ಜೀವ ಹರಿದು ಹಾಕುವ ವಿರಹಕ್ಕೆ ಇನ್ನು ಅವಳ ನೆನಪುಗಳ ತೇಪೆಯಿಲ್ಲ!

Posted: ಜನವರಿ 11, 2010 in ಲವ್ ಲೆಟರ್

ಹೌದು. ಎಷ್ಟು ಕಷ್ಟವಾದರೂ ಸರಿ. ಪ್ರಯಾಸಪಟ್ಟಾದರೂ ಓಕೆ; ನಿನ್ನ ಮರೆಯಲೇಬೇಕು!

ಇನ್ನೆಷ್ಟು ದಿನ ಈ ವಿರಹದಲ್ಲೇ ಬದುಕಿದ್ದೂ ಸತ್ತಂತಿರಲು ಸಾಧ್ಯ? ಇನ್ನೆಷ್ಟು ದಿನ ಉಸಿರಾಡುವುದೇ ಭಾರ ಅನ್ನುವಂಥ ಸ್ಥಿತಿ? ಕಾಲಕ್ಕೇ ಬೊಜ್ಜು ಬಂದಂತೆ ಮೆಲ್ಲ ಮೆಲ್ಲ ಹೆಜ್ಜೆ? ಎಷ್ಟು ದಿನವೆಂದು ಆಯಸ್ಸಿಗೆ ವಿರಹದ ಲೆಕ್ಕ ಒಪ್ಪಿಸಬೇಕು? ಅದೆಷ್ಟು ಜನುಮ ಒಪ್ಪಿಗೆಯ ಮೀನಿಗಾಗಿ ಗಾಳ ಹಾಕುತ್ತ ಕುಳಿತ ಬೆಸ್ತನಾಗಲಿ? ಅದಕ್ಕಿಂತ ಒಳಗಿರುವ ನೆನಪನ್ನೆಲ್ಲಾ ಗುಡಿಸಿ ಹಾಕಿ ಎದೆಯಂಗಳದಲ್ಲಿ ಹೊಸ ರಂಗೋಲಿ ಹಾಕಿಬಿಡಬೇಕು.

ಅರಳಿ ನಿಂತ ಮಲ್ಲಿಗೆಯಲಿ ನಿನ್ನದೇ ನಗೆ..
ಹೂವಿನ ಮಕರಂದ ನಿನ್ನ ತುಟಿಯದೇ ಬಗೆ..

ಪ್ರತೀ ಕ್ಷಣ ಈಗ ನೀನಲ್ಲಿ ಏನು ಮಾಡುತ್ತಿರಬಹುದು ಅಂತ ಇನ್ನು ಊಹಿಸುತ್ತಾ ಇರಲ್ಲ. ದೇವರೆದುರು ನನ್ನ ಪ್ರಾರ್ಥನೆಯ ಜೋಳಿಗೆ ಬಿಚ್ಚುವಾಗ ನಿನ್ನ ಮೇಲಿನ ಕೋರಿಕೆಗೆ ಕೊನೆಯ ಸ್ಥಾನ. ಬಟ್ಟೆ ಅಂಗಡಿಯಲ್ಲಿನ ಬೊಂಬೆಗುಡಿಸಿದ ಡ್ರೆಸ್ಸು ನಿನಗೆ ಹೇಗೆ ಕಾಣಬಹುದು ಎಂದಿನ್ನು ಕಲ್ಪಿಸಿಕೊಳ್ಳುವುದಿಲ್ಲ. ನಿನ್ನ ಹೆಸರಿಟ್ಟುಕೊಂಡ ಅಂಗಡಿಯ ಮುಂದೆ ನಿಂತು ನಿನ್ನ ನೆನೆಸಿಕೊಳ್ಳುತ್ತಾ ಇನ್ನು ಮೈಮರೆಯೋದಿಲ್ಲ. ರಸ್ತೆ ತಿರುವಿನಲ್ಲಿ ನಿನ್ನನೊಮ್ಮೆ ಭೇಟಿ ಮಾಡಿದ ನೆನಪುಗಳನ್ನಿನ್ನು ಎಂದಿಗೂ ನೇವರಿಸೋಲ್ಲ. ನಿನ್ನ ನೆನಪುಗಳನ್ನು ತೀವ್ರವಾಗಿ ತರಿಸುವ ಭಾವಗೀತೆಗಳನ್ನಿನ್ನು ಗುನುಗುನಿಸಲ್ಲ. ದಿಂಬಿಗಿನ್ನು ಬೇರೆ ನಾಮಕರಣ; ನಿನ್ನ ಹೆಸರಲ್ಲ!

 

ws_Red_Flower_1152x864

ಬೀಸಿ ಬಂದ ಗಾಳಿಯಲ್ಲಿ ನಿನ್ನ ಪರಿಮಳ..
ಮಾಮರದಲ್ಲಿ ನಿನ್ನದೇ ಗಾನಮಂಜುಳ…

ನಿನ್ನ ಕನಸುಗಳೇ ಬರುವುದಾದರೆ ನನಗಿನ್ನು ನಿದಿರೆಯೇ ಬೇಡ. ವಿರಹವನ್ನು ನೋಡಿ ನಗುವ ಚಂದಿರ ಇನ್ನು ನನ್ನ ಪಾಲಿಗಿನ್ನು ಕುರೂಪಿ. ಅವಳ ಕಣ್ಣುಗಳ ನೆನಪಿಸುವ ನಕ್ಷತ್ರಗಳನ್ನು ನೋಡುವುದು ಭಾದ್ರಪದ ಶುಕ್ಲಪಕ್ಷ ದಲ್ಲಿ ಚಂದಿರನನ್ನು ನೋಡಬಾರದೆಂಬಷ್ಟೇ ಸ್ಟ್ರಿಕ್ಟು. ಜೀವ ಹರಿದು ಹಾಕುವ ವಿರಹಕ್ಕೆ ಇನ್ನು ಅವಳ ನೆನಪುಗಳ ತೇಪೆಯಿಲ್ಲ! ಇನ್ಮೇಲೆ ನಾನು+ನೀನು= ನಾನು ಅಲ್ಲ!

ನಲ್ಲೇ, ನಿನ್ನ ಮರೆಯಲು ಏನೆಲ್ಲಾ ಮಾಡಿದೆ..
ಆದರೂ ಎಲ್ಲೆಲ್ಲೂ ನಿನ್ನಾ ನೆನಪೇ ಕಾಡಿದೆ!

 

*********

ಅಂತರಾತ್ಮನ ಮತ್ತು ನನ್ನ ಜಗಳ ಹೀಗೆ ಮುಗಿಯುತ್ತದೆ. ಅವಳನ್ನು ಮರೆಯಬೇಕು ಅನ್ನುವ ವಾಕ್ಯವನ್ನೇ ಅಂತರಾತ್ಮ ತಪ್ಪೆನ್ನುತ್ತದೆ. ಅವಳನ್ನು ಮರೆಯುವುದೆಂದರೆ ಅವಳೂ ನೀನೂ ಬೇರೆಯಾಗಬೇಕಲ್ಲವೇ? ಇಬ್ಬರೂ ಒಂದೇ ಆಗಿರುವಾಗ ಮರೆಯುವುದು, ತೊರೆಯುವುದು ಹೇಗೆ ಸಾಧ್ಯ ಅನ್ನುತ್ತದೆ. ಮೌನವಾಗಿ ಸೋಲೊಪ್ಪಿಕೊಳ್ಳುತ್ತೇನೆ. ಕವಿಯೊಬ್ಬನ ಭಾವಗೀತೆಯಂತಹ ಅಂತರಾತ್ಮನ ಮಾತು ವಿಜಯಿಯಾಗುತ್ತದೆ. ನನ್ನ ಮಾತುಗಳೆಲ್ಲ ತಿರುಗುಬಾಣ ಆಗುತ್ತದೆ.

"ಹೌದು. ಎಷ್ಟು ಕಷ್ಟವಾದರೂ ಸರಿ. ಪ್ರಯಾಸವಾದರೂ ಓಕೆ ; ನಿನ್ನ ಮರೆಯಲಾರೆ; ಮರೆಯಲಾಗದು !….."

 

*****

 

(ಜೋಗುಳ ಬ್ಲಾಗಿಗಾಗಿ ಬರೆದಿದ್ದು)

ಟಿಪ್ಪಣಿಗಳು
 1. ದಿವ್ಯಾ ಹೇಳುತ್ತಾರೆ:

  ಉಪಮೆಗಳ ಪರಮಾವಧಿ!! “ಕಾಲಕ್ಕೇ ಬೊಜ್ಜು ಬಂದಂತೆ ಮೆಲ್ಲ ಮೆಲ್ಲ ಹೆಜ್ಜೆ?” – ಸಕತ್ ಆಗಿದೆ ರಂಜಿತ್ 🙂

 2. Shamala ಹೇಳುತ್ತಾರೆ:

  ರಂಜಿತ್ ಅವರೇ…
  ಹತಾಶೆಯಲ್ಲೂ ಎಂಥಹ ಸುಂದರ ಸಾಲುಗಳು..
  “ಕಾಲಕ್ಕೇ ಬೊಜ್ಜು ಬಂದಂತೆ ಮೆಲ್ಲ ಮೆಲ್ಲ ಹೆಜ್ಜೆ? ಎಷ್ಟು ದಿನವೆಂದು ಆಯಸ್ಸಿಗೆ ವಿರಹದ ಲೆಕ್ಕ ಒಪ್ಪಿಸಬೇಕು? ಅದೆಷ್ಟು ಜನುಮ ಒಪ್ಪಿಗೆಯ ಮೀನಿಗಾಗಿ ಗಾಳ ಹಾಕುತ್ತ ಕುಳಿತ ಬೆಸ್ತನಾಗಲಿ”…?

  ಶ್ಯಾಮಲ

 3. ಅನಿಕೇತನ ಸುನಿಲ್ ಹೇಳುತ್ತಾರೆ:

  Dear Ranjit,
  Its excellent….its my favorite song too……u have written beautifully…..
  Sunil.

 4. ರಂಜಿತ್ ಹೇಳುತ್ತಾರೆ:

  ದಿವ್ಯಾ,

  ಧನ್ಯವಾದಗಳು. ಬಹುಶಃ ನನ್ನ ವೈಯುಕ್ತಿಕ ಅನುಭವ (ದೈಹಿಕ..;-)) ಬರಹಕ್ಕಿಳಿದಿದೆ ಅನ್ನಿಸುತ್ತದೆ..:)

 5. ರಂಜಿತ್ ಹೇಳುತ್ತಾರೆ:

  ಥ್ಯಾಂಕ್ಯೂ ಶ್ಯಾಮಲ ಅವರೇ,

  ನಿಮ್ಮ ಅನಿಸಿಕೆಗಳು ನನಗೆ ಮತ್ತಷ್ಟು ಬರೆಯಲು ಹುರುಪು ನೀಡುವುದು ಸುಳ್ಳಲ್ಲ.

  ಅನಿಕೇತನ ಸುನಿಲ್,

  ಆ ಹಾಡು ನನಗೂ ತುಂಬಾ ಇಷ್ಟ. ಕೇಳಿದಷ್ಟೂ ಖಾಲಿಯಾಗದೇ ಮತ್ತಷ್ಟು ಭಾವಗಳನ್ನು ಹುಟ್ಟುಹಾಕುತ್ತದೆ. ಸಿ. ಅಶ್ವಥ್ ರ ದನಿಯಲ್ಲಿ ಕೇಳುವುದಂತೂ ಅತಿ ಮಧುರ. ಕೇಳಿ ಆದ ನಂತರವೂ ಮನಸ್ಸು ಭಾವಪರವಶ. ನಿಲ್ಲದ ಗುಂಗು.

 6. Gurumurthy ಹೇಳುತ್ತಾರೆ:

  Sooper sir
  saalugala soundaryate sogasaagide
  idondu anubhava lekhanadantide

 7. ಬಾಸಿ ಹೇಳುತ್ತಾರೆ:

  ಇಬ್ಬರೂ ಒಂದೇ ಆಗಿರುವಾಗ ಮರೆಯುವುದು, ತೊರೆಯುವುದು ಹೇಗೆ ಸಾಧ್ಯ
  wah!!
  Abhinandhanegalu …
  Nimma ee baraha nanna sihi kahi nenapugalannu meluku haakisthu kanree…
  Inthaha nooraru saalugaligaagi naanu kaayuve..

 8. ರಂಜಿತ್ ಹೇಳುತ್ತಾರೆ:

  ಗುರುಮೂರ್ತಿ, ಬಾಸಿ

  ನಿಮ್ಮನಿಸಿಕೆಗೆ ಧನ್ಯವಾದಗಳು. ಆದರೆ ಇದು ಅನುಭವ ಲೇಖನ ಅಲ್ಲ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s