ಕವಿತೆಯ ಕಂಪು..!

Posted: ಏಪ್ರಿಲ್ 2, 2010 in ಕವಿತೆ

ಜಗದ ತುಂಬಾ
ಹಣದ
ಹೆಣದ ವಾಸನೆ
ಮತ್ತು ಸುತ್ತಮುತ್ತೆಲ್ಲಾ ಮನಸು ಅರೆಬೆಂದು
ಸುಟ್ಟಂಥದ್ದು,
ಕನಸಿನ ದೋಸೆಹಿಟ್ಟು ಕೆಟ್ಟಂಥದ್ದು

  nature-wood-road

ಬಾ ಗೆಳೆಯಾ ಇಲ್ಲೇ ಸುತ್ತಾಡಿ ಬರೋಣ
ಸಲುಪ ದೂರದಲೆ ಕವಿಗಳ ಮನೆಯಿದೆ
ಆಗಷ್ಟೇ ಕಣ್ತೆರೆದ ಕವಿತೆಯ ಘಮ
ಉಣ್ಣಲು ಸಿಕ್ಕೀತು,
ಮತ್ತು ಅದರ ಕಂಪು
ಹಬ್ಬೀತು ನಮ್ಮೊಳಗೂ
ಆದೀತು ನಮ್ಮ ಜೀವ ತಂಪು.

Advertisements
ಟಿಪ್ಪಣಿಗಳು
 1. shivu.k ಹೇಳುತ್ತಾರೆ:

  ರಂಜಿತ್ ಸರ್,

  ಸದ್ಯದ ಪರಿಸ್ಥಿತಿಯಲ್ಲಿ ಕವನದ ಘಮ ನಮಗೆಲ್ಲಾ ಬೇಕೇಬೇಕು ಅಲ್ವಾ…

 2. ಅನಾಮಿಕ ಹೇಳುತ್ತಾರೆ:

  ಹಾಗಂತಲೇ ನಿಮ್ಮ ಮನೆಗೆ ಹೋದರೆ ಸಿಕ್ಕಿದ ಉತ್ತರ : ಕವಿಗಳು ಊರಲ್ಲಿಲ್ಲ ! 😦

 3. P Kalyan ಹೇಳುತ್ತಾರೆ:

  ಎಷ್ಟೋ ಸಮಸ್ಯೆಗಳಿಗೆ ಮೂಲ ಕಾರಣ ಸಾಹಿತ್ಯದಲ್ಲಿ ಆಸಕ್ತಿ ಇಲ್ಲದಿರುವುದು. ಕವಿತೆಯೂ ಚೆನ್ನಾಗಿದೆ, ಚಿತ್ರವೂ ಚೆನ್ನಾಗಿದೆ.

 4. ಪ್ರದೀಪ್ ಹೇಳುತ್ತಾರೆ:

  ತುಂಬಾ ಚೆನ್ನಾಗಿದೆ ರಂಜಿತ್ ಅವರೆ…. 🙂

 5. ಶರಶ್ಚಂದ್ರ ಕಲ್ಮನೆ ಹೇಳುತ್ತಾರೆ:

  ಸೊಗಸಾದ ಕವನ ರಂಜಿತ್… ನಮಗೂ ಹೇಳಿಕೊಡ್ರಿ ಕವನ ಬರೆಯುವ ಕಲೆಯನ್ನು 🙂

 6. ರಂಜಿತ್ ಹೇಳುತ್ತಾರೆ:

  ಶಿವು ಸರ್,

  ಹಣ ಹಿಡಿಯಲು ಬದುಕನ್ನೇ “ಛೂ!” ಬಿಟ್ಟವರು ನಾವೆಲ್ಲಾ! ಹೀಗಿರುವಾಗ ನಿಜವಾದ ಕವಿತೆ ಮನಸ್ಸಿಗೆ ತಂಪು ನೀಡುತ್ತದೆ. ನಿದ್ದೆ ಎಳೆವ ರಾತ್ರಿ ಪ್ರಯಾಣದ, ಊದ್ದ ಹೆದ್ದಾರಿಯ ಮಧ್ಯೆ ಸಿಕ್ಕ ಪುಟ್ಟ ಇರಾನಿ ಹೋಟೆಲ್ಲಿನಂತೆ ಅಲ್ಲವೇ ಈ ಕವಿತೆಗಳೆಂದರೆ?!

 7. ರಂಜಿತ್ ಹೇಳುತ್ತಾರೆ:

  ಅನಾನಿಮಸ್ಸು,

  ನಿಮ್ಮ ಹೆಸರೂ ಇದ್ದಿದ್ದರೆ ಚೆಂದವಿತ್ತು, ನಿಮ್ಮ ಕಾಮೆಂಟು ಇಷ್ಟವಾಯ್ತು..!

 8. ರಂಜಿತ್ ಹೇಳುತ್ತಾರೆ:

  ಕಲ್ಯಾಣ್,

  ಸಾಹಿತ್ಯ ಬದುಕನ್ನು, ಇನ್ನೊಂದು ಜೀವವನ್ನು ಅರ್ಥೈಸುವುದಕ್ಕೆ ಪ್ರೀತಿಸುವುದಕ್ಕೆ ಖಂಡಿತವಾಗಿ ನೆರವಾಗುತ್ತದೆ ಅಂತ ನನ್ನ ಧೃಡ ನಂಬುಗೆ.

  ಅಂದ ಹಾಗೆ ಚಿತ್ರ ನನ್ನದಲ್ಲ. ಕವಿತೆ ಹೊಂದಿಕೆಯಾಗುತ್ತದೆ ಎಂಬ ಕಾರಣದಿಂದ ಗೂಗಲ್ ನಿಂದ ಆರಿಸಿಕೊಂಡಿದ್ದು.

 9. ರಂಜಿತ್ ಹೇಳುತ್ತಾರೆ:

  ಪ್ರದೀಪ್,

  ನಿಮ್ಮ ಅನಿಸಿಕೆಗೆ, ನೀಲಿಹೂವಿನ ಮೇಲಿನ ಪ್ರೀತಿಗೆ ಥ್ಯಾಂಕ್ಸ್.

  ಶರತ್,

  ಥ್ಯಾಂಕ್ಸ್. ಬಹಳಷ್ಟು ಹಿರಿಯ ಬರಹಗಾರರಿಗೆ ನನ್ನ ಕವಿತೆಗಳು ರುಚಿಸುವುದಿಲ್ಲ. ಬಹುಶಃ ಸುಲಭವಾಗಿ ಅರ್ಥವಾಗುತ್ತದೆ ಎಂಬ ಕಾರಣಕ್ಕೇ ಇರಬೇಕು..:)

  ಹೇಗೆ ಬರೆಯುತ್ತೇನೆ ಅಂತ ನನಗೇ ಅರ್ಥವಾದ ದಿನ, ನನ್ನ ಕವಿತೆಗಳು ಜಡವಾಗಲು ಪ್ರಾರಂಭವಾಗುತ್ತದೆ..:)

 10. ದಿವ್ಯಾ ಮಲ್ಯ ಹೇಳುತ್ತಾರೆ:

  ಆಹಾ ಕವಿತೆಯ ಕಂಪು ಇಲ್ಲೆಲ್ಲಾ ಹರಡಿತು 🙂

 11. Dr.Gurumurthy Hegde, Sweden ಹೇಳುತ್ತಾರೆ:

  ಕವಿತೆಯ ಘಮ ಘಮ ಎಲ್ಲೆಡೆ ಪಸರಿಸಲಿ
  ಸುಂದರ ಕವಿತೆ

 12. ನೂತನ ಹೇಳುತ್ತಾರೆ:

  ಆ ಅನಾನಿಮಸ್ಸು ನಾನೇ ಮರಾಯ.. ಯಾಕೋ ಹೆಸರು ಹಾಕಿದ್ದು ಬರಲೇ ಇಲ್ಲ 😦

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s