ಚಂದ್ರನ ದೂರು!

Posted: ಫೆಬ್ರವರಿ 19, 2010 in ಕವಿತೆ

ಮೊನ್ನೆ ಆಗಸ ಬಂದು
ಹಾಗೆ ದೂರಿತ್ತಾಗ ಪಕಪಕನೆ ನಕ್ಕಿದ್ದೆ
ಅಲ್ಲಾ, ರಂಗೋಲಿ ಹುಡಿ ಖಾಲಿಯಾಯ್ತು ಅಂತ
ಹದಿನಾರರ ಪುಟ್ಟ ಪೋರಿಯೊಬ್ಬಳು
ಬೆಳ್ಳಂಬೆಳಿಗ್ಗೆ ಬ್ರಾಹ್ಮಿಯಲ್ಲಿ
ನಕ್ಷತ್ರ ಕದಿಯುವುದು ಎಂದರೇನು?!

moon moonlight bird

ಚಂದ್ರನೂ ನಿಮ್ಮ ಏರಿಯಾದಲ್ಲಿ ಸುಳಿಯಲು
ಅಂಜಿ ಅವನ ದೂರೂ ನನ್ನೊಳಗೆ
ದಾಖಲಾಯಿತು.

 

ಆದರೆ ಇದೆಲ್ಲಾ
ನನಗೆ ಪಕ್ಕಾ ನಿಜ ಅನ್ನಿಸಿದ್ದು
ನಿನ್ನೆ ಸಂಜೆ ನಿಮ್ಮ ಗಲ್ಲಿಯಲ್ಲಿ ಸುಮ್ಮನೆ
ಸುತ್ತುತ್ತಿದ್ದಾಗ
ಒಂದಿಬ್ಬರು ಹುಡುಗಿಯರು ಚಂದ್ರನ ಚೂರನ್ನು
ಕಣ್ಣೊಳಗಿಟ್ಟುಕೊಂಡು,
ಬಿದಿಗೆ, ತದಿಗೆಯನ್ನು ಉಗುರತುದಿಯಲ್ಲಿ ನೆಟ್ಟುಕೊಂಡು
ತಿರುಗುತ್ತಿದ್ದುದನ್ನು ಕಂಡಾಗಲೇ!

138555008_28a019c314

ಟಿಪ್ಪಣಿಗಳು
 1. Nitheesh Shetty ಹೇಳುತ್ತಾರೆ:

  hiii ranjit..kavite tumba chennagide….profile background halede chennagittu…actually nimma ondu salina kate nd sakattu saalu tumba chennagide….thamma email id gittagilla…..ooru kudlana??

 2. ಶರಶ್ಚಂದ್ರ ಕಲ್ಮನೆ ಹೇಳುತ್ತಾರೆ:

  ಸೂಪರ್ ಕವನ ರಂಜಿತ್ ಸರ್ 🙂

 3. ದಿವ್ಯಾ ಹೇಳುತ್ತಾರೆ:

  ಚೆಂದಾಗೈತೆ 🙂

 4. ವಿಜಯರಾಜ್ ಕನ್ನಂತ ಹೇಳುತ್ತಾರೆ:

  nice one adigare…

 5. sugunamahesh ಹೇಳುತ್ತಾರೆ:

  tumba chennagide, nimma blogna badalavaNegaLu tumbaaaaane chennagide.

 6. shivu.k ಹೇಳುತ್ತಾರೆ:

  ರಂಜಿತ್ ಸರ್,

  ಎಂಥ ಅದ್ಬುತ ಕಲ್ಪನೆ! ಚಂದ್ರನ ಚೂರನ್ನು ಕಣ್ಣೊಳಗೆ ಬಿದಿಗೆ,ತದಿಗೆಗಳನ್ನು ಉಗುರ ತುದಿಯಲ್ಲಿ ಇಟ್ಟುಕೊಂಡು ಅಂತ ಕಲ್ಪಿಸಿಕೊಂಡಾಗ ಒಂದು ಕ್ಷಣ ನಿಮ್ಮ ಕಲ್ಪನೆ ಥ್ರಿಲ್ ಅನ್ನಿಸಿತು. ಇನ್ನೂ ಯಾವಯಾವ ಅಂಗಗಳಲ್ಲಿ ಹೋಲಿಕೆಗಳೀವೆಯೋ?
  ಸೂಪರ್..

 7. Gurumurthy ಹೇಳುತ್ತಾರೆ:

  ಸೂಪರ್
  ಕವನದ ಸಾಲುಗಳಿಗೆ ಫೋಟೋ ಸೇರಿಸಿದ್ದರಿಂದ
  ಪ್ರಭಾವ ಇನ್ನು ಹೆಚ್ಚಾಗಿದೆ

 8. ರಂಜಿತ್ ಹೇಳುತ್ತಾರೆ:

  ನಿತೀಶ್,

  ಥ್ಯಾಂಕ್ಯೂ. ಪ್ರೊಫಾಯಿಲ್ ಚೆನ್ನಾಗಿಲ್ಲ ಅಂತ ಗೆಳೆಯನೊಬ್ಬ ಅಂದಿದ್ದರಿಂದ ಬದಲಾಯಿಸಿದೆ ಅಷ್ಟೇ. ಒಂದು ಸಾಲಿನ ಕತೆಗಳು ಟ್ವೆಂಟಿ-ಟ್ವೆಂಟಿ ಕ್ರಿಕೆಟ್ ಇದ್ದ ಹಾಗೆ. ಒಬ್ಬ ನಿಜವಾದ ಆಟಗಾರನಿಗೆ ಟೆಸ್ಟ್ ಆಟ ಹೇಗೆ ಪ್ರಿಯವೋ ಹಾಗೇನೆ ನನಗೆ ಉದ್ದದ ಕತೆಗಳು ಇಷ್ಟ, ಅದು ಬರಹಗಾರರಿಗೆ ಸತ್ವಪರೀಕ್ಷೆ ಇದ್ದಂತೆ ಆದ್ದರಿಂದ.

  ನನ್ನೂರು ಕುಡ್ಲ ಅಲ್ಲ, ಅಲ್ಲೇ ಪಕ್ಕ. ನಿಮಗೆ ಮೈಲ್ ಮಾಡಿರುವೆ.

 9. ರಂಜಿತ್ ಹೇಳುತ್ತಾರೆ:

  ಶರಶ್, ದಿವ್ಯಾ, ವಿಜಯ್ರಾಜ್ ಜಿ, ಗುರುಮೂರ್ತಿ,

  ಧನ್ಯವಾದಗಳು

 10. ರಂಜಿತ್ ಹೇಳುತ್ತಾರೆ:

  ಸುಗುಣ ಮಹೇಶ್,

  ಥ್ಯಾಂಕ್ಸ್.

  ಶಿವು ಸರ್,

  ಎಲ್ಲಾ ಕವಿತೆಯ ಮಹಿಮೆ. ಥ್ಯಾಂಕ್ಸ್.

 11. supreeth ಹೇಳುತ್ತಾರೆ:

  ಕವನ ಸಕತ್ತಾಗಿದೆ ಸಾರ್.
  ರಂಗೋಲಿ ಖಾಲಿಯಾಗಿದ್ದಕ್ಕೆ ನಕ್ಷತ್ರ ಕದ್ದ ಕನ್ನೆಯ ಕೈಹಿಡಿಯೋದಕ್ಕೆ ಜೇಬು ಖಾಲಿಯಾಗಿದ್ದಕ್ಕೆ ನಕ್ಷತ್ರಗಳನ್ನೇ ಎಟಿಎಂನಿಂದ ಡ್ರಾ ಮಾಡುವ ಹುಡುಗ ಬೇಕೇನೋ!

 12. shreenidhids ಹೇಳುತ್ತಾರೆ:

  lovely! liked it very much.

 13. ರಂಜಿತ್ ಹೇಳುತ್ತಾರೆ:

  ಸುಪ್ರೀತ್,

  ಥ್ಯಾಂಕ್ಸ್.

  ಹೀಗೆ ನಕ್ಷತ್ರಗಳು ಖಾಲಿಯಾದರೆ, ನಡುರಾತ್ರಿ ಕಿಟಕಿಯಾಚೆ ಚಂದಿರನನ್ನು ಕದ್ದು ನೋಡುವ ಹುಡುಗಿಯ ಚೆಲುವನ್ನು ಕಂಡು ಅಚ್ಚರಿಯಿಂದ ಯಾರು ಕಣ್ಣು ಮಿಟುಕಿಸಬೇಕು ಸರ್?:)

  ಶ್ರೀನಿಧಿ,

  ನೀಲಿಹೂವಿಗೆ ಸ್ವಾಗತ, ಥ್ಯಾಂಕ್ಸ್.

 14. ISHWARA BHAT K ಹೇಳುತ್ತಾರೆ:

  kavana chennagide

  kelavu kavana huttuttade sahaja charmadante
  kelavondu bareyabekaguttade hakuva angiyante

  Happy yugadi 🙂

 15. ರಂಜಿತ್ ಹೇಳುತ್ತಾರೆ:

  ನಿಜ ಈಶ್ವರ್ ರವರೇ,

  ಕೆಲಕವಿತೆಗಳಲಿ ಭಾವ ಬರವು
  ಇನ್ನು ಕೆಲವು ಕವಿತೆಗಳಲಿ ಅರ್ಥ ಸಹಜ ನದಿ ಹರಿವು..

  ನಿಮ್ಮ ಅನಿಸಿಕೆಗೆ ಧನ್ಯವಾದಗಳು.

 16. konkurrencer ಹೇಳುತ್ತಾರೆ:

  I think your a member of digitalpoint, right? Well I saw your link in a signature anyway.

 17. venkatakrishna.k.k. ಹೇಳುತ್ತಾರೆ:

  ಮುದ್ದಾದ ಕವನ.

  ಚೆನ್ನಾಗಿದೆ.

 18. sukhesh ಹೇಳುತ್ತಾರೆ:

  ಯಾವ ಗಲ್ಲಿಗೆ ಹೋಗಿದ್ರಿ ಅಡ್ರೆಸ್ ಕೊಡ್ತೀರ ಸರ್ 🙂
  ಬಾಳಾ ದಿನಗಳಾದ ನಂತರ ಒಂದು ಒಳ್ಳೆ ಕವನ ಓದಿದೆ. ತುಂಬಾ ಥ್ಯಾಂಕ್ಸ್.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s