಿಸಿ ಇಷ್ಟವಾಯಿತು..

  ಒಟ್ಟಾರೆ ಎರಡು ಇಷ್ಟವಾಯಿತು.

 3. ಸಂತೋಷ ಹೇಳುತ್ತಾರೆ:

  ಒಂದೇ ಕವನದಲ್ಲಿ ಈ ಬಗೆಯ ವಿನೋದ ಮತ್ತು ಗಾಂಭೀರ್ಯದ ಮಿಶ್ರಣ ಇಷ್ಟವಾಯ್ತು. ಮನಮುಟ್ಟುವ ಕವಿತೆ !

  ಕವಿತೆಯ ಎರಡು ಪ್ಯಾರಗಳು ಸ್ವತಂತ್ರ ಚುಟುಕುಗಳಾಗಿಯೂ ಇಷ್ಟವಾಗುತಿತ್ತೇನೋ ? ಆದರೆ ಒಂದ ಕವನದ ಶೀರ್ಷಿಕೆಯಲ್ಲಿ ವಿಶೇಷ ಅನುಭವವನ್ನು ಕೊಡುತ್ತದೆ . ಹೀಗೆ ಮುಂದುವರೆಯಲಿ ನಿಮ್ಮ ಕಾವ್ಯ ಕೃಷಿ.

 4. roopa satish ಹೇಳುತ್ತಾರೆ:

  Hi Ranjith,

  Tumbaa ishtavaaytu… deep thoughts!!

 5. Kallare ಹೇಳುತ್ತಾರೆ:

  Ranjith,

  gud thought. aadaare kavanavaagisuva prakriyeyalli ashtondu yasha sigalilla illi…… tumbaa vaachyavaayitu ansnistu. idakkinta innoo chennagi bareeteeri neevu saar..

  lukin frwd for a nice post..

 6. sunil ಹೇಳುತ್ತಾರೆ:

  Excellent Ranjith…..
  Sunil.

 7. ರಂಜಿತ್ ಹೇಳುತ್ತಾರೆ:

  ಡಾ. ಸತ್ಯನಾರಾಯಣ ರವರೇ,

  ಮೊದಲ ಬಾರಿಗೆ ನನ್ನ ಬ್ಲಾಗುತೋಟಕ್ಕೆ ಬಂದಿದೀರಿ, ಸ್ವಾಗತ ಮತ್ತು ನಿಮ್ಮನಿಸಿಕೆಗೆ ಥ್ಯಾಂಕ್ಸ್.

 8. ರಂಜಿತ್ ಹೇಳುತ್ತಾರೆ:

  ಶಿವು,

  ಅದು ಬೇಕಂತಲೇ ಮೂಡಿಸಿದ ವಿನೋದವಲ್ಲ. ಕವಿತೆಯನು ಹಾಳೆಯ ಪಾಲಿಗೆ ಕೊಟ್ಟ ಮೇಲೆ, ಕವಿತೆಗೆ ನಾನೂ ಬರಿಯ ಓದುಗ ಅಷ್ಟೇ. ಆದರೆ ಅಂತಹ ಅಕ್ಷರಗಳನು ಬರೆಯುವ ಡಾಕ್ಟರುಗಳು, ಕೊನೆಯ ಪಕ್ಷ ನಾನು ಪೇಷೆಂಟ್ ಆದಾಗಲಾದರೂ ನನ್ನನು ಮನ್ನಿಸಬೇಕು..:)

  ಥ್ಯಾಂಕ್ಸ್ ಶಿವು.

 9. ರಂಜಿತ್ ಹೇಳುತ್ತಾರೆ:

  ಸಂತೋಷ್,

  ಎರಡೂ ಸ್ವತಂತ್ರ ಚುಟುಕಗಳಾಗದಂತೆ ಬಹುಶಃ ಶೀರ್ಷಿಕೆಯೇ ಹಿಡಿದಿಟ್ಟಿದೆ ಅನ್ನಿಸುತ್ತದೆ. ಅಲ್ಲದೇ ಎರಡೂ ಸ್ವತಂತ್ರವಾಗಿದ್ದರೆ ಎರಡನೆಯ ಪ್ಯಾರದಲ್ಲಿದ್ದ ರುಚಿ ಕಟ್ಟಾ(cut)ಗುತಿತ್ತೇನೋ ಅಲ್ಲವೇ? ಹಾಗೇ ಒಂದು ವಿಷಯ: ನೀವು ಕವನವನು ಸವಿಯುವ ಪರಿ ಹಿಡಿಸಿತು. ನಿಮ್ಮ ಅನಿಸಿಕೆ ತಿಳಿಸುತ್ತಿರಿ. ಬಡಪಾಯಿ ನಾನು; ತಿದ್ದಿಕೊಳ್ಳುತಿರುತ್ತೇನೆ..:)

 10. ರಂಜಿತ್ ಹೇಳುತ್ತಾರೆ:

  ರೂಪ,

  ನಿಮ್ಮ ಅಭಿಪ್ರಾಯದ ಜೊತೆಗೆ,ನನ್ನನ್ನು ತಿದ್ದಿ ತೀಡಿದ-ತೀಡುತಿರುವ ನಿಮ್ಮ ಓರ್ಕುಟ್ ೩ಕೆ ಬಳಗಕ್ಕೂ ನನ್ನ ಥ್ಯಾಂಕ್ಸ್!

 11. ರಂಜಿತ್ ಹೇಳುತ್ತಾರೆ:

  ಕಲ್ಲರೆ ಸರ್,

  ನಿಮ್ಮ ಅನಿಸಿಕೆಯ ಕುರಿತು ಗೌರವವಿದೆ. ದಡ್ಡ ದಡ್ಡ (ಕ್ಷಮಿಸಿ ಇದು ದೊಡ್ಡ ದೊಡ್ಡ ಆಗಬೇಕಿತ್ತು) ಬುದ್ಧಿಜೀವಿಗಳೆಲ್ಲ ನನ್ನ ಬರಹಗಳನ್ನು ಓದಿದರೂ ಓದದಂತೆ ಮಾಡುತಿರುವಾಗ, ನೀವು ಓದಿ ನಿಮ್ಮ ಅಭಿಪ್ರಾಯವನ್ನು ಹೀಗೆ ನೇರವಾಗಿ ತಿಳಿಸುತಿರುವುದಕ್ಕೆ, ಮತ್ತು ಒಂದು ಬರಹಕ್ಕೆ ಪ್ರತಿಕ್ರಿಯೆ ಹಾಕಿದಾಗ ಎಲ್ಲರಿಗೂ ಸಾಲಾಗಿ ಉತ್ತರಿಸಿ ನನ್ನನು ಮಾತ್ರ ಕಡೆಗಣಿಸುತಿರುವ ಬ್ಲಾಗಿಗರೂ ಇರುವಾಗ, ನನ್ನ ಬರಹದ ಕುರಿತು ವಿಶ್ವಾಸ ವ್ಯಕ್ತಪಡಿಸಿ ಇನ್ನೂ ಚೆನ್ನಾಗಿ ಬರೀತೀರಿ ಅಂದಿದ್ದಕ್ಕೂ ನನ್ನದೊಂದು ಕ್ಯೂಟ್ ಥ್ಯಾಂಕ್ಸ್.

  ಒಂದು ಕವಿತೆ ನಿಜವಾಗ್ಲೂ ಹೇಗಿರಬೇಕು; ಅದರ ನಿಯಮಾವಳಿಗಳೇನು ಇಂತಹ ವಿಚಾರಗಳ ಅಲ್ಪಪ್ರಜ್ಞೆಯೂ ಇಲ್ಲದವನು ನಾನು. ಬಹಳಷ್ಟು ಕವಿತೆ ಓದಿಕೊಂಡಿದ್ದೇನೆ ಅಂದುಕೊಂಡಿದ್ದರೂ ಅದರಲ್ಲಿ ಕವಿತೆ ಅನ್ನುವುದು ಹೀಗೆಯೇ ಇರಬೇಕು ಅನ್ನುವ ಒಂದು ಫೋರ್ಮಾಟ್ ಸಿಕ್ಕಿಲ್ಲ (ದಯವಿಟ್ಟು ಅರಿವಾಗಿಲ್ಲ ಅಂತ ಓದಿಕೊಳ್ಳಬೇಕು). ಇಲ್ಲಿ ಬರೆದ ಸಾಲುಗಳಿಗೆ ಕವಿತೆ ಅನ್ನುವ ಚೌಕಟ್ಟು ಕೊಡಲು ನನಗೇ ಸಂಕೋಚವಿರುವುದರ ಬಗ್ಗೆ ಕಾಮೆಂಟುಗಳಲ್ಲಿ ಆಗಾಗ್ಗೆ ಹೇಳಿಕೊಂಡಿರುವುದನ್ನು ತಾವು ಗಮನಿಸಬೇಕು. ನೀಲಿಹೂವಿನಲಿ ಇರುವುದೆಲ್ಲಾ ಮನದಲ್ಲಿ ಮೂಡಿದ ಭಾವಗಳನು ತಕ್ಷಣವೇ ಬ್ಲಾಗಿಗೆ ಇಳಿಸಿರುವಂಥದ್ದಲ್ಲ. ಬರೆದಾಗ ಖುಷಿಕೊಟ್ಟ ಬರಹ, ಸ್ವಲ್ಪ ಕಾಲ ಬಿಟ್ಟು ಓದಿಕೊಂಡಾಗಲೂ ಅದೇ ಖುಷಿ ಸಿಕ್ಕಂತಾದರೆ ಮಾತ್ರ ಬ್ಲಾಗಿನಲ್ಲಿ ಬಳಸಿಕೊಳ್ಳುತಿರುವ ವಿಚಾರ ನಿಮಗೂ ಗೊತ್ತಿರುವುದೇ. ಒಬ್ಬ ಸಾಮಾನ್ಯ ಓದುಗನಿಗೂ (ಕೊನೆಯ ಪಕ್ಷ ನನಗಾದರೂ) ಅರ್ಥವಾಗಿ ಖುಷಿಕೊಡಬೇಕೆಂಬುದಷ್ಟೇ ಆಶಯ.

  ಇಲ್ಲಿ ಅಲೋಚನೆಯೊಂದು ಕವಿತೆಯಾಗುವ ಪ್ರಕ್ರಿಯೆಯಲ್ಲಿ ಸೋತಿದೆ ಅಂದಿದ್ದೀರಿ. ಆದರೆ ಇದನ್ನು ಕವಿತೆಯಾಗಿಸುವ ಪ್ರಕ್ರಿಯೆಗೆ ಪ್ರಯತ್ನವನ್ನೇ ಪಟ್ಟಿಲ್ಲ. ಒಂದು ಚಿತ್ರವನ್ನು ಪುಟ್ಟ ರೂಪಕಗಳ ಮೂಲಕ ಓದುಗನಿಗೆ ನೀಡುವ ಪ್ರಯತ್ನವಷ್ಟೇ. ಹೀಗೆ ನೀಡುವ ಯತ್ನದಲ್ಲಿ ಮೂಲ ಉದ್ದೇಶ, ಓದುಗನಿಗೆ ಚಿತ್ರಣವನ್ನು ಆದಷ್ಟೂ ಸರಳವಾಗಿ ಅರ್ಥವಾಗುವಂತೆ ಕೊಡಬೇಕು ಎಂಬುದು. ಕವಿತೆಯ ಮೂಲ ಉದ್ದೇಶ ಕೂಡ ಇದಲ್ಲ ಅನ್ನುವುದು ನಿಮ್ಮ ಅಭಿಪ್ರಾಯವಾದರೆ, ನಿಜ… ಈ ಬರಹ ಸೋತಿದೆ.

 12. ರಂಜಿತ್ ಹೇಳುತ್ತಾರೆ:

  ಸುನೀಲ್,

  ಚಪ್ಪಾಳೆಯಂತಹ ನಿಮ್ಮ ಪ್ರೋತ್ಸಾಹದ ಮಾತುಗಳಿಗೆ ನನ್ನ ಧನ್ಯವಾದಗಳು.

 13. ವೈಶಾಲಿ ಹೇಳುತ್ತಾರೆ:

  Kallare yavara abhipraya swalpa mattige nannadoo kooda. Adaroo idu nangishta aaytu 🙂

  – Vaishali
  http://kenecoffee.wordpress.com/

 14. ರಂಜಿತ್ ಹೇಳುತ್ತಾರೆ:

  ವೈಶಾಲಿ ಮೇಡಮ್,

  ಇದೇನು ಈ ಸಲ ಬೆತ್ತ ಹಿಡ್ಕೊಂಡೇ ಬಂದು ಬಿಟ್ಟಿದ್ದೀರಿ?:)

  ಕಲ್ಲರೆಯವರಂತೆ ಎಲ್ಲಿ ತಪ್ಪಾಗಿದೆ ಅಂತ ವಿಶದೀಕರಿಸದೇ ಹೋದುದರಿಂದ ಅವರಿಗಿತ್ತ ಕಾಮೆಂಟೇ ನಿಮಗೂ ಅನ್ವಯ. ಅಂತೆಯೇ ನಿಮ್ಮ ನೇರ ಅಭಿಪ್ರಾಯಕ್ಕೆ ಒಂಚೂರು ಜಾಸ್ತಿ ಥ್ಯಾಂಕ್ಸ್..:)

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s