ದಾಂಪತ್ಯಗೀತ..

Posted: ಮೇ 5, 2010 in ಕವಿತೆ ತರಹ

ಗಂಟು ಕಟ್ಟಿ ನಂಟು ಬೆಳೆಸಿ

ವರ್ಷಾನುಗಟ್ಟಲೆ

ಯಾದರೂ ಆ ಮನೆಯಲ್ಲಿ ಒಂದು ಕಟ್ಟಲೆ

ಪ್ರತೀ ದಿನ

ಅವನು ತಲೆಬಾಗಿ ನನ್ನ ಪ್ರೀತಿಸ್ತೀಯಾ ಅಂತ ಕೇಳಬೇಕು

ಅವಳು ಇಲ್ಲಾ, ನಾ ಒಲ್ಲೆ ಅಂತನ್ನಬೇಕು

 

ಹಾಗೆಂದೊಡೆ ಅವ ಮತ್ತಷ್ಟು ಪ್ರೀತಿಸುತ್ತಾನೆ

ಗೋರಿಯೊಳಗೆ ಸೇರೊದರೊಳಗೆ ಒಮ್ಮೆ

ಒಪ್ಪುಗೆ ಪಡೆಯುತ್ತೇನೆ ಎಂಬ ನಂಬುಗೆಯಿಂದ.

ಅವಳಿಗೂ ಒಂದೆಡೆ ಯಾವುದೋ ಒಂದು ದಿನ

ಬೇಸರಾಗಿ ಅವ ಕೇಳದೇ ಹೋದರೆ

ಎಂಬ ಒಲುಮೆಯ ಭಯ.

03_Impasto_Painting_01

ಅವ ಹಾಗೆ ಕೇಳದೇ ಹೋಗಿದ್ದರೆ ಅಥವ

ಅವಳೆಲ್ಲಾದರೂ ಹೂಂ ಅಂದುಬಿಟ್ಟಿದ್ದರೆ

ಸಂಸಾರ ಟೇಕಿಟ್ ಗ್ರಾಂಟೆಡ್ ಆಗಿ

ದಿನ ಸಾಮಾನ್ಯವಾಗಿಬಿಡುವ ಅಪಾಯವಿತ್ತು.

ಬಯಸುತ್ತಲ್ಲವೇ ಹೂಗಿಡದ ಬೇರು

ದಿನ ದಿನ ಪ್ರೀತಿಯ ನೀರು.

 

ಆದರೂ ಅವಳ ಒಲ್ಲೆಯಲ್ಲೆ ಅವನ

ಮತ್ತು ಅವನ ಬೇಡಿಕೆಯಲ್ಲೆ ಅವಳ

ಗೆಲುವು,

ನಾಳೆಗೊಂದು ಭರವಸೆ,

ಮತ್ತಷ್ಟು ಪ್ರೀತಿಸಿ ಒಪ್ಪಿಗೆ ಪಡೆದೇ ಪಡೆವ

ನಂಬುಗೆ.

 

ಹಾಗಾಗಿ ದಿನ ಶುರುವಾದಾಗೆಲ್ಲಾ

ಅವರು ಮತ್ತಷ್ಟು ಖುಷಿಯಿಂದ ಹೊರಡುತ್ತಾರೆ,

ಪ್ರೀತಿ ನೀಡುವ, ಕೊಟ್ಟು ವಾಪಸ್ಸು ಬಯಸದ

ಸುಖಕ್ಕಾಗಿ.

 

(ಫೋಟೋಕೃಪೆ : ಇಲ್ಲಿಂದ)

Advertisements
ಟಿಪ್ಪಣಿಗಳು
 1. Gurumurthy ಹೇಳುತ್ತಾರೆ:

  Marvellous,

  good one

 2. ದಿವ್ಯಾ ಮಲ್ಯ ಹೇಳುತ್ತಾರೆ:

  ಪ್ರೀತಿಗೊಂದು ಹೊಸ ಆಯಾಮ! ಪ್ರೀತಿಸುವ ಜೀವಗಳಿಗೊಂದು ಹೊಸ ಐಡಿಯಾ ಕೊಡುವ ಕವಿತೆ.. ಚೆನ್ನಾಗಿದೆ 🙂

 3. Sushrutha ಹೇಳುತ್ತಾರೆ:

  ನೈಸೋ ನೈಸು. 🙂

 4. Tejaswini ಹೇಳುತ್ತಾರೆ:

  Beautiful.. AdarallU koneya saalugaLu mattU ishtavaadavu.

 5. ksraghavendranavada ಹೇಳುತ್ತಾರೆ:

  ರ೦ಜಿತ್, ನೀಲಿ ಹೂವಿನ ಎಸಳುಗಳು ಅದ್ಭುತವಾಗಿವೆ. ಏನು ಅ೦ದ? ಅಬ್ಬಾ! ಒ೦ದಕ್ಕಿ೦ತ ಒ೦ದು ಚೆ೦ದ! ದಾ೦ಪತ್ಯಗೀತ ನಿಮ್ಮ ಮಾಸ್ಟರ್ ಪೀಸ್! ಕವನಗಳಿಗೆ ಪೂರಕವಾಗಿ ಅಳವಡಿಸಿರುವ ಭಾವಚಿತ್ರಗಳು! ವಾವ್! ವರ್ಣನೆಗೆ ನಿಲುಕದ್ದು! ನಿಮ್ಮ ಕವನ ಯಾತ್ರೆ ಮು೦ದುವರೆಯಲಿ ಎ೦ಬ ಹಾರೈಕೆ ನನ್ನದು. ದೇವರು ಒಳ್ಳೆಯದು ಮಾಡಲಿ.
  ನಮಸ್ಕಾರ, ನನ್ನಿ.

 6. Shamala ಹೇಳುತ್ತಾರೆ:

  ಬಯಸುತ್ತಲ್ಲವೇ ಹೂ ಗಿಡದ ಬೇರು…. ದಿನ ದಿನ ಪ್ರೀತಿಯ ನೀರು…. ಸಕ್ಕತ್ ಸಾಲುಗಳು…. ತೀರ ಆಪ್ತವಾಗಿದೆ….. ಅವನ ಬೇಡಿಕೆ, ಅವಳ ಒಲ್ಲೆಯಲ್ಲೇ ಅರಳುವ ಸುಂದರ ಪ್ರೀತಿಯ ಹೂವುಗಳು. ಕಲ್ಪನೆ ನಿಜಕ್ಕೂ ಸುಂದರವಾಗಿದೆ…..

 7. venkatakrishna.k.k. ಹೇಳುತ್ತಾರೆ:

  ಚೆನ್ನಾಗಿದೆ…

 8. ನೂತನ ಹೇಳುತ್ತಾರೆ:

  ವಾಸ್ತವದ ನೆಲೆಯ ಆಯಾಮದಲ್ಲಿ ನೋಡಲಾರದ ಅಥವ ನೋಡಬಾರದ ಪದ್ಯ (ನಾವು ಏಷ್ಟೋ ಬಾರಿ ಪ್ರೀತಿಯ ಬಗ್ಗೆ ಯೋಚಿಸುವಾಗಲೇ ಯಾರದಾದರೂ ’ಮದುವೆಯ ಮಮತೆಯ ಕರೆಯೋಲೆ’ ಪ್ರತ್ಯಕ್ಷವಾಗುವುದು ಕಾಕತಾಳೀಯ ಸತ್ಯ !ಅಂತದರಲ್ಲಿ ಅವಳು ಹೀಗೆ ಸುಳ್ಳು ಹೇಳಿದರೆ ಅವನ ಗತಿಯೇನು? !).
  ದಾಂಪತ್ಯದಲ್ಲಿ (ನೇರ ಅನುಭವವಿಲ್ಲದಿದ್ದರೂ ಅದರ ಮಧ್ಯೆಯೇ ಬೆಳೆದ ಅನುಭವದಿಂದ ಹೇಳುವುದಾದರೆ) ಪ್ರೀತಿಯಷ್ಟೇ ಅನುಬಂಧ, ಜವಾಬ್ದಾರಿ, ಅನುಸರಣೆ, ಸೈರಣೆ, ಮುಂತಾದವುಗಳ ಪಾತ್ರವೂ ಮುಖ್ಯವಾದ್ದರಿಂದ ಯಾಕೋ ಶೀರ್ಷಿಕೆಯ ಭಾರ ಜಾಸ್ತಿಯಾದಂತನ್ನಿಸಿತು.
  ಆದರೂ ರಮ್ಯರಂಜಿತ ಸಾಲುಗಳ ಮಟ್ಟಿಗೆ ಹೇಳುವುದಾದರೆ ರಂಜಿತನಿಗೆ ರಂಜಿತನೇ ಸಾಟಿ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s