ದೊಡ್ದವನಾದ ಬೇಸರ!

Posted: ಜೂನ್ 26, 2010 in ಕವಿತೆ ತರಹ

ಚಿಕ್ಕಂದಿನಲ್ಲಿ ಮಿಂಚ

ನ್ನು ಲಾವಂಚ

ವಾಗಿಸಿ

ಮೋಡಗಳೊಳಗೆ ಅದ್ದಿ

ಆ ಸುಮಧುರ, ಸುವಾಸಿತ

ನೀರನ್ನು ಗಟಗಟನೆ

ಕುಡಿಯಬೇಕು ಅನ್ನಿಸಿತ್ತು

thunder_storm

ನಕ್ಷತ್ರದ ಕೈಗಳನ್ನು

ಶಕ್ತಿ ಹಾಕಿ ಎಳೆದು

ಉದ್ದ ಮಾಡಿ ನಮ್ಮನೆ

ಅಕ್ವೇರಿಯಮ್ಮಿನ

ಮೀನುಗಳ ಜತೆ ಬಿಟ್ಟು

ನಕ್ಷತ್ರ ಮೀನಾಗಿಸುವ

ಆಸೆಯಿತ್ತು.

 

ಗ್ಯಾಸಂಡೆ ಖಾಲಿಯಾದ ದಿನ

ಅವ್ವ ಅವತ್ತು ದೋಸೆಯಿಲ್ಲ ಅಂದಾಕ್ಷಣ

ಆ ಬೇಸರಕ್ಕೆ

ಸೂರ್ಯನನ್ನು ಅಳತೆ ಮಾಡಿ

ಕಾವಲಿಗಿಂತ ಚಿಕ್ಕದಿರುವುದು ಲೆಕ್ಕಹಾಕಿ

ಅವನ ಮೇಲೆ ಕೂಡ ಸ್ಕೆಚ್ ಹಾಕಿದ್ದುಂಟು.

 

ಒಮ್ಮೆ ದೊಡ್ಡವನಾದ ಮೇಲೆ ಇದೆಲ್ಲವನೂ

ಸಾಧಿಸುವೆ ಅಂತ ಅಂದುಕೊಂಡಾಗ

ಮಿಂಚು, ನಕ್ಷತ್ರ, ಸೂರ್ಯನ ಕಣ್ಣಲ್ಲಿ

ಸಣ್ಣ ಆತಂಕವೊಂದನ್ನು ಕಂಡಿದ್ದ

ನೆನಪು ಇನ್ನೂ ಹಸಿ ಹಸಿ.

2652241110_f081b78c91

ಆದರೀಗ 

ದೊಡ್ಡವನಾಗಿ

ಅದು ಅಸಾಧ್ಯ ಅನ್ನಿಸಿ

ಕಂಡಾಪಟ್ಟೆ ಬೇಸರವಾಗಿದೆ!

 

ಮತ್ತೆ ಅವುಗಳ ಕಣ್ಣಲ್ಲಿ

ಮಿರುಗು,

ಬದುಕುಳಿದ ಹಿರಿಹಿರಿಹಿಗ್ಗು!

 

 

(ಚಿತ್ರದ ಕ್ರೆಡಿಟ್ಟು : ಗ್ರೇಟ್ ವಾಟ್ಸಿತ್ ಮತ್ತು ಇಲ್ಲಿಂದ )

Advertisements
ಟಿಪ್ಪಣಿಗಳು
 1. ksraghavendranavada ಹೇಳುತ್ತಾರೆ:

  ಸಕತ್… ಮಿ೦ಚನ್ನು ಲಾವ೦ಚವನ್ನಾಗಿ ಮಾಡಿ… ಗಟ ಗಟನೆ…. ಸಕತ್. ಅಡಿಗರೇ.
  ನಮಸ್ಕಾರಗಳು.

 2. ಅನಾಮಿಕ ಹೇಳುತ್ತಾರೆ:

  Very Nice 🙂 ನನಗೂ ಬೇಸರವಿದೆ…. ಆದರೆ ನನ್ನ ವಿಷಯದಲ್ಲಿ ಒಂದು extra add ಆಗುತ್ತದೆ…:) ಮಿಂಚು, ಸೂರ್ಯ, ನಕ್ಷತ್ರಗಳು ಮಾತ್ರವಲ್ಲ…. ಚಂದ್ರ ಕೂಡ ಚೇತರಿಸಿಕೊಂಡಿದ್ದಾನೆ…. ನನ್ನ ಕೈಯಿಂದ ಬದುಕುಳಿದುದಕ್ಕಾಗಿ.

 3. Tejaswini Hegde ಹೇಳುತ್ತಾರೆ:

  ನನಗೂ ಬೇಸರವಿದೆ…. ಆದರೆ ನನ್ನ ವಿಷಯದಲ್ಲಿ ಒಂದು Extra Add ಆಗುತ್ತದೆ…:) ಮಿಂಚು, ಸೂರ್ಯ, ನಕ್ಷತ್ರಗಳು ಮಾತ್ರವಲ್ಲ…. ಚಂದ್ರ ಕೂಡ ಚೇತರಿಸಿಕೊಂಡಿದ್ದಾನೆ….ನನ್ನ ಕೈಯಿಂದ ಬದುಕುಳಿದುದಕ್ಕಾಗಿ.

 4. ಕಲ್ಯಾಣ್ ಹೇಳುತ್ತಾರೆ:

  ತುಂಬಾ ಚೆನ್ನಾಗಿದೆ.

 5. ವಿಜಯರಾಜ್ ಕನ್ನಂತ ಹೇಳುತ್ತಾರೆ:

  nice one ranjith

 6. Shamala ಹೇಳುತ್ತಾರೆ:

  ಸೂಪರ್ ರಂಜಿತ್…..

  ನಿಜವಾಗಲು ಚಿಕ್ಕವರಿದ್ದಾಗಲೇ ಚೆನ್ನಾಗಿತ್ತು. ಎಂತಹ ಅದ್ಭುತ ಕಲ್ಪನೆಗಳಿದ್ದವು, ಕನಸುಗಳಿದ್ದವು. ಈಗ ಅವೆಲ್ಲಾ ಏನೂ ಆಗೋಲ್ಲಾಂತ ನಂಗೂ ಬೇಸರವೇ… ಸೂರ್ಯ, ನಕ್ಷತ್ರಗಳ ಕಣ್ಣಲ್ಲೂ ಆತಂಕ ಕಂಡೆನೆಂಬ ಕಲ್ಪನೆ ನಿಜಕ್ಕೂ ಮುದ ಕೊಡ್ತು…

  ಶ್ಯಾಮಲ

 7. Gurumurthy ಹೇಳುತ್ತಾರೆ:

  tumbaa sogasaada kalpane

 8. ದಿವ್ಯಾ ಹೇಳುತ್ತಾರೆ:

  ಚಂದದ ಕವಿತೆ ರಂಜಿತ್.. 🙂

 9. manasu ಹೇಳುತ್ತಾರೆ:

  nimma kavana tumba chennagide haage nimma kalpaneyu saha chennagide……

 10. venuvinod ಹೇಳುತ್ತಾರೆ:

  ಮೊದಲೆರಡು ಪ್ಯಾರಾದಲ್ಲಿರುವ ಕಲ್ಪನೆ ಅಮೋಘ…hats off…

 11. ರಂಜಿತ್ ಹೇಳುತ್ತಾರೆ:

  ಕೆ ಎಸ್ ರಾಘವೇಂದ್ರ, ತೇಜಸ್ವಿನಿ, ಕಲ್ಯಾಣ್, ವಿಜಯ್ರಾಜ್ ಜಿ, ಶ್ಯಾಮಲ, ಗುರುಮೂರ್ತಿ, ದಿವ್ಯಾ, ಮನಸು, ವೇಣುವಿನೋದ್

  ನಿಮ್ಮೆಲ್ಲರ ಅನಿಸಿಕೆಗೆ, ಮೆಚ್ಚುಗೆಗೆ ಧನ್ಯವಾದಗಳು.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s