ಕೊನೆಗೂ ಐಶ್ವರ್ಯ ತೀರಿಸಿಕೊಂಡ ಸೇಡಿನ ಕಥೆ!

Posted: ಮೇ 7, 2010 in ಗಲ್ಲಿ ಗಾಸಿಪ್ !

ಫ್ಲಾಶುಬ್ಯಾಕು :

ಅದು ೨೦೦೫ ನೇ ಇಸವಿ ಆಗಸ್ಟ್ ನ ೨೫ ರ ಆಜೂಬಾಜೂ. ಭಾರತೀಯರ ಪಾಲಿಗೆ ಪ್ರೀತಿಯಿಂದ "ಆಶ್" ಅಂತಲೇ ಕರೆಯಲ್ಪಡುವ ಐಶ್ವರ್ಯಾ ರೈ ಅಂದು ನ್ಯೂಯಾರ್ಕ್ ಗೆ ಹೋಗುವುದಕ್ಕೆ ತಯಾರಾಗಿದ್ದರು.

ಐರ್ ಪೋರ್ಟಿನಲ್ಲಿ ಆಕೆ ವಿಮಾನಕ್ಕಾಗಿ ಕಾಯುತ್ತಿದ್ದಾಗ ಆ ಸುದ್ಧಿ ಬಂದಿತ್ತು. ಏನೆಂದರೆ ಅಲ್ಲಿ ಚಂಡಮಾರುತವೊಂದು ಬೀಸುತ್ತಿರುವುದರಿಂದ ಅಮೇರಿಕೆಗೆ ಹೊರಡುವ ಎಲ್ಲಾ ವಿಮಾನಗಳೂ ತನ್ನ ಪ್ರಯಾಣ ರದ್ದು ಮಾಡಿದೆ ಎಂಬುದಾಗಿ.

ಮತ್ತು ಆ ಹರಿಕೇನ್ ನ ಹೆಸರು "ಕತ್ರಿನಾ" ಎಂದಾಗಿತ್ತು.

 ash-katrina

೨೦೧೦ :

ಏಪ್ರಿಲ್ ಮಧ್ಯಂತರ ಸಮಯ. ಐಪಿಯೆಲ್ಲಿನ ಮಧ್ಯದಲ್ಲೇ ಕತ್ರಿನಾ ಗೆ ತನ್ನ ಮನೆಯ ನೆನಪಾಗಿ ಲಂಡನ್ ಗೆ ಹೋಗುವುದಕ್ಕೆ ಎಲ್ಲಾ ಸಿದ್ಧತೆ ನಡೆಸಿದ್ದರು. ಒಂದು ಸುದ್ಧಿ ಆಕೆಯನ್ನು ಸ್ವಲ್ಪ ದಿನಗಳ ಕಾಲ ಮನೆಗೆ ಹೋಗದಂತೆ ನಿರ್ಬಂಧಿಸಿತು.

ಅದಕ್ಕೆ ಕಾರಣ ಉತ್ತರ ಯೂರೋಪ್ ನಲ್ಲಿ ಉಂಟಾದ ವೋಲ್ಕಾನೋ ಆಗಿತ್ತು. ಅದರ ಹೆಸರು Eyjafjallajökul.

ಈ ಹೆಸರು ಕೇಳಿದಾಗ ತಲೆಬುಡ ಅರ್ಥವಾಗದ ಕತ್ರಿನಾ ಸ್ವಲ್ಪ ಸುಲಭವಾಗಿ ಅರ್ಥವಾಗುವಂತೆ ತಿಳಿಸಿ ಅಂದಾಗ, ಅವರು ಇದಕ್ಕೆ "ಆಶ್" ಕ್ಲೌಡ್ ಅಂತಾರೆ ಮೇಡಮ್ ಅಂದರಂತೆ!

ಬರೋಬ್ಬರಿ ಐದು ವರ್ಷದ ನಂತರ ಅಂತೂ ಆಶು ತನ್ನ ಹವಾಮಾನ ಪ್ರಕೋಪಾಸ್ತ್ರದಿಂದ ಸೇಡು ತೀರಿಸಿಕೊಂಡರು!

 

********

ಚಿತ್ರಕೃಪೆ : ಇಲ್ಲಿಂದ

ಟಿಪ್ಪಣಿಗಳು
 1. Shamala ಹೇಳುತ್ತಾರೆ:

  ಹ್ಹ ಹ್ಹಹ್ಹ……… 🙂 🙂 🙂

 2. ವಿಜಯರಾಜ್ ಕನ್ನಂತ ಹೇಳುತ್ತಾರೆ:

  🙂

 3. Vanitha ಹೇಳುತ್ತಾರೆ:

  hha hha..First time here..Nice blog 🙂

 4. Santhosh ಹೇಳುತ್ತಾರೆ:

  PJ of the year aago ella lakshaNagaLu ive

 5. Raghavendra Hegde ಹೇಳುತ್ತಾರೆ:

  ಹ ಹ ಚೆನ್ನಾಗಿದೆ ಸರ್…:)

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s