ನನ್ನೊಳಗೂ ಒಂದು ಸುಂದರ ಬೆಳಗು!

Posted: ಆಗಷ್ಟ್ 20, 2009 in ಲೇಖನ
ತನ್ನ ಮಡಿಲಿನಲಿ ಒಂದು ಜಗತ್ತನ್ನೇ ಮಲಗಿಸಿಕೊಂಡಿರುವ ರಾತ್ರಿಯೊಂದು, ಅದನ್ನು ಹಗಲಿನ ಹೆಗಲಿಗೆ, ಸೂರ್ಯನ ಸುಪರ್ದಿಗೆ ಒಪ್ಪಿಸಲು ತಯಾರಾಗುವ ಸಮಯ.
ಚಂದ್ರ ಹೊರಗೆ ತನ್ನ ಪಾಳಿ ಯಾವಾಗ ಮುಗಿಯುತ್ತದೋ ಎಂದು ಆಕಳಿಸುತ್ತಿದ್ದಾನೆ. ದಿನವೂ ಅಮ್ಮ ಅದ್ಯಾವಾಗಲೋ ಎದ್ದು ಮನೆಮುಂದೆ ರಂಗವಲ್ಲಿ ಇಡುವಾಗ ಕಣ್ಣೆತ್ತಿ ನೋಡಿದರೆ ತನ್ನ ಮೇಲೂ ರಂಗೋಲಿ ಬರೆದುಬಿಟ್ಟಾಳು ಎಂದು ಹೆದರಿ ಪಿಳಿಪಿಳಿ ನೋಡುವ ಆಗಸದ ಚುಕ್ಕಿಗಳು. ಜಯಂತರು ತಮ್ಮ ಒಂದು ಕವಿತೆಯಲ್ಲಿ ಅಂದಂತೆ ಹಿತ್ತಲಿನ ತೋಟದಲಿ “ರೆಕ್ಕೆಗಳ ಫಡಫಡಿಸಿ ಮರವೊಂದು ಕತ್ತಲ ಕೊಡವಿಕೊಳ್ಳುತ್ತಿದೆ”. ಪಾರಿಜಾತ ಗಿಡದ ಮೇಲಿನ ಇಬ್ಬನಿ ಇನ್ನೂ ಜಾರದೇ ಜಂಭ ಬೀರುತ್ತಿದೆ. ಇಬ್ಬನಿ ಜಾರದೇ ತನ್ನ ಹೂವಿನ ಮೊಗ್ಗೊಡೆಸುವುದಿಲ್ಲ ಎಂಬ ಗಿಡದ ಹಠ ಇನ್ನೂ ಜಾರಿಯಲ್ಲಿದೆ. ತೋಟದ ಕರವೀರ, ತುಳಸಿಯಂತೆ ತನಗೂ ಕಟ್ಟೆ ಕಟ್ಟಿಲ್ಲ ಅಂತೆಲ್ಲಾ ಸಿಟ್ಟಿನಿಂದ ಎಂದೂ ಹೂವ ಬಿಡದೇ ಇದ್ದುದಿಲ್ಲ. ಗಿಡದ ಗೂಡಿನಲಿ ಆಗಲೇ ಬೆಳಗಾಗಿದೆ. ಮರಿ ಎದ್ದುದ್ದಕ್ಕೆ ಹಕ್ಕಿ ಬೇಗ ಬೇಗ ಗೂಡಿನಿಂದ ಹೊರಟಿದೆ; ಮರಿಯ ಕೂಗು ತಾರಕಕ್ಕೇರುವ ಮುನ್ನ ಕಾಳೊಂದನು ಅದರ ಗಂಟಲಲ್ಲಿ ಇಳಿಸಬೇಕಿದೆ. ಸ್ವಲ್ಪವೇ ದೂರದಲ್ಲಿ ಎನ್ನೆಚ್ ೧೭ ರ ವಾಹನಗಳು ಚಲಿಸುವ ಸದ್ದು ಕತ್ತಲೆಯ ಮೌನಕ್ಕೆ ಹಿನ್ನೆಲೆ ಸಂಗೀತ ಒದಗಿಸುತ್ತದೆ. ಒಮ್ಮೊಮ್ಮೆ ಹಾಗೆ ಕೇಳದೇ ಹೋದರೆ ಮನಸ್ಸಿಗೆ ಬೆಳಗ್ಗೆಂದು ಒಪ್ಪಿಕೊಳ್ಳುವುದೇ ಕಷ್ಟ.
ಒಲೆಗೆ ಇದ್ದ ಕಟ್ಟಿಗೆಗಳನ್ನು ಕೊಂಚ ಕೊಂಚವೇ ಹಾಕಿ ಈಗ ಅಮ್ಮ ಬಿಸಿನೀರು ಕಾಯಿಸುತ್ತಿದ್ದಾಳೆ. ಅವಳ ಅರ್ಧ ತೆರೆದ  ಕಣ್ಣು ಒಲೆಯ ಬೆಂಕಿ ಬೆಳಕಲ್ಲಿ ಮತ್ತಷ್ಟು ಹೊಳೆಯುತ್ತಿದೆ. ಹಿಂದಿನ ದಿನದ ಒಲೆಯ ಬಿಸಿಗೆ ಬೆಚ್ಚಗೆ ಮಲಗಿದ್ದ ಬೆಕ್ಕು, ಅಮ್ಮ ಏಳಿಸಿದ್ದಕ್ಕೆ ಮತ್ತು ತನ್ನ ನಿದಿರೆ ಭಂಗವಾಗಿದ್ದಕ್ಕೆ ಸಿಟ್ಟಿನಿಂದ ನೋಡುತ್ತಿದೆ. ಅಮ್ಮ ಮಧ್ಯೆ ಮಧ್ಯೆ ಅಡುಗೆ ಮನೆಗೆ ಬಂದು ಅಲ್ಲಿನ ತಯಾರಿಯನ್ನೂ ನೋಡಿಕೊಳ್ಳುತ್ತಿದ್ದಾಳೆ. ಅಡುಗೆ ಮನೆಗೆ ಹೋಗುವ ದಾರಿಯಲೇ ಒಂದು ಹಾಲ್. ಅಲ್ಲಿ ಒಬ್ಬರ ಪಕ್ಕ ಇನ್ನೊಬ್ಬರಂತೆ ನಾನು, ನನ್ನಣ್ಣ ಬಿದ್ದುಕೊಂಡಿದ್ದೇವೆ. ಫ್ಯಾನಿನ ಸದ್ದಿಗೂ, ಗೊರಕೆಗೂ ಸ್ಪರ್ಧೆ ನಡೆಯುತ್ತಿರುತ್ತದೆ. ದೊಡ್ಡ ಗೊರಕೆ ಸದ್ದು ಕೇಳಿ ಅಮ್ಮನಿಗೆ ಅಪ್ಪನ ನೆನಪಾಗಿ ಪುಟ್ಟ ಕಣ್ಣು ಮಂಜಾಗುತ್ತದೆ. ಅಣ್ಣನಿಗಿನ್ನೂ ಮಧ್ಯರಾತ್ರಿ. ಆತನದು ಸೂರ್ಯವಂಶ. ಸೂರ್ಯ ಹುಟ್ಟಿ ಬಹಳ ಹೊತ್ತಿನ ನಂತರವಷ್ಟೇ ಅವನ ಬೆಳಗು. ದಿನವೂ ಮಲಗುವಾಗಲೇ ಅಪರಾತ್ರಿ.  ಎಚ್ಚರಿರುವ ಅಮ್ಮ ದಿನವೂ ಹನ್ನೆರೆಡು-ಒಂದಾಗುತ್ತಲೇ ಒತ್ತಾಯ ಮಾಡಿ ಅವನ ಅಕೌಂಟ್ಸ್ ಬರವಣಿಗೆಯನು ನಿಲ್ಲಿಸುತ್ತಾಳೆ. ಗಾಢವಾದ ನಿದ್ರೆಯಲ್ಲಿರುವ ಅವನ ಬಿಳೀ ಬನೀನಿನಲಿ ಪುಟ್ಟ ತೂತೊಂದು ನಕ್ಷತ್ರದಂತೆ ಕಾಣುತ್ತಿದೆ, ಅದ ನೋಡಿದ ಅಮ್ಮ ತನ್ನಷ್ಟಕ್ಕೆ ತಾನೇ ಮುಗುಳ್ನಗುತ್ತಾಳೆ. ಆ ನಗು ಅರಳುವಾಗ ಮುಂಚೆ ಮೂಡಿದ್ದ ಬಿಂದು, ಕಣ್ಣಿನ ಹಿತ್ತಲುಬಾಗಿಲಿಂದ ಓಡಿಹೋಗುತ್ತದೆ.
ನಾನು ಕೆಲವೊಮ್ಮೆ ಐದಕ್ಕೆಲ್ಲಾ ಎದ್ದಿದ್ದರೂ ಸುಮ್ಮನೆ ಏನೋ ಆಲೋಚಿಸುತ್ತಾ, ಮೌನವಾಗಿ ಮಲಗಿಕೊಂಡೇ ಇರುವುದನ್ನು ಅಮ್ಮ ಗಮನಿಸಿದ್ದಾಳೆ. ಅದಕ್ಕೇ ಅಡುಗೆಮನೆಗೆ ಹೋಗುವಾಗಲೆಲ್ಲ ಒಮ್ಮೆ ನನ್ನ ಕಣ್ಣಬಳಿ ಬಂದು ಎಚ್ಚರಿದ್ದಾನೇನೋ ಅಂತ ಇಣುಕುತ್ತಾಳೆ. ನಾನು ನಾಟಕವಾಡುತ್ತಿದ್ದೆನೇನೊ ಅನ್ನಿಸಿ ಕೈಯ್ಯಲ್ಲಿನ ಹನಿಯನ್ನು ಚಿಮುಕಿ ಪರೀಕ್ಷಿಸುತ್ತಾಳೆ. ಮೆದುವಾಗಿ ಕೆನ್ನೆಬಡಿದು ನೋಡುತ್ತಾಳೆ. ಆಕೆಯ ಮಮತೆಯ, ಬೆಚ್ಚಗಿನ ಕೈಯ್ಯ ಸ್ಪರ್ಶ, ಒಂದು ಜೀವಂತಿಕೆಯ ಅಲೆಯೊಂದನು ದೇಹವಿಡೀ ಪಸರಿಸುತ್ತದೆ. ಅಡುಗೆಮನೆಯಲಿ ಹಬೆಯಾಡುವ ಒಂದು ಲೋಟ ಕಾಫಿ ರೆಡಿಯಾಗಿರುತ್ತದೆ ಆಗಲೇ. ನಾನೆದ್ದ ಕೂಡಲೇ ಕಾಫಿ ಕುಡಿಯುತ್ತಾ ಸ್ವಲ್ಪ ಹರಟೆ ಹೊಡೆಯಬೇಕೆಂಬುದವಳಾಸೆ.
ಮನೆಬೆಕ್ಕು ತನ್ನ ಮೊದಲ ಸುತ್ತಿನ ಊಟಕ್ಕಾಗಿ ಅಮ್ಮನನ್ನು ಪೀಡಿಸುತ್ತಿದೆ. ತುರಿದ ಕಾಯಿ, ಹಾಲು ಬಿಸ್ಕಿಟ್ಟು ಹಾಕುವವರೆಗೂ ಹಾಗೆಲ್ಲ ಸುಮ್ಮನೇ ಇರುವುದಿಲ್ಲವದು. ಅಮ್ಮ ಕಾಯಿ ತುರಿಯುವಾಗ ಮಾತ್ರ ಧ್ಯಾನಸ್ಥ ಮುನಿಯಂತೆ ಎದುರೇ ಕುಳಿತಿರುತ್ತದೆ. ಅದಕ್ಕೆ ಹಾಕದೇ ಇದ್ದರೆ ನಮ್ಮ ಹೊಟ್ಟೆಕೆಟ್ಟೀತು ಎಂಬ ಭಾವ ಉಕ್ಕಿಸುವಂತೆ ಅದು ತಿಂಡಿಯೆಡೆಗೆ ನೋಡುವ ರೀತಿ ನಿಜಕ್ಕೂ ಆಶ್ಚರ್ಯ ಹುಟ್ಟಿಸುತ್ತದೆ. ನಮ್ಮ ಸೈಕಾಲಜಿಯೆಲ್ಲಾ ಅರಗಿಸಿಕೊಂಡುಬಿಟ್ಟಿತೇ ಈ ಪುಟ್ಟ ಮುದ್ದು ಪ್ರಾಣಿ !?
ಎದ್ದಿದ್ದರೂ ನನ್ನ ಮೌನ ತಪಸ್ಸಿಗೆ ಭಂಗ ಬರಬಾರದೆಂಬಾಸೆಯಿಂದ ಮಲಗಿದ್ದಂತೆ ನಾಟಕವಾಡುತ್ತೇನೆ. ಹನಿ ಚಿಮುಕಿಸುವಿಕೆಗೆಲ್ಲಾ ಅಲುಗದಂತೆ ನಿದ್ರಿಸುವ ನಾಟಕ ಅಭ್ಯಾಸವಾಗಿದೆ. ಅತ್ತ ಅಡುಗೆ ಮನೆಯ ಕಿಟಕಿಯಿಂದ ಸೂರ್ಯ ಕಾಣತೊಡಗುತ್ತಲೇ, ಮೌನವೂ ಕೊಂಚ ಭಾರವೆನ್ನಿಸಿ ಎದ್ದು ಹಗುರಾಗುತ್ತೇನೆ. ಆಗಲೇ ಘನೀಭವಿಸಿದ್ದ ಭಾವವೊಂದನ್ನು ಪುಟ್ಟದಾಗಿ ಮೊಬೈಲಿನಲ್ಲಿ ಇಳಿಸುತ್ತೇನೆ. ನಂತರ ಎಲ್ಲರಿಗೂ ಎಸ್ಸೆಮ್ಮೆಸ್ಸಿನ ಮೂಲಕ ಕಳಿಸುವಾಗ ಆಗುತ್ತಿರುವ ಸದ್ದಿಗೆ ತಣ್ಣಗಾಗಿದ್ದ ಕಾಫಿಯನು ಮತ್ತೆ ಬಿಸಿಮಾಡುತ್ತಾಳೆ ಅಮ್ಮ. ಮುಖತೊಳೆದು ಬರುತ್ತಲೇ  ಕಾಫಿಯೊಂದಿಗೆ ಬಿಸಿಬಿಸಿ ಹರಟೆ ಶುರು. ಬೆಕ್ಕು ಈಗ ನನ್ನ ಕಾಲು ಸುತ್ತುವರಿಯುತ್ತದೆ. ಗೊತ್ತಿದೆ ಅದಕ್ಕೆ, ತನಗೆ ಎರಡನೇ ಸುತ್ತಿನ ಊಟ ಸಿಗಲಿದೆ ಎಂಬುದು.
“ಅಲ್ಲಿ ಊಟ ಹ್ಯಾಗೆ? ತರಕಾರಿ ಸಿಗ್ತದಾ? ಏನೂ ಸಿಗದಿದ್ರೆ ಅವಲಕ್ಕಿ-ಮೊಸರು ಸೇರಿಸ್ಕೊಂಡು ತಿನ್ಬಾರ್ದಾ? ” ಹೀಗೆ ಪ್ರಾರಂಭ ಅಮ್ಮನ ಪ್ರಶ್ನಾವಳಿ; ಮುದ್ದು ಸುಪ್ರಭಾತ!  ಅಲ್ಲಿನೆಲ್ಲಾ ವಿವರಗಳನ್ನು ಪದರು ಪದರಾಗಿ ವಿವರಿಸುತ್ತಿರುವಾಗ ಸೂರ್ಯ ಹೊಟ್ಟೆಕಿಚ್ಚಿನಿಂದಲೋ, ತನ್ನ ಕಾರ್ಯವೇ ಅದೇ ಎಂಬಂತೆ ಉರಿಯುತ್ತಾ ಮೆತ್ತಗೆ ಮೂಡಿಬರುತ್ತಿರುತ್ತಾನೆ.
ಒಂದು ಸುಂದರ ಸಸಿಯಂತ ದಿನದ, ಹೂವಿನಂತ ಬೆಳಿಗ್ಗೆ ಹೀಗೆ ಮೊಗ್ಗೊಡೆಯುತ್ತದೆ; ನನ್ನೊಳಗೂ ಕೂಡ!

funlok_com_01

Advertisements
ಟಿಪ್ಪಣಿಗಳು
 1. ಚಾಮರಾಜ ಸವಡಿ ಹೇಳುತ್ತಾರೆ:

  ತುಂಬ ಚೆಂದನೆಯ ಬರಹ ರಂಜಿತ್‌. ಬೆಳಗಿನ ಸೊಗಸು ಹುಟ್ಟಿಸುವ ಭಾವನೆಗಳೇ ಇಡೀ ದಿನ ಖುಷಿ ಕೊಡುವಂತಿರುತ್ತವೆ. ಅದರಲ್ಲೂ ರಜೆಗೆಂದು ಬಂದಾಗಿನ ದಿನದ ಬೆಳಗು ನಿಜಕ್ಕೂ ಗಮ್ಮತ್ತಿನದು. ತುಂಬ ಚೆನ್ನಾಗಿ ಬರೆದಿದ್ದಾರೆ. ನಿತ್ಯದ ಭಾವನೆಯೊಂದನ್ನು ಮತ್ತೆ ಸವಿದಂತಾಯ್ತು.

 2. SHAILAJA ಹೇಳುತ್ತಾರೆ:

  Munjaneya hombisilinaste hitavagitthu nimma baraha.Suryavamshadavarige anubhava aagada ondu sundara belagannu lekhanavigisiddiri.Rohith Adigara bagge baredaddu khushi aytu.Ammana preethi,kalaji,nithyada kayaka……..ellevu superb.

 3. ರಂಜಿತ್ ಹೇಳುತ್ತಾರೆ:

  ಸವಡಿ ಸರ್,

  ನಿಮ್ಮಂಥ ಬರಹಗಾರರು ನನ್ನ ಬ್ಲಾಗಿಗೆ ಬರುವುದೇ ದೊಡ್ಡ ಖುಷಿ. ನಿಮ್ಮ ಸಲಹೆಗಳು ನನ್ನಂಥವರಿಗೆ ತೀರಾ ಅಗತ್ಯ ಕೂಡ. ನಿಮ್ಮ ಬರಹಗಳಿಂದ, ಶೈಲಿಯಿಂದ ಬಹಳಷ್ಟು ಕಲಿತುಕೊಂಡಿದೀನಿ. ಧನ್ಯವಾದಗಳು ಸರ್.

  ನಮಸ್ತೆ ಶೈಲಜಾ ಅವರೇ,

  ಬರಹದ ಕುರಿತಿನ ಮಾತಿಗೆ ಧನ್ಯವಾದಗಳು. ನನ್ನಣ್ಣನ ಹೆಸರು ನಿಮಗೆ ಹೇಗೆ ಗೊತ್ತು? ದಯವಿಟ್ಟು ನನಗೆ adiga82@ಜೀ ಮೈಲ್ ಡಾಟ್ ಕಾಮ್ ಗೆ ಮೈಲ್ ಮಾಡ್ತೀರಾ?

 4. sritri ಹೇಳುತ್ತಾರೆ:

  ಓದಿ ಮುಗಿಸುತ್ತಲೇ ಒಂದು ಸುಂದರ ಬೆಳಗು ಕಣ್ಣೆದುರು ತೆರೆದುಕೊಂಡಿತು! ಚಂದದ ಬರಹವಿದು.

 5. sunil ಹೇಳುತ್ತಾರೆ:

  Hi Ranjit,
  Superb ranjit….eshtu chendaagi bardideera….odutta kanmuchchidre ee mta mata madhyanadalloo belagu anubhavakke bartide..coool on ranjit 🙂
  Sunil.

 6. Shobha ಹೇಳುತ್ತಾರೆ:

  Hello Ranjith Adiga sir,

  Tumbaa letaagi nimma barahana odide kanri.”nannolagu ondu sundara belagu” tumbaa chennaagittu. aa sundara belaginalli namma sundara belagannu kandashtu kushiyaaytu.
  anda haage nimma anna Rohith Adiga avra bagge chennagi baredidri.paapadavru kanri nimmanna.nange hege gottu anta nimma annanna keli.
  taayi preethige bere holikene illa kanri. antu super aagi baredidri.

 7. shruthi ಹೇಳುತ್ತಾರೆ:

  hi anna,

  tumbaa mudada baraha..heart toching.belakina varnaneyantu adbhuta..

  shruthi

 8. ರಂಜಿತ್ ಹೇಳುತ್ತಾರೆ:

  ಸ್ರಿತಿ, ಶೋಭಾ,

  ನನ್ನ ಬ್ಲಾಗಿಗೆ ಸ್ವಾಗತ. ನಿಮ್ಮನಿಸಿಕೆಗೂ ಥ್ಯಾಂಕ್ಸ್.

  ಸುನಿಲ್, ಶ್ರುತಿ,

  ಧನ್ಯವಾದಗಳು.

 9. gorake ಹೇಳುತ್ತಾರೆ:

  ನನ್ನ ಭಾವನೆಗಳನ್ನು ಅನುವಾದಿಸಿದ ರ೦ಜಿತ್ ರವರಿಗೆ ಹೃತ್ಪೂವ೯ಕ ಧನ್ಯವಾದಗಳು.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s