ಗೋರಿಯೆಡೆಗೆ ದಾರಿ..!

Posted: ಮಾರ್ಚ್ 27, 2010 in ಕವಿತೆ

ಎಲ್ಲೊ ಒಂದಿಷ್ಟು ತಮ್ಮಂದಿರ ಗೋಳು

ಕೆಲಬಂಧುಬಾಂಧವರ ನರಕದಂಥ ಬಾಳು

ಬೆಳಿಗ್ಗೆಯೆದ್ದು ಪತ್ರಿಕೆಮಡಚಿದರೆ ನೆತ್ತರ ವಾಸನೆ

ಎಂದಿಗೂ ಪೂರೈಸದ ಕೆಲ ಪೊಳ್ಳು ಆಶ್ವಾಸನೆ

people-cutting-trees

 

ಎಲ್ಲಾ ಮರೆತು ಪ್ರಕೃತಿಮಡಿಲಿಗೆ ಬಂದರೆ

ಅಗೋ ಮನುಷ್ಯ ಬಂದ ಓಡು ಓಡು

ಅನ್ನುವ ಹಕ್ಕಿಗಳ ಗಡಿಬಿಡಿ ನೋಡು,

ಅವುಗಳು ಹೋಗಲಿ,

ಕಿವಿ ಕಣ್ಣು ತೆರೆದೇ ಇದ್ದಲ್ಲಿ ಇಂಥ ಸಾವಿರ ಚೀರಾಟ

ಅದಕ್ಕೆ ಒಂದು ಐಡಿಯಾ!

ಕಣ್ಣು ಕಿವಿ ಮುಚ್ಚಿ ಬಾಳೋಣ,

 

ಪ್ರಕೃತಿ ದೋಚುವುದು ಇಲ್ಲಿ ಒಂದು ಲೈಫ್ ಸ್ಟೈಲ್

ಹಾಲು ಹಾಕಬೇಕಿದ್ದ ದೊಡ್ಡ ಹಂಡೆಗೆ ಎಲ್ಲರೂ ಬೇರೆಯವರು ಹಾಕಲಿ

ಎಂದು ನೀರು ಸುರಿವ ಚಾಳಿ,

ಕಂಡದ್ದನು ದೋಚು, ಯೋಚಿಸು ಹೇಗಾದರೂ ಬಳಸಿಕೊಳ್ಳಲು

ಒಂದನ್ನಾದರೂ ಬಿಟ್ಟಿದ್ದಿದೆಯಾ

ಮುಂದೆ ನಮ್ಮನ್ನು ನಾವು ಉಳಿಸಿಕೊಳ್ಳಲು

 

graveyard-x21

 

ಇಲ್ಲಿ ಎಲ್ಲ ಓಡಬೇಕಿದೆ, ಎಲ್ಲಿಗೆ ಅನ್ನುವುದಲ್ಲ ಪ್ರಶ್ನೆ

ದಾರಿಯ ಆರಂಭದಲ್ಲೆ ಇದೆಯಲ್ಲ ಗೋರಿಯೆಡೆಗೆ ಎಂಬ ಬೋರ್ಡು

ಗುರುವೇ ಓಡುವುದಷ್ಟೇ ಬಾಳು

ಉಪದೇಶ ನೀಡದೇ ನಿನ್ನ ದಾರಿ ನೀ ನೋಡು

 

ಕ್ಷಣಕಾಲ ಎಲ್ಲ ಮರೆತು ಉಪವನದಲಿ

ಕಾಲಿಟ್ಟೆಡೆ ರಸ್ತೆಗಾಗಿ ಹುತಾತ್ಮರಾದ ಮರಗಳ

ಸಮಾಧಿ

ನಿಜ ಅನ್ನುವುದಾದರೆ ಇಲ್ಲಿ

ಭಾವುಕನಾಗಿ ಕೂಡ ನೆಮ್ಮದಿಯಿಂದ

ಬಾಳುವುದು, ನಮಗೆ ನಾವೇ ತೋರುವ

ಕಟುಕತನದ ಪರಮಾವಧಿ!

Advertisements
ಟಿಪ್ಪಣಿಗಳು
 1. Shamala ಹೇಳುತ್ತಾರೆ:

  ರಂಜಿತ್….

  ಬೆಳ್ಬೆಳಿಗ್ಗೆನೆ ಜಾಲಕ್ಕೆ ಬಂದಿದ್ದೂ ಸಾರ್ಥಕ ಆಯ್ತು ನಿಮ್ಮ ಕವನ ಓದಿ….. ಪದಗಳ ಜೋಡಣೆ ಅತ್ಯಂತ ಆಪ್ತವಾಗಿದೆ. ಓದಿದ ಮನಸ್ಸನ್ನು ಚಿಂತಿಸಲು ಪ್ರೇರೇಪಿಸುತ್ತೆ…… ವಾಸ್ತವದ ಕಟು ಸತ್ಯ ಸಹಜವಾಗಿ, ಸರಳವಾಗಿ ಹೇಳಿದ್ದೀರಿ………

 2. ರಾಘವೇಂದ್ರ ಹೆಗಡೆ ಹೇಳುತ್ತಾರೆ:

  ರಂಜಿತ್ ..

  ಪ್ರಚಲಿತ ವಿಷಯವ ಮನ ಮುಟ್ಟುವಂತೆ ಕಾವ್ಯವಾಗಿಸಿದ್ದೀರಿ..

 3. Tejaswini ಹೇಳುತ್ತಾರೆ:

  ಕವಿತೆ ತುಂಬಾ ಚೆನ್ನಾಗಿದೆ. ಅದರಲ್ಲೂ ಕೊನೆಯ ಕೆಲವು ಸಾಲುಗಳು… ತುಂಬಾ ಇಷ್ಟವಾದವು. ಇಂದು ಅತಿ ಭಾವುಕತೆ ನಮಗೆ ನಾವೇ ತೋರುವ ಕಟುಕತನವೇ ಸರಿ!

 4. harishkumar.c ಹೇಳುತ್ತಾರೆ:

  Hi , ranjith Superb yar thumbane chennagide badukina katuvasthavavanna hige kavithe moolaka toriddiri nimma pada prayoga nanagae bahala istavagutte iruvudellava bittu iradoodara hedege jeevana antheye nimma kavanada dariya arabmadalle ideyalla goriyadege yemba bordu ee saalu nammannu yochanege idumadutte namma javabdarigala nenapisutte

  Ellla Maretha bhava ninnandu
  Ella Kaleda Bhava nannadu
  ishtishte astashte kolluva bayekegalige
  yeshtenendu samadanisali ninnolage nanniddaru nannolage neeniddaru
  namma payanaveke ekangiyagide ella prashnegalaige gelathi ninna uttara bekide
  olavoorinalli belakilla adarenu
  nenapugala mombatti nanna bali ide.
  sanna tappu madiddene geleya kshamisu tappiddare tiddibidu.

  Thank u

 5. shashikiranbv ಹೇಳುತ್ತಾರೆ:

  hi ranjith . how to write blog in kannada. i am new to thid wordpress…

 6. Dr.Gurumurthy Hegde, Sweden ಹೇಳುತ್ತಾರೆ:

  ತುಂಬಾ ಸುಂದರ ಕವನ
  ಶೈಲಿ ಬಹಳ ಇಷ್ಟವಾಯಿತು

 7. venkatakrishna.k.k. ಹೇಳುತ್ತಾರೆ:

  ಕವನ ಸುಂದರವಾಗಿದೆ.

 8. ರಂಜಿತ್ ಹೇಳುತ್ತಾರೆ:

  @ ಶ್ಯಾಮಲ,

  ಥ್ಯಾಂಕ್ಯೂ. ಬೆಳ್ಳಂಬೆಳಿಗ್ಗೆಯ ನಿಮ್ಮ ಭೇಟಿ ನಿರಾಸೆಯಾಗದಿದ್ದುದು ಖುಷಿಯಾತು.

  ****

  @ರಾಘವೇಂದ್ರ ಹೆಗ್ಡೆ, ಗುರುಮೂರ್ತಿ ಹೆಗ್ಡೆ,

  ಧನ್ಯವಾದಗಳು.

  @ ಶಶಿಕಿರಣ್,

  ನಿಮಗೆ ಮಿನ್ನಂಚೆಯಲ್ಲಿ ಉತ್ತರಿಸಿದ್ದೇನೆ.

 9. ರಂಜಿತ್ ಹೇಳುತ್ತಾರೆ:

  ತೇಜಸ್ವಿನಿ ಹೆಗಡೆ,

  ನಿಮ್ಮ ಅನಿಸಿಕೆಗೆ ಧನ್ಯವಾದಗಳು. ಆದರೆ ಕೊಂಚ ಬದಲಾವಣೆಯಿದೆ. ಭಾವುಕರಾಗಿ ಕೂಡ “ನೆಮ್ಮದಿಯಿಂದ” ಬದುಕುವುದು ನಮಗೆ ನಾವೇ ತೋರುವ ಕಟುಕತನದ ಪರಮಾವಧಿ. ಆ ಪದ ತಪ್ಪಿಹೋದರೆ ಕಟುಕತನ ತನ್ನ ಪರಮಾವಧಿ ತೋರುವುದಿಲ್ಲ ಅನಿಸುತ್ತದೆ..:)

 10. ರಂಜಿತ್ ಹೇಳುತ್ತಾರೆ:

  ಹರೀಶ್,

  ಕವಿತೆ ಬರೆವ ಪ್ರಯತ್ನ ತಪ್ಪಲ್ಲ. ಅದಕ್ಕೆ ತಪ್ಪು ಮಾಡಿದ್ದೇನೆ ಅನ್ನಬೇಕಿಲ್ಲ. ಆದರೆ ನೀವು ಇನ್ನೂ ಹೆಚ್ಚು ಹೆಚ್ಚು ಓದಬೇಕಿದೆ ಅನ್ನಿಸುತ್ತದೆ.

  ನಿಮ್ಮ ಪ್ರೀತಿಗೆ ಋಣಿ.

  ವೆಂಕಟಕೃಷ್ಣ,

  ಥ್ಯಾಂಕ್ಸ್.

 11. online betting ಹೇಳುತ್ತಾರೆ:

  good info , do you see this is the future?

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s