ಅಹಿರಾಮೃಗದ ಬಗ್ಗೆ..!

Posted: ಏಪ್ರಿಲ್ 12, 2010 in ಕವಿತೆ

ರಾಮಾನುಜನ್ ಕವಿತೆಯಲ್ಲೂ
ಅದರ ಬಗ್ಗೆ ವರ್ಣಿಸಲ್ಪಟ್ಟಿತ್ತು, ಆಗಲೇ ಅದನ್ನು
ನೋಡಲೇಬೇಕೆಂಬ ಆಸೆ ಮೊಳೆತದ್ದು.

the_second_carnation

ನಿಮ್ಮ ಅದೃಷ್ಟ, ಇಂದು ಎಲ್ಲರಿಗೂ
ಆಫ್ರಿಕಾದ ಗಾಢಕಾನನದೊಳಗೆ
ನಾ ನೋಡಿದಾಕ್ಷಣ ಎದೆ ಝಲ್ಲೆನಿಸುವಂತೆ
ಮಾಡಿದ ಆ ’ಅಹಿರಾಮೃಗ’ದ ಬಗ್ಗೆ
ಅದರ ಕ್ರೂರ ಕಣ್ಣು, ಹರಿತ ಉಗುರು
ರಕ್ತಪಿಪಾಸುತನ
ಮತ್ತು ಅದರ ಬಾಯಿಗೆ ಬಿದ್ದೂ ಜೀವ ಗೆದ್ದು
ಬಂದ ನನ್ನ ಕತೆ ಹೇಳುತ್ತೇನೆ, ಕೇಳುವಂತವರಾಗಿ

ಎಲ್ಲಾ ಸಾಲಾಗಿ ಕುಳಿತುಕೊಳ್ಳಿ
ಅಗೋ ಅಲ್ಲಿ.. ಜೇಬಿಂದ ಕೈತೆಗೆಯಪ್ಪಾ
ನೆಟ್ಟಗೆ ನಿಂತು ಸರಿಯಾಗಿ ಕೇಳಿಸಿಕೋ
ಮಗೂ ಪೆಪ್ಪರಮೆಂಟು ಮೆಲ್ಲುವುದನು ನಿಲ್ಲಿಸು
ಇದು ಮಾಮೂಲಿ ಹುಲಿ,ಸಿಂಹವಲ್ಲ, ಅಹಿರಾಮೃಗ.. ಅಹಿರಾಮೃಗ!

ಗಲಾಟೆ ಮಾಡಬೇಡಿರಿ ಸ್ವಾಮೀ, ಯಾವುದಾದರೊಂದು
ಘಟನೆ ತಪ್ಪಿಹೋದೀತು.. ಸುಮ್ಮನಾಗಿ ದಯವಿಟ್ಟು

ಬೇಗ ನಿಮ್ಮ ಸದ್ದುಗದ್ದಲ ನಿಲ್ಲಿಸಿ
ಇಲ್ಲವಾದರೆ ಈ ವೈನಾದ ಹೊತ್ತು ಕಳೆದೀತು
ಮತ್ತು ನನ್ನ
"ಮತ್ತು" ಇಳಿದೀತು, ನಂತರ ನೀವೆಲ್ಲಾ
ಒಟ್ಟಾಗಿ ಅಂಥದ್ದೊಂದು ಪ್ರಾಣಿ ಇಲ್ಲವೆಂದರೆ
ನಾನೂ ನಂಬಬೇಕಾದೀತು ನೋಡಿ ಮತ್ತೆ!

d87ff5c1ae09f58517f8fef636a4a186

(ಚಿತ್ರ ಕೃಪೆ : ಇಲ್ಲಿಂದ ಮತ್ತು ಇಲ್ಲಿಂದ)

ಟಿಪ್ಪಣಿಗಳು
 1. Tejaswini ಹೇಳುತ್ತಾರೆ:

  Onthara Vichitravaagide hesru… aadrU kavana chennagide… Ista aayitu 🙂

 2. Shamala ಹೇಳುತ್ತಾರೆ:

  ಹೆಸರು ಕೇಳೇ ಇರಲಿಲ್ಲ ರೀ… ಕವನ ಚೆನ್ನಾಗಿದೆ. ಆದರೆ ಅಹಿರಾಮೃಗದ ಬಾಯಿಗೆ ಬಿದ್ದೂ ಗೆದ್ದು ಬಂದ ಕಥೆ ಹೇಳ್ತೀನಿ ಅಂತ ಶುರೂನಲ್ಲಿ ನಂಬಿಸಿ…. ಕಥೆನೇ ಹೇಳಲಿಲ್ಲವಲ್ಲಾ ರಂಜತ್…? 🙂

 3. vijayashree ಹೇಳುತ್ತಾರೆ:

  ಅಹಿರಾಮ್ರುಘದ ಹೆಸರು ನಾನೂ ಕೇಳಿದ್ದೆನೆ ಆದರೆ ಎಲ್ಲಿ ನೆನಪಾಗುತ್ತಿಲ್ಲ…ಕವಿತೆ ಚನ್ನಾಗಿದೆ..

 4. ಸುಪ್ರೀತ್.ಕೆ.ಎಸ್ ಹೇಳುತ್ತಾರೆ:

  ಹೊತ್ತು ‘ವೈನ್’ಆದಾಗ ಈ ಫೈನಾದ ಕವಿತೆ ಬರೆದ್ರಾ? 🙂

 5. ರಂಜಿತ್ ಹೇಳುತ್ತಾರೆ:

  @ತೇಜಸ್ವಿನಿ,

  ಒಂಥರಾ ಅಲ್ಲ.. ಪೂರ್ತೀನೇ ವಿಚಿತ್ರವಾಗಿದೆ ಹೆಸರು..:) ಇನ್ನೂ ವಿಭಿನ್ನವಾದ, ಓದಿದಾಕ್ಷಣ ಭಯ ಹುಟ್ಟಿಸುವಂಥ ಹೆಸರಿಡಬೇಕಂತಿತ್ತು ಆದರೆ ರಾಮಾನುಜನ್ ಕವಿತೆ ಓದಿ ಇಂಥದ್ದೊಂದು ಪ್ರಯತ್ನ ಮಾಡುವ ಹೊಳಹು ಹುಟ್ಟಿದ್ದರಿಂದ ಅಹಿರಾಮೃಗ ಅನ್ನುವ ಹೆಸರೇ ಬಳಸಿದೆ..

  ಥ್ಯಾಂಕ್ಸ್.

  @ ಪಾಲ, ಗುರುಮೂರ್ತಿ ಹೆಗ್ಡೆ,

  ನಿಮಗೂ ಧನ್ಯವಾದಗಳು.

 6. ರಂಜಿತ್ ಹೇಳುತ್ತಾರೆ:

  @ ಶಾಮಲ,

  ಆ ಕಥೆ ಹೇಳೋಕೆ ಜನರ ಕುತೂಹಲ, ಗದ್ದಲ ಬಿಡುತ್ತಿಲ್ಲ. ಅದೂ ಅಲ್ಲದೇ ಆ ಸಮಯ “ವೈನ್”ಆದ ಸಮಯ ಬೇರೆ. ಹೊತ್ತು ಕಳೆಯುತ್ತಿದ್ದಂತೆ ಮತ್ತೂ ಇಳಿಯುವ ಹಾದಿ ಹಿಡಿದಿದೆ. ಸುತ್ತಲಿನ ಜನ ಅಲುಗಾಡಿದರೆ ತಾನು ಅನ್ನಬೇಕಿದ್ದ ಘಟನೆ ಉದುರಿಹೋಗುತ್ತದೆ ಅನ್ನೋ ರೀತಿ ಮಾತಾಡುತ್ತಿರುವ ನಿರೂಪಕನ ಮತ್ತಿಳಿದರೆ “ಅಂಥ ಮೃಗ ಇಲ್ಲ” ಅಂತ ಅವನೂ ನಂಬುತ್ತಾನೆ ಅನ್ನುವ ಅನುಮಾನ ಅವನಿಗೇನೆ ಇದೆ!..;-)

  @ ವಿಜಯಶ್ರೀ,

  ಅರೇ! ಹೌದೇ!? ನಾನಂತೂ ರಾಮಾನುಜನ್ ರ ಕವಿತೆಯಲ್ಲಿ ಬಿಟ್ಟರೆ ಈ ಕವಿತೆ ನಿರೂಪಕನ ಬಾಯಲ್ಲಿ..ಇದನ್ನು ಹೊರತುಪಡಿಸಿ ಎಲ್ಲೂ ಕೇಳಿದ್ದಿಲ್ಲ..!

  ಅನಿಸಿಕೆಗಾಗಿ ನಿಮ್ಮಿಬ್ಬರಿಗೂ ಥ್ಯಾಂಕ್ಸ್ .

  @ ಸುಪ್ರೀತ್,

  ವೈನಾದ
  ವೈನ್ ಇರದ
  ಡಿ-ವೈನ್ ಮನವಿರುವ
  ಹೊತ್ತಲ್ಲಿ ಫೈನ್ (ನಿಮ್ಮ ಅನಿಸಿಕೆ) ಆಗಿ ಬಂತನಿಸುತ್ತದೆ..:)

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s