ಒಬ್ಬಂಟಿ!

Posted: ನವೆಂಬರ್ 26, 2009 in ಕವಿತೆ ತರಹ, ದಿನದ ಎಸಳುಗಳು...

ನಿಗೂಢ ಊರಲ್ಲಿ ಸಿಲುಕಿ

ತನ್ನತನದ ಅಡ್ರೆಸ್ಸು ಹಿಡಿದು

ಊರೆಲ್ಲಾ ಅಂಡಲೆದ

ವಿಳಾಸವಂಚಿತ

 

 

 

 

 

 

ಎದೆಯಲ್ಲಿಂದು ಅಳಿಯದ ನೆನಪುಗಳನೇ

ಹೊತ್ತು

ತಿರುಗುವಾಗ

ಜಾತ್ರೆಯ ನಂತರದ ದಿವಸ

ಖಾಲಿ ಖಾಲಿ ತೇರು

ಊರಿನ ಹಾದಿಯೆಲ್ಲಾ

 

ಈಗ, ಈ ಕ್ಷಣ

ದಿಗ್ದಿಗಂತದಂಚಿನ

ಬೆಳ್ಳುಚುಕ್ಕಿ ಕೈಯ್ಯ

ಚಾಚಿದರೆ ಸಿಗುವಂಥದಲ್ಲ

ಹಸಿದರೂ ಚಂದಿರ

ರೊಟ್ಟಿಯಾಗುವುದಿಲ್ಲ

 

 

 

 

 

 

ತುಂಬು ಜನಸಂದಣಿಯ

ಜಾತ್ರೆಯಲ್ಲಿದ್ದರೂನು

ಆಮೆ ತನ್ನ ಕೋಶ

ದೊಳಗೇ  ಮಾಡಿಕೊಂಡಂತೆ ವಿಶ್ವ

 

ನೀ ಬಿಟ್ಟು ಹೋದ

ಜಗತ್ತಿನಲ್ಲಿ

ಅನಂತಾನಂತದಲ್ಲೆಲ್ಲೋ

ಉಡುಗಿಹೋದ ಚುಕ್ಕಿ ನಾನು..

 

ಆಗಷ್ಟೇ ಹಾವೊಂದು

ಗೂಡು ಗುಡಿಸಿ ಹೋದ

ಪಾಡಿನ,

ಕೊರಳೊಳಗೇ ಮಡಿದ

ಹಾಡಿನ

ಒಂಟಿ ಹಕ್ಕಿ ನಾನು..

Advertisements
ಟಿಪ್ಪಣಿಗಳು
 1. hemalatha ಹೇಳುತ್ತಾರೆ:

  chennagide… bhahusya nange hecchhu artha agutte ..yaake antha nimgu gottu 🙂

 2. hema ಹೇಳುತ್ತಾರೆ:

  ಆಗಷ್ಟೇ ಹಾವೊಂದು

  ಗೂಡು ಗುಡಿಸಿ ಹೋದ

  ಪಾಡಿನ,

  ಕೊರಳೊಳಗೇ ಮಡಿದ

  ಹಾಡಿನ

  ಒಂಟಿ ಹಕ್ಕಿ ನಾನು.. ಇಡೀ ಕವಿತೆ ಜೀವವನ್ನ ಕಡೇ ಸಾಲಲ್ಲೇ ಇಟ್ಟೀರ್ತಿರಿ ನೀವು ಯಾವಾಗ್ಲು 🙂

 3. Tejaswini Hegde ಹೇಳುತ್ತಾರೆ:

  ಚೆನ್ನಾಗಿದೆ ಕವನ.

  ನೀ ಬಿಟ್ಟು ಹೋದ

  ಜಗತ್ತಿನಲ್ಲಿ

  ಅನಂತಾನಂತದಲ್ಲೆಲ್ಲೋ

  ಉಡುಗಿಹೋದ ಚುಕ್ಕಿ ನಾನು..

  – ತುಂಬಾ ಇಷ್ಟವಾದ ಸಾಲುಗಳಿವು..

 4. Dileep Hegde ಹೇಳುತ್ತಾರೆ:

  ಕವನ ತುಂಬಾನೇ ಚೆನ್ನಾಗಿದೆ… ಸಕತ್ ಇಷ್ಟವಾಯ್ತು…

 5. baasi ಹೇಳುತ್ತಾರೆ:

  ಒಂಟಿ ಹಕ್ಕಿ ಅಧ್ಬುತ ಸಂಯೋಜನೆ

 6. sharadabooks ಹೇಳುತ್ತಾರೆ:

  ವಿಳಾಸ ವಿಳಾಸ ವಂಚಿಥಲಾಗಿ
  ಕಾಲಿ ತೇರನೆರಿದರೂ
  ಚಂದಿರ ರೊಟ್ಟಿ ಯಾಗುದಿಲ್ಲ
  ಆಮೆಯ ಕೋಶದಂತೆ
  ನನ್ನ ವಿಶ್ವ —–,

  ಅನಂತ ಆಕಾಶದಲ್ಲೆಲೋ
  ಕೊರಳಲ್ಲೇ ಹಾಡು
  ಮಡಿದಿದೆ.ಚೆನ್ನಾಗಿದೆ.

 7. Shamala ಹೇಳುತ್ತಾರೆ:

  ಶುರೂನೆ ತುಂಬಾ ಚೆನ್ನಾಗಿದೆ… ನಿಗೂಢ ಊರಲ್ಲಿ ಸಿಲುಕಿ ತನ್ನ ತನದ ವಿಳಾಸ ಹಿಡಿದು… ಅಬ್ಬಾ ತುಂಬಾ ಅರ್ಥಪೂರ್ಣ ಸಾಲುಗಳು…
  ಎಂದಿನಂತೇ ಕೊನೆಯ ಸಾಲೂ ಅಷ್ಟೇ ಅರ್ಥಗರ್ಭಿತ…….

 8. Rashmi ಹೇಳುತ್ತಾರೆ:

  tumba channagide./

 9. Dileep Hegde ಹೇಳುತ್ತಾರೆ:

  ಚೆನ್ನಾಗಿದೆ..:)

 10. Dr, Azad ಹೇಳುತ್ತಾರೆ:

  ರಂಜಿತ್, ಚಿಕ್ಕ ಚೊಕ್ಕ ಜೋಡಣೆಯ ಪದಗಳ ಸಾಲು
  ಅರ್ಥವನ್ನು ಸೂಚ್ಯವೇನೋ ಎನ್ನುವಂತೆ ಮೂಡಿಸುತ್ತವೆ ಸಾಲುಗಳು…

 11. ಅನಾಮಿಕ ಹೇಳುತ್ತಾರೆ:

  nbice one

 12. ಅನಾಮಿಕ ಹೇಳುತ್ತಾರೆ:

  nice one

 13. ಅನಿಕೇತನ ಸುನಿಲ್ ಹೇಳುತ್ತಾರೆ:

  ತುಂಬಾನೇ ಇಷ್ಟ ಆಯ್ತು ರಂಜಿತ್

 14. Dayananda M R ಹೇಳುತ್ತಾರೆ:

  so good they are…
  your composing style is really superb.
  Don’t let the quality down… you will rock 🙂

 15. ರಂಜಿತ್ ಹೇಳುತ್ತಾರೆ:

  ಹೇಮಲತಾ,

  ಧನ್ಯವಾದಗಳು.

  ಹೇಮಾ,

  ನಿಮ್ಮ ಅನಿಸಿಕೆಯ ಕೊನೆಯ ಸಾಲು ಪ್ರಶ್ನೆ ಆಗಿದ್ದರೆ ಜಯಂತ್ ಕಾಯ್ಕಿಣಿಯವರ “ಕೊನೇ ಶಬ್ದ” ಕವಿತೆ ಓದಿರಿ..(ಒಂದು ಜಿಲೇಬಿ ಸಂಕಲನ). ಅಲ್ಲವಾದರೆ ಥ್ಯಾಂಕ್ಸು!

 16. ರಂಜಿತ್ ಹೇಳುತ್ತಾರೆ:

  ತೇಜಸ್ವಿನಿ ಹೆಗ್ಡೆ, ದಿಲೀಪ್ ಹೆಗ್ಡೆ, ಬಾಸಿ, ಶಾರದಾಬುಕ್ಸ್, ಶಾಮಲಾ, ರಶ್ಮಿ, ಡಾ| ಆಜಾದ್, ಡಾ| ಗುರುಮೂರ್ತಿ, ಅನಾನಿಮಸ್, ಅನಿಕೇತನ ಸುನಿಲ್

  ಥ್ಯಾಂಕ್ಸ್.

 17. ರಂಜಿತ್ ಹೇಳುತ್ತಾರೆ:

  ದಯಾನಂದ,

  ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು. ದಯವಿಟ್ಟು ಆದಷ್ಟು ಕನ್ನಡದಲ್ಲೇ ಅನಿಸಿಕೆ ಹಾಕಿದರೆ ನನಗೆ ಖುಷಿ. ಬರಹದ ಗುಣಮಟ್ಟ ಕಾಯ್ದಿರಿಸುವ ಪ್ರಯತ್ನ ಮಾಡುತ್ತಿರುತ್ತೇನೆ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s