ಮತ್ತೊಂದಿಷ್ಟು ಶಬ್ದಚಿತ್ರಗಳು..

Posted: ಮೇ 27, 2010 in ಒಂದ್ಸಾಲಿನಲಿ ಕವಿತೆ!, ಶಬ್ದಚಿತ್ರ

೧. ಇಬ್ಬನಿ : ಹೂವ ಮೊಗ್ಗು ಪರಿಮಳ ಹೆರುವಾಗ ಸುರಿದ ದಳದಳ ಬೆವರು!

೨. ಚಂದಿರ : ತಂಟೆಪುಟ್ಟ ತರಲೆಯಿಲ್ಲದೇ ಕೈತುತ್ತು ತಿನ್ನುವಂತೆ ಮಾಡಲು ಅವ್ವ ಬಳಸುವ ಅಮೂಲ್ಯ ಆಟದ ಸಾಮಾನು.

೩. ಮಳೆ : ಭೂತಾಯಿ ಬರೆದ ಅದ್ಭುತ ಹಸಿರು ಕವಿತೆಗೆ ಆಗಸ ಸುರಿಸಿದ ಚಪ್ಪಾಳೆ ಪುಷ್ಪವೃಷ್ಟಿ!

೪. ರಾಗ : ಕೊಳಲಿಗೆ ಕಿವಿಗೊಟ್ಟೆ, ಕಿವಿಯೆಲ್ಲಾ ಕಾವ್ಯ!

೫. ವಿಪರೀತ : ನಡುಗುವ ಚಳಿಯೆಂದು ಕಂಬಳಿ ಹೊದ್ದರೆ ಒಳಗೆ ಉರಿಉರಿ ಸೆಕೆ!

೬. ಕಿಟಕಿ : ನೀನು ಸಿಗದೇ ಇದ್ದ ದಿನಗಳಲಿ ಕೊಂಚ ಸಿಟ್ಟಿನಲಿ, ಕೊಂಚ ಬೇಸರದಲಿ ಇಡೀ ಜಗತ್ತನ್ನು ಕಿಟಕಿಯ ಕಂಬಿಗಳಾಚೆಗಿನ ಜೈಲಿನಲಿ ಕೋಳ ತೊಡಿಸಿಡುತ್ತೇನೆ.

೭. ಸಾಗರ : ನನಸಾದ ಸಾವಿರಾರು ತೊರೆಗಳ ಕನಸು.

೮. ಬೇರು : ನೀರ ಮೇಲಿನ ಪ್ರೀತಿಗೆ ಭೂಮಿ ಬಗೆವ ಶಕ್ತಿ.

 

(ಇದು ವಿ.ಕ. ದ ಸಿಂಪ್ಲಿಸಿಟಿ ಪೇಜಿನಲ್ಲಿ ಪ್ರಕಟವಾಗಿದೆ)

ಟಿಪ್ಪಣಿಗಳು
 1. ಅನಾಮಿಕ ಹೇಳುತ್ತಾರೆ:

  ಶಬ್ದ ಚಿತ್ರಗಳು ನಿಜಕ್ಕೂ ಚೆನ್ನಾಗಿವೆ…

 2. shivu.k ಹೇಳುತ್ತಾರೆ:

  ಶಬ್ದ ಚಿತ್ರಗಳು ನಿಜಕ್ಕೂ ಚೆನ್ನಾಗಿವೆ.

 3. ರಾಘವೇಂದ್ರ ಹೆಗಡೆ ಹೇಳುತ್ತಾರೆ:

  ನನಸಾದ ಸಾವಿರಾರು ತೊರೆಗಳ ಕನಸು ಎಂಬ ಸಾಗರದ ಬಗೆಗಿನ ಕಲ್ಪನೆ ಅದ್ಭುತ ..

 4. ramesh ಹೇಳುತ್ತಾರೆ:

  Male – Bhootaayi bareyaliruva hasirina chittarakke , aagasa needuttiruva chendada kaanike

 5. ramesh ಹೇಳುತ್ತಾರೆ:

  Male – Bhootaayi bareyaliruva hasurina chittarakke , Aakasha needuva olavina kaanike.

 6. ರಂಜಿತ್ ಹೇಳುತ್ತಾರೆ:

  ಸೀತಾರಾಮ್, ಶಿವು, ರಾಘವೇಂದ್ರ ಹೆಗಡೆ, ರಮೇಶ್

  ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s