"ಐ ಮಿಸ್ ಯೂ"
"ನೀನಿಲ್ಲದೇ ಬದುಕಿರೋಕೆ ಸಾಧ್ಯ ಇಲ್ಲ"
"ನೀ ಬಳಿಯಿರದ ನಿಮಿಷಗಳೆಲ್ಲ ವರುಷಗಳು"
ಇಂಥದ್ದೆಲ್ಲಾ ಸಾಲುಗಳನ್ನು ಸುಮ್ಮನೆ ಹರವಿಕೊಂಡು ಕುಳಿತಿದ್ದೇನೆ. ನನ್ನೆದೆಯ ನೋವಿಗೆ ಅದ್ಯಾವುದೂ ಸರಿಯಾದ ಪದವೆಂದು ಅನ್ನಿಸುತ್ತಿಲ್ಲ. ಚಲನಚಿತ್ರಗಳಲ್ಲಿ ಡೈಲಾಗ್ ಆಗಿ, ಆಕೆಯನ್ನು ಸುಮ್ಮನೆ ಮೆಚ್ಚಿಸಬೇಕೆಂದು ಎಸ್ಸೆಮ್ಮೆಸ್ಸುಗಳಲ್ಲಿ ಕೇವಲ ಬೆರಳುಗಳ ಕ್ರಿಯೆಗಾಗಿಯೇ ಆ ಪದಗಳು ಬಳಸಲ್ಪಟ್ಟಿರುವಾಗ, ವಿರಹದಿಂದ ವಿಲಪಿಸುತ್ತಿರುವ, ನಿನ್ನ ಒಂದು ಭೇಟಿಗಾಗಿ ಪರಿತಪಿಸುತ್ತಿರುವ ಎದೆಯ ಭಾವಕ್ಕೆ ಅದೇ ಪದಗಳನ್ನು ಹೇಗೆ ಬಳಸಲಿ ಹೇಳು? ಯಾವುದಕ್ಕೂ ಎದೆಯ ಬೇಗೆಯನ್ನು ಶಮನ ಮಾಡಲು ತಾಕತ್ತಿಲ್ಲ.
ಇಲ್ಲಿ ಈ ದೂರದೂರಿನಲಿ ನನ್ನ ಪಾಡನ್ನು ಬೇರೆ ಹೇಗೆ ತಿಳಿಸಲಿ ನಿನಗೆ? ನಿನ್ನದೇ ಊರಲ್ಲಿದ್ದಿದ್ದರೆ ಆಕಾಶದಲಿ ಮಲ್ಲಿಗೆಯಂತರಳಿದ ನಕ್ಷತ್ರವೊಂದು ಕಣ್ಣು ಮಿಟುಕಿಸಿ ನೋಡುತಿರುವಾಗ ಅದೇ ಕ್ಷಣ ನೀನೂ ಅದೇ ನಕ್ಷತ್ರವನ್ನೇ ನೋಡುತ್ತಿದ್ದಿರಬಹುದಾ ? ನಮ್ಮಿಬ್ಬರ ವಿರಹವನ್ನು, ಪಡುತಿರುವ ಪಾಡನ್ನು ಕಂಡೇ ಅದು
ಪಿಳಿಪಿಳಿಸುತ್ತಿರುವುದಾ ಅಂತೆಲ್ಲಾ ಅಂದುಕೊಳ್ಳಬಹುದಿತ್ತು.
ವಿಪರ್ಯಾಸ ನೋಡು; ಈಗ ನಾನಿಲ್ಲಿ ಕತ್ತಲೆಯಲಿ; ನಿನಗಲ್ಲಿ ಬೆಳಕು! ಒಂಟಿಸೂರ್ಯನೊಬ್ಬ ಹಗಲ ಕ್ಷಣಗಳನ್ನು ಹೇರಿಹೋದ ನೋವಲ್ಲಿ ಒದ್ದಾಡಿದಕ್ಕಾಗಿ ನನಗಿಲ್ಲಿ ಸಾವಿರ ಸಾವಿರ ನಕ್ಷತ್ರಗಳ ಸಮಾಧಾನ. ಕಲೆಗೊಂಡ ಮೊಗದಲ್ಲೂ ಚಂದಿರನ ಸಾಂತ್ವನ ನೀಡುವ ನಗು. ಈ ದಿವ್ಯ ಮೌನದ ರಾತ್ರಿ, ಬೆಳದಿಂಗಳು, ಚುಕ್ಕಿಗಳು ಎಲ್ಲಾ ಒಟ್ಟಾಗಿ ಒಳಹರಿವಿನಲ್ಲಿ, ದೇವಕಿ ನಿನ್ನವಳೇ ಅಂತ ನನಗೆ ಸಮಾಧಾನ ನೀಡದೇ ಹೋಗಿದ್ದರೆ ರಾತ್ರಿಗಳು ಉರುಳುವುದಾದರೂ ಹೇಗಿತ್ತು?
ನಾನು ಉಳಿಯುವುದಾದರೂ ಹೇಗಾಗುತ್ತಿತ್ತು?!
Ranjith,
It’s awesome composition of words, and excellent stream of feelings. Super sir.
ತುಂಬಾ ಚೆನ್ನಾಗಿದೆ ಶಬ್ದಗಳ ಪ್ರಯೋಗ
ಓದೋಕೆ ಹಿತವಾಗಿದೆ
‘ರಂಜಿತ್ ‘ ಅವರೇ..,
ಹೌದು.. ಪದಗಳ ಪ್ರಯೋಗ ಅದ್ಭುತವೇ ಸರಿ..
ನನ್ನ ‘ಮನಸಿನಮನೆ’ಗೆ…:http//manasinamane.blogspot.com
ರಾಜೇಶ್.
ಧನ್ಯವಾದಗಳು. ಮುಂದಿನ ಬರಹಗಳಿಗೆ ನಿಮ್ಮ ಮಾತು ಸ್ಪೂರ್ತಿಯ ಸೆಲೆಯಾದೀತು.
ಗುರುಮೂರ್ತಿ ಹಾಗೂ ಗುರು-ದೆಸೆ,
ಧನ್ಯವಾದಗಳು.