ಪ್ರೀತಿಯಲ್ಲಿ ಇರೋ ದುಃಖ ಗೊತ್ತೇ ಇರಲಿಲ್ಲ !

Posted: ಮಾರ್ಚ್ 9, 2010 in ಲವ್ ಲೆಟರ್

man_w_bottle

 

ಪ್ರೀತಿಯ ಪಾರೂ,

ಇದು ನಿನ್ನ (ದೇವ)ದಾಸನ ಪತ್ರ. ಅದೇ ಡಿ"ವೈನ್" ಬಾರ್ ನಲ್ಲಿ ಖಾಯಂ ಆಗಿ ಪ್ರತೀ ದಿನ, ಎದೆಯೊಳಗೆ ಉರಿವ ಸಂಜೆಗಳಿಗೆ ತಂಪೆರೆವ ಪ್ರಯತ್ನದಲ್ಲಿ ಹಾಟ್ ಡ್ರಿಂಕ್ಸ್ ನ್ನು ಹೊಟ್ಟೆಗೆ ಸುರಿಯುವವ. ಸೂರ್ಯಾನೇ ಸಮುದ್ರದಾಗೆ ಮತ್ತಿನಲ್ಲಿ ಇಳಿಯುವಾಗ, ಬಾರಲ್ಲಿ ಬಾಟಲುಗಳ ಮಧ್ಯೆ ಮುಳುಗುವವ. ಬಾಟಲಿನ ಜತೆಗೆ ಉಪ್ಪಿನಕಾಯಿ ಇಡುವ ಹುಡುಗನ ಬಳಿ "ನನ್ನ ಪಾರು ನಂಗೆ ಸಿಗ್ತಾಳಲ್ವಾ?" ಅಂತ ಸುಮ್ಮಸುಮ್ಮನೆ ಕೇಳುವವ. ಅವನೋ, ಆ ಪ್ರಶ್ನೆ ಬಂದೊಡನೆ ತಾನೇ ಸಾಕ್ಷಾತ್ ಹಣೆಬರಹ ಬರೆವ ಪರಬ್ರಹ್ಮನಂತೆ "ಹೂಂ ಬಾಸು!.. ನಿಮ್ತಾವ ಬಂದೇ ಬತ್ತಾಳೆ.. ಯೋಚ್ನೆ ಮಾಡ್ಕಂಬೇಡಿ" ಅನ್ನುವನು. ನನ್ನ ಪರಿಸ್ಥಿತಿ ಕಂಡ ಬಾರು ಮ್ಯಾನೇಜರು, "ಚಿಂತಿ ಮಾಡ್ಬೇಡಿ ಸಾರೂ.. ಆಕೀನ ಮರ್ತು ಇನ್ನೊಬ್ಬಾಕೀನ ಪ್ರೀತ್ಸಿ.. ಪ್ರಪಂಚ ದೊಡ್ಡದೈತಿ.." ಅನ್ನೋನು. ಯಾಕೋ ಗೊತ್ತಿಲ್ಲ, ಅವನ ಮಾತಲ್ಲಿ ಇನ್ನೊಂದು ಸಾರಿ ಬೇರೆ ಹುಡುಗಿ ಕೈಕೊಟ್ಟರೆ ನಾನು ಈ ಬಾರ್ ಗೆ ಬದುಕಿಡೀ ಖಾಯಂ ಗಿರಾಕಿಯಾಗುವ ಆಸೆಯನ್ನು ಒಳಸುಳಿಯಲ್ಲಿರುವಂತೆಯೇ ಅನಿಸುತ್ತದೆ. ಅವನು ಕೂತಿರುವ ಭಂಗಿಯೂ ಹಾಗೇ, ಅಜೀವ ಚಂದಾದಾರರಿಗೆ ಹೊಂಚು ಹಾಕುತಿರುವ ಸಂಪಾದಕನಂತೆ. ಹಾಗೆ ನೋಡಿದರೆ ನಾನೂ ವಿರಹದ ಪತ್ರಿಕೆಗೀಗ ಲೈಫ್ ಟೈಮ್ ಚಂದಾದಾರ. ಸದಾ ನಿನ್ನ ಧ್ಯಾನದಲ್ಲಿರುವ ಸದಾಶಿವ. ದಿನವೂ ಬಾರೊಳಗಿನ ಮಬ್ಬು ಬೆಳಕಲ್ಲಿ ಸೂರ್ಯಾಸ್ತದ ಕಣ್ಣುತಪ್ಪಿಸಿ ಬಾಳುವವ. ನಾನು ಥೇಟ್ ಅದೇ ದಾಡಿ ಬಿಟ್ಟ, ಆಳಗಣ್ಣಿನ, ತಲೆಕೆಟ್ಟರೆ ಸಿಕ್ಸ್ ಪ್ಯಾಕ್ (ಸಿಗರೇಟು) ಕೈಯ್ಯಲ್ಲಿ ಹಿಡಿವ ದೇವದಾಸನು.

PD*27571887

ನಿನ್ನ ನೆನಪಲ್ಲಿ ಬೆಳಿಗ್ಗೆ ಮಧ್ಯಾಹ್ನಗಳು ಖಾಲಿಯಾಗುವುದು ಖರೆ, ಆದರೆ ನಿಜವಾಗಿಯಾದರೆ ಈ ಸಂಜೆಯದ್ದೇ ಕರಕರೆ. ಅದಕ್ಕೆ ವರುಷವಾಗುವ ಖಯಾಲಿ. ಅದಕ್ಕೆ ನಾನೂ-ನೀನೂ ಜತೆಯಾಗಿ ಕಳೆದ ಸಾವಿರ ಕ್ಷಣಗಳ ನೆನಪು ಅಂಟಿಕೊಂಡಿವೆ. ನಿನ್ನ ಮರೆಯಲಾರದಿರುವಾಗ ಈ ಕ್ಷಣಗಳೂ ಭಾರೀ ಭಾರ. ಕ್ಷಣಗಳನ್ನು ಕಳೆವ ಒಂದೇ ಒಂದು ದಾರಿಯೆಂದರೆ ನನ್ನ ನಾ ಕಳೆದುಕೊಳ್ಳುವುದು. ಅದಕ್ಕೆ ನನಗೆ ಸಹಾಯ ಮಾಡುವ ಸ್ನೇಹಿತರೆಂದರೆ ಇದೇ ಬಾರು, ಇದೇ ಬೀರು. ಇಡೀ ಬೆಂಗಳೂರು ಕೂಡ ಒಂದು ರೀತಿಯಲ್ಲಿ ಬಾರ್ ಅನ್ನಬಹುದು. ಇಲ್ಲಿನ ಊರುಗಳೂ ಹಾಗೇ. ಮಲ್ಲೇಶ್ವ’ರಂ’, ಶೇಷಾದ್ರಿಪು’ರಂ’. ಅಂತೆಯೇ ಇಲ್ಲೆಲ್ಲರೂ ವೇಗದ, ಹಣದ, ಪ್ರೀತಿಯ ಮತ್ತಿನಲ್ಲೇ ತೇಲುತ್ತಿರುತ್ತಾರೆ. ಇಲ್ಲಿನ ಜನರ ನಿಜವಾದ ಒಳಗನ್ನು ನೋಡಬೇಕಾದರೆ ಅವರ ನಿಜವಾದ ಊರುಗಳಿಗೇ ಹೋಗಬೇಕು. ಅಲ್ಲಿಯೇ ಅವರು ಅವರಾಗುತ್ತಾರೆ. ಇಲ್ಲೇನಿದ್ದರೂ ಓಟದ ಬದುಕು. ನಾಟಕ ಬಾಳು.

ಈಗ ನಾ ಚಂದ್ರಮುಖಿಯ ಹಿಂದೆ ಬಿದ್ದಿದೀನಿ ಅಂದುಕೊಳ್ಳಬೇಡ. ರಜನಿಕಾಂತ್ ರ ಚಂದ್ರಮುಖಿ ಸಿನೆಮಾ ಬಂದ ಮೇಲೆ ಅಂತಹ ಹೆಸರಿರುವವರೂ ಚಂದ್ರಾ ಅಂತಲೋ ಚಂದ್ರಿಕೆ ಅಂತಲೋ ತಮ್ಮ ಹೆಸರುಗಳನ್ನು ಬದಲಾಯಿಸಿಕೊಳ್ಳುತ್ತಿದ್ದಾರೆ. ಹಾಗಾಗಿ ಯಾವ ಚಂದ್ರಮುಖಿಯೂ ಈಗ ಸಿಕ್ತಿಲ್ಲ. ಎಲ್ಲಾ ದೇವದಾಸರಿಗೆ ಒಂದೊಂದು ಪಾರು ಸೃಷ್ಟಿ ಮಾಡಿರುತ್ತಾನಂತೆ ಆ ದೇವರು. ಈಗೀಗ ಜೈನ್ ಕಾಲೇಜಿನ ಅಕ್ಕಪಕ್ಕ ಸುಳಿಯುವಾಗೆಲ್ಲಾ ಅದೆಲ್ಲ ನಿಜ ಅನ್ನಿಸ್ತದೆ. ಅತ್ತ ಕಡೆ ಇತ್ತ ಕಡೆ ಎಲ್ಲಾ ಪಾರು ಗಳೇ. (ಸಂಜೆ ಟೈಟಾಗಿ ಹೋಗಿದ್ದಾಗ ನೋಡಿದ್ದಲ್ಲ, ಬೆಳಿಗ್ಗೆ ನಶೆಯೆಲ್ಲಾ ಇಳಿದಾಗಲೂ ಹಾಗೇನೆ!)

ಪಾರೂ, ಈ ಬೀರು ನನ್ನ ಗುರುಗಳಾದ ಮೇಲೆ ನಿನ್ನ ಮರೆಯಲು ಶುರು ಮಾಡಿದೀನಿ. ಬಾರ್ ಅಟೆಂಡರ್ ಆದ ಆ ಪರಬ್ರಹ್ಮನ ಬರಹವನ್ನು ಬದಲಾಯಿಸಿಕೊಳ್ತೀನಿ. ಮ್ಯಾನೇಜರನಿಗೆ ಮತ್ತ್ಯಾರಾದರೂ ಹೊಸ ದೇವದಾಸುಗಳು ಸಿಗಬಹುದು ; ಹಾಗೇ ನನಗೂ ನಿನ್ನ ನೆನಪಿಂದ ಪಾರಾಗಿ ಮತ್ತೊಂದು ಪಾರು ಕೂಡ!

ಕುಡಿದಾಗ ಯಾವಾಗಲಾದರೂ ಒಮ್ಮೆ, ಎದೆಯ ದಡದ ಮೇಲಿನ ನಿನ್ನ ಹೆಸರನ್ನು ಅಲೆಯೊಂದು ಅಳಿಸಿಹಾಕಬಹುದು ಎಂಬ ನಿರೀಕ್ಷೆಯಲ್ಲೇ ಇದ್ದೀನಿ.

ತುಂಬಾ ಟೈಟಾಗಿ ಬರೆದಿದೀನಿ ಅನ್ಸುತ್ತೆ. ಯಾವುದಕ್ಕೂ ನೀನು ಲೈಟಾಗಿ ಓದ್ಕೋ.

Advertisements
ಟಿಪ್ಪಣಿಗಳು
 1. Gurumurthy ಹೇಳುತ್ತಾರೆ:

  Super,
  shabdagala jodane adbhuta

 2. Gurumurthy ಹೇಳುತ್ತಾರೆ:

  Wonderful,

  some how my earlier comment is failed

 3. Shamala ಹೇಳುತ್ತಾರೆ:

  ರಂಜಿತ್ ಅವರೇ…
  light ಆಗಿ ಬರ್ದಿದೀನಿ ಅಂತಲೇ… ಹೇಳಬೇಕಾದ್ದೆಲ್ಲಾ ಹೇಳಿ ಬಿಟ್ಟಿದ್ದೀರಿ… ಪಾರೂ light ಆಗಾದರೂ ಓದಲಿ, serious/heavy ಆಗಾದರೂ ಓದಲಿ… ಬರಹ ಅಂತೂ ಹೃದಯ ಮುಟ್ಟತ್ತೆ…… (I hope paru”s)…… 🙂

 4. sunitha up ಹೇಳುತ್ತಾರೆ:

  u hav used simple ,common ,good language

 5. SHAILAJA ಹೇಳುತ್ತಾರೆ:

  Hi Ranjith Sir,
  Sakkath tight aagitthu nim love letter.Light aage odhide…. aadru swalpa tight aadangide annisthide!!!!!!!!!

 6. ಮನಸು ಹೇಳುತ್ತಾರೆ:

  ಹಹಹ ತುಂಬಾ ಚೆನ್ನಾಗಿದೆ… ಪಾರು ಓದಿದರಾ ಈ ಪತ್ರನಾ…

 7. ISHWARA BHAT K ಹೇಳುತ್ತಾರೆ:

  Chennagide..

  🙂

  Happy weekend

  IBK

 8. ರಂಜಿತ್ ಹೇಳುತ್ತಾರೆ:

  ಗುರುಮೂರ್ತಿ, ಈಶ್ವರ ಭಟ್, ಸುನೀತಾ

  ನಿಮ್ಮ ಅನಿಸಿಕೆಗೆ ನಾ ಆಭಾರಿ…

  ಧನ್ಯವಾದಗಳು

 9. ರಂಜಿತ್ ಹೇಳುತ್ತಾರೆ:

  ಶ್ಯಾಮಲ, ಮನಸು, ಶೈಲಜಾ

  ಪಾರು ಓದದಿದ್ದುದರಿಂದ ದೇವದಾಸ ಪಾರು,
  ಮತ್ತಿಳಿದ ನಂತರ ತಾನೇ ಬರೆದಿದ್ದು ಓದಿ
  ದೇವದಾಸನ ಪ್ರೀತಿ ಸವಾರಿ ಪರಾರಿ..

 10. harishkumar.c ಹೇಳುತ್ತಾರೆ:

  hello ranjith hegiddira Nanu harish Nimma blogannu nanu bahala ishtapattu odthini

 11. ರಂಜಿತ್ ಹೇಳುತ್ತಾರೆ:

  ಹರೀಶ್,

  ನಾನು ಚೆನ್ನಾಗಿದೀನಿ ಸರ್. ನಿಮ್ಮಂಥವರ ಇಂಥ ಮಾತುಗಳು ನನಗೆ ಬರೆಯಲು ಬಹಳ ಉಮೇದು ಉತ್ಸಾಹ ನೀಡುತ್ತದೆ. ಧನ್ಯವಾದಗಳು..

 12. vinayaka ಹೇಳುತ್ತಾರೆ:

  ಟೈಟ್‌ ಆದ್ರೆ ನೋವು ಹೊಗತ್ತೆ ಎಂಬುದು ನನ್ನ ಲೆಕ್ಕದಲ್ಲಿ ಮುರ್ಖತನದ ವಾದ. ಬರಹ ಚೆನ್ನಾಗಿದೆ. ಆದ್ರೂ ಈ ಬರಹ ಓದಿ ಹಾದಿ ತಪ್ಪುವವರ ಪ್ರಮಾಣ ಜಾಸ್ತಿ!!! ಹಾಗಾಗಿ ಇದನ್ನು ಓದಿ ಟೈಟಾಗ ಬೇಡಿ ಅಂತಾ ವಿಶೇಷ ಸೂಚನೆ ಕೊಟ್ಟಿದ್ದರೆ ಚೆನ್ನಾಗಿತ್ತು!!! ಚೆಂದದ ನಿರೂಪಣೆ…
  ಕೋಡ್ಸರ

 13. nitheesh shetty ಹೇಳುತ್ತಾರೆ:

  thuba chennagide……..

 14. ರಂಜಿತ್ ಹೇಳುತ್ತಾರೆ:

  @ವಿನಾಯಕ ಕೊಡ್ಸರ,

  ಟೈಟ್ ಆದ್ರೆ ನೋವು ಹೋಗುತ್ತಾ ಇಲ್ವಾ ಅನ್ನೋದು ನನಗಂತೂ ದೇವ್ರಾಣೆ ಗೊತ್ತಿಲ್ಲ. ಅದೇ ಥಿಯರಿ ಹೇಳುವ ದೇವದಾಸನ ಕಥೆ ಈಗ ಕಥೆಯಾಗಿ ಉಳಿದಿಲ್ಲ. ಅದೊಂದು ರೂಪಕ ಆಗಿದೆ.

  ಥ್ಯಾಂಕ್ಸ್.. ನಿಮ್ಮ ಬ್ಲಾಗು ಭೇಟಿಗೆ ಮತ್ತು ಕಾಂಪ್ಲಿಮೆಂಟಿಗೆ.

  @ ನಿತೀಶ್,

  ಥ್ಯಾಂಕ್ಸ್.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s