ಒಂದು ಗುಲಾಬ್ ಜಾಮೂನ್!

Posted: ಜೂನ್ 8, 2009 in ಕವಿತೆ
untitled

ಅಪರೂಪವಾಗಿ
ಬೇರೆಯೇ ಲೋಕದ ಜನ
ತಿನ್ನುವವರೆಂಬಷ್ಟು ಅಪರಿಚಿತವಾಗಿ
ಹೋಗಿದ್ದ ಜಾಮೂನು ಅಚಾನಕ್ಕಾಗಿ
ಅದೃಷ್ಟದಿಂದ ಆಕೆಗೆ ಸಿಕ್ಕಿದಾಗ
ಅದು ಚಂದ್ರ ಅಪಹಾಸ್ಯ ಮಾಡಿ
ನಗುವ ನಡುರಾತ್ರಿ!

ಮಗುವಿನ ಕನಸನ್ನಲ್ಲಾಡಿಸಿ
ಎಬ್ಬಿಸಿ ತಿನ್ನಿಸಿ
ತಾನು ಖುಷಿಪಟ್ಟಾಗ
ಮಗುವಿನ ಕಣ್ಣಲ್ಲೂ ಅಂದು ಹುಣ್ಣಿಮೆ!

ಹಸಿವಿನ
ಜೋಗುಳ ಹಾಡಿಕೊಂಡೇ
ನಿದಿರಿಸಿದ ಅವ್ವನ ಕನಸಲ್ಲಿ
ಕೊಟ್ಟ ಖುಷಿಯ ಜಾತ್ರೆ

ಬೆಳಗಾತನೆದ್ದು ಕನಸ ಮಧ್ಯದಲ್ಲೇ
ಜಾಮೂನು ತಿಂದು ತೇಗಿದ್ದ ಮಗ
ಅದರ ರುಚಿಯ ನೆನಪಾಗದೇ ಹಲುಬಿದ್ದಾನೆ,
ಬೆಳಿಗ್ಗೆ ಕೊಟ್ಟರಾಗದಿತ್ತೇ ಎಂದು ರೇಗಿದ್ದಾನೆ..

ತಿಂದ ಜಾಮೂನಿನ ರುಚಿ
ಹೇಗಿದ್ದಿರಬಹುದು ಎಂದೂಹೆ ಮಾಡುತ್ತಾ
ಮಗನಿದ್ದರೆ

ಕೈಯ್ಯಲ್ಲಿದ್ದ ಚಂದಿರನಂತಿದ್ದ
ಜಾಮೂನು ಮಗನ ಹೊಟ್ಟೆ ಸೇರಿಯೂ
ಅವನಿಗೆ ಸಂತೋಷವಾಗದಿದ್ದುದ್ದಕ್ಕೆ
ಅವ್ವನಿಗೆ ಹಸಿವು ಹೆಚ್ಚಿದೆ!

ಟಿಪ್ಪಣಿಗಳು
 1. ಶರಶ್ಚಂದ್ರ ಕಲ್ಮನೆ ಹೇಳುತ್ತಾರೆ:

  ಚಂದದ ಕವನ ರಂಜಿತ್… “ಬೆಳಗಾತನೆದ್ದು ಕನಸ ಮಧ್ಯದಲ್ಲೇ ಜಾಮೂನು ತಿಂದು ತೇಗಿದ್ದ ಮಗ ಅದರ ರುಚಿಯ ನೆನಪಾಗದೇ ಹಲುಬಿದ್ದಾನೆ, ಬೆಳಿಗ್ಗೆ ಕೊಟ್ಟರಾಗದಿತ್ತೇ ಎಂದು ರೇಗಿದ್ದಾನೆ” ಈ ಸಾಲುಗಳು ತುಂಬಾ ಇಷ್ಟ ಆಯಿತು… ನಾನೂ ಇದೆ ರೀತಿ ಬೆಳಗ್ಗೆ ಎದ್ದು ಹಿಂದಿನ ದಿನ ತಿಂದ ತಿಂಡಿಗಳ ರುಚಿಗಳ ನೆನಪಾಗಗೆ ಒದ್ದಾಡಿದ್ದೇನೆ… ಅಂತೂ ಜಾಮೂನಿನ ನೆನಪು ಮಾಡಿಕೊಟ್ಟಿರಿ, ಇಂದು ತಿನ್ನದೇ ಗತ್ಯಂತರವಿಲ್ಲ 🙂

  ಶರಶ್ಚಂದ್ರ ಕಲ್ಮನೆ

 2. ಅನಾಮಿಕ ಹೇಳುತ್ತಾರೆ:

  Hai Adigare,

  adbutha kavana.kaige banda tutthu bayige baralilla annuva hagitthu nimma kavanada chithrana.kavanada konevaregu ‘Maganige’ badalagi ‘Maguvige’ anthiddare innu chennagirutitthu.

  Shailaja.

 3. svatimuttu ಹೇಳುತ್ತಾರೆ:

  ಜಾಮೂನಿನ ವರ್ಣನೆ ಅತ್ಯದ್ಭುತವಾಗಿದೆ ಅಣ್ಣ…. ನನಗೂ ಬಾಯಲ್ಲಿ ನೀರೂರಿ ಬರುತ್ತಿದೆ..
  ಚಂದಿರನಂತಹ ಜಾಮೂನನ್ನು ನನಗೂ ಕೊಡುವಿರಾ?????

 4. roopa satish ಹೇಳುತ್ತಾರೆ:

  Hi Ranjith,

  Ee-saalugaLu “ಕನಸ ಮಧ್ಯದಲ್ಲೇ ಜಾಮೂನು ತಿಂದು ತೇಗಿದ್ದ ಮಗ ಅದರ ರುಚಿಯ ನೆನಪಾಗದೇ ಹಲುಬಿದ್ದಾನೆ… ” tumbaa ishtavaaytu…

  jamoon-priye naanu….
  saaladakke adara photo bere….
  mosa idu…

  Well, keep writing… tumbaa chennagide.

 5. ವೈಶಾಲಿ ಹೇಳುತ್ತಾರೆ:

  Chandada kavite… ishtavaaytu 🙂

  – Vaishali

  http://kenecoffee.wordpress.com/

 6. shivu.k ಹೇಳುತ್ತಾರೆ:

  ಜಾಮೂನಿನ ಕವಿತೆ ಜಾಮೂನು ತಿಂದಷ್ಟೇ ರುಚಿಯಾಗಿದೆ.

  ನಾಲ್ಕನೇ ಮತ್ತು ಆರನೆ ಪದ್ಯಗಳು ಮನಮುಟ್ಟುತ್ತವೆ…

 7. ರಂಜಿತ್ ಹೇಳುತ್ತಾರೆ:

  ಕಲ್ಮನೆಯವರೇ,

  ಎಲ್ಲರ ಜೀವನದಲ್ಲಿ ಇದಕ್ಕೆ ಹೋಲುವ ಸಂಧರ್ಭಗಳು ನಡೆದೇ ಇರುತ್ತದಲ್ವೆ?

  ಜಾಮೂನು ತಿನ್ನಿ. ಮನಸ್ಸೂ ಸಿಹಿಯಾಗಲಿ.

 8. ರಂಜಿತ್ ಹೇಳುತ್ತಾರೆ:

  ಶೈಲಜಾ,

  ಮಗನಿಗೆ ಕೈಗೆ ಬಂದದ್ದು ಬಾಯಿಗೆ ಬರದೇ ಹೋದದ್ದು ಒಂದು. ತನ್ನ ಹಸಿವನ್ನು ಮುಚ್ಚಿಟ್ಟು ಮಗನಿಗೆ ನೀಡಿದ್ದ ತಾಯಿಗೆ ಹೇಗಾಗಿರಬೇಡ? ಆ ಅಂಶ ನನ್ನನ್ನು ಈಗಲೂ ಇನ್ನೊಮ್ಮೆ ಓದಿದಾಗ ಬಹಳ ಕಾಡುತ್ತದೆ.

  ಮಗನಿಗೆ ಇದ್ದುದು ಮಗುವಿಗೆ ಆಗಿದ್ದರೆ ಚೆನ್ನಾಗಿತ್ತೇನೋ. ಆದರೆ ಮಗ ರೇಗುವ ವಿಷಯ ಇರುವ ಸಾಲು ಕವಿತೆ “ಮಗ- ತಾಯಿ” ಇದ್ದರೇನೇ ಒಳ್ಳೆಯದು ಅನ್ನಿಸುವಂತೆ ಮಾಡಿತು.

  ಇದನ್ನು ಓದಿದ ಬಳಿಕ ನಿಮ್ಮ ಅನುಮಾನ ಶಮನ ಆಯಿತು ಅಂದುಕೊಳ್ಳುತ್ತೇನೆ.

  ನಿಮ್ಮ ಅಭಿಪ್ರಾಯಕ್ಕೆ ಥ್ಯಾಂಕ್ಸ್.

 9. ರಂಜಿತ್ ಹೇಳುತ್ತಾರೆ:

  ಇಂಚರ,

  🙂 ಬಹುಶಃ ಚಂದಿರನನ್ನು ತುಪ್ಪದಲ್ಲಿ ಹಾಕಿ ಕಾಯಿಸಿದರೆ ಜಾಮೂನು ಆಗುತ್ತದೇನೋ..:)

  ಓದಿ ನೀವು ಖುಷಿಯಾದರೆ ನನ್ನ ಮನಸ್ಸಿಗದು ಜಾಮೂನಿನಷ್ಟೇ ಸಿಹಿ..

  ಥ್ಯಾಂಕ್ಸ್.

 10. ರಂಜಿತ್ ಹೇಳುತ್ತಾರೆ:

  ರೂಪ,

  ಪ್ರೋತ್ಸಾಹಿಸುತ್ತಿರಿ, ಬರೆಯುತ್ತಿರುತ್ತೇನೆ.
  ಧನ್ಯವಾದಗಳು.

 11. ರಂಜಿತ್ ಹೇಳುತ್ತಾರೆ:

  ವೈಶಾಲಿ,

  ನಿಮಗಿಷ್ಟವಾಗಿದ್ದುದರಿಂದ ಬಹಳ ಖುಷಿಯಾಯಿತು. ಬರುತ್ತಿರಿ.

  ಶಿವು,

  ನಿಮ್ಮ ಓದುವಿಕೆಯಲ್ಲೇನೋ ತಪ್ಪಾಗಿದೆ ಅನ್ನಿಸುತ್ತದೆ. ಕವಿತೆ ಒಂದೇ. ನಿಮ್ಮ ಮಾತನ್ನು ೪ ನೇ ಮತ್ತು ೬ ನೇ ಪ್ಯಾರ ಇಷ್ಟವಾಯಿತು ಅಂತಂದುಕೊಳ್ಳಲೇ?

  ತುಂಬ ಧನ್ಯವಾದಗಳು.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s