ಚಿವುಟಿ ನೋಡಿಕೊಳ್ಳಬಾರದೆಂಬಂತಹ ಕನಸು!

Posted: ಸೆಪ್ಟೆಂಬರ್ 22, 2009 in ಬ್ಲಾಗ್ ನ ಬಗ್ಗೆ..
ವರುಷಗಳ ಕೆಳಗೆ ಅಂಜುತ್ತ ಮೊದಲ ಹೆಜ್ಜೆಯಿಟ್ಟಿದ್ದ ನೀಲಿಹೂವು ಈಗ ನೂರು ಪೋಸ್ಟ್ ನ್ನು ಮುಟ್ಟಿದೆ. ಒಂದಿಷ್ಟು ಹನಿ, ಒಂದಿಷ್ಟು ಕವಿತೆ, ಮತ್ತೊಂದಿಷ್ಟು ಪುಟ್ಟ ಪುಟ್ಟ ಕತೆಗಳೊಂದಿಗೆ ಹೆಜ್ಜೆ ಬೆಳೆಸಿದ ಹೂವು, ಅಡುಗೆ, ಸಿನೆಮಾ, ಮಾಧ್ಯಮ, ಕತೆ, ಲೇಖನ, ಹಾಸ್ಯ, ಹೀಗೆ ಭಿನ್ನ ಎಸಳುಗಳೊಂದಿಗೆ ಅರಳಿದೆ. ಭಾವಗಳನ್ನು ಉದ್ದೀಪಿಸಿಕೊಳ್ಳುತ್ತ ಬೆಳೆದಿದೆ. ಹೆಜ್ಜೆ ಜತೆ ಹೆಜ್ಜೆಗೂಡುತ್ತಾ ನೂರು ಮುಟ್ಟಿದೆ.
ಪ್ರಾರಂಭದಲ್ಲಿ ನನ್ನ ಬರಹಗಳ ಹದದ, ನಾನು ಬರೆಯಬಾರದೇನೋ ಎಂಬಂತೆ ಮೂಡಿದ್ದ ಅನುಮಾನಗಳೆಲ್ಲ ನಿಮ್ಮೆಲ್ಲರ ಪ್ರೋತ್ಸಾಹ, ಪ್ರೇರಣೆ ಮೆಚ್ಚುಗೆಯಿಂದ ಹೋಗಲಾಡಿಸಿಕೊಂಡು ಮತ್ತೆ ಮತ್ತೆ ಬರೆದಿದ್ದೇನೆ. ಅಲ್ಲಲ್ಲಿ  ಆಗಿದ್ದ ತಪ್ಪುಗಳನ್ನು ಮತ್ತೊಮ್ಮೆ ಮಾಡಲಾರೆ ಎಂದು ಧೃಡವಾಗಿ ಅಂದುಕೊಂಡೇ ಮುಂದುವರಿದಿದ್ದೇನೆ. ಕಲಿತಿದ್ದೇನೆ, ಬರಹದಲ್ಲಿ ಮೊದಲಿಗಿಂತ ಬಲಿತಿದ್ದೇನೆ.
ಈಗ ಅಜೇಯವಾಗಿ ನೂರು ಮುಟ್ಟಿದ ಹೆಮ್ಮೆಯ ಜತೆಗೆ ಮತ್ತೆರಡು ಖುಷಿಯ ವಿಚಾರಗಳೂ ಇವೆ.
ನನ್ನ “ಬದುಕು, ಪ್ರೀತಿ ಮತ್ತು ನಿನ್ನ ಮೇಲೆ ಬರೆಯುತ್ತಿರುವ ಕೊನೆಯ ಅಕ್ಷರಗಳಿವು!” ಎಂಬ ಪ್ರೇಮ ಪತ್ರಕ್ಕೆ “ಸಖಿ” ಪಾಕ್ಷಿಕದಲ್ಲಿ ಉತ್ತಮ ಪತ್ರಲೇಖನ ಎಂಬ ಬಹುಮಾನ ಬಂದಿದೆ. ಮತ್ತು ಮೊದಲ ಬಾರಿಗೆ ಈ ಸಲದ “ಮಯೂರ”ದಲ್ಲಿ ನನ್ನದೊಂದು ಕವಿತೆ ಪ್ರಕಟ ಆಗಿದೆ.
ಈ ನೀಲಿಹೂವು ಎಂದರೆ ನನ್ನ ಪಾಲಿಗೆ  ನಗೆಮುಗುಳಿನ ಆಳದಲ್ಲಿನ ನೋವಿನೆಸಳಿನ ಹೀನಾಯ ಸೋಲು. ಸೋಲೊಪ್ಪದ ನೋವುಗಳನ್ನೆಲ್ಲಾ ನಮ್ಮದಾಗಿಸಿ, ನಲಿವಾಗಿಸಿಕೊಳ್ಳುವ ಪ್ರಯತ್ನ.  ಬೆರಗಿಂದ ಬದುಕಿನತ್ತ ಮುಖಮಾಡಿಕೊಂಡಿರುವ ಮನಸಿನ ಪಲುಕುಗಳು.
ನೀಲಿಹೂವು ನನ್ನ ಪಾಲಿನ ಚಿವುಟಿ ನೋಡಿಕೊಳ್ಳಬಾರದಂಥ ಕನಸು!
ಈ ನೂರು ನಾಟೌಟ್ ಸಂದರ್ಭದಲ್ಲಿ ನನ್ನ ಇಷ್ಟದ ಲೇಖಕರೂ ಆಗಿರುವ ಚೇತನಾ ತೀರ್ಥಹಳ್ಳಿ, ಮತ್ತು ಚಾಮರಾಜ ಸವಡಿ ಯವರಿಗೆ ನೀಲಿಹೂವಿನ ಕುರಿತು ಎರಡು ಮಾತು ಆಡಲು ಕೇಳಿಕೊಂಡಿದ್ದೆ. ಪ್ರೀತಿಯಿಂದ ನಾಲ್ಕಕ್ಷರ ಬರೆದಿದ್ದಾರೆ. ಇನ್ನಷ್ಟು ಬರೆಯಲು ಉಮೇದು, ಧೈರ್ಯ ತುಂಬಿದಾರೆ. ಮೊದಲ ಹೆಜ್ಜೆಯಿಟ್ಟಾಗ ನೀಡುವ ಪ್ರೋತ್ಸಾಹ, ಚಪ್ಪಾಳೆ ಮುಂದೆ ಓಡುವಾಗಲೂ ನೆನಪಿನ ಪದರಗಳಲ್ಲಿ ಅಳಿಯದೇ ಅಚ್ಚಾಗಿರುತ್ತದಂತೆ. ಆ ಮಾತುಗಳು ಉಂಟು ಮಾಡುತಿರುವ ಸಂತೋಷ ಮತ್ತು ಸ್ಪೂರ್ತಿ, ಪ್ರೇರಣೆಗೆ ನಾನವರಿಗೆ ಸದಾ ಋಣಿ.
ಹಾಗೂ ಓದಿ, ತಿದ್ದಿ, ಮೆಚ್ಚಿ, ಹೊಗಳಿ, ಸುಮ್ಮನಿದ್ದು ಕೂಡ, ಸದಾ ಪ್ರೋತ್ಸಾಹಿಸುತ್ತಿರುವ ನಿಮಗೂ ಧನ್ಯವಾದಗಳು.
**********
ಮನಸಿನ ಹದವ ನೀವೇ ಬಲ್ಲಿರಿ…
ನಿಮ್ಮ ಬ್ಲಾಗ್‌ ಮತ್ತು ಅದರಲ್ಲಿರುವ ಅದ್ಭುತ ಕವಿತೆಗಳು ನನಗೆ ನೀಡಿದ ಪ್ರೇರಣೆಯನ್ನು ಹೇಗೆ ಹೇಳಲಿ ರಂಜಿತ್? ಅವು ನನ್ನನ್ನು ಕಾಡಿವೆ, ಕೆಣಕಿವೆ, ಪ್ರೇರೇಪಿಸಿವೆ. ನಾನು ಮರೆತೇಬಿಟ್ಟಿದ್ದ ನನ್ನೊಳಗಿನ ಕವಿಯನ್ನು ಮತ್ತೆ ಎಚ್ಚರಿಸಿವೆ. ಅತ್ಯಂತ ತಾಕತ್ತಿನ ಕವಿತೆಗಳವು. ಸಮಾನ ಮನಸ್ಕರೊಂದಿಗೆ ನಿಮ್ಮ ಕವಿತೆಗಳನ್ನು ಎತ್ತಿಕೊಂಡು ಚರ್ಚಿಸುವಷ್ಟರ ಮಟ್ಟಿಗೆ ಅವು ನನ್ನನ್ನು ಪ್ರಭಾವಿತನನ್ನಾಗಿಸಿವೆ.
ನಿಮ್ಮಿಂದ ಮತ್ತಷ್ಟು ಕವಿತೆಗಳು ಬರಲಿ. ಭಾವನೆಗಳನ್ನು ಹೀಗೂ ಹೇಳಲು ಸಾಧ್ಯ ಎಂಬ ಅಚ್ಚರಿ-ಮುದ ಮೂಡಿಸುವ ನಿಮ್ಮ ಬರವಣಿಗೆ ಮತ್ತಷ್ಟು ಸಮೃದ್ಧವಾಗಲಿ. ಅವನ್ನು ಓದುತ್ತ ನಾವೂ ಎತ್ತರದ ಸ್ಥಿತಿ ತಲುಪುವಂತಾಗಲಿ. ಗಜಲ್‌ನ ಸೊಗಸನ್ನು ಕನ್ನಡಕ್ಕೆ ಉತ್ಕೃಷ್ಟವಾಗಿ ತರುತ್ತಿರುವ ನಿಮ್ಮ ಲೇಖನಿಗೆ ಸಾವಿರ ವಂದನೆಗಳು.
ನೀಲಿಹೂವು ಅರಳುತ್ತಲೇ ಹೋಗಲಿ. ಅದರ ಬರವಣಿಗೆಯ ಪರಿಮಳ ಎಲ್ಲರನ್ನೂ ತಾಕಲಿ. ಮನಸ್ಸು ಮುದಗೊಳಿಸಲಿ.
– ಚಾಮರಾಜ ಸವಡಿ
***************
ನೀಲಿ ಹೂವು ಬ್ಲಾಗ್ ಶುರುವಾದಾಗ ನನ್ನ ಗಮನ ಅತ್ತ ಹರಿದಿದ್ದು, ಮತ್ತೆ ಮತ್ತೆ ನೋಡುವಂತೆ ಮಾಡಿದ್ದು ಅದರ್ಲ್ಲಿ ಬರುತ್ತಿದ್ದ ಜೇನಹನಿಯಂತಹ ಕವಿತೆಗಳು (ರುಚಿ ಮತ್ತು ಗಾತ್ರಗಳೆರಡರಲ್ಲೂ) ಹಾಗೂ ಪುಟಾಣಿ ಸಾಲುದ್ದದ ಕಥೆ ಹೇಳುವ ಬರಹಗಳು. ರಂಜಿತ್ ನನಗೆ ವೈಯಕ್ತಿಕವಾಗಿ ಪರಿಚಿತರಲ್ಲ.  ಬ್ಲಾಗಿಗೆ ಮೊದಲು ಏನಾದರೂ ಬರೆದಿದ್ದಿದೆಯೇ ಅನ್ನೋದೂ ಗೊತ್ತಿಲ್ಲ. ಆದರೆ ಬ್ಲಾಗ್ ಬರಹಗಳ ಮೂಲಕ ಓದಿದವರ ನೆನಪಲ್ಲುಳಿಯುವಂತೆ ಸೆಳೆಯುವ ಸಾಮರ್ಥ್ಯ ಇವರಲ್ಲಿರುವುದು ನಿಜ.
ಸದಾ ಉತ್ಸಾಹದಿಂದ ಬ್ಲಾಗಿಸುತ್ತ, ಚರ್ಚೆಗೆಳೆಯುತ್ತ ನೂರರ ಗಡಿ ತಲುಪಿರುವ ನೀಲಿಹೂವಿನಲ್ಲಿ ವೈವಿಧ್ಯತೆಯಿದೆ. ಮತ್ತು, ‘ಬ್ಲಾಗ್ ಸ್ಪೇಸ್ ತೋಚಿದ್ದು ಗೀಚುವುದಕ್ಕೆ’ ಅಂತಿದ್ದರೂ ತಮಗೆ ತೋಚಿದ್ದನ್ನೆಲ್ಲ ಚೆಂದವಾಗಿಯೇ ಗೀಚುತ್ತ ಯಾರೇ ಆದರೂ ಖುಷಿಯಿಂದ ಓದಬಹುದಾದಂತದ್ದನ್ನೆ ಬ್ಲಾಗ್ ಜಗತ್ತಿಗೆ ಕೊಡುತ್ತಿದೆ. (ಹಾಗೇ ಒಂದೆರಡು ತರಲೆ ಪೋಸ್ಟ್ ಗಳ ಮೂಲಕ ಬ್ಲಾಗಿನ ‘ಹದ’ ಕಾಯ್ದಿಟ್ಟುಕೊಂಡಿರುವುದೂ ಇದರ ಹೆಗ್ಗಳಿಕೆ!)
ಬ್ಲಾಗ್ ನಲ್ಲಿ ಬರೆಯುತ್ತ ಬರೆಯುತ್ತಲೇ ಒಳ್ಳೆಯ ಕವಿಯ ಎಲ್ಲ ಲಕ್ಷಣಗಳನ್ನೂ (ವಿಶೇಷವಾಗಿ ನನಗೆ ಇವರ ಕವಿತೆಗಳು ಇಷ್ಟವಾಗುವುದರಿಂದ) ಮೈಗೂಡಿಸಿಕೊಂಡಿರುವ ರಂಜಿತ್ ಬರೀ ಬ್ಲಾಗಿಂಗಿಗೆ ಸೀಮಿತವಾಗದೆ ಬೆಳೆಯಲಿ, ನೀಲಿ ಹೂವನ್ನು ಚಿಮ್ಮುಹಲಗೆಯಾಗಿಸಿಕೊಂಡು ಜಿಗಿಯಲಿ ಅಂತ ಹಾರೈಸ್ತೇನೆ.
ತುಂಬು ಪ್ರೀತಿಯಿಂದ,
ಚೇತನಾ ತೀರ್ಥಹಳ್ಳಿ.
*********

blue-mountain-flowers_14008

blue_flowers

Advertisements
ಟಿಪ್ಪಣಿಗಳು
 1. ದಿವ್ಯಾ ಹೇಳುತ್ತಾರೆ:

  ಅಭಿನಂದನೆಗಳು 🙂 ಹೀಗೆಯೇ ಸಾಗಲಿ ಬರವಣಿಗೆ ಅನವರತ…

 2. ಪೂರ್ಣಿಮಾ ಭಟ್ಟ ಹೇಳುತ್ತಾರೆ:

  🙂 ಎಲ್ಲಾ ಚೊಲೋದಾಗ್ಲಿ 🙂

 3. Rajesh Manjunath ಹೇಳುತ್ತಾರೆ:

  ಪ್ರೀತಿಯ ಅಡಿಗರಿಗೆ ಆಲ್ ದ ಬೆಸ್ಟು 🙂

 4. ಶೆಟ್ಟರು (Shettaru) ಹೇಳುತ್ತಾರೆ:

  ಅಭಿನಂದನೆಗಳು

  -ಶೆಟ್ಟರು

 5. SHAILAJA ಹೇಳುತ್ತಾರೆ:

  ALL THE BEST FOR YOUR FUTURE WRITINGS.

 6. shivu.k ಹೇಳುತ್ತಾರೆ:

  ನೂರನೆ ಪೋಸ್ಟ್ ತಲುಪಿದ್ದಕ್ಕೆ ಅಭಿನಂದನೆಗಳು. ಮುಂದುವರಿಯಲಿ ನಿಮ್ಮ ಅಭಿಯಾನ.

 7. Bala ಹೇಳುತ್ತಾರೆ:

  Congratulations and continue good work, happy blogging

 8. Shamala ಹೇಳುತ್ತಾರೆ:

  ಬರಹಗಳ ಶತಕ ಪೂರೈಸಿದ ನಿಮಗೆ ಅಭಿನಂದನೆಗಳು. ನೀಲಿಹೂವು ಸದಾ ಕಂಪು ಸೂಸುತ್ತಲೇ ಇರಲಿ……..
  ಶ್ಯಾಮಲ

 9. ashraf ಹೇಳುತ್ತಾರೆ:

  ಶತಕ ವನ್ನು ಬಾರಿಸಿದ ನೀಲಿ ಹೂವೇ ನಿನಗಿದೋ ಹ್ರದಯಾಂತರಾಳದ ಶುಭಾಶಯಗಳು.ಬರಹಗಳು ಹೀಗೆಯೇ ಮುಂದುವರಿಯುತ್ತಿರಲಿ

 10. Pratiba Bhat ಹೇಳುತ್ತಾರೆ:

  Very good blog you have. Keep up the good work. Keep walking… keep blogging… 😀

 11. ವಿಜಯರಾಜ್ ಕನ್ನಂತ ಹೇಳುತ್ತಾರೆ:

  shataka dwishatakavaagali..trishatakavaagali…nimma aksharapreeti sadaa hasiraagirali…
  haageye naanu thumba ishta paduva nimma ondu saalina kategaLu innashtu hecchu moodi barali annodu nanna haaraike maatra alla manavi kooda 🙂

 12. svatimuttu ಹೇಳುತ್ತಾರೆ:

  ಅಣ್ಣ,
  ಮೊದಲಿಗೆ ಶುಭಾಷಯಗಳು….. ಇದುವರೆಗೂ ಮನ ಸೆಳೆಯುವ ಲೇಖನಗಳು, ಕವಿತೆಗಳು, …… ಎಲ್ಲಾವನ್ನೂ ಬರೆದಿದ್ದಿರೀ ಹೀಗೆಯೇ ಬರೆಯುತ್ತಿರಿ…
  ಇಂಚರ

 13. Roopa Satish ಹೇಳುತ್ತಾರೆ:

  Ranjith,
  Congratulations!!! nimma baravaNigeya abhimaanigaLigu santasatandide 🙂

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s