ಸಿನೆಮಾ ಎಂದರೇನು?

Posted: ಸೆಪ್ಟೆಂಬರ್ 14, 2009 in ಸಿನೆಮಾ
ಈ ಪ್ರಶ್ನೆಗೆ ಒಬ್ಬ ಸಿನೆಮಾರಂಗದವನಿಂದ ಏನೇನೋ ಡೆಫಿನೇಶನ್ ಗಳು ಬರಬಹುದು. ಅವರದೇ ವೃತ್ತಿಶ್ರದ್ಧೆಯಿಂದ, passion ನಿಂದಾಗಿ ಸಿನೆಮಾಕ್ಕೆ ನೀಡುವ ವ್ಯಾಖ್ಯೆ ಬದಲಾಗಬಹುದು. ಟೆಕ್ನಿಕಲ್ ಆಗಿ ಸಿನೆಮಾ ಕ್ಕೆ ಬೇರೆ ಬೇರೆ ರೀತಿಯಲಿ ಭಾಷ್ಯ ನೀಡಬಹುದು ಕೂಡ.
ಆದರೆ ಅದನ್ನು ಮುಟ್ಟಿಸಿಕೊಳ್ಳುವ, ತಟ್ಟಿಸಿಕೊಳ್ಳುವ ಆ ಪ್ರೇಕ್ಷಕಪ್ರಭುವಿನ ಪ್ರಕಾರ ಸಿನೆಮಾ ಅಂದರೇನು?
ವಾರವಿಡೀ ಕಷ್ಟಪಟ್ಟು ಒಂದು ದಿನ ಸಮಯ ಮಾಡಿಕೊಂಡು ಫ್ಯಾಮಿಲಿ ಜತೆಗೆ ಖುಷಿಖುಷಿಯಾಗಿ ಸಮಯ ಕಳೆಯಲು ಇದೂ ಒಂದು ಮಾರ್ಗವಾ? ಅವಿವಾಹಿತನಾದರೆ ತನ್ನ ಗೆಳತಿ ಜತೆ. ಇಲ್ಲವಾದರೆ ತನ್ನ ಬೇಸರಿನ ಸಂಜೆಯನು ಕಳೆಯಲು ಇದೊಂದು ಟೈಮ್ ಪಾಸ್ ವಿಷಯವಾ? ಹೊಸದೊಂದು ಅನುಭವ ಗಿಟ್ಟಿಸುವ ಸಲುವಾಗಿ ಇಷ್ಟಪಟ್ಟು ಹೋಗುವುದಾ? ಅಥವ ತನ್ನ ಕ್ರಿಯೇಟಿವ್ ಅರ್ಜ್ ಗಾಗಿಯಷ್ಟೇ ಸಿನೆಮಾ ನೋಡುತ್ತಾನಾ?
ಹೀಗೇ ನೋಡುಗನ ಉದ್ದೇಶಕ್ಕನುಗುಣವಾಗಿಯೋ, ಮಾಡುವ ನಿರ್ದೇಶಕನ ಗ್ರಹಿಕೆಗನುಗುಣವಾಗಿಯೋ ಸಿನೆಮಾ ಬದಲಾಗುತ್ತಿರುತ್ತದೆ. ಒಬ್ಬ ನಿರ್ದೇಶಕ ಸಾಮಾಜಿಕ ಬದಲಾವಣೆಯಷ್ಟೇ ತನ್ನ ಸಿನೆಮಾದ ಉದ್ದಿಶ್ಯ ಅಂದರೆ ಇನ್ನೊಬ್ಬ ಪ್ರೇಕ್ಷಕನಿಗೆ ಮನರಂಜನೆ ನೀಡುವುದಷ್ಟೇ ತನ್ನ ಕೆಲಸ ಅಂದುಬಿಡುತ್ತಾನೆ. ಅಲ್ಲಿಗೇ ಸಿನೆಮಾ ಅನ್ನುವುದು ಕ್ಲಾಸ್ ಮತ್ತು ಮಾಸ್ ಎಂದು ಎರಡು ವಿಧವಾಗಿಬಿಡುತ್ತದೆ. ಕ್ಲಾಸ್ ಸಿನೆಮಾ ಅಂದರೆ ಜನ ನೋಡಲು ಬರುವುದಿಲ್ಲವೋ ಎನ್ನುತ್ತ ಭಯಪಡುವ ಕೆಲವು ನಿರ್ದೇಶಕರು, “ಬ್ರಿಡ್ಜ್ ಸಿನೆಮಾ” ಅನ್ನುತ್ತಾ ಮತ್ತೊಂದು ಪಂಗಡ ಹುಟ್ಟುಹಾಕಿದರು.
ಪ್ರೇಕ್ಷಕ ಮಾತ್ರ ತನಗಿಷ್ಟವಾದ ಸಿನೆಮಾ ನೋಡುತ್ತಾ ಬಂದಿದ್ದಾನೆ. ನಿಜವಾದ ಸೈಕಾಲಜಿ ಆಫ್ ಆಡಿಯೆನ್ಸ್ ನ್ನು, ಪ್ರೇಕ್ಷಕನ ನಾಡಿಮಿಡಿತವನ್ನು ಯಾವ ನಿರ್ದೇಶಕ ಲೇಖಕನಿಗೂ ಸರಿಯಾಗಿ ಹಿಡಿಯಲಾಗಿಲ್ಲ. ಪ್ರೇಕ್ಷನೊಬ್ಬನಿಗೆ ಸಿನೆಮಾ ನೋಡಲು ಸಾಕಷ್ಟು ಕಾರಣಗಳು ಒಂದಾಗಿ ನಂತರವಷ್ಟೇ ನಿರ್ಧರಿಸುತಾನೆಂದೇನೂ ಇಲ್ಲ. ಗಂಡ ತನ್ನನ್ನು ಸಿನೆಮಾಕ್ಕೆ ಕರೆದುಕೊಂಡು ಹೋಗಲೇ ಇಲ್ಲ ಅನ್ನುವ ಗೃಹಿಣಿ, ಇಂಥಾ ಸಿನೆಮಾಕ್ಕೆ ಅಂತ ಹೇಳೋಲ್ಲ, ಆಕೆಗೆ ಅಲ್ಲಿ ಗಂಡನ ಜತೆ ಸಿನೆಮಾಕ್ಕೆ ಹೋಗುವುದಷ್ಟೇ ಮುಖ್ಯ. ನಿರ್ದೇಶಕ ಎಷ್ಟು ವಿಭಿನ್ನವಾಗಿ ಸಿನೆಮಾ ಮಾಡಿದ್ದಾನೆ , ಎಷ್ಟು ಗಿಮ್ಮಿಕ್ ಮಾಡಿದಾನೆ ಅಂತೆಲ್ಲಾ ಅಲ್ಲ.
ನನ್ನ ಸಿನೆಮಾ ಬಗೆಗಿನ ಗ್ರಹಿಕೆ ಅಥವ ರುಚಿ ಬಗ್ಗೆ ವಯಸ್ಸಿಗೆ, ಅನುಭವಕ್ಕನುಗುಣವಾಗಿ ಬೇರೆಯಾಗುತ್ತಾ ಬಂದಿದೆ. ಚಿಕ್ಕ ವಯಸ್ಸಿನಲ್ಲಿ ಪ್ರಭಾಕರ್, ವಿಷ್ಣುವರ್ಧನ್ ಆಕ್ಷನ್ ಸಿನೆಮಾಗಳು ಇಷ್ಟವಾಗುತ್ತಿದ್ದವು. ಒಬ್ಬ ಮನುಷ್ಯ ಹತ್ತಿಪ್ಪತ್ತು ಮಂದಿಯನ್ನು ಹೊಡೆದುರುಳಿಸುವುದು ಪ್ರಿಯವಾಗುತ್ತಿತ್ತು. ಆಗ ನನಗೆ ಸಿನೆಮಾ ಅಂದರೇನು ಅಂತ ಯಾರಾದರೂ ಪ್ರಶ್ನೆ ಮಾಡಿದ್ದರೆ ಕಷ್ಟವನ್ನೆಲ್ಲಾ ಅಟ್ಟಿ, ವಿಜಯಿಯಾಗುವ ಹೀರೋ ನ ಸಿನೆಮಾ ಅಷ್ಟೇ ನನ್ನ ಪಾಲಿನ ಐಡಿಯಲ್ ಸಿನೆಮಾ ಆಗಿತ್ತು.  ಹದಿಹರೆಯಕ್ಕೆ ಬಂದೊಡನೆ ರೋಮ್ಯಾಂಟಿಕ್ ಸಿನೆಮಾಗಳಾದ ಡಿಡಿಎಲ್ ಜೆ, ಹಮ್ ಆಪ್ಕೆ ಹೈ ಕೌನ್ ನಂತವು ಇಷ್ಟವಾಗುತ್ತಿದ್ದವು. ಆಗ ನನ್ನ ಹೀರೋ ಹುಡುಗಿಯ ಮನಸ್ಸನ್ನು ಹೇಗೆ ಕದಿಯುತ್ತಾನೆಂಬುದೇ ಆಸಕ್ತಿಕರ ವಿಷಯ. ಸ್ವಲ್ಪ ಸಮಯ ಥ್ರಿಲ್ಲರ್ ಗಳು ಇಷ್ಟವಾಗತೊಡಗಿದವು ಥ್ರಿಲ್ಲರ್ ನೊಳಗಿನ ತಂತ್ರ, ಒಂದೊಂದೇ ವಿಷಯವನ್ನು ಪ್ರೇಕ್ಷಕನಿಗೆ ತಿಳಿಸುತ್ತಾ ಹೋಗಿ ಕೊನೆಯ ಕ್ಲೈಮಾಕ್ಸ್ ನಲ್ಲಿ ಹೇಗೆ ಮುಖ್ಯಾಂಶ ರಿವೀಲ್ ಆಗುತ್ತದೆ ಎಂಬುದು ನನ್ನ ಸಿನೆಮಾದೆಡೆಗಿನ ಕಾತರವಾಗಿತ್ತು. ಕಾಲೇಜು ಮುಗಿದು ಕೆಲಸಕ್ಕಲೆಯುವಾಗ ಸಮಾಜದ ಮುಖಗಳು ಪರಿಚಯವಾಗತೊಡಗಿತು. ಶಂಕರ್ ರ ಜಂಟಲ್ ಮ್ಯಾನ್, ಅನ್ನಿಯನ್ ಮತ್ತು ರಾಜ್ ಕುಮಾರ್ ಚಿತ್ರಗಳು ಪ್ರಿಯವಾಗತೊಡಗಿದವು. ಅ ವೆಡ್ನೆಸ್ ಡೇ , ಆಮೀರ್ ನಂತವು ಆಕರ್ಷಕವಾಗತೊಡಗಿತು. ನನ್ನ ಐಡಿಯಲ್ ಹೀರೋನ ಕೆಲಸ ಆಗ ಸಮಾಜವನ್ನು ಒಬ್ಬಂಟಿಯಾಗಿ ಗುಡಿಸುವುದು!
ಈಗೆಲ್ಲಾ ಸಿನೆಮಾ ನೋಡುವಾಗ ಅದರ ಮೇಕಿಂಗ್ ಹೇಗಾಗಿರಬಹುದು, ಯಾವ ಯಾವ ಕೋನದಲ್ಲಿ ಕ್ಯಾಮರಾ ಇಟ್ಟಿದ್ದಾರೆ, ಕಥೆ ಯಾವ ಅಂಶವನ್ನು ಮೊದಲು ಅರುಹಿ ಯಾವಂಶವನ್ನು ಕ್ಲೈಮಾಕ್ಸ್ ನಲ್ಲಿ ತಿಳಿಸಿದ್ದಾರೆ, ಪ್ರೇಕ್ಷಕನ ಮನಸ್ಸಿಗೆ ಆ ಪಾತ್ರವನ್ನು ಹೇಗೆ ರಿಜಿಸ್ಟರ್ ಮಾಡಿದ್ದಾರೆ, ಅನವಶ್ಯಕ ಸನ್ನಿವೇಶಗಳ್ಯಾವುವು, ಹಿನ್ನೆಲೆ ಸಂಗೀತ ಹೇಗೆ ಪರಿಣಾಮಕಾರಿಯಾಗಿದೆ, ಸ್ಕ್ರಿಪ್ಟ್ ನಲ್ಲಿ ಇನ್ನೂ ಹೇಗೆ ಉತ್ತಮವಾಗಿ ಮಾಡಬಹುದಿತ್ತು ಅಂಶಗಳೆಲ್ಲ ಮನಸ್ಸಿಗೆ ಬರುತ್ತದೆ. ನಿರ್ದೇಶಕನ, ಲೇಖಕನ ಸಂದರ್ಶನಗಳನ್ನೆಲ್ಲಾ ಟೀವಿಯಲ್ಲಿ ನೋಡುವುದರಿಂದ ಸಿನೆಮಾದೆಡೆಗೆ ಆಸಕ್ತಿ ಹೆಚ್ಚಾಗಿದೆ. “ಮಿಸ್ಕಿನ್” ಅನ್ನುವ ತಮಿಳು ನಿರ್ದೇಶಕ “ನನ್ನ ಪ್ರಕಾರ ಖುಷಿಯಿಂದ ಸಾಯುವುದೆಂದರೆ ಆ ಸಾವು ನಾನು ನಿರ್ದೇಶಕನಾಗಿ ಸಿನೆಮಾವೊಂದರ ಕೊನೇ ಶಾಟ್ ತೆಗೆಯುವಾಗ ಬಂದರಷ್ಟೇ” ಅಂತನ್ನುವಾಗ ಆತನ ಸಿನೆಮಾದೆಡೆಗಿನ ತುಡಿತ ನೋಡಿ ಅಸೂಯೆಮೂಡುತ್ತದೆ. ಶಾಶ್ವಂಕ್ ರಿಡಂಪ್ಶನ್, ಸಿಟಿಜನ್ ಕೇನ್ , ಆನಂದ್(ಹಿಂದಿ) ನಂತಹಾ ಸಿನೆಮಾ ನೋಡುವಾಗ ಅದರ ಸ್ಕ್ರಿಪ್ಟ್ ಸಮಯದಲ್ಲಿ ಬರೆಯುವಾತನ ಪುಳಕ ಊಹಿಸಿದರೆ ಹೊಟ್ಟೆಕಿಚ್ಚಾಗುತ್ತದೆ. ನಮ್ಮ ಪಕ್ಕದಲ್ಲಿಯೇ ಆರ್ಯ, ಅಕಾಶಮಂತ, ರೈನ್ ಬೋ ಕಾಲನಿ, ಸುಬ್ರಮಣ್ಯಪುರಂ, ಅಂಜಾದೇ ನಂತಹ ಸಿನೆಮಾ ಮಾಡುವಾಗ ನಮ್ಮಲ್ಲೂ ಅಂಥಾದ್ದು ಮಾಡುವುದು ಕಷ್ಟಕರವಲ್ಲ ಅನ್ನುವ ಅನಿಸಿಕೆ ಹುಟ್ಟುತ್ತದೆ.
ಹೀಗೆ ಈ ಸಿನೆಮಾ ಮೇಕಿಂಗ್ ನೆಡೆಗಿನ ಆಸಕ್ತಿ, ನನ್ನ “ನೋಡುವ, ಅನುಭವಿಸುವ, ನನ್ನೊಳಗಿನ ಕಲ್ಪನಾಲೋಕವನ್ನು ವಿಸ್ತರಿಸುವ ಪ್ರಕ್ರಿಯೆಗೆ” ತೊಡಕಾಗಿದೆಯೇನೊ. ಟೈಗರ್ ಪ್ರಭಾಕರ್ ಪೋಲೀಸ್ ಆಗಿ ನಾಲ್ಕು ಜನರನ್ನು ಚಚ್ಚುವಾಗ ಸಿಗುತ್ತಿದ್ದ ಆನಂದಗಳು, ಆಗಿನ ಸೆಟ್ ಗಳು, ಆಕ್ಷನ್ ಕಲಾವಿದರ ಬದುಕು, ಶಾಟ್ ತೆಗೆದಾದ ಮೇಲೆ ಏನಾಗಿರಬಹುದು ಎಂಬ ಊಹೆ, ಡಿಶ್ಯುಂ ಅನ್ನುವುದು ಹಿನ್ನೆಲೆಯಷ್ಟೇ ಅನ್ನುವ ಗ್ರಹಿಕೆ ಇದೆಲ್ಲಾ ಆಲೋಚನೆ, ಕಲ್ಪನೆ ಮನಸ್ಸಲ್ಲಿ ಹುಟ್ಟಿದ ಮೇಲೆ ಆ ದೃಶ್ಯದ ರಸವತ್ತತೆಯನ್ನು ಕಿತ್ತುಕೊಂಡಿದೆ ಅನ್ನಿಸುತ್ತದೆ. ಕ್ಯಾಮರಾ ಹಿಂದಿನ ಪರಿಕಲ್ಪನೆಗಳು ಸಿನೆಮಾ ಎಂದರೇನು ಅನ್ನುವ ನನ್ನ ಡೆಫಿನೇಶನ್ ಗಳನ್ನು ಅಂದಗೆಡಿಸಿವೆ.  ನನ್ನ ಸಿನೆಮಾದೆಡೆಗಿನ ವ್ಯಾಖ್ಯಾನಗಳು ತಾಂತ್ರಿಕತೆಗೆ, ಅದು ದೃಶ್ಯ ಮೂಡಿಸುವ “ಅನುಭವಗಳ ಹುಟ್ಟಿಸುವಿಕೆ”ಗೆ ಹೊಂದಿಕೊಂಡಿವೆಯೇ ಹೊರತು ಪ್ರೇಕ್ಷಕನ ಸ್ವಯಂ ಅನುಭೂತಿ, ಅವನ ಮನದಾಳದ ಅಚ್ಚರಿಗಳಿಗಲ್ಲ. ಅದು ಹೀಗೆ ವಿವರಿಸಬಲ್ಲೆ. ನಿರ್ದೇಶಕನೊಬ್ಬ ಒಂದು ಸಿನೆಮಾ ತೆರೆ ಮೇಲೆ ಮೂಡುವ ಮೊದಲು ಸ್ಕ್ರಿಪ್ಟಿನ ಇಂಚಿಂಚಿನ ಮೇಲೆ ಅದೆಷ್ಟು ವರ್ಕ್ ಮಾಡುತ್ತಿರುತ್ತಾನೆಂದರೆ, ಕಾಲಕ್ರಮೇಣ ಸ್ಕ್ರಿಪ್ಟಿನ ಬದಲಾವಣೆಗಳಿಗೆ, ಅದರ ಬೆಳವಣಿಗೆಯ ಮೌಲ್ಯ ತಿಳಿಯಬೇಕೆಂದರೆ ಆತ ಫ್ರೆಶ್ ಒಪೀನಿಯನ್ ಗಳ ಮೊರೆ ಹೋಗುತ್ತಾನೆ. ಮೊದಲ ಬಾರಿ ಕಥೆ ಕೇಳುವಾತನ ಪ್ರತಿಕ್ರಿಯೆಯ ಮೇಲೆ ತನ್ನ ಸ್ಕ್ರಿಪ್ಟಿನ ಶಕ್ತಿ ಅರಿಯುತ್ತಾನೆ. ಸಿಹಿ ತಿಂದಾದ ನಾಲಿಗೆ ಹೇಗೆ ಮತ್ತೆ ಕೂಡಲೇ ಸಿಹಿ ಗ್ರಹಿಸಲು ಸೋಲುತ್ತದೋ ಅಂತಹ ಮನಸ್ಥಿತಿ ಉಂಟಾಗಿರುತ್ತದೆ ಅವನಿಗೆ. ಆ ನಿರ್ದೇಶಕ ತನ್ನ ಸಿನೆಮಾ ತಯಾರಿಕೆ ಮೇಲೆಯೇ ತನ್ನ ಪ್ಯಾಶನ್ ಬೆಳೆಸಿಕೊಂಡಿರುವುದರಿಂದ, ಕಾಲಕ್ರಮೇಣ ದೃಶ್ಯಗಳಿಗೆ ಪ್ರೇಕ್ಷಕನ ಮೊದಲ ಪ್ರತಿಕ್ರಿಯೆ ಹೇಗಿರಬಹುದು ಅನ್ನುವುದನು ಗ್ರಹಿಸಲು ಆಗದೇ ಜಡ್ಡಾಗಿರುತ್ತದೆ.
ಲೋಕೋ ಭಿನ್ನ ರುಚಿಃ ಎಂಬಂತೆ ಅನುಭವ ಪಡೆದುಕೊಳ್ಳುವಾತನ (ಪ್ರೇಕ್ಷಕ) ಮತ್ತು ಅನುಭವ ಹುಟ್ಟಿಸುವಿಕೆಗೆ ಕಾರಣೀಭೂತನಾಗುವ (ನಿರ್ದೇಶಕ, ಲೇಖಕ) ಮನೋರುಚಿಯೂ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾದ್ದರಿಂದ ಸಿನೆಮಾಕ್ಕೆ ತಾಂತ್ರಿಕವಾಗಿ ವ್ಯಾಖ್ಯೆ ನೀಡಬಹುದಾದರೂ ಬೇರೆ ರೀತಿಯಲ್ಲಲ್ಲ.
ಈ ಪ್ರಶ್ನೆಗೆ ಒಬ್ಬ ಸಿನೆಮಾರಂಗದವನಿಂದ ಏನೇನೋ ಡೆಫಿನೇಶನ್ ಗಳು ಬರಬಹುದು. ಅವರದೇ ವೃತ್ತಿಶ್ರದ್ಧೆಯಿಂದ, passion ನಿಂದಾಗಿ ಸಿನೆಮಾಕ್ಕೆ ನೀಡುವ ವ್ಯಾಖ್ಯೆ ಬದಲಾಗಬಹುದು. ಟೆಕ್ನಿಕಲ್ ಆಗಿ ಸಿನೆಮಾ ಕ್ಕೆ ಬೇರೆ ಬೇರೆ ರೀತಿಯಲಿ ಭಾಷ್ಯ ನೀಡಬಹುದು ಕೂಡ.
ಆದರೆ ಅದನ್ನು ಮುಟ್ಟಿಸಿಕೊಳ್ಳುವ, ತಟ್ಟಿಸಿಕೊಳ್ಳುವ ಆ ಪ್ರೇಕ್ಷಕಪ್ರಭುವಿನ ಪ್ರಕಾರ ಸಿನೆಮಾ ಅಂದರೇನು?
ವಾರವಿಡೀ ಕಷ್ಟಪಟ್ಟು ಒಂದು ದಿನ ಸಮಯ ಮಾಡಿಕೊಂಡು ಫ್ಯಾಮಿಲಿ ಜತೆಗೆ ಖುಷಿಖುಷಿಯಾಗಿ ಸಮಯ ಕಳೆಯಲು ಇದೂ ಒಂದು ಮಾರ್ಗವಾ? ಅವಿವಾಹಿತನಾದರೆ ತನ್ನ ಗೆಳತಿ ಜತೆ. ಇಲ್ಲವಾದರೆ ತನ್ನ ಬೇಸರಿನ ಸಂಜೆಯನು ಕಳೆಯಲು ಇದೊಂದು ಟೈಮ್ ಪಾಸ್ ವಿಷಯವಾ? ಹೊಸದೊಂದು ಅನುಭವ ಗಿಟ್ಟಿಸುವ ಸಲುವಾಗಿ ಇಷ್ಟಪಟ್ಟು ಹೋಗುವುದಾ? ಅಥವ ತನ್ನ ಕ್ರಿಯೇಟಿವ್ ಅರ್ಜ್ ಗಾಗಿಯಷ್ಟೇ ಸಿನೆಮಾ ನೋಡುತ್ತಾನಾ?
ShowImage.aspx
ಹೀಗೇ ನೋಡುಗನ ಉದ್ದೇಶಕ್ಕನುಗುಣವಾಗಿಯೋ, ಮಾಡುವ ನಿರ್ದೇಶಕನ ಗ್ರಹಿಕೆಗನುಗುಣವಾಗಿಯೋ ಸಿನೆಮಾ ಬದಲಾಗುತ್ತಿರುತ್ತದೆ. ಒಬ್ಬ ನಿರ್ದೇಶಕ ಸಾಮಾಜಿಕ ಬದಲಾವಣೆಯಷ್ಟೇ ತನ್ನ ಸಿನೆಮಾದ ಉದ್ದಿಶ್ಯ ಅಂದರೆ ಇನ್ನೊಬ್ಬ ಪ್ರೇಕ್ಷಕನಿಗೆ ಮನರಂಜನೆ ನೀಡುವುದಷ್ಟೇ ತನ್ನ ಕೆಲಸ ಅಂದುಬಿಡುತ್ತಾನೆ. ಅಲ್ಲಿಗೇ ಸಿನೆಮಾ ಅನ್ನುವುದು ಕ್ಲಾಸ್ ಮತ್ತು ಮಾಸ್ ಎಂದು ಎರಡು ವಿಧವಾಗಿಬಿಡುತ್ತದೆ. ಕ್ಲಾಸ್ ಸಿನೆಮಾ ಅಂದರೆ ಜನ ನೋಡಲು ಬರುವುದಿಲ್ಲವೋ ಎನ್ನುತ್ತ ಭಯಪಡುವ ಕೆಲವು ನಿರ್ದೇಶಕರು, “ಬ್ರಿಡ್ಜ್ ಸಿನೆಮಾ” ಅನ್ನುತ್ತಾ ಮತ್ತೊಂದು ಪಂಗಡ ಹುಟ್ಟುಹಾಕಿದರು.
ಪ್ರೇಕ್ಷಕ ಮಾತ್ರ ತನಗಿಷ್ಟವಾದ ಸಿನೆಮಾ ನೋಡುತ್ತಾ ಬಂದಿದ್ದಾನೆ. ನಿಜವಾದ ಸೈಕಾಲಜಿ ಆಫ್ ಆಡಿಯೆನ್ಸ್ ನ್ನು, ಪ್ರೇಕ್ಷಕನ ನಾಡಿಮಿಡಿತವನ್ನು ಯಾವ ನಿರ್ದೇಶಕ ಲೇಖಕನಿಗೂ ಸರಿಯಾಗಿ ಹಿಡಿಯಲಾಗಿಲ್ಲ. ಪ್ರೇಕ್ಷನೊಬ್ಬನಿಗೆ ಸಿನೆಮಾ ನೋಡಲು ಸಾಕಷ್ಟು ಕಾರಣಗಳು ಒಂದಾಗಿ ನಂತರವಷ್ಟೇ ನಿರ್ಧರಿಸುತಾನೆಂದೇನೂ ಇಲ್ಲ. ಗಂಡ ತನ್ನನ್ನು ಸಿನೆಮಾಕ್ಕೆ ಕರೆದುಕೊಂಡು ಹೋಗಲೇ ಇಲ್ಲ ಅನ್ನುವ ಗೃಹಿಣಿ, ಇಂಥಾ ಸಿನೆಮಾಕ್ಕೆ ಅಂತ ಹೇಳೋಲ್ಲ, ಆಕೆಗೆ ಅಲ್ಲಿ ಗಂಡನ ಜತೆ ಸಿನೆಮಾಕ್ಕೆ ಹೋಗುವುದಷ್ಟೇ ಮುಖ್ಯ. ನಿರ್ದೇಶಕ ಎಷ್ಟು ವಿಭಿನ್ನವಾಗಿ ಸಿನೆಮಾ ಮಾಡಿದ್ದಾನೆ , ಎಷ್ಟು ಗಿಮ್ಮಿಕ್ ಮಾಡಿದಾನೆ ಅಂತೆಲ್ಲಾ ಅಲ್ಲ.
ನನ್ನ ಸಿನೆಮಾ ಬಗೆಗಿನ ಗ್ರಹಿಕೆ ಅಥವ ರುಚಿ ಬಗ್ಗೆ ವಯಸ್ಸಿಗೆ, ಅನುಭವಕ್ಕನುಗುಣವಾಗಿ ಬೇರೆಯಾಗುತ್ತಾ ಬಂದಿದೆ. ಚಿಕ್ಕ ವಯಸ್ಸಿನಲ್ಲಿ ಪ್ರಭಾಕರ್, ವಿಷ್ಣುವರ್ಧನ್ ಆಕ್ಷನ್ ಸಿನೆಮಾಗಳು ಇಷ್ಟವಾಗುತ್ತಿದ್ದವು. ಒಬ್ಬ ಮನುಷ್ಯ ಹತ್ತಿಪ್ಪತ್ತು ಮಂದಿಯನ್ನು ಹೊಡೆದುರುಳಿಸುವುದು ಪ್ರಿಯವಾಗುತ್ತಿತ್ತು. ಆಗ ನನಗೆ ಸಿನೆಮಾ ಅಂದರೇನು ಅಂತ ಯಾರಾದರೂ ಪ್ರಶ್ನೆ ಮಾಡಿದ್ದರೆ ಕಷ್ಟವನ್ನೆಲ್ಲಾ ಅಟ್ಟಿ, ವಿಜಯಿಯಾಗುವ ಹೀರೋ ನ ಸಿನೆಮಾ ಅಷ್ಟೇ ನನ್ನ ಪಾಲಿನ ಐಡಿಯಲ್ ಸಿನೆಮಾ ಆಗಿತ್ತು.  ಹದಿಹರೆಯಕ್ಕೆ ಬಂದೊಡನೆ ರೋಮ್ಯಾಂಟಿಕ್ ಸಿನೆಮಾಗಳಾದ ಡಿಡಿಎಲ್ ಜೆ, ಹಮ್ ಆಪ್ಕೆ ಹೈ ಕೌನ್ ನಂತವು ಇಷ್ಟವಾಗುತ್ತಿದ್ದವು. ಆಗ ನನ್ನ ಹೀರೋ ಹುಡುಗಿಯ ಮನಸ್ಸನ್ನು ಹೇಗೆ ಕದಿಯುತ್ತಾನೆಂಬುದೇ ಆಸಕ್ತಿಕರ ವಿಷಯ. ಸ್ವಲ್ಪ ಸಮಯ ಥ್ರಿಲ್ಲರ್ ಗಳು ಇಷ್ಟವಾಗತೊಡಗಿದವು ಥ್ರಿಲ್ಲರ್ ನೊಳಗಿನ ತಂತ್ರ, ಒಂದೊಂದೇ ವಿಷಯವನ್ನು ಪ್ರೇಕ್ಷಕನಿಗೆ ತಿಳಿಸುತ್ತಾ ಹೋಗಿ ಕೊನೆಯ ಕ್ಲೈಮಾಕ್ಸ್ ನಲ್ಲಿ ಹೇಗೆ ಮುಖ್ಯಾಂಶ ರಿವೀಲ್ ಆಗುತ್ತದೆ ಎಂಬುದು ನನ್ನ ಸಿನೆಮಾದೆಡೆಗಿನ ಕಾತರವಾಗಿತ್ತು. ಕಾಲೇಜು ಮುಗಿದು ಕೆಲಸಕ್ಕಲೆಯುವಾಗ ಸಮಾಜದ ಮುಖಗಳು ಪರಿಚಯವಾಗತೊಡಗಿತು. ಶಂಕರ್ ರ ಜಂಟಲ್ ಮ್ಯಾನ್, ಅನ್ನಿಯನ್ ಮತ್ತು ರಾಜ್ ಕುಮಾರ್ ಚಿತ್ರಗಳು ಪ್ರಿಯವಾಗತೊಡಗಿದವು. ಅ ವೆಡ್ನೆಸ್ ಡೇ , ಆಮೀರ್ ನಂತವು ಆಕರ್ಷಕವಾಗತೊಡಗಿತು. ನನ್ನ ಐಡಿಯಲ್ ಹೀರೋನ ಕೆಲಸ ಆಗ ಸಮಾಜವನ್ನು ಒಬ್ಬಂಟಿಯಾಗಿ ಗುಡಿಸುವುದು!
ಈಗೆಲ್ಲಾ ಸಿನೆಮಾ ನೋಡುವಾಗ ಅದರ ಮೇಕಿಂಗ್ ಹೇಗಾಗಿರಬಹುದು, ಯಾವ ಯಾವ ಕೋನದಲ್ಲಿ ಕ್ಯಾಮರಾ ಇಟ್ಟಿದ್ದಾರೆ, ಕಥೆ ಯಾವ ಅಂಶವನ್ನು ಮೊದಲು ಅರುಹಿ ಯಾವಂಶವನ್ನು ಕ್ಲೈಮಾಕ್ಸ್ ನಲ್ಲಿ ತಿಳಿಸಿದ್ದಾರೆ, ಪ್ರೇಕ್ಷಕನ ಮನಸ್ಸಿಗೆ ಆ ಪಾತ್ರವನ್ನು ಹೇಗೆ ರಿಜಿಸ್ಟರ್ ಮಾಡಿದ್ದಾರೆ, ಅನವಶ್ಯಕ ಸನ್ನಿವೇಶಗಳ್ಯಾವುವು, ಹಿನ್ನೆಲೆ ಸಂಗೀತ ಹೇಗೆ ಪರಿಣಾಮಕಾರಿಯಾಗಿದೆ, ಸ್ಕ್ರಿಪ್ಟ್ ನಲ್ಲಿ ಇನ್ನೂ ಹೇಗೆ ಉತ್ತಮವಾಗಿ ಮಾಡಬಹುದಿತ್ತು ಅಂಶಗಳೆಲ್ಲ ಮನಸ್ಸಿಗೆ ಬರುತ್ತದೆ. ನಿರ್ದೇಶಕನ, ಲೇಖಕನ ಸಂದರ್ಶನಗಳನ್ನೆಲ್ಲಾ ಟೀವಿಯಲ್ಲಿ ನೋಡುವುದರಿಂದ ಸಿನೆಮಾದೆಡೆಗೆ ಆಸಕ್ತಿ ಹೆಚ್ಚಾಗಿದೆ. “ಮಿಸ್ಕಿನ್” ಅನ್ನುವ ತಮಿಳು ನಿರ್ದೇಶಕ “ನನ್ನ ಪ್ರಕಾರ ಖುಷಿಯಿಂದ ಸಾಯುವುದೆಂದರೆ ಆ ಸಾವು ನಾನು ನಿರ್ದೇಶಕನಾಗಿ ಸಿನೆಮಾವೊಂದರ ಕೊನೇ ಶಾಟ್ ತೆಗೆಯುವಾಗ ಬಂದರಷ್ಟೇ” ಅಂತನ್ನುವಾಗ ಆತನ ಸಿನೆಮಾದೆಡೆಗಿನ ತುಡಿತ ನೋಡಿ ಅಸೂಯೆಮೂಡುತ್ತದೆ. ಶಾಶ್ವಂಕ್ ರಿಡಂಪ್ಶನ್, ಸಿಟಿಜನ್ ಕೇನ್ , ಆನಂದ್(ಹಿಂದಿ) ನಂತಹಾ ಸಿನೆಮಾ ನೋಡುವಾಗ ಅದರ ಸ್ಕ್ರಿಪ್ಟ್ ಸಮಯದಲ್ಲಿ ಬರೆಯುವಾತನ ಪುಳಕ ಊಹಿಸಿದರೆ ಹೊಟ್ಟೆಕಿಚ್ಚಾಗುತ್ತದೆ. ನಮ್ಮ ಪಕ್ಕದಲ್ಲಿಯೇ ಆರ್ಯ, ಆನಂದ್, ಅಕಾಶಮಂತ, ರೈನ್ ಬೋ ಕಾಲನಿ, ಸುಬ್ರಮಣ್ಯಪುರಂ, ಅಂಜಾದೇ ನಂತಹ ಸಿನೆಮಾ ಮಾಡುವಾಗ ನಮ್ಮಲ್ಲೂ ಅಂಥಾದ್ದು ಮಾಡುವುದು ಕಷ್ಟಕರವಲ್ಲ ಅನ್ನುವ ಅನಿಸಿಕೆ ಹುಟ್ಟುತ್ತದೆ.
polish-cinema
ಹೀಗೆ ಈ ಸಿನೆಮಾ ಮೇಕಿಂಗ್ ನೆಡೆಗಿನ ಆಸಕ್ತಿ, ನನ್ನ “ನೋಡುವ, ಅನುಭವಿಸುವ, ನನ್ನೊಳಗಿನ ಕಲ್ಪನಾಲೋಕವನ್ನು ವಿಸ್ತರಿಸುವ ಪ್ರಕ್ರಿಯೆಗೆ” ತೊಡಕಾಗಿದೆಯೇನೊ. ಟೈಗರ್ ಪ್ರಭಾಕರ್ ಪೋಲೀಸ್ ಆಗಿ ನಾಲ್ಕು ಜನರನ್ನು ಚಚ್ಚುವಾಗ ಸಿಗುತ್ತಿದ್ದ ಆನಂದಗಳು, ಆಗಿನ ಸೆಟ್ ಗಳು, ಆಕ್ಷನ್ ಕಲಾವಿದರ ಬದುಕು, ಶಾಟ್ ತೆಗೆದಾದ ಮೇಲೆ ಏನಾಗಿರಬಹುದು ಎಂಬ ಊಹೆ, ಡಿಶ್ಯುಂ ಅನ್ನುವುದು ಹಿನ್ನೆಲೆಯಷ್ಟೇ ಅನ್ನುವ ಗ್ರಹಿಕೆ ಇದೆಲ್ಲಾ ಆಲೋಚನೆ, ಕಲ್ಪನೆ ಮನಸ್ಸಲ್ಲಿ ಹುಟ್ಟಿದ ಮೇಲೆ ಆ ದೃಶ್ಯದ ರಸವತ್ತತೆಯನ್ನು ಕಿತ್ತುಕೊಂಡಿದೆ ಅನ್ನಿಸುತ್ತದೆ. ಕ್ಯಾಮರಾ ಹಿಂದಿನ ಪರಿಕಲ್ಪನೆಗಳು ಸಿನೆಮಾ ಎಂದರೇನು ಅನ್ನುವ ನನ್ನ ಡೆಫಿನೇಶನ್ ಗಳನ್ನು ಅಂದಗೆಡಿಸಿವೆ.  ನನ್ನ ಸಿನೆಮಾದೆಡೆಗಿನ ವ್ಯಾಖ್ಯಾನಗಳು ತಾಂತ್ರಿಕತೆಗೆ, ಅದು ದೃಶ್ಯ ಮೂಡಿಸುವ “ಅನುಭವಗಳ ಹುಟ್ಟಿಸುವಿಕೆ”ಗೆ ಹೊಂದಿಕೊಂಡಿವೆಯೇ ಹೊರತು ಪ್ರೇಕ್ಷಕನ ಸ್ವಯಂ ಅನುಭೂತಿ, ಅವನ ಮನದಾಳದ ಅಚ್ಚರಿಗಳಿಗಲ್ಲ. ಅದು ಹೀಗೆ ವಿವರಿಸಬಲ್ಲೆ. ನಿರ್ದೇಶಕನೊಬ್ಬ ಒಂದು ಸಿನೆಮಾ ತೆರೆ ಮೇಲೆ ಮೂಡುವ ಮೊದಲು ಸ್ಕ್ರಿಪ್ಟಿನ ಇಂಚಿಂಚಿನ ಮೇಲೆ ಅದೆಷ್ಟು ವರ್ಕ್ ಮಾಡುತ್ತಿರುತ್ತಾನೆಂದರೆ, ಕಾಲಕ್ರಮೇಣ ಸ್ಕ್ರಿಪ್ಟಿನ ಬದಲಾವಣೆಗಳಿಗೆ, ಅದರ ಬೆಳವಣಿಗೆಯ ಮೌಲ್ಯ ತಿಳಿಯಬೇಕೆಂದರೆ ಆತ ಫ್ರೆಶ್ ಒಪೀನಿಯನ್ ಗಳ ಮೊರೆ ಹೋಗುತ್ತಾನೆ. ಮೊದಲ ಬಾರಿ ಕಥೆ ಕೇಳುವಾತನ ಪ್ರತಿಕ್ರಿಯೆಯ ಮೇಲೆ ತನ್ನ ಸ್ಕ್ರಿಪ್ಟಿನ ಶಕ್ತಿ ಅರಿಯುತ್ತಾನೆ. ಸಿಹಿ ತಿಂದಾದ ನಾಲಿಗೆ ಹೇಗೆ ಮತ್ತೆ ಕೂಡಲೇ ಸಿಹಿ ಗ್ರಹಿಸಲು ಸೋಲುತ್ತದೋ ಅಂತಹ ಮನಸ್ಥಿತಿ ಉಂಟಾಗಿರುತ್ತದೆ ಅವನಿಗೆ. ಆ ನಿರ್ದೇಶಕ ತನ್ನ ಸಿನೆಮಾ ತಯಾರಿಕೆ ಮೇಲೆಯೇ ತನ್ನ ಪ್ಯಾಶನ್ ಬೆಳೆಸಿಕೊಂಡಿರುವುದರಿಂದ, ಕಾಲಕ್ರಮೇಣ ದೃಶ್ಯಗಳಿಗೆ ಪ್ರೇಕ್ಷಕನ ಮೊದಲ ಪ್ರತಿಕ್ರಿಯೆ ಹೇಗಿರಬಹುದು ಅನ್ನುವುದನು ಗ್ರಹಿಸಲು ಆಗದೇ ಜಡ್ಡಾಗಿರುತ್ತದೆ.
ಲೋಕೋ ಭಿನ್ನ ರುಚಿಃ ಎಂಬಂತೆ ಅನುಭವ ಪಡೆದುಕೊಳ್ಳುವಾತನ (ಪ್ರೇಕ್ಷಕ) ಮತ್ತು ಅನುಭವ ಹುಟ್ಟಿಸುವಿಕೆಗೆ ಕಾರಣೀಭೂತನಾಗುವ (ನಿರ್ದೇಶಕ, ಲೇಖಕ) ಮನೋರುಚಿಯೂ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾದ್ದರಿಂದ ಸಿನೆಮಾಕ್ಕೆ ತಾಂತ್ರಿಕವಾಗಿ ವ್ಯಾಖ್ಯೆ ನೀಡಬಹುದಾದರೂ ಬೇರೆ ರೀತಿಯಲ್ಲಲ್ಲ.
(ಸಾಂಗತ್ಯದಲ್ಲಿ ಪ್ರಕಟವಾದದ್ದು)
ಟಿಪ್ಪಣಿಗಳು
 1. shivu.k ಹೇಳುತ್ತಾರೆ:

  ರಂಜಿತ್,

  ಸಿನಿಮಾ ಬಗ್ಗೆ ತುಂಬಾ ಚೆನ್ನಾಗಿ ಬರೆದಿದ್ದೀರಿ. ನೀವು ಹೇಳಿರುವ ಎಲ್ಲಾ ಸಿನಿಮಾಗಳನ್ನು ನೋಡಿದ್ದೇನೆ. ನಿಮ್ಮ ವಿವರಣೆಯಂತೆ ಅವೆಲ್ಲಾ ತುಂಬಾ ಚೆನ್ನಾಗಿವೆ. ಎಲ್ಲಾ ದೃಷ್ಟಿಕೋನದಲ್ಲೂ ನೀವು ಹೇಳಿರುವ ರೀತಿ ಇಷ್ಟವಾಯಿತು.

  ಧನ್ಯವಾದಗಳು

 2. ರಂಜಿತ್ ಹೇಳುತ್ತಾರೆ:

  ಶಿವು ಸರ್,

  ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು.

  ನೀವೂ ನಿಮ್ಮ ಬ್ಲಾಗಲ್ಲಿ ಒಂದು ಸಿನೆಮಾದ ಬಗ್ಗೆ ಹೇಳಿ ಸುಮ್ಮನಾದಿರಿ. ಅಲ್ಲೂ ಸಿನೆಮಾ ಕುರಿತು ಬರೆಯುತ್ತಿರಿ.

 3. Anantha ಹೇಳುತ್ತಾರೆ:

  ಹಲೋ ರಂಜಿತ್,
  ನಿಮ್ಮ ಇದೇ ಲೇಖನವನ್ನು ಸಾಂಗತ್ಯದಲ್ಲೂ ಓದಿದ್ದೆ, ಆದರೆ ಇಲ್ಲೇ ಕಾಮೆಂಟ್ ಮಾಡೋಣ ಅನ್ನಿಸಿತು. ಮೊದಲನೆಯದಾಗಿ, ಈ ನಿಮ್ಮ ಲೇಖನದಲ್ಲಿ ಸಿನಿಮಾ ಬಗ್ಗೆ ನಿಮಗಿರುವ ಒಟ್ಟಾರೆ ಪ್ರೀತಿ ಸ್ಫುಟವಾಗಿ ವ್ಯಕ್ತವಾಗುತ್ತದೆ. ಈ ನಿಮ್ಮ ಅಭಿರುಚಿಗೆ ನನ್ನ ಅಭಿನಂದನೆಗಳು.

  ಸಿನಿಮಾ ನೋಡುವ ನನ್ನ ಅಭಿರುಚಿಯೂ ಹೆಚ್ಚೂ ಕಡಿಮೆ ಹೀಗೆಯೇ ಬದಲಾಗಿದೆ ಅಥವಾ ಬೆಳೆದಿದೆ ಎನ್ನಬಹುದು. ನಾವು ಚಿಕ್ಕ ಮಕ್ಕಳಿದ್ದಾಗ ದೂರದರ್ಶನದಲ್ಲಿ ಪ್ರತೀ ಭಾನುವಾರ ಬರುತ್ತಿದ್ದ ಡಿಶುಂ ಡಿಶುಂ ಸಿನೆಮಾಗಳ ಬಗ್ಗೆ ಆಗ ಇದ್ದ ಒಲವು ಈಗ ಖಂಡಿತ ಉಳಿದಿಲ್ಲ. ಅಷ್ಟೇ ಏಕೆ ಕೆಲವಾರು ವರ್ಷಗಳ ಹಿಂದೆ ನನ್ನ ಫೇವರಿಟ್ ಆಗಿದ್ದ ಸಿನೆಮಾವೊಂದನ್ನು ಮೊನ್ನೆ ಮೊನ್ನೆ ಟಿವಿಯಲ್ಲಿ ಬಂದಾಗ ನೋಡಿದೆ. ನೋಡಿದ ಮೇಲೆ ‘ಇಂಥ ಸಿನಿಮಾ ನನಗೆ ಇಷ್ಟವಾಗಿತ್ತೆ…’ ಅಂತ ನನಗೆ ನಾನೇ ಅಂದು ಕೊಂಡಿದ್ದೂ ಇದೆ.

  ಇನ್ನೊದು ಮಾತು ಇಲ್ಲಿ ಅನಿವಾರ್ಯವಾಗಿ ಹೇಳಬೇಕಾಗಿದೆ. ನಮ್ಮಲ್ಲಿರುವ ಪ್ರೇಕ್ಷಕ ಬೆಳೆಯುತ್ತಿರುವ ವೇಗಕ್ಕೆ ಸರಿ ಸಮನಾಗಿ ಕನ್ನಡದ ಚಿತ್ರಗಳ ನಿರ್ಮಾಣ, ನಿರ್ದೇಶನದ ಗುಣಮಟ್ಟ ಬೆಳೆಯುತ್ತಿಲ್ಲವೆನ್ನುವುದು ಖೇದದ ಸಂಗತಿ. ಇಂಥ ಸಂದರ್ಭದಲ್ಲಿ ಸಹಜವಾಗಿ ಪ್ರೇಕ್ಷಕನ ದೃಷ್ಟಿ, ಇತ್ತೀಚಿಗೆ ಸುಲಭ ಲಭ್ಯವಾಗಿರುವ ಇಂಗ್ಲಿಷ ಹಾಗೂ ಮತ್ತಿತರ ಭಾಷಾ (ಫ್ರೆಂಚ್, ಸ್ಪ್ಯಾನಿಶ್, ಕೊರಿಯನ್, ಜಪಾನೀಸ್ etc) ಚಿತ್ರಗಳ ಕಡೆ ಹೊರಳಿದರೆ ಅದು ಅವನ ತಪ್ಪೂ ಅಲ್ಲ, ಅವನನ್ನು ತಡೆಯಲು ಮಾಡುವ ಯತ್ನ ಸಾಧುವೂ ಅಲ್ಲ.

  ಆದರೆ ನಿಮ್ಮ ಹೇಳಿಕೆ, ‘ಹೀಗೆ ಈ ಸಿನೆಮಾ ಮೇಕಿಂಗ್ ನೆಡೆಗಿನ ಆಸಕ್ತಿ, ನನ್ನ “ನೋಡುವ, ಅನುಭವಿಸುವ, ನನ್ನೊಳಗಿನ ಕಲ್ಪನಾಲೋಕವನ್ನು ವಿಸ್ತರಿಸುವ ಪ್ರಕ್ರಿಯೆಗೆ” ತೊಡಕಾಗಿದೆಯೇನೊ.’ ಗೆ ನನ್ನ ಪ್ರತಿರೋಧವಿದೆ! ಯಾವತ್ತಿದ್ದರೂ ಕರ್ತ್ರುವಾದವನ ಚಿಂತನೆಯು, ಪ್ರೇಕ್ಷಕನ ಕಲ್ಪನಾ ಲೋಕವನ್ನು ವಿಸ್ತರಿಸುತ್ತದೆಯೋ ಹೊರತು ಕುಬ್ಜಗೊಳಿಸುವುದಿಲ್ಲ. ನಿಮ್ಮಲ್ಲಿರುವ ನಿರ್ದೇಶಕನ ಸುಪ್ತ ಪ್ರಜ್ಞೆ ನಿಮ್ಮಲ್ಲಿರುವ ಪ್ರೇಕ್ಷಕನ ಅಭಿರುಚಿಯನ್ನು ಪ್ರಶ್ನಿಸಿದರೆ ಅಥವಾ ಹಂಗಿಸಿದರೆ (?!) ಅದು ಉತ್ತಮ ಬೆಳವಣಿಗೆಯೇ ಹೊರತು ಅದರಿಂದ ಯಾರಿಗೂ ಹಾನಿಯಿಲ್ಲ. ಇದು ನಿಮ್ಮಲ್ಲಿರುವ ಪ್ರೇಕ್ಷಕನನ್ನೂ ತನ್ನೊಟ್ಟಿಗೆ ಬೆಳೆಸುವ ಒಂದು ಪ್ರಕ್ರಿಯೆ ಎಂದು ಮಾತ್ರ ಹೇಳಬಲ್ಲೆ…

 4. ರಂಜಿತ್ ಹೇಳುತ್ತಾರೆ:

  ಮೊದಲನೆಯದಾಗಿ ನಿಮ್ಮ ಅಭಿಪ್ರಾಯ ಅಲ್ಲಿ ಹಾಕದೇ ಇದನ್ನು ಪ್ಲಾಟ್ ಫಾರಮ್ ಆಗಿ ಬಳಸಿಕೊಂಡಿದ್ದಕ್ಕೆ ಥ್ಯಾಂಕ್ಸ್.

  ನಂತರ ಉತ್ತರ ಕೊಡೋಣ ಅಂತ ಮುಂದೆ ಹಾಕಿ ಉತ್ತರಿಸಲು ಮರೆತೆ, ಅದಕ್ಕೆ ಕ್ಷಮೆ ಇರಲಿ.

  ನಿಮ್ಮ ಕಾಮೆಂಟಿನ ಅನಿಸಿಕೆ ಎಲ್ಲದಕ್ಕೂ ನನ್ನ ಸಹಮತವಿದ್ದು ಕೊನೆಯಲ್ಲಿ ಸ್ವಲ್ಪ ಗೊಂದಲವಿದೆ. ನಿಜವಾಗಿಯಾದರೂ ನಿಮ್ಮ ಪ್ರಶ್ನೆಗೆ ಉತ್ತರ ನನ್ನ ಲೇಖನದಲ್ಲೇ ಇದೆ. ಲೇಖನವೇ ಸರಿಯಾದ ಉತ್ತರ.
  ನಾನು ಈಗ ಉತ್ತರ ನೀಡಹೊರಟರೂ ಅದು ನನ್ನ ಲೇಖನದ ಕೊನೆಯೆರಡು ಪ್ಯಾರಾಗ್ರಾಫ್ ಆಗುತ್ತದೆ.

  >>ಯಾವತ್ತಿದ್ದರೂ ಕರ್ತ್ರುವಾದವನ ಚಿಂತನೆಯು, ಪ್ರೇಕ್ಷಕನ ಕಲ್ಪನಾ ಲೋಕವನ್ನು ವಿಸ್ತರಿಸುತ್ತದೆಯೋ ಹೊರತು ಕುಬ್ಜಗೊಳಿಸುವುದಿಲ್ಲ.<>ನಿಮ್ಮಲ್ಲಿರುವ ನಿರ್ದೇಶಕನ ಸುಪ್ತ ಪ್ರಜ್ಞೆ ನಿಮ್ಮಲ್ಲಿರುವ ಪ್ರೇಕ್ಷಕನ ಅಭಿರುಚಿಯನ್ನು ಪ್ರಶ್ನಿಸಿದರೆ ಅಥವಾ ಹಂಗಿಸಿದರೆ (?!) ಅದು ಉತ್ತಮ ಬೆಳವಣಿಗೆಯೇ ಹೊರತು ಅದರಿಂದ ಯಾರಿಗೂ ಹಾನಿಯಿಲ್ಲ<>ಇದು ನಿಮ್ಮಲ್ಲಿರುವ ಪ್ರೇಕ್ಷಕನನ್ನೂ ತನ್ನೊಟ್ಟಿಗೆ ಬೆಳೆಸುವ ಒಂದು ಪ್ರಕ್ರಿಯೆ ಎಂದು ಮಾತ್ರ ಹೇಳಬಲ್ಲೆ…<<

  ನಿಜ ನಿಜ. ತುಂಬಾ ಸತ್ಯದ ಮಾತು. ಬಹುಶಃ ಇದೇ ಒಬ್ಬ ನಿರ್ದೇಶಕನಾದವನಿಗೆ ಸಮಸ್ಯೆಯಾಗುತ್ತದೇನೋ ಅಲ್ಲವಾ? ಇದಕ್ಕೇನೆ ಸಾಲಾಗಿ ಹಿಟ್ ಕೊಡುವ ನಿರ್ದೇಶಕ ಕ್ರಮೇಣ ಮಬ್ಬಾಗುತ್ತಾ ಬರುತ್ತಾನಾ?

  ಬಲ್ಲವರೇ ತಿಳಿಸಬೇಕು!

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s