ಇತ್ತೀಚೆಗೆ

Posted: ಅಕ್ಟೋಬರ್ 2, 2009 in ಕವಿತೆ

ಬಾಲ್ಯದ ತುಂಬಾ

ಚಂದಮಾಮನನು ತೋರಿಸಿಯೇ

ಉಣ್ಣಿಸಿದ್ದ ಅವ್ವನಿಗೆ

ಕಲೆಯಿರದ ಚಂದಿರನ

ಕಲ್ಪನೆಯೇ ಇರಲಿಲ್ಲವಂತೆ

 

painting

ರೂಮಿನಲಿ ಚೆಲ್ಲಾಪಿಲ್ಲಿಯಾಗಿ

ಬಿದ್ದ ವಸ್ತುಗಳಂತಿದ್ದ ಬದುಕಿಗೆ

ಒಪ್ಪ ಓರಣಗಳ ಕಲಿಸುವ

ಟೀಚರಿನ ಅವಶ್ಯಕತೆಯಿದೆಯೆಂದು

ನನಗೂ ಅರಿವಿರಲಿಲ್ಲ.

ಬೇಲಿ ಹಾರಿ ಲೂಟಿ ಮಾಡುವ

ಜೋಡಿ ಹೋರಿಗಳಂತಿದ್ದ ಕಣ್ಣುಗಳನು

ನೊಗ ಕಟ್ಟುವಂಥ ಮೊಗ

ಇದೆಯೆಂಬುದರ ತಿಳಿವೂ ಇದ್ದಿರಲಿಲ್ಲ

ಅವಳು ಸಿಕ್ಕಿದ್ದು

ತೀರಾ ಇತ್ತೀಚೆಗೆ.

 

– ಅಕ್ಟೋಬರ್ ಮಾಸದ “ಮಯೂರ” ದಲ್ಲಿ ಪ್ರಕಟಿತ.

Advertisements
ಟಿಪ್ಪಣಿಗಳು
 1. manasu ಹೇಳುತ್ತಾರೆ:

  nice one!!! istavaayitu

 2. Dileep Hegde ಹೇಳುತ್ತಾರೆ:

  ತುಂಬಾ ಇಷ್ಟವಾಯ್ತು… 🙂

 3. shivu.k ಹೇಳುತ್ತಾರೆ:

  ರಂಜಿತ್,

  ಇದನ್ನು ಮೊದಲೇ ಮಯೂರದಲ್ಲಿ ಓದಿ ಖುಷಿಪಟ್ಟಿದ್ದೆ. ತುಂಬಾ ಚೆನ್ನಾಗಿದೆ.

 4. Karthik S Udupa ಹೇಳುತ್ತಾರೆ:

  ತುಂಬಾ ಚೆನ್ನಾಗಿದೆ, ಮೊದಲ ಪ್ಯಾರವಂತು ಸೂಪರ್.

 5. ಪ್ರದೀಪ್ ಹೇಳುತ್ತಾರೆ:

  ಚೆನ್ನಾಗಿದೆ!! 🙂

 6. ವಿಜಯರಾಜ್ ಕನ್ನಂತ ಹೇಳುತ್ತಾರೆ:

  nice 🙂

 7. ram ಹೇಳುತ್ತಾರೆ:

  hi ranjit,
  do you know why they have stopped kendasampige ? editor has not given any information about that.What happened all in a sudden ?

  regards,
  Ramesh

 8. Kallare ಹೇಳುತ್ತಾರೆ:

  Neevu andahaage ilvallaa sirr!!
  Chennagi bandide…

 9. sharanu hullur ಹೇಳುತ್ತಾರೆ:

  ranjita ji.. hegiddiri?… tumba channagi kavite baradiddiri…thanks

 10. ಚಕೋರ ಹೇಳುತ್ತಾರೆ:

  ಚೆನ್ನಾಗಿದೆ, ಮಯೂರದಲ್ಲೇ ಓದಿದ್ದೆ. ಕೊನೆಯ ಸಾಲಿನಲ್ಲಿ ಮಯೂರದಲ್ಲಿ ಪ್ರಕಟವಾಗಿದ್ದಾಗ “ಅವಳು ಸಿಕ್ಕದ್ದು.. ತೀರಾ ಇತ್ತೀಚೆಗೆ” ಅಂತ ಇದೆ.

  ಇಲ್ಲಿ ಅದು ಸಿಕ್ಕಿದ್ದು ಆಗಿದೆ.

  ಯಾವುದು ಸರಿ?

 11. Shruthi ಹೇಳುತ್ತಾರೆ:

  chennagide anna………. howdu…..ittichege elli sikidru???

 12. Roopa Satish ಹೇಳುತ್ತಾರೆ:

  Tumbaa ishtavaaytu kavithe… 🙂

 13. ವೈಶಾಲಿ ಹೇಳುತ್ತಾರೆ:

  Good one…

 14. Chamaraj Savadi ಹೇಳುತ್ತಾರೆ:

  ರಂಜಿತ್‌,
  ಎಂದಿನಂತೆ ಸಕತ್ತಾದ ಕವನ. ಕೊನೆಯ ಸಾಲು ಬರುವವರೆಗೆ ಕವಿತೆಯ ಒಳಾರ್ಥ ನಿಗೂಢವೇ. ಕೊನೆಯ ಸಾಲುಗಳನ್ನು ಓದಿದಾಗ ಮುಗುಳ್ನಗೆ ತನಗೆ ತಾನೇ ಮೂಡುತ್ತದೆ. ಮತ್ತೆ ಮೊದಲಿನಿಂದ ಓದುವಂತೆ ಪ್ರೇರೇಪಿಸುತ್ತದೆ. ನಿಮಗೆ ಕೈತುತ್ತು ಉಣ್ಣಿಸುವಾಗ ಅಮ್ಮನಿಗೆ ಚೆಂದುಳ್ಳಿ ಸೊಸೆಯ ಕಲ್ಪನೆ ಬಂದೀತಾದರೂ ಹೇಗೆ? ಇನ್ನು ಬ್ಯಾಚಲರ್‌ ಬದುಕಲ್ಲಿ ಮುಳುಗಿರುವಾಗ, ರೋಮ್ಯಾಂಟಿಕ್‌ ಜಗತ್ತಿನಲ್ಲಿ ಇಲ್ಲವಾಗಿರುವಾಗ, ಒಪ್ಪ ಓರಣದ ಒಡತಿಯೊಬ್ಬಳು ನೊಗ ಕಟ್ಟಲು ಬರುತ್ತಾಳೆಂಬ ಯೋಚನೆ ಬರುವುದಾದರೂ ಹೇಗೆ?
  ಸೊಗಸಾಗಿದೆ ಕವನ.

 15. ರೂಪಾ ಹೇಳುತ್ತಾರೆ:

  ಚೆನ್ನಾಗಿದೆ

 16. ರಂಜಿತ್ ಹೇಳುತ್ತಾರೆ:

  ಮನಸು, ದಿಲೀಪ್ ಹೆಗ್ಡೆ, ಶಿವು, ಪ್ರದೀಪ್, ವಿಜಯರಾಜ್ ಕನ್ನಂತ್, ಅನಿಕೇತನ ಸುನಿಲ್, ರೂಪಾ ಸತೀಶ್, ವೈಶಾಲಿ, ರೂಪಾ,

  ಕವಿತೆ ಮೆಚ್ಚಿಕೊಂಡಿದ್ದಕ್ಕೆ ನಿಮಗೆಲ್ಲರಿಗೂ ಧನ್ಯವಾದಗಳು,

 17. ರಂಜಿತ್ ಹೇಳುತ್ತಾರೆ:

  ಕಲ್ಲರೆ,

  ಹ್ಯಾಗೆ ಬರೆದರೂ ಒಂದು ಅಳುಕು ಇದ್ದೇ ಇರುತ್ತದೆ. ನಾನು ಬರೆವ ಕ್ಷಣ ಇದ್ದ ಗುಂಗಿನಲ್ಲಿ ಅರ್ಥವಾದ (ಇಷ್ಟವಾದ ಅಂತಲೂ ಅರ್ಥೈಸಿಕೊಳ್ಳಿ) ಕವಿತೆ, ಓದುಗನಿಗೆ (ಕೊನೆಗೆ ನನಗೂ!) ಓದುವಾಗ ದೊರಕುತ್ತದೋ ಇಲ್ಲವೋ ಎಂಬ ಅಳುಕು ಅದು.

  ನನಗ್ಯಾಕೋ ಇಂತದ್ದೆಲ್ಲಾ ಸಾತ್ವಿಕ ರೀತಿಯದ್ದು ಅನ್ನಿಸಿದೆ.

  ಚೆನ್ನಾಗಿ ಬಂದಿದೆ ಅಂದಿರಿ, ಥ್ಯಾಂಕ್ಯೂ!

 18. ರಂಜಿತ್ ಹೇಳುತ್ತಾರೆ:

  ಚಕೋರ,

  ನಿಮಗೆ ಯಾವುದು ಸರಿ ಅನ್ನಿಸಿದೆ, ಹೇಳಿ?

  ಅದರಲ್ಲೇ ನನ್ನುತ್ತರ ಅಡಗಿದೆ!

 19. ರಂಜಿತ್ ಹೇಳುತ್ತಾರೆ:

  ಶೃತಿ,

  ಬರೆದದ್ದು ಕವಿಸಮಯದಲ್ಲಿ, ಕವಿಕಲ್ಪನೆಯಲ್ಲಿ… ನಿಮ್ಮ ಪ್ರಶ್ನೆಗೆ ಉತ್ತರ ಇನ್ನೂ ಒಂದೆರಡು ವರುಷದಲ್ಲಿ ತಿಳಿಯುತ್ತದೆ..:)

 20. ರಂಜಿತ್ ಹೇಳುತ್ತಾರೆ:

  ಶರಣು,

  ಚೆನಾಗಿದೀನಿ ಸರ್. ಕವಿತೆ ನೀವು ಮೆಚ್ಕೊಂಡಿದ್ದು ನನಗೆ ಹೆಮ್ಮೆ ನೀಡಿದೆ.

  ******

  ಗೌತಮ್ ಹೆಗ್ಡೆ, ಕಾರ್ತಿಕ್ ಉಡುಪ,

  ನೀಲಿಹೂವಿನ ತೋಟಕ್ಕೆ ಸ್ವಾಗತ!

 21. ರಂಜಿತ್ ಹೇಳುತ್ತಾರೆ:

  ಚಾಮರಾಜ ಸವಡಿ,

  ಕವಿತೆ ನಿಮಗೆ ಇಷ್ಟವಾಗಿ ಮೆಚ್ಚಿಕೊಂಡಿದ್ದಕ್ಕೆ ಥ್ಯಾಂಕ್ಸ್.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s