ನಿಮಗುಂಟೇ ಅರಿವು?

Posted: ಅಕ್ಟೋಬರ್ 26, 2009 in ಕವಿತೆ ತರಹ

ಪಕ್ಕದಮನೆಯಲ್ಲೇ ಕುಟುಂಬದ ಹಿರಿಯನೊಬ್ಬನ ಸಾವು
ಇದ್ದಿದ್ದರೂ ನಿಮ್ಮ ಮನೆಯ ಸಡಗರದ
ಕೇವಲ ಒಂದು ಪಾಲೂ
ಬಿಟ್ಟುಕೊಡದೇ ಹೋದಿರಾ
ಒಂದೇ ಒಂದು ಕ್ಷಣದ ಮೌನಪ್ರಾರ್ಥನೆ
ನಿಮ್ಮನ್ನು ಮನುಷ್ಯನಾಗಿಸುತ್ತಿತ್ತಲ್ಲ
ಎಂಥಾ ಅವಕಾಶ ತಪ್ಪಿಸಿಕೊಂಡಿರಲ್ಲಾ

ಅಕೋ ಅಲ್ಲಿ ರೋಗಿಷ್ಟ ಕೈಯ್ಯನ್ನು ಪ್ರೀತಿಯಿಂದ
ನೇವರಿಸಿದ ಹೃದಯದ ಬಿಸಿ
ನಿಮ್ಮವರೆಗೂ ಯಾಕೆ ಬರದೇಹೋಯಿತು

ಆತ್ಮಸಾಕ್ಷಿಯ ಪ್ರಶ್ನೆಗಳಿಗೆ ತಡವಿ
ಆತಂಕಿತರಾಗಿ ಬೆವರಿಳಿಸಿದಾಗ
ನಿಮ್ಮನು ನೇವರಿಸಿದ ತಂಗಾಳಿಗಾಗಿ
ನೀವೇನು ನೀಡಿದಿರಿ

ಅಲೆಮಾರಿಗಳ ಊರಿನಲ್ಲಿ
ಜಾರಿದವರಿಗೆ ಆಸರೆಯಾಗಲಿಲ್ಲವೇಕೆ ನೀವು
ಅದರ ಅರಿವೇ ಇರಲಿಲ್ಲವಲ್ಲವೇ
ನಿಮ್ಮದೇ ಊರುಗೋಲು ಎಡವಿದವರೆಗೂ

ನಿಜಾ ಹೇಳಿ, ನಿಮಗುಂಟೇ ಅರಿವು

ದಿಗ್ದಿಗಂತದ ಮೂಲೆಯಲ್ಲೆಲ್ಲೋ
ಇದ್ದರೂ ನಿಮ್ಮ ಹಾದಿಯುದ್ದಕ್ಕೂ
ಖುಷಿ ನೀಡಿದ,
ಗೌಜುಗದ್ದಲದ ಬೇಲಿಯೊಳಗೇ
ಮೌನವಾಗಿ ನಸುನಗುತ್ತಿದ್ದ,
ನಿಮ್ಮ ಒಂದು ಪ್ಚ್ ನ್ನು ಎಂದೂ ಬಯಸದ
ನೀಲಿಹೂವಿನ ಮರಣ?

Advertisements
ಟಿಪ್ಪಣಿಗಳು
 1. Shamala ಹೇಳುತ್ತಾರೆ:

  ನೀವು ತುಂಬಾ ಸೂಕ್ಷ್ಮವಾಗಿ ಅಥವಾ ನವಿರಾಗಿ ವಿಷಯದ ಎಳೆಗಳನ್ನು ಹಿಡಿಯುತ್ತೀರಿ…. ಅದಿಕ್ಕೇ ನಿಮ್ಮ ಕವನಗಳು ಪುಟಗಟ್ಟಲೆ ಬರೆದ ಗದ್ಯಕ್ಕಿಂತ ಹೆಚ್ಚು ಪರಿಣಾಮಕಾರಿಯಾಗಿರುತ್ತವೆ………!!! ನಾವೆಲ್ಲಾ ಬರಿಯ ’ನಿಂತು ನೋಡುವರರು’ ಅಷ್ಟೇ…… ಸಹಾಯ ಹಸ್ತ ಚಾಚುವುದಿರಲಿ (ಹಣದ ದೇಣಿಗೆ ಕೊಡುವುದು ಬಿಟ್ಟು) ಒಂದು ನಿಮಿಷದ ಅಮೂಲ್ಯ ಸಮಯವನ್ನೂ ನೊಂದವರಿಗಾಗಿ ಖರ್ಚು ಮಾಡದವರು…… ಕವನ ತುಂಬಾ ಚೆನ್ನಾಗಿದೆ ಮತ್ತು ಕಾಳಜಿಯಿಂದ ತುಂಬಿದೆ, ಅದೇ ಓದುಗರನ್ನು ಸೆಳೆಯುವುದು……..

  ಆದರೆ ಈ ನೀಲಿಹೂವಿನ ಮರಣ ????????

  ಶ್ಯಾಮಲ

 2. prakash hegde ಹೇಳುತ್ತಾರೆ:

  ತುಂಬಾ ಸೊಗಸಾಗಿದೆ….

  ಒಂದು ಸಾರಿ ನಮ್ಮ ಮೂಡನ್ನು ಬದಲಿಸಿ ಬಿಡುತ್ತದೆ ನಿಮ್ಮ ಶಬ್ಧಗಳು…

  ಚಂದದ ಕವಿತೆಗಾಗಿ ಅಭಿನಂದನೆಗಳು…

 3. Santhosh Mugoor ಹೇಳುತ್ತಾರೆ:

  ದಿಗ್ದಿಗಂತದ ಮೂಲೆಯಲ್ಲೆಲ್ಲೋ
  ಇದ್ದರೂ ನಮ್ಮ ಹಾದಿಯುದ್ದಕೂ ಇದ್ದು
  ಗೌಜುಗದ್ದಲದ ಬೇಲಿಯೊಳಗೆ
  ಮೌನವಾಗಿ ನಸುನಗುತ್ತಿದ್ದ…
  ನೀಲಿ ಹೂವಿನ ಮರಣ
  ಒಂದು ಪ್ಚ್ ಅನ್ನು ಬಯಸಿರಲಿಲ್ಲವೇನೋ ?
  ಆದರೆ ಅದೇ ಹಾದಿಯಲ್ಲಿ ಸಾಗುತ್ತಾ
  ಸದ್ದಿಲ್ಲದೆ ಅದೇ ಬೇಲಿಯನ್ನು ಸದ್ದಿಲ್ಲದೆ ಸುತ್ತುತ್ತಿದ್ದ
  ಬಣ್ಣದ ಚಿಟ್ಟೆಯೊಂದು ನಿರ್ವಣ್ಣವಾಗುವುದೆಂದು ಯೋಚಿಸಿರಲಿಲ್ಲವೇನೋ ?!!

 4. ದಿವ್ಯಾ ಮಲ್ಯ ಹೇಳುತ್ತಾರೆ:

  ಮನ ತಟ್ಟುವ ಕವನ ರಂಜಿತ್…

 5. ಮುಸ್ಸ೦ಜೆ ಇ೦ಪು ಹೇಳುತ್ತಾರೆ:

  ತು೦ಬಾ ಅರ್ಥಪೂರ್ಣವಾಗಿ ಬರೆದಿದ್ದೀರ…… ಇನ್ನೊಬ್ಬರಬಗ್ಗೆ, ಸಮಾಜದ ಬಗ್ಗೆ ತೋರಬಹುದಾದ ಕೊ೦ಚ ಕಾಳಜಿ/ಭಾವನೆ/ಪ್ರೀತಿಯ ಬಗೆಗಿನ ಕಳಕಳಿ ಸೊಗಸಾಗಿ ಮೂಡಿಬ೦ದಿದೆ – ಧನ್ಯವಾದಗಳು

 6. Dr. Azad ಹೇಳುತ್ತಾರೆ:

  ಓಹ್, ಎಂತಹ ಸಾಲುಗಳು..
  ಆತ್ಮಸಾಕ್ಷಿಯ ಪ್ರಶ್ನೆಗಳಿಗೆ ತಡವಿ
  ಆತಂಕಿತರಾಗಿ ಬೆವರಿಳಿಸಿದಾಗ
  ನಿಮ್ಮನು ನೇವರಿಸಿದ ತಂಗಾಳಿಗಾಗಿ
  ನೀವೇನು ನೀಡಿದಿರಿ…ಪ್ರಶ್ನೆ..ನನ್ನನ್ನೇ ಕೇಲಿದಂತಿದೆ..ಇದು ಓದಿದ ಎಲ್ಲರ ಇಂಗಿತ ಆಗಲೂ ಬಹುದು..

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s