ವಾದ..!

Posted: ಜನವರಿ 28, 2010 in ಕವಿತೆ ತರಹ

ಒಂದೇ ಪದ

ಇಬ್ಬರ ಡಿಕ್ಷನರಿಯೇ ಬೇರೆ.

 

ಪದಾರ್ಥಕ್ಕೆ

ಬೇರೆ ಬೇರೆ ರುಚಿ ಹೇಳುವ ನಾಲಿಗೆಗಳು.

Kinetic_Illusion_4

 

ಅವನು ಹಿಂದಿನವನೆಂದು ತಳ್ಳಿಬಿಟ್ಟೀರಿ,

ಯಾರಿಗ್ಗೊತ್ತು ಅವರು ಹೋಗುವ ಮಾರ್ಗ

ವೃತ್ತವೇ ಇರಬಹುದು.

 

ನಿಮಗೆ ಕಡುಕ್ರೂರವೆನ್ನಿಸಿದನೇ ಆ ಹುಲಿ,

ಅದರ ಪಂಗಡದಲ್ಲಿ ಅದೇ ಹೆಚ್ಚು ಒಳ್ಳೆಯದಂತೆ.

ಆದರೆ ಆರ್ಭಟವೆಷ್ಟಿದ್ದರೂ

ಒಳಗಿನ ತಿರುಳಷ್ಟಕ್ಕಷ್ಟೇ.

 

ಹೌದು, ಇಲ್ಲೀಗ ಬಂದದ್ದು

ಬರೀ ಕಾಲ ಬುಡವ ತಬ್ಬಿ ಹೋಗುವ ಅಲೆಯಾದರೂ

ಏಡಿಯ ಮರಳಗುಹೆಯಲ್ಲಿ ಸುನಾಮಿ ತಂದಿರಬಹುದಲ್ಲವೇ?

ambigfig1.400 pixel width of page

ಸ್ವಲ್ಪ ಅಲ್ಲಿಂದೆದ್ದು ಈ ಕಡೆಯಿಂದ ನೋಡಿ ಸರ್,

ನಿಮ್ಮ ಬಿಂದು ಇಲ್ಲಿ. ಗೆರೆ ಅಲ್ಲಿ.

 

ಅರೆ! ಒಂದೇ ಬಿಂದುವಿದೆಯೆಂದು ಯಾಕೆ ನಿಂತುಬಿಟ್ಟಿರಿ,

ಸ್ವಲ್ಪ ಕಣ್ಣು ಹಾಯಿಸಿದರೆ ಅಲ್ಲೇ ಮುಂದೆ

ಇನ್ನೊಂದು ಬಿಂದು,

ಇನ್ನೂ ಮುಗಿದಿಲ್ಲ ಸರ್.

CatAndMirror

 

ನೀವೆಲ್ಲರೂ ವಾದದ ಗುಂಗಿನಲ್ಲಿ ತಲ್ಲೀನವಾಗಿಯೇ

ಸಿಗರೇಟು ಕೊಳ್ಳಲು ಅಂಗಡಿಗೆ ಹೊರಟು ನಿಂತು

ಅರಿವಿಲ್ಲದೇ ಒಬ್ಬರ ಚಪ್ಪಲು ಇನ್ನೊಬ್ಬರು

ಹಾಕಿಕೊಂಡ ಘಳಿಗೆಯಿದೆಯಲ್ಲ

 

ಬಹುಶಃ ಆಗಲೇ ವಾದ ಪೂರ್ಣವಾದದ್ದು!

Advertisements
ಟಿಪ್ಪಣಿಗಳು
 1. Dr.Gurumurthy Hegde ಹೇಳುತ್ತಾರೆ:

  ಚೆನ್ನ್ನಾಗಿದೆ ,

  ಒಂದು ಆಪ್ತತೆ ಬರಹದಲ್ಲಿದೆ

 2. ಅನಾಮಿಕ ಹೇಳುತ್ತಾರೆ:

  ishta aytu sir…!

 3. ಆನಂದ ಹೇಳುತ್ತಾರೆ:

  ವಾಹ್ ಚೆನ್ನಾಗಿದೆ.

 4. ಚಾಮರಾಜ ಸವಡಿ ಹೇಳುತ್ತಾರೆ:

  <>

  ರಂಜಿತ್‌, ಎಂದಿನಂತೆ ಸಕತ್‌.

  ನಮ್ಮನ್ನು ಮುದಗೊಳಿಸುವ ಎಷ್ಟೋ ಮೆದು ಅಲೆಗಳು, ಇತರರ ಪಾಲಿಗೆ ಸುನಾಮಿಯಾಗಿರಬಹುದಲ್ಲವೆ? ಥೇಟ್‌ ಅವಳ ಮುಗುಳ್ನಗೆಯಂತೆ. ಅದು ಉಂಟು ಮಾಡಿದ ಸುನಾಮಿಯ ಹೊಡೆತ ದೇತರಿಸಿಕೊಳ್ಳಲು ಒಂದು ಜನ್ಮ ಸಾಕಾದೀತೆ? ಕಷ್ಟ.

 5. ರಂಜಿತ್ ಹೇಳುತ್ತಾರೆ:

  ಗುರುಮೂರ್ತಿ, ರವಿಕಾಂತ್ ಗೋರೆ, ಆನಂದ್, ಅನಾನಿಮಸ್ಸು,

  ನಿಮ್ಮ ಅಭಿಪ್ರಾಯಕ್ಕೆ ಥ್ಯಾಂಕ್ಸು.

 6. ರಂಜಿತ್ ಹೇಳುತ್ತಾರೆ:

  ಸವಡಿ ಸರ್,

  ಧನ್ಯವಾದಗಳು.

 7. Anantha ಹೇಳುತ್ತಾರೆ:

  ಹಲೋ ರಂಜಿತ್,

  ಮೊದಲನೆಯದಾಗಿ, ಈ ನನ್ನ ಕಮೆಂಟ್ ತಮ್ಮ ’ವಾದ’ ಕವಿತೆಯ ಕುರಿತು ಅಲ್ಲದಾಗಿರುವುದಕ್ಕಾಗಿ ಕ್ಷಮಿಸಿ.
  ಈ ಮೊದಲು ತಮ್ಮ ’ಸಿನೆಮಾ ಎಂದರೇನು’ ಲೇಖನದ ಕುರಿತಾಗಿ, ನಮ್ಮಿಬ್ಬರ ನಡುವೆ ನಡೆದ ವಿಚಾರ ವಿನಿಮಯದ ಕುರಿತಾಗಿ ಹೊಸತೊಂದು ವಿಷಯ ಹೇಳುವುದಿತ್ತು. ಜೋಗಿಯವರು ಅವರ ಇತ್ತೀಚಿನ ಬ್ಲಾಗ್‍ಪೋಸ್ಟ್‍ನಲ್ಲಿ ನಮ್ಮೊಳಗೇ ನಿರಂತರವಾಗಿ ಬದಲಾಗುತ್ತಿರುವ ನಮ್ಮ ಅಭಿರುಚಿಯ ಬಗ್ಗೆ, ಹಳೆಯ ನೆನಪುಗಳಿಗೆ ಹಾತೊರೆಯುವ ಮನಸ್ಸು ವರ್ತಮಾನದೊಂದಿಗೆ ತಿಕ್ಕಾಟಕ್ಕಿಳಿಯುವುದರ ಬಗ್ಗೆ ಬರೆದಿದ್ದಾರೆ, ಓದಿ ನಿಮ್ಮ ಅಭಿಪ್ರಾಯವನ್ನು ತಿಳಿಸಿ..

 8. Roopa ಹೇಳುತ್ತಾರೆ:

  Ishtavaayithu….
  esp these lines “ನಿಮಗೆ ಕಡುಕ್ರೂರವೆನ್ನಿಸಿದನೇ ಆ ಹುಲಿ, ಅದರ ಪಂಗಡದಲ್ಲಿ ಅದೇ ಹೆಚ್ಚು ಒಳ್ಳೆಯದಂತೆ”….
  🙂

 9. ಅನಾಮಿಕ ಹೇಳುತ್ತಾರೆ:

  Nice one,

 10. ಅನಾಮಿಕ ಹೇಳುತ್ತಾರೆ:

  chennaagide

 11. ರಂಜಿತ್ ಹೇಳುತ್ತಾರೆ:

  ಅನಂತ ಅವರೇ,

  ಜೋಗಿ ಬ್ಲಾಗು ಓದಿದೆ. ಅಲ್ಲಿ ಅವರು ಅನ್ನುತ್ತಿರುವುದು ಕಳೆವ ಕಾಲದ ಜತೆಗೆ ಬದಲಾಗುವ ಅಭಿಪ್ರಾಯ, ಅಭಿರುಚಿಗಳ ಬಗ್ಗೆ.

  ಸಿನೆಮಾ ಎಂದರೇನು ಪೋಸ್ಟಿನಲ್ಲಿ ನಿಮಗೆ ನೀಡಿದ ಉತ್ತರ ನನಗೇ ತೃಪ್ತಿ ಈಯಲಿಲ್ಲ. ಕಾಮೆಂಟನ್ನು ಪೋಸ್ಟು ಮಾಡುವ ಗಡಿಬಿಡಿಯಲ್ಲಿ ಕೆಲ ಸಾಲುಗಳು ಮಿಸ್ ಆದುದೇ ಅದಕ್ಕೆ ಕಾರಣ.

  ಅಲ್ಲಿ ನಾನು ಅಂದಿದ್ದು – ಕೆಲಸ ಮಾಡುತ್ತಾ, ಅದರೊಳಗಿನ ತೊಡಗಿಸಿಕೊಳ್ಳುವಿಕೆಯೆಂಬುದು ಯಾವ ಪರಿಯಾಗಿರುತ್ತದೆಂದರೆ ನಮ್ಮ ಕೆಲಸದ ಪ್ರಾಡಕ್ಟ್ ಸರಿಯಾಗಿದೆಯಾ ಇಲ್ಲವಾ ಅನ್ನುವುದರ ರುಚಿ ಕಳದುಕೊಳ್ಳುವ ಬಗ್ಗೆ . ಇದಕ್ಕೆ ನನ್ನದೇ ಒಂದು ಉದಾಹರಣೆ ನೀಡುತ್ತೇನೆ. ಓದುತ್ತಿದ್ದಾಗ ರಜೆ ದಿನಗಳಲ್ಲಿ ಮದುವೆಗೆ ಅಡುಗೆ ಕೆಲಸಕ್ಕೆ ಹೋಗುತ್ತಿದ್ದೆವು. ಹೋಗುವ ಮೊದಲು ಬಹಳಷ್ಟು ಉಮೇದು ಇರುತ್ತಿತ್ತು. ಅಹಾ! ಚೆನ್ನಾಗಿ ಪಾಯಸ ಸವಿಯಬಹುದು, ಹೋಳಿಗೆಗಂತೂ ತುಪ್ಪದ ಜತೆ ಸ್ನಾನ ಮಾಡಿಸಿಯೇ ಹೊಡೆಯಬೇಕು ಅಂತೆಲ್ಲಾ ವಿಧವಿಧವಾಗಿ ಅಂದುಕೊಳ್ಳುತ್ತಾ ಹೊರಡುತ್ತಿದ್ದೆವು. ಆದರೆ ಬಡಿಸಿ ಬಡಿಸಿ ಆ ಪಾಯಸದ ಮೇಲಿನ ಆಸೆಯೆಲ್ಲಾ ಕರಗುತ್ತಿತ್ತು. ಕೆಲಸ ಮುಗಿದ ಮೇಲೆ ಉಣ್ಣಲು ಕೂರುವಾಗ ಬರೀ ಅನ್ನ-ಸಾರು ತಿಂದು ಏಳುತ್ತಿದ್ದೆವು.

  ಈ ಉದಾಹರಣೆಯನ್ನು ಸಿನೆಮಾಗೆ ಸಮೀಕರಿಸಿ ಲೇಖನವೊಂದನ್ನು ಹಾಕುವೆ. ಇತ್ತೀಚೆಗೆ ರಾಂ ಗೋಪಾಲ್ ವರ್ಮಾ ಕೂಡ ಇದರ ಕುರಿತು ಚರ್ಚಿಸಿದ್ದನ್ನು ಓದಿದ ನೆನಪು. ( ಬರೆಯಲು ನನಗೆ ಆಲಸ್ಯವಾದರೆ ಆರ್ ಜಿ ವಿ ಬರಹದ ಅನುವಾದವಾದರೂ ಹಾಕುವೆ ) ಬಹುಶಃ ಆಗ ನಾನು ನನ್ನ ವಾದವನ್ನು ಒಂದು ಸರಿಯಾದ ನೆಲೆಗಟ್ಟಿನಲ್ಲಿ ವಿವರಿಸಬಲ್ಲೆ ಅನಿಸುತ್ತದೆ.

 12. ರಂಜಿತ್ ಹೇಳುತ್ತಾರೆ:

  ರೂಪಾ,

  ಎಲ್ಲಾ ವಿಚಾರವೂ ಅಷ್ಟೇ, ಬೇರೆ ಕೋನದಿಂದ ನೋಡಿದರೆ ಕಾಣುವ ನೋಟವೇ ಬೇರೆ. ಥ್ಯಾಂಕ್ಸು ನಿಮ್ಮ ಅನಿಸಿಕೆಗೆ.

 13. ರಂಜಿತ್ ಹೇಳುತ್ತಾರೆ:

  ಅನಾನಿಮಸ್ಸು,

  ನಿಮ್ಮ ಸುಂದರ ಹೆಸರು ತಿಳಿಸಿದ್ದರೆ ಚೆನ್ನಿತ್ತು.

 14. ISHWARA BHAT K ಹೇಳುತ್ತಾರೆ:

  Chennagide…

  enanno yochisuvante maduttade 🙂

  Happy Yugadi :

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s