ಬದುಕೇ, ಐ ಲವ್ ಯೂ..!

Posted: ಮಾರ್ಚ್ 30, 2010 in ಬದುಕೇ, ಐ ಲವ್ ಯೂ!

ತುಂಬ ಸಲ ಯಾವುದೋ ಕೆಲಸ ಮಾಡಬೇಕಾಗಿ ಬಂದಾಗ “ನಮಗಾಗಲ್ಲ” ಅಂತ ಕೈ ಚೆಲ್ಲುತ್ತೇವೆ. ರಾತ್ರಿಯಿಡೀ ಕನಸನ್ನು ಸವಿಯುತ್ತಾ, ಬೆಳಗಾಗುತ್ತಲೇ ಅದನ್ನೆಲ್ಲಾ ಮರೆತು ಬದುಕಿನ ಜತೆ ರಾಜಿಮಾಡಿಕೊಳ್ಳುತ್ತೇವೆ. ಯಾರೋ ಹೊಸ ಕೆಲಸಕ್ಕೆ ಕೈ ಹಾಕಿದರೆ ನಿನಗಾಗಲ್ಲ ಅನ್ನುತ್ತೇವೆ, ಹಾಗನ್ನಲು ಧೈರ್ಯವಿಲ್ಲದಾಗ ಮನಸಲ್ಲೆ ಕರುಬುತ್ತೇವೆ.

ದೇವರು ಕೊಟ್ಟ ನೂರನ್ನು ಮೂಲೆಗೆಸೆದು ಕೊಡದ ಮೂರಿಗಾಗಿ ಹಲ್ಲುಗಿಂಜುತ್ತೇವೆ. ಅವ ಎಲ್ಲಾ ನೀಡಿದ್ದರೂ ಭಕ್ತಿಯ ಹೆಸರಲ್ಲಿ ನಮ್ಮ ಆಸೆಗಳ ಲಿಸ್ಟು  ಆತನೆದುರಿಡುತ್ತೇವೆ. ಸುಖದ ಮಜಲು ಅನುಭವಿಸುತ್ತಿದ್ದಾಗ ಅನ್ನದಿದ್ದರೂ, ದುಃಖ ಬಂದಾಗ ಅಯ್ಯೋ ಇದ್ಯಾಕಪ್ಪಾ ಬದುಕೂ.. ಅಂತ ಬೇಸರಿಸುತ್ತೇವೆ. ನಮ್ಮ ಕಷ್ಟಕಾಲದಲ್ಲಿ ನಮಗ್ಯಾರೂ ಸಹಾಯ ಮಾಡುತ್ತಿಲ್ಲವಲ್ಲ ಅಂತ ಕುಬ್ಜರಾಗುತ್ತೇವೆ.

ಒಂಚೂರು ಲಕ್ಕಿದ್ದಿದ್ರೆ ನಾನು ಏನೋ ಆಗ್ತಿದ್ದೆ ಅಂತ ಮನಸ್ಸಲ್ಲೇ ಸಮಾಧಾನ ಮಾಡಿಕೊಳ್ಳುತ್ತಿರುತ್ತೇವೆ.  ಇಪ್ಪತ್ತರ ಹೊತ್ತಿಗೆ ಮುಂದೇನೋ ಸಾಧಿಸುವೆ ಎಂದೂ ನಲ್ವತ್ತರ ಹೊತ್ತಿಗೆ ಅಯ್ಯೋ ಏನೂ ಸಾಧಿಸಲೇ ಇಲ್ವಲ್ಲಾ ಅಂತ ನಮ್ಮನಮ್ಮೊಳಗೇ ಕೆಲಸಮಯವಾದರೂ ಅಂದುಕೊಳ್ಳುತ್ತಿರುತ್ತೇವೆ.
ಇದೆಲ್ಲದಕ್ಕೂ (ಐಸ್ ಕ್ರೀಮ್ ನ) ಮೇಲೆ ಚೆರ್ರಿ ಇಟ್ಟಂತೆ (ಕಳಶವಿಟ್ಟಂತೆ ಎಂಬುದರ ಅಧುನಿಕ ರೂಪಾಂತರ;-)) ಇವಿಷ್ಟನ್ನೂ ಓದಿ “ಓಹ್.. ಇದೆಲ್ಲಾ ನನಗಲ್ಲ, ನಾನು ಹಿಂಗಿಲ್ಲ” ಅಂತ ಮನಸಾಕ್ಷಿ ಕಣ್ಣಿಗೆ ಮಣ್ಣೆರೆಚುತ್ತೇವೆ!

ಈ ಲೇಖನದ ಜತೆಗೆ ಒಂದು ವೀಡಿಯೋ ಲಗತ್ತಿಸಿದ್ದೇನೆ. ನೋಡಿ, ಬಹುಶಃ ನಾನು ಮತ್ತೇನೂ ಬರೆಯಬೇಕಂತಿಲ್ಲ.

(ಈ ವೀಡಿಯೋ ತನ್ನ ಬ್ಲಾಗಲ್ಲಿ ಹಾಕಿಕೊಂಡು ನನ್ನ ಗಮನಕ್ಕೆ ಬರಲು ನೆರವಾದ “ಮಾಯೇಶ್” ಗೆ ನನ್ನ ಥ್ಯಾಂಕ್ಸ್!)
Advertisements
ಟಿಪ್ಪಣಿಗಳು
 1. venkatakrishna.k.k. ಹೇಳುತ್ತಾರೆ:

  ಬದುಕು. .ನಿಜಕ್ಕೂ.. ಬಲು ದೊಡ್ಡ ” ಅಚ್ಚರಿ “.

 2. Azad ಹೇಳುತ್ತಾರೆ:

  ನೀಲಿ ಹೂ ಹೇಳಿದ್ದು ನಾವೆಲ್ಲಾ ಒಳಗೊಳಗೇ ಅನುಭವಿಸೋದೂ ಎರಡೂ ನಿಜ…ನಕಾರಾತ್ಮಕದತ್ತ ಮನಸು ಓಲಾಡುವುದು ಸಹಜ..ಅದನ್ನು ಮೆಟ್ಟಿ ಕೊನೆಗಾದರೂ ಸಕಾರಾತ್ಮಕದ ಕಡೆ ಹೊರಟರೆ..ಒಮ್ಮೆಯಾದರೂ ಕೈಗೆಟುಕದು ಎಂದಿದ್ದುದು ಕೆಗೆಟಕಬಹುದು…ಪ್ರಯತ್ನನಾದ್ರೂ ಮಾಡ್ಬೇಕಲ್ಲ,…?

 3. kusuma hegde ಹೇಳುತ್ತಾರೆ:

  Thanks, very inspiring.

 4. ರಂಜಿತ್ ಹೇಳುತ್ತಾರೆ:

  ಗುರುಮೂರ್ತಿ ಹೆಗ್ಡೆ, ವೆಂಕಟಕೃಷ್ಣ, ಕುಸುಮಾ ಹೆಗ್ಡೆ,

  ಧನ್ಯವಾದಗಳು ನಿಮ್ಮ ಅನಿಸಿಕೆಗೆ.

  *******

  ಆಜಾದ್,

  ಈ ಲೇಖನ ಮುಖ್ಯವಾಗಿ ಅನ್ವಯವಾಗುವುದು ನನಗೇ ಅಂದುಕೊಳ್ಳುತ್ತೇನೆ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s