ಈ ಕಾಲಕ್ಕೆ ಧೊಪ್ಪನೆ ಬಿದ್ದೆ !

Posted: ಮಾರ್ಚ್ 5, 2010 in ಸಿಂಗಪೂರ್ ಸಂಗತಿಗಳು

“ನಮ್ಮ ಕಾಲದಲ್ಲಿ ಮಸಾಲೆ ದೋಸೆಗೆ ೨ ರೂ., ಒಂದು ಕಾಫಿ ಗೆ ೧ ರೂ., ಊಟಕ್ಕೆ ೪ ರಿಂದ ಐದು, ಅದೂ ಏನು ಪುಷ್ಕಳ ಭೋಜನ. ೫೦ ಪೈಸೆ ಕೂಡ ದೊಡ್ಡ ಅಮೌಂಟು. ಈಗಿನ ಕಾಲವೋ ಎಲ್ಲಾ ಭಾರೀ ದುಬಾರಿ. ೫೦ ಪೈಸೆ ಹಾಕಿದ್ರೆ ಭಿಕ್ಷುಕನೂ ದುರುಗುಟ್ಟುತ್ತಾನೆ.”

ಇದು ನಮ್ಮ ಹಿರಿಯರು ಪದೇ ಪದೇ ಅನ್ನುತ್ತಿದ್ದ ಮಾತು.

ಈಗ ನಾನು ಇಲ್ಲಿಗೆ ಬಂದ ಮೇಲೆ ಇಲ್ಲಿನ ಭಾರತೀಯ ಹೋಟೆಲ್ ಗಳಲ್ಲಿ ಮೆನು ಕಾರ್ಡ್ ನೋಡಿದಾಗ ಪುನಃ ಅವರು ಅನ್ನುತ್ತಿದ್ದ ಆ ಕಾಲಕ್ಕೆ ಭೇಟಿ ಇಡುತ್ತಿದ್ದೀನಾ ಅನ್ನಿಸಿಬಿಟ್ಟಿತು. ಮೆನು ತೆಗೆದಾಕ್ಷಣ ಅದೇ, ಮಸಾಲೆ ದೋಸೆ ೨.೫, ಕಾಫಿ ೧, ರವೆ ದೋಸೆ ೨. ತುಂಬಾ ಖುಷಿಯಾಯಿತು. ಕಡಿಮೆದರ ಅನ್ನುವುದಕ್ಕೋ ಏನೋ, ಹಸಿವೂ ಹೆಚ್ಚಾಯಿತು. ಆ ದೇವರು ಅದೆಂಥಾ ಇಕಾನಾಮಿಕ್ ಉಟೋಪಿಯಾಗೆ ನನ್ನ ಕಳಿಸಿದನಲ್ಲಾ ಅಂತ ದೇವರ ಮೇಲೆ ಇಲ್ಲಸಲ್ಲದಷ್ಟು ಪ್ರೀತಿ ಬಂದು ಬಿಟ್ಟಿತು.

04032010662

ಆದರೆ ಅದು ಅರೆ ಕ್ಷಣ ಮಾತ್ರ.

ಮೆನುವಿನ ದರಗಳು ಡಾಲರ್ಸ್ ನಲ್ಲಿ ಅನ್ನುವುದು ನಂತರ ಪಕ್ಕನೆ ನೆನಪಾಯ್ತು.

ಆ ಕಾಲದಿಂದ ಈ ಕಾಲಕ್ಕೆ ಧೊಪ್ಪನೆ ಬಿದ್ದಂತನ್ನಿಸಿತು!

Advertisements
ಟಿಪ್ಪಣಿಗಳು
  1. paraanjape ಹೇಳುತ್ತಾರೆ:

    ಚೆನ್ನಾಗಿದೆ

  2. shivu.k ಹೇಳುತ್ತಾರೆ:

    ರಂಜಿತ್ ಸರ್,

    ಇಲ್ಲೂ ಆ ಕಾಲ ಬರಬಹುದು…ಅಲ್ವಾ…

  3. ವಿಜಯರಾಜ್ ಕನ್ನಂತ ಹೇಳುತ್ತಾರೆ:

    🙂

  4. ರಂಜಿತ್ ಹೇಳುತ್ತಾರೆ:

    ರಾಜ್, ವೆಂಕಟಕೃಷ್ಣ

    ಬ್ಲಾಗಿಗೆ ಸ್ವಾಗತ. ನಿಮಗಿಷ್ಟವಾಗಿದ್ದು ಖುಷಿಯಾಯ್ತು.

  5. ರಂಜಿತ್ ಹೇಳುತ್ತಾರೆ:

    ಪರಾಂಜಪೆ, ವಿಜಯ್ರಾಜ್

    :), ಥ್ಯಾಂಕ್ಸ್

  6. ರಂಜಿತ್ ಹೇಳುತ್ತಾರೆ:

    ಶಿವು ಸರ್,

    ಕಳೆದುಹೋದ್ದು ಮತ್ತೆ ಬಾರದು. ನಮ್ಮ ಮೊಮ್ಮಕ್ಕಳಿಗೆ “ನಮ್ಮ ಕಾಲದಲ್ಲಿ ಮಸಾಲೆದೋಸೆಗೆ ಹದಿನೈದೇ ರೂಪಾಯಿ!” ಅಂದರೆ ಅಚ್ಚರಿ ಬರುವ ಕಾಲ ಬರಬಹುದು..:)

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s