ನನ್ನೆಲ್ಲಾ ನೋವುಗಳು ಉತ್ತುಂಗದಲ್ಲಿರುವ ಸಮಯ ಅಂದರೆ ಇದೇನೇ..!

Posted: ಜನವರಿ 23, 2010 in ಲವ್ ಲೆಟರ್

ರಾತ್ರಿ ಮುಗಿದ ನಂತರ ಹಗಲು. ಕತ್ತಲ ನಂತರ ಬೆಳಕು. ಬಾಡಿದ ಹೂವು ಬಿದ್ದು ನೆಲ ಸೇರಿದರೂ ಮರುದಿನ ಬೆಳಿಗ್ಗೆ ಮತ್ತೊಂದು ಮೊಗ್ಗು.

ಇದು ಪ್ರಕೃತಿ ನಿಯಮ.

ನನ್ನೆಲ್ಲಾ ನೋವುಗಳು ಉತ್ತುಂಗದಲ್ಲಿರುವ ಸಮಯ ಅಂದರೆ ಇದೇನೇ. ತಾನು ಕೊಡುವ ಪರಿಣಾಮಕ್ಕಿಂತ ಭೀಕರ ಸ್ಥಿತಿಯಲ್ಲಿರುವವನನ್ನು ಸಾವು ಕೂಡ ಏನು ಮಾಡೀತು ಎಂಬಂಥ ಪರಿಸ್ಥಿತಿ. ಸುನಾಮಿಯ ನಂತರ ದಡಕ್ಕಿನ್ನು ಅಲೆಯ ಭಯವಿಲ್ಲ. ಅಪ್ಪನ ಬೆಲ್ಟಿನ ರುಚಿ ತಿಂದ ಹುಡುಗನಿಗೆ ಮೇಷ್ಟರು ಕೋಲು ಬೆತ್ತ ತೋರಿದರೆ ಹೆದರುತ್ತಾನಾ? ಅಂತೆಯೇ ಬೇರೆ ನೋವುಗಳು ಬಳಿಬರಲೂ ಕೀಳರಿಮೆ ಹೊಂದುವಷ್ಟು ಪೆಟ್ಟು ತಿಂದಿದೆ ಮನಸ್ಸು.

night-waves

ಈಗ ಅದೇ ಪ್ರಕೃತಿ ನಿಯಮದ ಪ್ರಕಾರ ನನ್ನ ಬರುವ ನಾಳೆಗಳು ಚೆನ್ನಾಗಿರುತ್ತದಾ? ಈಗಿನಂತೆ ಹಗಲುಗಳು ದಹಿಸದೇ, ಅರಳುವಂತಾಗುತ್ತದಾ? ನಾನು ಮತ್ತೆ ಕನಸು ಕಾಣುವಂತಾಗುತ್ತೇನಾ? ನನ್ನೊಳು ಜೀವನ ಎಂದಿನಂತೆ ಪ್ರವಹಿಸುತ್ತದಾ? ಅದಕ್ಕೆಲ್ಲಾ ತನಗೇನೂ ಮಾಡಲಾಗದು ; ನಿನ್ನ ಸಹಿಯಿಲ್ಲದೇ ಎಂಬಂತೆ ಮುಗುಮ್ಮಾಗಿದ್ದಾನೆ ದೇವರು. ನಿನ್ನ ಪ್ರೀತಿ, ನನ್ನ ಉಸಿರು ಎರಡೂ ಒಂದಕ್ಕೊಂದು ತಳುಕು ಹಾಕಿಕೊಂಡಿದೆ. ನಿನ್ನ ಹೂಂ ಉಹೂಂ ಗಳ ಮಧ್ಯೆಯೇ ಜೋಕಾಲಿಯಾಡುತಿದೆ ನನ್ನ ಬದುಕು. ಪ್ರೀತಿಯೆಂದರೆ ಭೀಕರ; ಪ್ರೀತಿಯೆಂದರೆ ಸುಂದರ, ಈ ಎರಡು ವ್ಯಾಖ್ಯೆಗಳಿಗೆ ನಿನ್ನುತ್ತರವೇ ರಿಸಲ್ಟು.

ಹೀಗೆ ನಿನಗೆ ಪತ್ರಗಳನ್ನೇಕೆ ಬರೆಯುತ್ತಿದ್ದೇನೆ. ತಲುಪುವ ಗುರಿಯಿಲ್ಲದ ಈ ಪತ್ರಗಳು ನನ್ನ ನೋವುಗಳನ್ನು ಇಂಗಿಸುತ್ತದಾ? ಕದವಿಕ್ಕಿಕೊಂಡಿರುವವರ ಮನೆಬಾಗಿಲು ಬಡಿದು ತನ್ನಿರವನ್ನು ತಿಳಿಸುತ್ತದಾ? ಎಂದೋ ಒಂದು ದಿನ ಇವೇ ನನ್ನ ಪ್ರೀತಿಯನ್ನು ಉಳಿಸುತ್ತದೆ ಎಂಬುದು ನನ್ನ ನಂಬಿಕೆಯಾ?

ನಿಜಕ್ಕೂ ವಿರಹದ ನೋವುಗಳನ್ನು ಬರಹಗಳು ತೊಡೆದುಹಾಕುತ್ತದಾ?

 

(ಜೋಗುಳ ಬ್ಲಾಗಿಗಾಗಿ ಬರೆದಿದ್ದು)

ಟಿಪ್ಪಣಿಗಳು
 1. Gurumurthy ಹೇಳುತ್ತಾರೆ:

  Chennagide baraha
  bhaavanegala milita hadavaagide, hitavaagide

 2. ಶರಶ್ಚಂದ್ರ ಕಲ್ಮನೆ ಹೇಳುತ್ತಾರೆ:

  ಮತ್ತೊಮ್ಮೆ ಭಾವನೆಗಳ ಸಿಂಚನ… ಪದಗಳ ಬಂಧನ… ನೋವು ಕಳೆದ ಮೇಲೆ ಸಂತಸ ಎಂದಿಗೂ… ಎಂದಿನಂತೆ ಆಪ್ತವಾಗಿದೆ ಬರಹ ರಂಜಿತ್, ಜೋಗುಳಕ್ಕಾದರು ಬರೆಯಿರಿ, ನೀಲಿಹೂವಿಗಾದರೂ ಬರೆಯಿರಿ ನಿಮ್ಮ ಶೈಲಿ ತುಂಬಾ ಇಷ್ಟವಾಗುತ್ತದೆ.

 3. Ravikanth Gore ಹೇಳುತ್ತಾರೆ:

  ನಿಮ್ಮ ಬ್ಲಾಗ್ ಚೆನ್ನಾಗಿದೆ.. ನಿನ್ನೆ-ನಾಳಿನ ಬಗ್ಗೆ ಚಿಂತೆ ಯಾಕೆ?? ನಿನ್ನೆ ಅನ್ನೋದು ಸತ್ತು ಹೋಗಿದೆ, ನಾಳೆ ಅನ್ನೋದು ಯಾವತ್ತೂ ಹೊತ್ತೋದಿಲ್ಲ.. ಇಂದು- ಇದೇ ಭವಿಷ್ಯ.. ಮುನ್ನುಗ್ಗಿ…

 4. Uma Bhat ಹೇಳುತ್ತಾರೆ:

  ನಿಮ್ಮ ಬರವಣಿಗೆಯ ಶೈಲಿ ತುಂಬಾ ಖುಶಿ ಕೊಟ್ಟಿತು.

 5. ರಂಜಿತ್ ಹೇಳುತ್ತಾರೆ:

  ಗುರುಮೂರ್ತಿ,

  ನಿಮ್ಮ ಪ್ರೋತ್ಸಾಹಕ್ಕೆ ಅನಂತ ಧನ್ಯವಾದಗಳು.

 6. ರಂಜಿತ್ ಹೇಳುತ್ತಾರೆ:

  ಶರಶ್,

  ನನ್ನ ಶೈಲಿ ಅಂತ ಅಂದಿದ್ದಕ್ಕೆ ಖುಷಿಯಾಯ್ತು. ಎಲ್ಲಿ ಬೇರೆ ಶೈಲಿಗೆ ಒಗ್ಗಿ, ಅಲ್ಲಿಯದ್ದೇ ಆಗಿಬಿಡುತ್ತದೋ ಎಂಬ ಭಯವಿತ್ತು. ಜೋಗುಳಕ್ಕೆ ಬರೆದ ಬರಹಗಳಲ್ಲಿ ಒಂದು ವಿಶಿಷ್ಟತೆ ಇದೆ. ಅದು ಕಡಿಮೆ ಸಮಯಾವಕಾಶದಲ್ಲಿ ಜನ್ಮ ತಳೆದಂತದ್ದು. ಕೆಲವು ಕೇವಲ ಅರ್ಧಘಂಟೆಯಲ್ಲಿ, ವಿಪರೀತ ಕೆಲಸದ ಮಧ್ಯೆ ಮೂಡಿದ್ದು..:)

 7. ರಂಜಿತ್ ಹೇಳುತ್ತಾರೆ:

  ಗೋರೆಯವರೇ,

  ಸ್ವಾಗತ ಬ್ಲಾಗಿಗೆ. ಇದು ಒಂದು ಪ್ರೇಮ ಪತ್ರ. ಅಲ್ಲಿನ ಪಾತ್ರಧಾರಿಗಳಿಗೂ ನನ್ನ ಬದುಕಿಗೂ ಸಂಬಂಧವಿಲ್ಲ. (ನಿಜವಾ?) ಕೊಂಚ ಸಂಬಂಧ ಕಂಡುಬಂದಿದ್ದರೆ ಅದು ಕಾಕತಾಳೀಯ!:)

 8. ರಂಜಿತ್ ಹೇಳುತ್ತಾರೆ:

  ಉಮಾ ಭಟ್,

  ಥ್ಯಾಂಕ್ಸ್.

 9. Roopa ಹೇಳುತ್ತಾರೆ:

  Hey Ranjit, Tumbaa DinagaLaadavu nimma blog visit maaDi. Its too good ri, virahada novannu baraha hecchisuttade antha nanna anisike. aadaru bareyuva moha virahada goja gojalugaLige ondu formation koDutte.
  keep writing sir…, 🙂

 10. ಅರ್ಚನ ಹೇಳುತ್ತಾರೆ:

  ರಂಜಿತ್,
  ಬರಹ ತುಂಬ ಚೆನ್ನಾಗಿದೆ 🙂

 11. Usha Hegde ಹೇಳುತ್ತಾರೆ:

  Barahagalu ishtavaadavu Ranjit. ee bhaavagalu patragalallashte kaadali….badukinalli bisi muttisadirali .

 12. Usha Hegde ಹೇಳುತ್ತಾರೆ:

  Barahagalu ishtavaadavu Ranjit. ee bhaavagalu barahagalallashte kaadali….badukinallendu bisimuttisadirali.

 13. ರಂಜಿತ್ ಹೇಳುತ್ತಾರೆ:

  ರೂಪ,

  ವಿರಹ ಅಂದರೆ ಗೋಜಲು ಗೋಜಲು. ಬರಹವೆಂದರೆ ಅದನ್ನು ಶಿಸ್ತುಗೊಳಿಸುವ ಮಾಸ್ತರು! ನಿಮ್ಮ ವ್ಯಾಖ್ಯಾನ ಸಕ್ಕತ್!

  ಬರಹದ ಮೆಚ್ಚುಗೆಗೆ ನನ್ನ ಎಂದಿನ ನನ್ನಿ.

 14. ರಂಜಿತ್ ಹೇಳುತ್ತಾರೆ:

  ಅರ್ಚನ,

  ನೀಲಿಹೂವಿನ ತೋಟಕ್ಕೆ ಸ್ವಾಗತ.

  ಉಷಾ ಹೆಗ್ಡೆ,

  ಇದು ನನ್ನ ಪರ್ಸನಲ್ ಅನುಭವ ಅಲ್ಲ. ಜೋಗುಳ ಬ್ಲಾಗಿನ ವಾಸುವಿಗಾಗಿ ಹುಟ್ಟಿದ್ದು. ನಿಮ್ಮ ಕಾಳಜಿಗೆ ವಾಸುವಿನ ಪರವಾಗಿ ನನ್ನ ಥ್ಯಾಂಕ್ಸ್..:)

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s