ನನ್ನ ದೋಚಿದ ಮೋಡ..!

Posted: ಫೆಬ್ರವರಿ 14, 2010 in ಹನಿಗಳು...

ಇನ್ನು ಮುಂದೆ ಎಂಥ ದುಃಖಕ್ಕೂ
ಅಳಲಾರೆ ಅಂತ
ಖಡಾಖಂಡಿತವಾಗಿ ಅಂದುಕೊಳ್ಳುತ್ತಿದ್ದಾಗ
ಅದೆಷ್ಟೋ ಹೊತ್ತಿನಿಂದ
ಕಾಯುತ್ತಿದ್ದಂತೆ
ಮೋಡಗಳು ನನ್ನ ದೋಚಿದವು!

15_78_19---Storm-Clouds_web

*****

ನಿನ್ನ ನೋಟವೊಂದಕ್ಕೇ
ಈ ಪರಿಯ ಅಮಲು
ಅನುಮಾನವೇ ಇಲ್ಲವೆನಗೆ
ಇದನು ಪ್ರೀತಿಯೆನಲು..!

****

wall-clock-with-pendulum

ನಿನ್ನ ನಿರೀಕ್ಷೆಯಲಿ
ಕೆಲವೊಮ್ಮೆ ಕಾಲವನ್ನು
ಪೆಂಡ್ಯುಲಮ್ ಗೆ ನೇಣುಹಾಕಿ
ಅದು ಒದ್ದಾಡುವುದನ್ನು
ಸುಮ್ಮನೆ
ನೋಡುತ್ತಿರುತ್ತೇನೆ.

***

ಎಷ್ಟೋ ಕಷ್ಟ ಪಟ್ಟ
ಬಳಿಕ ಒಬ್ಬ ಚಂದಿರನ ಮೇಲೆ ಕಾಲಿಟ್ಟ
ಘಳಿಗೆಯಲ್ಲಿ ಜನರೆಲ್ಲಾ
ಸಂಭ್ರಮಿಸುತ್ತಾರೆ,
ಜತೆಯಲ್ಲಿದ್ದಾಗ ನಾವಿಬ್ಬರೂ
ನಕ್ಷತ್ರಲೋಕದಲ್ಲಿ ವಿಹರಿಸುವುದು
ಯಾರಿಗೂ ತಿಳಿದಿಲ್ಲ ಅನಿಸುತ್ತದೆ!

***

ಈ ಹನಿಗಳು ಇಂದು (೧೪ ಫೆಬ್ರವರಿ ೨೦೧೦) ವಿ.ಕ. ದ ಲವಲವಿಕೆಯಲ್ಲಿ ಪ್ರಕಟ ಆಗಿದೆ.

ವಿ.ಟಿ. (ವಿಶೇಷ ಟಿಪ್ಪಣಿ) : ನಾನು ವೆಸ್ಟ್ ಇಂಡೀಸ್ ನಲ್ಲಿಲ್ಲ, ವೆಸ್ಟ್ ಇಂಡೀಸ್ ನವನಲ್ಲ!..:)

Advertisements
ಟಿಪ್ಪಣಿಗಳು
 1. manasu ಹೇಳುತ್ತಾರೆ:

  nice, premigaLa dinakke chutuku present maadiddeera..hahaha

 2. P Kalyan ಹೇಳುತ್ತಾರೆ:

  “ಪೆಂಡ್ಯುಲಮ್ ಗೆ ನೇಣುಹಾಕಿ ಅದು ಒದ್ದಾಡುವುದನ್ನು…” ವಾಹ್! ತುಂಬಾ ಚೆನ್ನಾಗಿದೆ.
  ರಿಚರ್ಡ್ಸ್ ಹೊಡೆದ ವೆಸ್ಟ್ ಇಂಡೀಸ್ ಸಿಕ್ಸರ್, ಬೌಂಡರಿ ದಾಟಿ ನಿಮ್ಮ ಅಂಗಳದಲ್ಲಿ ಬಿದಿದ್ದೆ ಅನ್ಸತ್ತೆ! 🙂

 3. Gurumurthy ಹೇಳುತ್ತಾರೆ:

  chennagi barediddiraa
  premigala dinakke olleya maatugalu

 4. roopa ಹೇಳುತ್ತಾರೆ:

  hi Ranjith,
  as I wrote to you, tumbaa tumbaa chennaagive nimma hanigaLu…

 5. Reshma ಹೇಳುತ್ತಾರೆ:

  Wow.. muddada saalugalu kanri 🙂

 6. ವಿಜಯರಾಜ್ ಕನ್ನಂತ ಹೇಳುತ್ತಾರೆ:

  nodide vk yalli.. nice ones… ade naanoo andkota idde neevyaavaga west idies ge hodri anta 🙂

 7. ರಂಜಿತ್ ಹೇಳುತ್ತಾರೆ:

  ಮನಸು,

  ಥ್ಯಾಂಕ್ಸು. ಪ್ರೇಮಿಗಳ ದಿನಕ್ಕಾಗೇ ಬರೆದು ಪ್ರೆಸೆಂಟ್ ಮಾಡಿದ್ದು ನಿಜ. ಆದರೆ ಪ್ರೆಸೆಂಟ್ ಮಾಡಿದ್ದು, ವಿಜಯಕರ್ನಾಟಕಕ್ಕೆ..;)

 8. ರಂಜಿತ್ ಹೇಳುತ್ತಾರೆ:

  ಕಲ್ಯಾಣ್,

  ಆದ್ರೂ ವಿಶ್ವನಾಥ್ ವಿಶ್ವಾನಾಥೇ, ರಿಚರ್ಡ್ಸ್ ರಿಚರ್ಡ್ಸೇ!:) ಹನಿ ಮೆಚ್ಚಿದ್ದಕ್ಕೆ ಧನ್ಯವಾದಗಳು.

 9. ರಂಜಿತ್ ಹೇಳುತ್ತಾರೆ:

  ರೂಪಾ, ರೇಶ್ಮಾ, ಗುರುಮೂರ್ತಿ,

  ಧನ್ಯವಾದಗಳು ಕಣ್ರೀ.. ಖುಶಿಯಾಯ್ತು ನೀವು ಮೆಚ್ಚಿಕೊಂಡಿದ್ದು.

 10. ರಂಜಿತ್ ಹೇಳುತ್ತಾರೆ:

  ವಿಜಯ್ರಾಜ್ ಜಿ,

  ಅದೇ ನಂಗೂ ಅಚ್ಚರಿಯಾಯ್ತು ಮೊದಲು. ಅಲ್ಲದೇ ನನ್ನ ಫೋಟೋ ಕಳ್ಸಿ ಅದನ್ನು ನೋಡಿ ಅವರು ಹಾಗೆ ಹಾಕಿದ್ರೆ ಅರಗಿಸಿಕೊಳ್ಳಬಹುದಿತ್ತು..;-)

 11. ಗುರು-ದೆಸೆ !! ಹೇಳುತ್ತಾರೆ:

  Neelihoovu’ avre.,

  ‘ಮಸ್ತ್’..! ಕಣ್ರೀ..! ಏನ್ ವರ್ಣನೆರೀ!

  Blog is Updated:http://manasinamane.blogspot.com

 12. ರಂಜಿತ್ ಹೇಳುತ್ತಾರೆ:

  ಗುರು-ದೆಸೆ,

  ಥ್ಯಾಂಕ್ಸ್. ಅಟ್ಲೀಸ್ಟ್ ನನಗೆ ಖುಷಿಕೊಡುವ ಕವಿತೆ ಹುಟ್ಟುವುದು ನನ್ನ ಶುಕ್ರದೆಸೆ ಅನ್ನಬಹುದು.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s