ದುರಾದೃಷ್ಟವಂತರು..!

Posted: ಸೆಪ್ಟೆಂಬರ್ 8, 2009 in ಕವಿತೆ ತರಹ
ಈ ಸಂಜೆಗಳು ಹಾಗೆಯೇ
ಕೆಲವೆಡೆ ಮುಷ್ಟಿ ಬಿಗಿದಿಟ್ಟರೂ
ಕೈಯೆಡೆಯಿಂದ ಉರುಳುವ ಮರುಳು
ಎಲ್ಲೋ ಕೆಲವರಿಗೆ ಮಾತ್ರ ಸಾಧ್ಯ
ಮನೆಗೆ ಬಂದು ಕಾಫಿ
ಕುಡಿಯುತಿರುವಾಗ ಬೆಚ್ಚಗಿನ ಬೋಂಡಾ
ಸೂರ್ಯನಂತೆ ಮೆಲ್ಲ ಮೆಲ್ಲ
ಹೊಟ್ಟೆಯಾಳಕ್ಕೆ ಇಳಿಯುವ
ಅನುಭವ ಮತ್ತು
ತುಂತುರ ತಂಪು
ಸುರಿಯುವುದನು ನೋಡುತ್ತ ಕೂರುವುದು
ಮತ್ತೆ ಹಲವರು ದುರದೃಷ್ಟವಂತರು
ಎಲ್ಲಿಯೋ ಅರ್ಜೆಂಟಾಗಿ ಹೋಗಬೇಕಾಗಿದ್ದಾಗ
ಮಳೆಮೂಡಿ ಅಡ್ರೆಸ್ಸಿಲ್ಲದ ಸೂರಿರಡಿ
ಮಳೆನಿಲ್ಲುವುದ ಕಾಯುತ್ತಾ
ಮೌನವಾಗಿ ನಿಂತ ಕ್ಷಣ,
ಕಾರಣವಿಲ್ಲದೇ ಹಳೆಯ ಅವಳ ನೆನಪಾಗಿ
ತನ್ನ ಸುಂದರ ಸಂಜೆಯೊಂದು ಕಣ್ಣ ಮುಂದೆಯೇ
ಧಗಧಗಿಸುತ್ತಾ ದಹಿಸುತ್ತಿರುವುದನು
ನಿರುಪಾಯನಾಗಿ
ಯುದ್ಧಮಧ್ಯೆಯ ನಿಶ್ಯಸ್ತ್ರ ಸೈನಿಕನಂತೆ
ಸುಮ್ಮನೆ ನೋಡಬೇಕಾಗುವುದು
ಅವರಿಗೂ ತಿಳಿದಿದೆ, ಆ ಕ್ಷಣದಲಿ
ಸಾವು ಹಾಗೆಲ್ಲ
ಸುಲಭವಾಗಿ
ಕರುಣೆ ತೋರುವಂಥಾದ್ದಲ್ಲ.ಈ ಸಂಜೆಗಳು ಹಾಗೆಯೇ
ಕೆಲವೆಡೆ ಮುಷ್ಟಿ ಬಿಗಿದಿಟ್ಟರೂ
ಕೈಯೆಡೆಯಿಂದ ಉರುಳುವ ಮರುಳು
ಎಲ್ಲೋ ಕೆಲವರಿಗೆ ಮಾತ್ರ ಸಾಧ್ಯ
ಮನೆಗೆ ಬಂದು ಕಾಫಿ
ಕುಡಿಯುತಿರುವಾಗ ಬೆಚ್ಚಗಿನ ಬೋಂಡಾ
ಸೂರ್ಯನಂತೆ ಮೆಲ್ಲ ಮೆಲ್ಲ
ಹೊಟ್ಟೆಯಾಳಕ್ಕೆ ಇಳಿಯುವ
ಅನುಭವ ಮತ್ತು
ತುಂತುರ ತಂಪು
ಸುರಿಯುವುದನು ನೋಡುತ್ತ ಕೂರುವುದು
ಮತ್ತೆ ಹಲವರು ದುರದೃಷ್ಟವಂತರು
ಎಲ್ಲಿಯೋ ಅರ್ಜೆಂಟಾಗಿ ಹೋಗಬೇಕಾಗಿದ್ದಾಗ
ಮಳೆಮೂಡಿ ಅಡ್ರೆಸ್ಸಿಲ್ಲದ ಸೂರಿರಡಿ
ಮಳೆನಿಲ್ಲುವುದ ಕಾಯುತ್ತಾ
ಮೌನವಾಗಿ ನಿಂತ ಕ್ಷಣ,
ಕಾರಣವಿಲ್ಲದೇ ಹಳೆಯ ಅವಳ ನೆನಪಾಗಿ
ತನ್ನ ಸುಂದರ ಸಂಜೆಯೊಂದು ಕಣ್ಣ ಮುಂದೆಯೇ
ಧಗಧಗಿಸುತ್ತಾ ದಹಿಸುತ್ತಿರುವುದನು
ನಿರುಪಾಯನಾಗಿ
ಯುದ್ಧಮಧ್ಯೆಯ ನಿಶ್ಯಸ್ತ್ರ ಸೈನಿಕನಂತೆ
ಸುಮ್ಮನೆ ನೋಡಬೇಕಾಗುವುದು
ಅವರಿಗೂ ತಿಳಿದಿದೆ, ಆ ಕ್ಷಣದಲಿ
ಸಾವು ಹಾಗೆಲ್ಲ
ಸುಲಭವಾಗಿ
ಕರುಣೆ ತೋರುವಂಥಾದ್ದಲ್ಲ.
ಈ ಸಂಜೆಗಳು ಹಾಗೆಯೇ
ಕೆಲವೆಡೆ ಮುಷ್ಟಿ ಬಿಗಿದಿಟ್ಟರೂ
ಕೈಯೆಡೆಯಿಂದ ಉರುಳುವ ಮರುಳು
ಎಲ್ಲೋ ಕೆಲವರಿಗೆ ಮಾತ್ರ ಸಾಧ್ಯ
ಮನೆಗೆ ಬಂದು ಕಾಫಿ
ಕುಡಿಯುತಿರುವಾಗ ಬೆಚ್ಚಗಿನ ಬೋಂಡಾ
ಸೂರ್ಯನಂತೆ ಮೆಲ್ಲ ಮೆಲ್ಲ
ಹೊಟ್ಟೆಯಾಳಕ್ಕೆ ಇಳಿಯುವ
ಅನುಭವ ಮತ್ತು
ತುಂತುರ ತಂಪು
ಸುರಿಯುವುದನು ನೋಡುತ್ತ ಕೂರುವುದು
parke_summer-rain
ಮತ್ತೆ ಹಲವರು ದುರದೃಷ್ಟವಂತರು
ಎಲ್ಲಿಯೋ ಅರ್ಜೆಂಟಾಗಿ ಹೋಗಬೇಕಾಗಿದ್ದಾಗ
ಮಳೆಮೂಡಿ ಅಡ್ರೆಸ್ಸಿಲ್ಲದ ಸೂರಿರಡಿ
ಮಳೆನಿಲ್ಲುವುದ ಕಾಯುತ್ತಾ
ಮೌನವಾಗಿ ನಿಂತ ಕ್ಷಣ,
ಕಾರಣವಿಲ್ಲದೇ ಹಳೆಯ ಅವಳ ನೆನಪಾಗಿ
ತನ್ನ ಸುಂದರ ಸಂಜೆಯೊಂದು ಕಣ್ಣ ಮುಂದೆಯೇ
ಧಗಧಗಿಸುತ್ತಾ ದಹಿಸುತ್ತಿರುವುದನು
ನಿರುಪಾಯನಾಗಿ
ಯುದ್ಧಮಧ್ಯೆಯ ನಿಶ್ಯಸ್ತ್ರ ಸೈನಿಕನಂತೆ
ಸುಮ್ಮನೆ ನೋಡಬೇಕಾಗುವುದು
ಅವರಿಗೂ ತಿಳಿದಿದೆ, ಆ ಕ್ಷಣದಲಿ
ಸಾವು ಹಾಗೆಲ್ಲ
ಸುಲಭವಾಗಿ
ಕರುಣೆ ತೋರುವಂಥಾದ್ದಲ್ಲ.
ಟಿಪ್ಪಣಿಗಳು
 1. ಶೆಟ್ಟರು (Shettaru) ಹೇಳುತ್ತಾರೆ:

  “ಆ ಕ್ಷಣದಲಿ ಸಾವು ಹಾಗೆಲ್ಲ ಸುಲಭವಾಗಿ ಕರುಣೆ ತೋರುವಂಥಾದ್ದಲ್ಲ.”

  ಸತ್ಯವಾದ ಮಾತು, ಆದರೂ ಆ ಕ್ಷಣದಲಿ ಅವಳು, ಸಾವು ಎರಡೂ ಒಂದೇ…

  ಶೆಟ್ಟರು

 2. ಸುನಾಥ ಹೇಳುತ್ತಾರೆ:

  ಹೌದು, ನಶೀಬ ಖೊಟ್ಟಿ ಇದ್ದಾಗ ಹಂಗ ಆಗ್ತದ.

 3. ಶರಶ್ಚಂದ್ರ ಕಲ್ಮನೆ ಹೇಳುತ್ತಾರೆ:

  ಮತ್ತೊಮ್ಮೆ ರಂಜಿತ್ ಇಂದ ಭಾವಯಾನ 🙂 ಚಂದದ ಕವಿತೆ, ಪದಗಳ ಜೋಡಣೆ ಇಷ್ಟವಾಯಿತು 🙂

 4. Sughosh S. Nigale ಹೇಳುತ್ತಾರೆ:

  ಹಾಯ್ ರಂಜಿತ್,
  ಇಂದಿನ ಕಾಲದ ವಿಚಿತ್ರ ಕವಿತೆಗಳನ್ನು ಓದಲು ತಲೆ ಕೆರೆದುಕೊಂಡು ತಲೆ ಕೂದಲು ಉದುರುತ್ತಿರಬೇಕಾದ ಸಂದರ್ಭದಲ್ಲಿ ತುಂಬ ಸಿಂಪಲ್ಲಾಗಿ, ತಕ್ಷಣ ಅರ್ಥವಾಗುವಂತಹ ಕವನಗಳನ್ನು ಬರೆಯುತ್ತಿದ್ದೀರಿ. ಈ ಸಾಲುಗಳು ಸಿಂಪಲ್ ಇರುವುದರ ಜೊತೆಗೆ ಅಷ್ಟೇ ಆಳವಾದ ಅರ್ಥವನ್ನೂ ಹೊಮ್ಮಿಸುತ್ತವೆ ಎಂಬುದು ವಿಶೇಷ. ನಿಮ್ಮ ಸಂವೇದನೆಗಳು ಹೀಗೆ ಅಭಿವ್ಯಕ್ತಿಗೊಳ್ಳಲಿ.
  -ಸುಘೋಷ್ ಎಸ್. ನಿಗಳೆ.
  (ಅಂದ ಹಾಗೆ ನಿಮ್ಮ ಬ್ಲಾಗ್ ತುಂಬ ಕ್ರಿಯೇಟಿವ್ ಆಗಿದೆ….)

 5. ರಂಜಿತ್ ಹೇಳುತ್ತಾರೆ:

  ಶೆಟ್ಟರು,

  ವಿರಹದ ಸಂಜೆಗಳಲ್ಲಿ ಗಳಿಗೆಗಳು ವಿಷದ ಗುಳಿಗೆಗಳಂತೆ. ಅದೂ ಮಳೆ ಬಂದು ಎಲ್ಲೋ ನಿಲ್ಲಬೇಕಾಗಿ ಬಂದಾಗ ನೆನಪುಗಳು ತನ್ನ ಸರ್ವ ಸೈನ್ಯ ಸಮೇತ ದಾಳಿಯಿಡಲು ಶುರುವಾಗುತ್ತದೆ.

  ನಿಮ್ಮ ಅನಿಸಿಕೆಗೆ ಥ್ಯಾಂಕ್ಸ್.

 6. ರಂಜಿತ್ ಹೇಳುತ್ತಾರೆ:

  ಸುನಾಥ್,

  ಖೊಟ್ಟಿ ನಶೀಬ ಇದ್ದವರಿಗೆ ಖುಷಿಗಳೂ ತಟ್ಟುತಿರಲಿ ಎಂಬುದಷ್ಟೇ ಆಶಯವಾಗಿಟ್ಟುಕೊಳ್ಳಬೇಕೇನೋ, ಅಲ್ಲವೇ? ನಿಮ್ಮ ಕಾಮೆಂಟಿಗೆ ಧನ್ಯವಾದಗಳು ಸರ್.

  ಶರಶ್,

  ಥ್ಯಾಂಕ್ಸ್. ನೋವಯಾನ ಅನ್ನದೇ ಮರ್ಯಾದೆ ಉಳಿಸಿದಿರಿ.

  ಸುಘೋಷ್,

  ನೀಲಿಹೂವಿನ ತೋಟಕ್ಕೆ ಸ್ವಾಗತ. ನಿಮ್ಮ ಅನಿಸಿಕೆ ನೋಡಿ ಖುಷಿಯಾಯಿತು. ಲೋಪವಿದ್ದಲ್ಲಿ ಸರಿಪಡಿಸಲೂ ತಿಳಿಸುವಿರಿ ಎಂದು ನಂಬುವೆ.
  ಬರುತ್ತಿರಿ.

 7. ವಿಜಯರಾಜ್ ಕನ್ನಂತ ಹೇಳುತ್ತಾರೆ:

  thumba ishta aaytu ranjit… sakkat saalugalu

 8. Shruthi ಹೇಳುತ್ತಾರೆ:

  good one anna

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s