ಹೆಸರಿನ ಹಂಗಿಲ್ಲದ ಹನಿಗಳು

Posted: ನವೆಂಬರ್ 2, 2009 in ಹನಿಗಳು...

ಅಂಗಳದ ಉದ್ದಕ್ಕೂ

ತಾರೆಗಳ ಪ್ರಣತಿ ಸಾಲು..

 ಇದ್ದರೂ ಸಹ ಅಂಗಳದ

ತುಂಬಾ ಚೆಲ್ಲಿಹನು ಚಂದಿರ

ತನ್ನ ಬೆಳಕಿನ ಹಾಲು…

 

 

******

 

ನೋವುಗಳ ಕತ್ತಲನು

ಹೊಡೆದೋಡಿಸಲಿ

ನಗುವಿನ ಬಿಸಿಲುಕೋಲು..

 ಎದೆಯ ಗಾಯಗಳನ್ನೆಲ್ಲಾ

ನಯವಾಗಿ ಹೊಲಿದುಬಿಡಲಿ

ಪ್ರೀತಿಯ ಒಂದು ಎಳೆ ನೂಲು..

 

*******

 

 

ಈ ಖಾಲಿ ನಟ್ಟಿರುಳಲಿ

ನಾನು ಮತ್ತು

ಬಾನು

ಎರಡೂ

ಚುಕ್ಕಿ ಜೋಡಿಸಲು

ಬರುವ ಹುಡುಗಿಗಾಗಿ

ಕಾಯುತಿರುವ ಅಂಗಳ

 

*******

 

ನೇಸರನು ಎಲ್ಲೋ

ಮರೆಯಲ್ಲಿ ಕೂತು..

ಕತ್ತಲ ಕಾವಲಿಗೆ

ಹುಯ್ದ ರಾತ್ರಿಯ ದೋಸೆಗೆ

ನೂರೆಂಟು ತೂತು!

 

*****

 First_Light

 

ಮುಂದಿನ ದಾರಿಗೆ

ಬೆಳಕೆಲ್ಲಾ ಮುಗಿದು ಹೋದರೂ

ಎದೆಯೊಳಗೆ ಉರಿಯುತಿರಲಿ ಸದಾ

ಭರವಸೆಯ ಮಿಣುಕು ದೀಪ..

 

****

 

ಈ ಹನಿಗಳು ಇವತ್ತಿನ (೨-೧೧-೦೯) ವಿಜಯ ಕರ್ನಾಟಕ ದ ಸಿಂಪ್ಲಿಸಿಟಿ ಪೇಜ್ ನಲ್ಲಿ ಪ್ರಕಟವಾಗಿವೆ.

 

 

Advertisements
ಟಿಪ್ಪಣಿಗಳು
 1. ರಾಜೇಶ್ ಮಂಜುನಾಥ್ ಹೇಳುತ್ತಾರೆ:

  ಪ್ರಿಯ ರಂಜಿತ್,
  ಪತ್ರಿಕೆಯಲ್ಲಿ ಬೆಳಿಗ್ಗೆ ಓದಿದೆ… ಎಲ್ಲಾ ಸಾಲುಗಳು ಚೆನ್ನಾಗಿವೆ.

 2. Rashmi ಹೇಳುತ್ತಾರೆ:

  ಎದೆಯ ಗಾಯಗಳನ್ನೆಲ್ಲಾ
  ನಯವಾಗಿ ಹೊಲಿದುಬಿಡಲಿ
  ಪ್ರೀತಿಯ ಒಂದು ಎಳೆ ನೂಲು..

  these lines touches the heart.

 3. ಚಾಮರಾಜ ಸವಡಿ ಹೇಳುತ್ತಾರೆ:

  ಸಾಲುಗಳು ಒಂದಕ್ಕಿಂತ ಒಂದು ಸೂಪರ್‌ ರಂಜಿತ್‌. ಎಂದಿನಂತೆ ಪದಸೊಗಸಿನ ಸಿಕ್ಸರ್‌ಗಳ ಸುರಿಮಳೆ. ಒಂದಕ್ಕಿಂತ ಒಂದು ಚೆನ್ನ. ಒಟ್ಟಾಗಿ ನೋಡಿದರೆ, ಸಕತ್‌.

  ಪದ್ಯದ ಸೊಗಸೆಂದರೆ ಇದು!

 4. ರಾಕಿ ಹೇಳುತ್ತಾರೆ:

  ಚೆನ್ನಾಗಿದೆ ರ೦ಜಿತ್

 5. ಶರಶ್ಚಂದ್ರ ಕಲ್ಮನೆ ಹೇಳುತ್ತಾರೆ:

  ಇಲ್ಲಿನ ಕೆಲವು ಹನಿಗವನಗಳು ನನ್ನ ಮೊಬೈಲ್ ನ ಇನ್ ಬಾಕ್ಸ್ ಅಲ್ಲಿ ಕೂಡ ಇವೆ ರಂಜಿತ್… ನಿಮ್ಮ ಹನಿಗವನಗಳು ಎಂದಿನಂತೆ ತುಂಬಾ ಇಷ್ಟವಾದವು. “ಮುಂದಿನ ದಾರಿಗೆ ಬೆಳಕೆಲ್ಲಾ ಮುಗಿದು ಹೋದರೂ ಎದೆಯೊಳಗೆ ಉರಿಯುತಿರಲಿ ಸದಾ ಭರವಸೆಯ ಮಿಣುಕು ದೀಪ..” ಇಷ್ಟವಾಯಿತು…

 6. Roopa ಹೇಳುತ್ತಾರೆ:

  Awesome ri ranjith….
  ondakkinta ondu saalugaLu sakatthaagive….
  nimma blog oduvude ondu khushi.. 🙂

 7. svatimuttu ಹೇಳುತ್ತಾರೆ:

  nice one anna..:)

 8. ಅನಾಮಿಕ ಹೇಳುತ್ತಾರೆ:

  ಎದೆಯ ಗಾಯಗಳನ್ನೆಲ್ಲಾ

  ನಯವಾಗಿ ಹೊಲಿದುಬಿಡಲಿ

  ಪ್ರೀತಿಯ ಒಂದು ಎಳೆ ನೂಲು..

  nice lines… 🙂

 9. ಪ್ರದೀಪ್ ಹೇಳುತ್ತಾರೆ:

  ಎಂದಿನಂತೆ ಚಂದವಾಗಿರುವ ಹನಿಗಳು.. 🙂

 10. ರಂಜಿತ್ ಹೇಳುತ್ತಾರೆ:

  ರಾಜೇಶ್,

  ನಿಮ್ಮ ವೇಗದ ಪ್ರತಿಕ್ರಿಯೆಗೆ ಥ್ಯಾಂಕ್ಸು.

  ರಶ್ಮೀ,

  ಅನಿಸಿಕೆ ಓದಿ ಖುಷಿಯಾಯ್ತು, ಥ್ಯಾಂಕ್ಸ್!

 11. ರಂಜಿತ್ ಹೇಳುತ್ತಾರೆ:

  ಪ್ರದೀಪ್, ಅನಾನಿಮಸ್, ಸ್ವಾತಿಮುತ್ತು ಶ್ರುತಿ, ರೂಪಾ ಮೇಡಮ್, ಗೌತಮ್ ಹೆಗ್ಡೆ, ರಾಕಿ,

  ಎಲ್ಲರಿಗೂ ನನ್ನ ಧನ್ಯವಾದಗಳು.

 12. ರಂಜಿತ್ ಹೇಳುತ್ತಾರೆ:

  ಶರತ್,

  ಎಸ್ಸೆಮ್ಮೆಸ್ಸಿನ ವಿಷಯ ಕೇಳಿ ಖುಷಿಯಾಯ್ತು. ನನ್ನ ಬಹಳಷ್ಟು ಸಣ್ಣ ಕವಿತೆಗಳು ಎಸ್ಸೆಮ್ಮೆಸ್ಸಿನಲ್ಲೇ ಕಳೆದುಹೋಗಿದೆ. ಯಾವುದಾದರೂ ವಿಶೇಷವಾಗಿ ಚೆನ್ನಾಗಿದ್ದದ್ದು ನಾ ಮರೆತಿದ್ದು ಇದ್ದಿದ್ದರೆ ಕಳುಹಿಸಿಕೊಡಿ.

  ನಿಮ್ಮ ಅನಿಸಿಕೆಗೆ ಧನ್ಯವಾದಗಳು.

 13. ರಂಜಿತ್ ಹೇಳುತ್ತಾರೆ:

  ಸವಡಿ ಸರ್,

  ಹನಿಗವಿತೆಗಳು ನನಗೂ ಇಷ್ಟದ ಮಾಧ್ಯಮ. ನಿಮ್ಮ ಮನಸಲ್ಲಿ ಇದಕ್ಕೆ ಸಿಕ್ಸರ್ ದೊರಕಿದ್ದು ಸಂತಸದ ವಿಚಾರ.

  ಧನ್ಯವಾದಗಳು

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s