ಅಪಾಯದ ಭಯವೂ ನಮ್ಮ ಜತೆ ಟಿಕೆಟ್ಟಿಲ್ಲದೇ ಪಯಣಿಸುತ್ತಿರುತ್ತದೆ!

Posted: ಮೇ 29, 2010 in ಪರ್ಸನಲ್ಲು

ಮಂಗಳೂರು ವಿಮಾನ ದುರಂತ ನಡೆದ ಎರಡು ದಿನದ ಹಿಂದೆಯಷ್ಟೇ ಅಲ್ಲೇ ನಾನೂ ಇಳಿದಿದ್ದೆ ಅಂತ ಊಹಿಸಿದರೆನೇ ಭಯವಾಗುತ್ತದೆ.

ಅಂದು ಇಳಿದಿದ್ದಾಗ ಅಂಥ ಭಯವಿರಲಿಲ್ಲ. ಮೋಡಗಳ ರಾಶಿಯ ಮಧ್ಯೆ ವಿಮಾನ ಅಲುಗಾಡಿದಾಗ, ಲ್ಯಾಂಡಿಂಗ್ ಹೊತ್ತಿನಲ್ಲಿ ವಿಮಾನದ ಚಕ್ರ ಭೂಸ್ಪರ್ಶವಾದಾಗ ಆಗುವ ಜರ್ಕ್ ಗೆ, ಅದೇನೋ ಆದವರಂತೆ ಗಗನಸಖಿಗಳು ಆಚೆ ಈಚೆ ಜೋರಾಗಿ ಓಡಾಡುವಾಗ, ಏರೋಸೋಲ್ ನ್ನು ವಿಮಾನದೊಳಗೆ ಸಿಂಪಡಿಸುವಾಗೆಲ್ಲಾ ನದಿಗಿಳಿದಾಗ ದೋಣಿಯ ಅಂಬಿಗನ ಮೇಲಿನ ನಂಬುಗೆಯಂತೆ ಸಲಿಲವಾಗಿತ್ತು ಮನಸು. ಏನೇ ಆದರೂ ಎಲ್ಲ ಸರಿಮಾಡುವರು, ಅನುಭವವುಳ್ಳವರು ಅನ್ನುವ ನಂಬಿಗೆ.

ಇನ್ನು ಹಾಗಿಲ್ಲ. ವಿಮಾನದುರಂತದ ಪರಿಣಾಮವನ್ನು ಕಣ್ಣಿಗೆ ಕಟ್ಟಿದ ಹಾಗೆ ತೋರಿಸಿದ ಮಾಧ್ಯಮಗಳ ಕೃಪೆಯಿಂದ ವಿಮಾನ ಕೊಂಚ ಅಲುಗಿದರೂ ಎದೆಯೊಳಗೊಂದು ಪುಕುಪುಕು ಹೆದರಿಕೆ ಜನ್ಮತಾಳುತ್ತದೆ. ಕಿಟಕಿಯಾಚೆಗೇ ಕೀಲುಹಾಕಿದಂತೆ ಕಣ್ಣು ಅಪಾಯವೊಂದಕ್ಕೆ, ವಿಮಾನ ಸೀಳಿದರೆ ಹಾರಲು ತಯಾರಾಗುವಂತೆ ಬೆಲ್ಟಿನಲ್ಲೆ ಕೈಯಿರುತ್ತದೆ. ಸುಖಾಸುಮ್ಮನೆ ಅಪಾಯದ ಹೆದರಿಕೆಯೊಂದು ನಮ್ಮ ಜತೆಯೇ ಟಿಕೆಟ್ಟಿಲ್ಲದೇ ಪಯಣ ಮಾಡುತ್ತಿರುತ್ತದೆ.

ಆದರೆ ಎಂಥ ಭಯವಿದ್ದರೂ ಎಂಥ ದುರಂತವಾದರೂ ಬದುಕು ನಿಲ್ಲುವುದಿಲ್ಲ. ಮೊನ್ನೆ ಯಾರೋ ಒಬ್ಬ ಭಯದಂಟುರೋಗ ಹರಡುವವರು ಕೇಳಿದ್ದರು. "ಅಲ್ಲಾ ಕಣ್ರೀ, ಅದ್ಯಾವ ಗ್ಯಾರೆಂಟಿ ಮೇಲೆ ವಿಮಾನ ಪ್ರಯಾಣ ಮಾಡ್ತೀರ್ರಿ?" ಅವರು ಹಿಂದಿನ ದಿನವಷ್ಟೇ ಯಾವುದೋ ಚಾನೆಲ್ ಒಂದರಲ್ಲಿ ತೋರಿಸಿದ ಎಲ್ಲಾ ವಿಮಾನ ಅಪಘಾತದ ಚಿತ್ರಣವೊಂದರ ಪ್ರೋಗ್ರಾಮ್ ನ್ನು ನೋಡಿದ್ದರಂತೆ. ಅವರೊಳಗೆ ಮೂಡಿದ್ದ ಭಯವನ್ನು ನನ್ನವರೆಗೂ ಹರಡಲು ಮಾತಿಗಾರಂಭಿಸಿದ್ದರು.

ನಾವಿಬ್ಬರೂ ಕೂತಿದ್ದ ಬಸ್ಸು ಆಗಷ್ಟೇ ಅಪಾಯಕಾರಿಯಾದ ಓವರ್ ಟೇಕ್ ನ್ನು ಯಶಸ್ವಿಯಾಗಿ ಮುಗಿಸಿ ಬಸ್ಸೊಳಗಿದ್ದವರ ನಿಟ್ಟುಸಿರು ಇನ್ನೂ ಮುಗಿದಿರಲಿಲ್ಲ. " ಸರ್, ನೀವು ಈ ಬಸ್ಸಿನಲ್ಲಿ ಕೂತು ಧೈರ್ಯವಾಗಿ ಇದರ ಕುರಿತು ಹೇಗೆ ಮಾತಾಡ್ತಿದ್ದೀರೋ ಅದೇ ಗ್ಯಾರೆಂಟಿ ಮೇಲೆ" ಅಂದೆ. ಸಾವು ಬದುಕಿನ ಗ್ಯಾರೆಂಟಿಗಳ ಕುರಿತೇ ಇದ್ದ ಯಕ್ಷ ಪ್ರಶ್ನೆಯೊಂದು ನೆನಪಾಯ್ತು.

ಇಷ್ಟಕ್ಕೂ ಸ್ವಲ್ಪ ದಿನದ ಹಿಂದೆ ಲಿಬಿಯಾದಲ್ಲೊಂದು ಭೀಕರ ವಿಮಾನ ದುರಂತ ಆಗಿತ್ತು. ಆಗ ಅನ್ನಿಸದಿದ್ದ ಅಪಾಯ ಈಗೇಕೆ ಅನ್ನುವ ಪ್ರಶ್ನೆಯೊಂದು ಈಗ ಮನದಲ್ಲಿ ಮನೆ ಮಾಡಿದೆ.

ಅದೇನೆ ಇರಲಿ, ಮನಸ್ಸಿನ ಭಯವನ್ನೆಲ್ಲಾ ನಂಬಿಕೆಗಳು ಹೊಡೆದುಹಾಕಲಿ. "ಮತ್ತೆ ಬನ್ನಿ" ಅನ್ನುವ ಫಲಕ ನಮಗೆ ಖುಷಿ ನೀಡಲಿ.  ಜಗದ ಎಲ್ಲರ ಪಯಣಗಳು ಸುಖಕರವಾಗಿರಲಿ.

ಮೇ ಮೂವತ್ತಕ್ಕೆ ಕುಂದಾಪುರದಿಂದ ಹೊರಟ ನನ್ನ ಸಿಂಗಪೂರ್ ಪಯಣವೂ ಸೇರಿ.

ಟಿಪ್ಪಣಿಗಳು
 1. Dinakar ಹೇಳುತ್ತಾರೆ:

  tumbaa novu kotta ghatane idu…… yaara jeevakkoo elloo gyarantee kodakaagalla alvaa…… vimaanada saddu keLidroo hedarike aagatte….. namma singapoor pravaasakke best of luck..

 2. manasu ಹೇಳುತ್ತಾರೆ:

  ನಿಜ ನಿಮ್ಮ ಮಾತು, ಭಯ ಅನ್ನೋಂದು ಇದ್ದೇ ಇರುತ್ತೇ ಆದರೆ ಸಮಯ ಎಲ್ಲವನ್ನು ಮರೆಸುತ್ತೆ…..

  ಟಿಕೆಟ್ ತಗೋತನೇ ಇರ್ತೀವಿ…ಅಂದರೆ ಬಸ್, ಏರೋಪ್ಲೇನ್ ಟಿಕೆಟ್ ತಗೋತನೇ ಇರ್ತೀವಿ ಹಾಗೆ ನಮ್ಮ ಸಮಯ ಬಂದರೆ ಭೂಮಿಯಿಂದನೂ ಟಿಕೆಟ್ ತಗೋತೀವಿ. ಆದರೆ ಇಂತ ಭಯಾನಕ ಸಾವುಗಳನ್ನು ಕಂಡು ಮನವಂತೂ ಕಲಕುತ್ತೆ ಅಲ್ಲವೆ.

 3. shivu.k ಹೇಳುತ್ತಾರೆ:

  ಇದೆಲ್ಲವನ್ನು ನೋಡಿದಾಗ ಖಂದಿತ ಭಯವಾಗುತ್ತೆ. ಆದ್ರೂ ಸಮಯವೇ ಎಲ್ಲವನ್ನು ಖಂಡಿತ ಮರೆಸುತ್ತೇ. ನಿಮ್ಮ ಪ್ರಯಾಣ ಸುಖಕರವಾಗಲಿ…

 4. Gurumurthy ಹೇಳುತ್ತಾರೆ:

  Really unbelievable incident

 5. ರಂಜಿತ್ ಹೇಳುತ್ತಾರೆ:

  ದಿನಕರ್, ಮನಸು, ಶಿವು, ಗುರುಮೂರ್ತಿ,

  ನಿಮ್ಮ ಅನಿಸಿಕೆಗಳಿಗೆ ಥ್ಯಾಂಕ್ಸ್.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s