ಹೊಸವರ್ಷಕ್ಕೆ ಒಂದಿಷ್ಟು ಶಬ್ದಚಿತ್ರ..!

Posted: ಮಾರ್ಚ್ 17, 2010 in ಶಬ್ದಚಿತ್ರ

ಬೆಳಗು : ಕೆಲಸವಿಲ್ಲದವನ ಪಾಲಿನ ಮುಸ್ಸಂಜೆ.

ಪ್ರೀತಿ : ಬದುಕಿನ ಸಾಲ ಪಡೆದಿದ್ದಕ್ಕೆ ಸಲ್ಲಿಸಬೇಕಾದ ಇ.ಎಮ್. ಐ.

ನೆನಪು : ಕರೆಂಟು ಹೋದಾಗಿನ ಮೊಂಬತ್ತಿ.

ಭಗ್ನಪ್ರೇಮಿ : ಮುಳುಗಿಹೋಗುವಷ್ಟು ನಷ್ಟದಲ್ಲಿದ್ದರೂ ಕಾಂಟ್ರಾಕ್ಟಿನ ಪ್ರಕಾರ ಕೆಲಸ ಮುಗಿಸಿಕೊಡಬೇಕಾದ ಅನಿವಾರ್ಯತೆ ಇರುವವ.

ವೃದ್ಧಾಪ್ಯ : ಹೂದಳದ ಅಂಚಿನಲ್ಲಿರುವ ಇಬ್ಬನಿ.

leaf

ರಾತ್ರಿ : ಬದುಕಿನ ದಾರಿಗೆ ಬೇಕಾಗುವ, ಕನಸಿನ ಇಂಧನ ತುಂಬಿಸಿಕೊಳ್ಳಲೋಸುಗ ಇರುವ ನಿಲ್ದಾಣ.

ಗೆಲುವು : ಗಮ್ಯವಿಲ್ಲದ, ವ್ಯಾಖ್ಯೆಗೆ ಸಿಗದ ಅರಸುವಿಕೆ.

ಕನಸು : ಬೇಕಾದ್ದನ್ನು ಜೀವಿಸಲು, ನೆಮ್ಮದಿಯಾಗಿರಲು ಉಚಿತ ಪ್ರವೇಶವಿರುವ ಉಪವನ.

ಜೀವ : ಅವಳು ದೂರಾದರೆ ಎರಡು, ಸೇರಿದರೆ ಒಂದು.. ಒಟ್ಟಾರೆ ಲೆಕ್ಕತಪ್ಪಿಸುವ ಗುಂಗು!

ಬೆಳಗು : ಎದ್ದಾಕ್ಷಣ ಕಂಡ ಅಮ್ಮನ ನಗುಮೊಗ.

ಬೆಳಗು : ಎಷ್ಟು ಸಲ ಓದಿದರೂ ಮತ್ತೆ ಮತ್ತೆ ಓದಬೇಕನ್ನಿಸುವ ಕವಿತೆ.

 

(ಏನಾದರೂ ಹೊಸದು ಬರೆಯಬೇಕಲ್ಲ ಅಂತ ತುಡಿಯುತ್ತಿದ್ದೆ. ಹೊಸದಾದ ಬರಹವಿಧಾನ ಬೇಕಿತ್ತು. ಹೀಗೆ ಶಬ್ದಚಿತ್ರ ಬಿಡಿಸುವ ಐಡಿಯಾ ಸಿಕ್ಕಿದ್ದು ನನ್ನ ಪ್ರೀತಿಯ ಲೇಖಕ ಜಯಂತ ಕಾಯ್ಕಿಣಿಯವರ “ಅಡಿಟಿಪ್ಪಣಿ” ಎಂಬ “ಒಂದು ಜಿಲೇಬಿ” ಸಂಕಲನದಲ್ಲಿನ ಕವಿತೆ. ಈ ಬರಹದ ಅಡಿಗೆ ಅವರ ಅಡಿಟಿಪ್ಪಣಿಗೆ ಒಂದು ನಮ್ರ ಥ್ಯಾಂಕ್ಸ್.

 

ಅಂದಹಾಗೆ ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು. ಹಳೆಯ ದುಃಖಗಳನ್ನೆಲ್ಲಾ ಕೊಡವಿಕೊಂಡು ಮತ್ತೆ ಚಿಗುರಲಿ ಬದುಕು. ಮುಂದುವರೆಯುತ್ತಿರಲಿ ಕನಸುಗಳು ವರುಷದುದ್ದಕ್ಕೂ. ನಿಮ್ಮ ಮನೆಯ ಒಬ್ಬಟ್ಟು ಪ್ಯಾಕೇಟು ನಮ್ಮ ಮನೆಗೂ ಪಾರ್ಸೆಲು ಬರಲಿ..;-) )

ಟಿಪ್ಪಣಿಗಳು
 1. ದಿವ್ಯಾ ಹೇಳುತ್ತಾರೆ:

  Good One Ranjith.. May this new year bring more creativity in your journey of writing!

 2. Sushrutha ಹೇಳುತ್ತಾರೆ:

  ನೈಸ್ ನೈಸ್ ನೈಸ್! ಇಷ್ಟವಾದ್ವು ಬಾಸ್…

 3. ರಾಘವೇಂದ್ರ ಹೆಗಡೆ ಹೇಳುತ್ತಾರೆ:

  ಅರ್ಥಪೂರ್ಣ ಪರಿಕಲ್ಪನೆ ತಮ್ಮ ‘ಶಬ್ದಚಿತ್ರ’.
  ತುಂಬಾ ಚೆನ್ನಾಗಿ ಬರೆದಿದ್ದೀರಿ. ಯುಗಾದಿಯ ಹಾರ್ದಿಕ ಶುಭಾಶಯಗಳು.

 4. Tejaswini Hegde ಹೇಳುತ್ತಾರೆ:

  ತುಂಬಾ ಚೆನ್ನಾಗಿದೆ ನಿಮ್ಮ ಹೊಸ ಪ್ರಯತ್ನ. ನೆನಪು, ಕನಸು ಹಾಗೂ ರಾತ್ರಿ ಮತ್ತೂ ಇಷ್ಟವಾದವು.

  ನಿಮಗೂ ಹೊಸಯುಗದ ಹಾರ್ದಿಕ ಶುಭಾಶಯಗಳು.

 5. ಶೆಟ್ಟರು (Shettaru) ಹೇಳುತ್ತಾರೆ:

  ರಾತ್ರಿ : ಬದುಕಿನ ದಾರಿಗೆ ಬೇಕಾಗುವ, ಕನಸಿನ ಇಂಧನ ತುಂಬಿಸಿಕೊಳ್ಳಲೋಸುಗ ಇರುವ ನಿಲ್ದಾಣ.

  ಸಖತ್…

 6. Gurumurthy ಹೇಳುತ್ತಾರೆ:

  Good one

  Happy Ugadi

 7. Ranjana ಹೇಳುತ್ತಾರೆ:

  Very nice ranjith. tumba arthapoornavaagide.

 8. ರಂಜಿತ್ ಹೇಳುತ್ತಾರೆ:

  @ದಿವ್ಯಾ,

  ಥ್ಯಾಂಕ್ಸು. ನಿಮಗೂ ಹೊಸ ವರ್ಷ ಹೊಸ ಸಂತಸಗಳನು ಹೊತ್ತು ತರಲಿ.

  @ಸುಶ್ರುತ, ಗುರುಮೂರ್ತಿ,

  ಧನ್ಯವಾದಗಳು ಸರ್.

 9. ರಂಜಿತ್ ಹೇಳುತ್ತಾರೆ:

  @ ತೇಜಸ್ವಿನಿ, ಶೆಟ್ಟರು, ರಾಘವೇಂದ್ರ ಹೆಗ್ಡೆ, ರಂಜನಾ ಮೇಡಂ

  ಪ್ರಯತ್ನವನ್ನು ಮೆಚ್ಕೊಂಡಿದ್ದಕ್ಕೆ ಧನ್ಯವಾದಗಳು.

 10. Shamala ಹೇಳುತ್ತಾರೆ:

  ರಂಜಿತ್ ಅವರೇ…

  ಹೊಸ ಪ್ರಯತ್ನ ನಿಜವಾಗಿಯೂ ಹೊಸತನ ತಂದಿದೆ. ಹಾಗೇ ನೀಲಿಹೂವು ಬಣ್ಣ ಬದಲಾಯಿಸಿ, ರಂಗು ರಂಗಾಗಿದೆ. ಹೊಸ ವರುಷ ನಿಮಗೆ ಸಂತಸ ತರಲಿ….. ಹೀಗೇ ಹೊಸ ಹೊಸ ಪ್ರಯತ್ಯಗಳಲ್ಲಿ ಯಶಸ್ಸೂ ತರಲಿ…… 🙂

 11. ಪ್ರದೀಪ್ ಹೇಳುತ್ತಾರೆ:

  what an idea sirji! 😉
  ಶಬ್ದ ಚಿತ್ರಗಳು ಚೆನ್ನಾಗಿವೆ…

 12. shivu.k ಹೇಳುತ್ತಾರೆ:

  ರಂಜಿತ್ ಸರ್,

  ತುಂಬಾ ಚೆನ್ನಾದ ಕಲ್ಪನೆ…ಪ್ರತಿಯೊಂದು ಅದ್ಬುತವೆನಿಸಿತು..

 13. ರಂಜಿತ್ ಹೇಳುತ್ತಾರೆ:

  @ಶ್ಯಾಮಲ,

  ನನ್ನಿ. ದಯವಿಟ್ಟು ನನ್ನ ಬರಹದ ಕೊನೆಯ ಸಾಲನ್ನು ಮತ್ತೆ ಮತ್ತೆ ಓದಿ, ಶೀಘ್ರವಾಗಿ ಏನಾದರೂ ಕ್ರಮ ಕೈಗೊಳ್ಳಬೇಕಾಗಿ ನನ್ನ ನಮ್ರ ವಿನಂತಿ..:)

  @ಪ್ರದೀಪ್,

  ಥ್ಯಾಂಕ್ಯೂ ಸರ್ಜಿ…:) ಅದೇ ಲವ್ವು, ಅದೇ ಕವಿತೆ ಬರೆದು ಬರೆದೂ ಸಾಕಾಯ್ತು… ಖಾಲಿ ಮೊಸರನ್ನ ಎಷ್ಟು ತಿನ್ನೋಕಾಗುತ್ತೆ ಹೇಳಿ… ಅದಿಕ್ಕೆ ಕೊಂಚ ಮಟಮಟ ಉಪ್ಪಿನಕಾಯಿ..:)

  @ಶಿವು,

  ಥ್ಯಾಂಕ್ಸ್. ಇನ್ನಷ್ಟು ಚಂದಗೆ ಬರೀಬಹುದಿತ್ತು ಅನಿಸಿತು ನನಗೆ. ಒಂದ್ಸಾಲು ಕತೆಗಳಿಗೆ ಡೈವರ್ಸು ಕೊಟ್ಟಾದ ಮೇಲೆ ಇದು ಕೈಹಿಡಿದಿದೆ ನೋಡಿ. ಇದನ್ನ ಒಂದ್ಸಾಲು ಕವಿತೆಗಳೆಂದರೆ ಹ್ಯಾಗೆ?:)

 14. ಶರಶ್ಚಂದ್ರ ಕಲ್ಮನೆ ಹೇಳುತ್ತಾರೆ:

  “ಗೆಲುವು : ಗಮ್ಯವಿಲ್ಲದ, ವ್ಯಾಖ್ಯೆಗೆ ಸಿಗದ ಅರಸುವಿಕೆ”..
  “ಬೆಳಗು: ಎದ್ದಾಕ್ಷಣ ಕಂಡ ಅಮ್ಮನ ನಗುಮೊಗ”
  ಚಂದದ ಸಾಲುಗಳು ರಂಜಿತ್…
  ಪಾರ್ಸೆಲ್ ತಲುಪಿಲ್ಲವ ಇನ್ನು? ಕಳುಹಿಸಿ ೪ ದಿನ ಆಯ್ತಲ್ರಿ 🙂

 15. roopa sathish ಹೇಳುತ್ತಾರೆ:

  ಕನಸು : ಬೇಕಾದ್ದನ್ನು ಜೀವಿಸಲು, ನೆಮ್ಮದಿಯಾಗಿರಲು ಉಚಿತ ಪ್ರವೇಶವಿರುವ ಉಪವನ. ……… tumbaa ishtavaaythu ranjith…. also, beLagu saha…., ….
  keep writing ri !

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s