ಒಂದು ಗುಂಗಲ್ಲಿ..!

Posted: ಜುಲೈ 11, 2010 in ಕವಿತೆ ತರಹ

 

ಎದೆಬಡಿತ ಸಂತೆ ಗದ್ದಲ

ಕಣ್ಣು ಅಚ್ಚರಿಯ ಸಾಗರ

ಮಾತು ಮೋಡತುಂಬಿದಾಗಸ

ರೆಕ್ಕೆಯಾಗುವ ಪುಳಕ ಕಾಲಿಗೆ

 

ದಿಕ್ಕಾಪಾಲಾದ ತೆರೆಗೆಲೆ ಮನ

ಹಳೆ ನೆನಪೊಂದು ಗೀಚಿದ ಕವನ

ಮರಳುಗಾಡಿನಂತಿದ್ದವನ

ಒಳಗೇ ಕಾಮನಬಿಲ್ಲಾದಂಥ ರೋಮಾಂಚನ

 

ಯುಗವೊಂದನ್ನು ಜೀಕಿದ ಅನುಭವ

ಕ್ಷಣದ ಕಾಲಿಗೆ

ಕಣ್ಣಲ್ಲೇ ಸಾವಿರ ಕನಸನು ಹುಟ್ಟಿಸಿದವಳು ಇನ್ನು

ವರ್ಣಿಸಲೇನು ಉಳಿದಿದೆ ಅಕ್ಷರಗಳ ಪಾಲಿಗೆ

 

ಅವನಿಗಿನ್ನು ಕವಿಯಾದರಷ್ಟೇ ಬಿಡುಗಡೆ

ಇಲ್ಲದಿರೆ ವಿರಹದ ಸುಡುಗಾಡೇ

ಎಂದರೂ

ಬಾಯ್ಬಿಟ್ಟು ಕಾದಿಹರೆಲ್ಲರೂ

ಚೆಲುವ ಮೋಡಿ ನೋಡಿ

ಅವ ಗೀಚಬಹುದಾದ ಹಾಡಿಗೆ

bch_bduc_solitude_small

ಅವ ಮಾತ್ರ ಪದಗಳ ಕಾಡಲ್ಲಿ

ಹಾದಿಮರೆತ ಗುಂಗಲಿ,

ಎಲ್ಲ ಮರೆತು ತಾನು ತನ್ನ ಪಾಡಿಗೆ..!

 

(ಫೋಟೋ ಕೃಪೆ : ಈ ವೆಬ್ ಸೈಟ್)

Advertisements
ಟಿಪ್ಪಣಿಗಳು
 1. ಅನಾಮಿಕ ಹೇಳುತ್ತಾರೆ:

  ದಿಕ್ಕಾಪಾಲಾದ ತೆರೆಗೆಲೆ ಮನ

  ಹಳೆ ನೆನಪೊಂದು ಗೀಚಿದ ಕವನ

  ಮರಳುಗಾಡಿನಂತಿದ್ದವನ

  ಒಳಗೇ ಕಾಮನಬಿಲ್ಲಾದಂಥ ರೋಮಾಂಚನ
  ನೀಲಿ ಹೂವಿನ ಸುಂದರ ಸಾಲುಗಳು ಮನದ ತುಮುಲಗಳನ್ನು ಹೊರಗೆಡಹಿದ ಬಗೆ ಚನ್ನಾಗಿದೆ ಅದರಲ್ಲೂ ಈ ಕೆಳಗಣ ಸಾಲುಗಳು ತುಂಬಾ ಇಷ್ಟವಾದವು.

 2. Shamala ಹೇಳುತ್ತಾರೆ:

  ಅವ ಮಾತ್ರ ಪದಗಳ ಕಾಡಲ್ಲಿ
  ಹಾದಿಮರೆತ ಗುಂಗಲಿ,
  ಎಲ್ಲ ಮರೆತು ತಾನು ತನ್ನ ಪಾಡಿಗೆ..!……… ಅದ್ಯಾಕೋ ಈ ಸಾಲುಗಳು ಮತ್ತೆ ಮತ್ತೆ ಓದಿಸಿಕೊಂಡವು. ಇಷ್ಟವಾಯಿತು ನಿಮ್ಮ ಕವನ…….

  ಶ್ಯಾಮಲ

 3. ದಿವ್ಯಾ ಹೇಳುತ್ತಾರೆ:

  >>ಎದೆಬಡಿತ ಸಂತೆ ಗದ್ದಲ

  ಕಣ್ಣು ಅಚ್ಚರಿಯ ಸಾಗರ

  ಮಾತು ಮೋಡತುಂಬಿದಾಗಸ

  ರೆಕ್ಕೆಯಾಗುವ ಪುಳಕ ಕಾಲಿಗೆ<<

  ತುಂಬಾ ಇಷ್ಟವಾಯ್ತು 🙂

 4. ವಿಜಯರಾಜ್ ಕನ್ನಂತ ಹೇಳುತ್ತಾರೆ:

  ತುಂಬಾ ಚೆನ್ನಾಗಿದೆ .. ಇಷ್ಟ ಆಯ್ತು…
  ಆದ್ರೆ ನಂದು ಒಂದು ಕಂಪ್ಲೆಂಟು… ಈ ಥೀಮ್ ನಲ್ಲಿ ಓದೋಕೆ ಭಾರಿ ಕಷ್ಟ ಮರಯ್ರೆ.. ಬ್ಯಾಕ್ ಗ್ರೌಂಡ್ ಎದ್ದು ಕಾಣುತ್ತೆ ಅಕ್ಷರ ಸಮಾನಾಗಿ ಕಾಣ್ಸೋಲ್ಲ

 5. ರಂಜಿತ್ ಹೇಳುತ್ತಾರೆ:

  ಅನಾನಿಮಸ್, ಶ್ಯಾಮಲ, ದಿವ್ಯಾ, ವಿಜಯ್ ಜಿ,

  ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ.

  ವಿಜಯ್ ಜಿ, ಈಗ ಸರಿ ಪಡಿಸಿದ್ದೀನಿ.

 6. Gurumurthy ಹೇಳುತ್ತಾರೆ:

  ತುಂಬಾ ಚೆಂದದ ಕವನ, ಫೋಟೋ ಕೂಡಾ ಒಪ್ಪುವಂತಿದೆ ಕವನಕ್ಕೆ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s