ಗೆಳೆಯ ನವಿಲುಗರಿ ಸೋಮನ ಹೊಸ ಸಾಹಸ..!

Posted: ಏಪ್ರಿಲ್ 19, 2010 in ಬದುಕೇ, ಐ ಲವ್ ಯೂ!

ಬ್ಲಾಗುಲೋಕದ ಪ್ರೇಮಕವಿ ಅಂತಾನೇ ಹೆಸರುವಾಸಿಯಾದ ನವಿಲುಗರಿ ಸೋಮಣ್ಣ ಈಗ ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ. ಲವ್ ಲೆಟರ್, ಹನಿಗವಿತೆ, ಕವಿತೆ ಎಲ್ಲದರಲ್ಲೂ ಮೇಳೈಸಿ ಆದಮೇಲೆ ಈಗ ಅವರ ಹೊಸ ಸಾಹಸ ಗೀತರಚನೆ. ಅಲ್ಬಮ್ ಒಂದಕ್ಕೆ ಸೋಮಣ್ಣ ಬರೆದ ಹಾಡು, ಮಧುರ ಭಾವವನ್ನು ಬಡಿಸುತ್ತದೆ. ಪ್ರೀತಿಯ ಲೋಕವೊಂದಕ್ಕೆ ಎಳೆದೊಯ್ಯುತ್ತದೆ. ಆನೂರು ಶಿವು ಸಂಗೀತ ಮತ್ತು ಎಂ.ಡಿ. ಪಲ್ಲವಿ ಕಂಠದಲ್ಲಿ ಹಾಡು ಕೇಳಿದರೆ ಸಾಕು, ಕಳೆದುಹೋಗುವ ಗುಂಗು. ಎರಡೇ ನಿಮಿಷದಲ್ಲಿ ಕೇಳುವಾತ ಕೃಷ್ಣನಾಗುತ್ತಾನೆ. ಅವರವರ ರಾಧೆ ನೆನಪಾಗುತ್ತಾರೆ, ಮತ್ತು ಎದೆಯೊಳಗೇ ಹರಿವ, ಸುರಿವ, ಓಲಾಡುವ, ಸುಳಿಯಾಗುವ ಪ್ರೀತಿ ಜೀವ ಪಡೆದು ಚಿಮ್ಮುತ್ತದೆ.

ಹಾಗೆ ಸುಮ್ಮನೆ ಕೇಳಿ, ಮತ್ತು ಸೋಮಣ್ಣನ ಹೊಸ ಹಾದಿಗೆ ನಿಮ್ಮದೊಂದು ಒಳ್ಳೆ ಮನಸಿನ ಹಾರೈಕೆ ತಪ್ಪದೇ ಸಲ್ಲಲಿ.

ಪದ್ಯ ಕೇಳಲು ಇಲ್ಲಿ ಕ್ಲಿಕ್ಕಿಸಿ.

ಕೃಷ್ಣ ಮೆಚ್ಚಿದ ರಾಧೆ..!

ಪಲ್ಲವಿ :

ಪ್ರೀತಿಯ ತಂತಿಯ ಮೀಟಲು ಶ್ಯಾಮ
ರಾಧೆಯು ಬದುಕಿಗೆ ಸನಿಹ..||
ಇನ್ಯಾರದೋ ಮೋಹದಿ ಹೋಗಲು ದೂರ
ರಾಧೆಯ ಪುಟಪುಟ ವಿರಹ..||

ಪ್ರೀತಿಯ ಹೆಸರಿಗೆ ನಿಜಕಥೆ ಬರೆದರೆ.. (ಕೋರಸ್)
ಅದೇ ಕೃಷ್ಣ ಮೆಚ್ಚಿದ ರಾಧೆ…||

ಚರಣ ೧ :

ಬದುಕಿನ ಕಹಿಗಳ ನಾ ನೀಗಬೇಕು..
ನೀಡೊಂದು ನನಗೊಂದು ಗೂಡು ಶ್ಯಾಮ ||

ಜಾರದೇ ನೀತಿ
ಮೂಡಲಿ ಪ್ರೀತಿ
ಈ ಬದುಕೊಂದು ನಿನ್ನ ಹೆಸರ ಪ್ರೇಮ..||

ಪ್ರೀತಿಯ ಕಂಗಳ ಓದುವ ಕವಿತೆ.. (ಕೋರಸ್)
ಕವಿತೆಯೇ ಕೃಷ್ಣ ಮೆಚ್ಚಿದ ರಾಧೆ..||

ಚರಣ ೨ :

ಸಂಜೆಯ ಸೆರಗಿಗೆ ಬೇಕೊಂದು ಬೆಳಕು
ಅದರಲೇ ಹುಡುಕುವೆ ಬದುಕು

ದೊರಕದೇ ಹೋದರೆ ನಿನ್ನಾಸರೆ ನನಗೆ
ಮುಗಿಸುವೆ ಈ ಜನುಮದ ಸರಕು..||

ಪ್ರೀತಿಗೆ ಲೋಕವು ಹೇಳಿದ ಗಾದೆ.. (ಕೋರಸ್)
ಅದೇ ಕೃಷ್ಣ ಮೆಚ್ಚಿದ ರಾಧೆ..||

(ಮತ್ತೊಮ್ಮೆ ಸೂಚನೆ : ಎಂ.ಡಿ.  ಪಲ್ಲವಿ  ಕಂಠದಲಿ  ಕೇಳಲಿಕ್ಕಾಗಿ ಇಲ್ಲಿ ಕ್ಲಿಕ್ಕಿಸಿ )

ಟಿಪ್ಪಣಿಗಳು
 1. sowmya hebri ಹೇಳುತ್ತಾರೆ:

  ಇಂತಹ ಹತ್ತು ಭಾವಗೀತೆನ ಬೇಕಾದರೆ ಎರಡು ದಿನದಲ್ಲಿ ಬರಿತಾನೆ ಅವನು. ಪದಪುಂಜಗಳು ಮನಸ್ಸು ಸೆಳೆಯುತ್ತವೆ… ಪಲ್ಲವಿಯಕ್ಕನ ಇನಿದನಿಯಲ್ಲಿ ಆ ಗೀತೆ ಮಿಂದು ಪುಳಕಗೊಂಡಿದೆ. ಸೋಮ ನಿನ್ನ ಮೇಲೆ ನಿನ್ನ ಅಭಿಮಾನಿಗಳಿಗೆ ನಿರೀಕ್ಷೆಗಳು ತುಂಬಾನೆ ಇದೆ. ಇದು ಕೆಲವ ಆರಂಭದ ಚುಕ್ಕಿ ಮಾತ್ರ ….. ಎಲ್ಲರ ಹಾರೈಕೆ ನಿನಗಿರಲಿ ..
  ಸೌಮ್ಯ ನಾಗೇಶ್

 2. Mahesh ಹೇಳುತ್ತಾರೆ:

  Great Somu…
  All the best….

 3. Dr.Gurumurthy Hegde, Sweden ಹೇಳುತ್ತಾರೆ:

  ತುಂಬಾ ಚೆನ್ನಾಗಿದೆ
  ಭಾವ ತುಂಬಿದೆ ಗೀತೆಗಳು ಕೇಳಲು ಹಿತ
  ಮುಂದುವರೆಯಲಿ

 4. sharanu hullur ಹೇಳುತ್ತಾರೆ:

  somu tumba channagide riii… “sanjeya seragige bekondu belaku” saalugalu hidisidavu.

 5. ರಂಜಿತ್ ಹೇಳುತ್ತಾರೆ:

  ಸೋಮಣ್ಣನ ಪರವಾಗಿ ಮೆಚ್ಚಿದ ಹರಸಿ ಹಾರೈಸಿದ ಎಲ್ಲರಿಗೂ ನನ್ನಿ.

 6. Rohini Joshi ಹೇಳುತ್ತಾರೆ:

  Superb 🙂

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s