ವಿರಹ ಗೀತೆ..!

Posted: ಸೆಪ್ಟೆಂಬರ್ 1, 2009 in ಕವಿತೆ ತರಹ
ಈ ಮಳೆ ಇಳಿಯುವ ಮುಸ್ಸಂಜೆ ತೊಯ್ಯುವ ಗಳಿಗೆ
ದಯವಿಟ್ಟು
ಒಂದು ವಿರಹ ಗೀತೆ ಕೊಡಿ
ಗುನುಗಿ ಬದುಕಿಕೊಳ್ಳುತ್ತೇನೆ
untitled
ನಿಮಗೆ ತೋರುವ ಸುರಿಯುವ ತಂಪು
ನಿಜವಾದ್ದಲ್ಲ
ಅದರ ಮುಖವಾಡ ಕಳಚಿ
ಹನಿಹನಿಯೊಳಗಿಣುಕುವ ಕೆಂಡ
ಮೆಲ್ಲಗೆ ನನ್ನೊಳಗನ್ನು ದಹಿಸುವ ದೃಶ್ಯ
ನಿಮಗೆ ಕಾಣಿಸಲಾರೆ

 

ಮೌನವಾಗಿ ಯಾರಿಗೂ ತೋರದೇ
ಮಳೆ ಮಣ್ಣೊಳು ಸೇರಿ
ಗಂಧ ಮಾಡುವ ಮಸಲತ್ತು,
ಮತ್ತು ಅದು ತರಿಸುವ
ನೆನಪ ಮೊನೆಯಂಚು ಭಾರೀ ಚೂಪು

 

feelings,girl,neck,nude,painting,sadness,water-069e13779cbfda2448d9bac42a80ac2e_m

 

ಕೂಗಲೂ ಆಗದ ನೋವುಗಳನ್ನು
ಖಾಲೀ ಪೀಲಿ ಪದಗಳಲ್ಲಿ ನಿಮಗೆಲ್ಲಾ
ವಿವರಿಸಲಾರೆ

ಒಂದಿಷ್ಟು ಕಿಡಿಗಳಿವೆ ಒಳಗೆ
ಕ್ಷಣಗಳ ಕಾಡಿಗೆ ಸುರಿದು
ಆ ಬೆಚ್ಚಗಿನ ಮುಸುಕಿನಲ್ಲೇ ಉಳಿದುಕೊಳ್ಳುವೆ

ದಯವಿಟ್ಟು, ಒಂದು ವಿರಹ ಗೀತೆ ಕೊಡಿ.
ಗುನುಗಿ ಬದುಕಿಕೊಳ್ಳುವೆ.

Advertisements
ಟಿಪ್ಪಣಿಗಳು
 1. ಶರಶ್ಚಂದ್ರ ಕಲ್ಮನೆ ಹೇಳುತ್ತಾರೆ:

  ಸುಂದರ ಕವನ ರಂಜಿತ್… ಮತ್ತೊಮ್ಮೆ ಪದಗಳ ಪ್ರಯೋಗ ಖುಷಿ ತಂದಿದೆ… ವಿರಹ ಗೀತೆಗಳನ್ನು ಕೊಡುವ ಇಲ್ಲಿಗೆ ಬನ್ನಿ 🙂

  ಶರಶ್ಚಂದ್ರ ಕಲ್ಮನೆ

 2. ರಂಜಿತ್ ಹೇಳುತ್ತಾರೆ:

  ಮನಸು, ಕಲ್ಲರೆ, ಸುನಿಲ್, ರೂಪ ,

  ನಿಮ್ಮನಿಸಿಕೆಗೆ ಥ್ಯಾಂಕ್ಸ್.

  ಶರಶ್,

  ಒಳಗಿನ ನೆನಪಿನ ಒಣಹುಲ್ಲುಗಳಿಗೆ ಕಿಚ್ಚಿಡಲು ವಿರಹ ಕಿಡಿಯಷ್ಟಿದ್ದರೆ ಸಾಕು. ಅಷ್ಟು ಕೊಟ್ಟು ಪುಣ್ಯ ಕಟ್ಟಿಕೊಳ್ಳಿ..:)

 3. mallige ಹೇಳುತ್ತಾರೆ:

  geleya, VIRAHA GEETE ruchisida madalu barahagaara ninu.VIRAHAVE ondu apayamana. adarallu VIRAHADA urige bendade hoda bandugalilla. VIRAHA ondu VARA aagali. jagattina joligeyalli.

 4. ಚಾಮರಾಜ ಸವಡಿ ಹೇಳುತ್ತಾರೆ:

  ಶಾಯರಿ ಓದಿದಂತಾಯ್ತು. ಸಕತ್‌.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s