ಪ್ರೇಮ ಮತ್ತು ವಿಜ್ಞಾನ..!

Posted: ಜುಲೈ 14, 2010 in ಕವಿತೆ

 

ನೀನು ಬಳಿ ಸುಳಿವಾಗ

ಮೂಡುವ ಒಳಪುಳಕ

ನಗು ಮೆಲ್ಲಗೆ ನನ್ನೊಳಗೆ ಹರಿದು

ನನ್ನಾತ್ಮ ಖುಷಿಯ ಸಾಗರದೆಡೆಗೆ

ತೆವಳುವಂತಾಗುವಾಗ ಮೂಡುವ ಹಿಗ್ಗು

 

ನಿನ್ನ ಬರುವಿಕೆಗೆ ಮುಂಚೆಯೇ ಸುದ್ಧಿ

ತಲುಪಿಸುವ ಗಂಧ ಮತ್ತೆ ಆ ಕ್ಷಣದಿಂದ

ಕಾಲು ಕತ್ತರಿಸಿಕೊಳ್ಳುವ ಕಾಲ

 

ಹಸಿರು ಹುಟ್ಟಿದಾಗ ಭೂಮಿಗೊಂದು

ಅರ್ಥ ಬಂದಂತೆ ನೀನು ನನ್ನೊಳ ಜೀವ ಊರಿದಾಗ

ಸಿಕ್ಕ ಹೊಂಬೆಳಕು

 

ಹೀಗೆಲ್ಲಾ ಆಗಿ

ಇಡೀ ಭಾಷೆಗೆ ಭಾಷೆಯೇ ಪ್ರೇಮಕ್ಕಿಂತ

ಪ್ರಬಲ ಪದವಿಲ್ಲವೆಂದು ಸೋತುತಲೆಬಗ್ಗಿಸಿರುವಾಗ

12720

ಇದನ್ನೆಲ್ಲಾ ಅಲ್ಲಗಳೆದು

ಇದು ವಯಸ್ಸಿನ ಪ್ರಭಾವ,

ಹಾರ್ಮೋನಿನ ಕರಾಮತ್ತು ಅಷ್ಟೇ

ಅನ್ನುವ

ನಿಮ್ಮ ಈ ವಿಜ್ಞಾನಕ್ಕೆ ನನ್ನ ಧಿಕ್ಕಾರ!

 

******

 

ಫೋಟೋ ಕೃಪೆ : ಈ ವೆಬ್ ಸೈಟ್

Advertisements
ಟಿಪ್ಪಣಿಗಳು
 1. Gurumurthy ಹೇಳುತ್ತಾರೆ:

  ಹಸಿರು ಹುಟ್ಟಿದಾಗ ಭೂಮಿಗೊಂದು

  ಅರ್ಥ ಬಂದಂತೆ ನೀನು ನನ್ನೊಳ ಜೀವ ಊರಿದಾಗ

  ಸಿಕ್ಕ ಹೊಂಬೆಳಕು

  tumbaa sundara saalugalivu

 2. kanasu ಹೇಳುತ್ತಾರೆ:

  “ನಿನ್ನ ಬರುವಿಕೆಗೆ ಮುಂಚೆಯೇ ಸುದ್ಧಿ

  ತಲುಪಿಸುವ ಗಂಧ“

  these lines are very nice

 3. Dileep Hegde ಹೇಳುತ್ತಾರೆ:

  ಹಾಗೆಲ್ಲಾ ಹೇಳುವ ವಿಜ್ಞಾನಕ್ಕೆ ನನ್ನದೂ ಒಂದು ಧಿಕ್ಕಾರ.. ಚೆಂದದ ಕವನ..

 4. ಅನಾಮಿಕ ಹೇಳುತ್ತಾರೆ:

  tumba chennagide nimma kavana ………premakkaagi vighnanakke dhikkaara saaribittiraa… oLLeyadagali hahaha

 5. manasu ಹೇಳುತ್ತಾರೆ:

  kavithe chennagide…..premakkaagi vighnanavannu dhikkarisi bittiraa..???

 6. ಶೆಟ್ಟರು (Shettaru) ಹೇಳುತ್ತಾರೆ:

  ಚೆಂದದ ಕವನ….

  -ಶೆಟ್ಟರು (Shettaru)

 7. Divya Hegde ಹೇಳುತ್ತಾರೆ:

  Chennagide Ranjit 🙂

 8. supreeth ಹೇಳುತ್ತಾರೆ:

  ನಿಮ್ಮ ಧಿಕ್ಕಾರದ ಹಂಗಿಲ್ಲದೆ ವಿಜ್ಞಾನ ಎಲ್ಲವನ್ನೂ ಪ್ರಶ್ನಿಸುತ್ತಾ ಸಾಗುತ್ತದೆ.
  ಈ ಘರ್ಷಣೆ ಇಂದು ನಿನ್ನೆಯದಲ್ಲ ನ್ಯೂಟನ್ ಬೆಳಕಿನ ವಕ್ರೀಭವನವನ್ನು ವಿವರಿಸಿ ಕಾಮನಬಿಲ್ಲಿನ ಮುಗ್ಧತೆಯನ್ನು ಹಾಳುಗೆಡವಿದ ಎಂದು ಇಂಗ್ಲೀಷ್ ಕವಿ ಹೇಳಿದ್ದ.
  ಪ್ರೀತಿಯನ್ನು ಒಬ್ಬೊಬ್ಬರು ಒಂದೊಂದು ರೀತಿ ಕಾಣುತ್ತಾರೆ ಹಾಗೂ ಅವೆಲ್ಲವೂ mutually exclusive, ಒಂದನ್ನೊಂದು ಅಲ್ಲಗಳೆಯುವುದಿಲ್ಲ ಎನ್ನುವುದನ್ನು ಅರಿತಾಗ ಧಿಕ್ಕಾರ ಪುರಸ್ಕಾರಗಳ ಆವಶ್ಯಕತೆ ಕಾಣುವುದಿಲ್ಲ.

 9. ರಂಜಿತ್ ಹೇಳುತ್ತಾರೆ:

  ಗುರುಮೂರ್ತಿ ಹೆಗ್ಡೆ, ಕನಸು, ದಿಲೀಪ್, ಮನಸು, ಶೆಟ್ಟರು, ದಿವ್ಯಾ, ಸುಪ್ರೀತ್

  ಥ್ಯಾಂಕ್ಸ್ ನಿಮ್ಮ ಅನಿಸಿಕೆಗಳಿಗೆ.

  ದಿಲೀಪ್, ಮನಸು

  ಇದೊಂದು ವಿಚಾರಕ್ಕೆ ಮಾತ್ರ ವಿಜ್ಞಾನವಿರೋಧಿ. ಅದು ಬಿಟ್ಟರೆ ವಿಜ್ಞಾನದ ಮೇಲೆಯೇ ಪ್ರೇಮವಿದೆ..:)

  ಸುಪ್ರೀತ್,

  ನಿಜ, ಆದರೆ ವಿಜ್ಞಾನದ ಪ್ರಶ್ನೆಗಳ ಹಂಗಿಗೆ ಸಿಗದೇ ಪ್ರೇಮವೂ ಎಲ್ಲೆಡೆ ಹರಡುತ್ತಾ ಸಾಗುತ್ತದೆ.

  ಕವಿತೆಯ ಕೊನೆಸಾಲಿನ “ನನ್ನ ಧಿಕ್ಕಾರ” ಆನ್ನುವಲ್ಲಿ “ನನ್ನ” ಪದ inverted comma ದಲ್ಲಿ ಓದಿಕೊಳ್ಳಿ.

  ಹಾಗೇ ಧಿಕ್ಕಾರಗಳಿಗೆಲ್ಲಾ ಬೆಲೆಯಿದ್ದರೆ ರಾಜಕೀಯದಲ್ಲಿ ಅಲ್ಲೋಲಕಲ್ಲೋಲ ಆಗಿರುತಿತ್ತಲ್ಲವೇ?

 10. DMSagar ಹೇಳುತ್ತಾರೆ:

  I recon with Supreeth’s comments about you discarding Science. When two people fall madly in love, the brain’s pleasure centers are activated causing the release of few chemicals-dopamine, pheromones and serotonin. These chemicals are directly responsible for excitement, increased heart rate, lack of appetite and sleeplessness.

  If these harmones are removed from your physiological system, you no longer recognise your so-called lover!. Deep down, this means, to respect the ingredients/equations that the creater (God?) has set to act in Nature. The rules are set, you neeed to grasp what they actually are!

 11. ರಂಜಿತ್ ಹೇಳುತ್ತಾರೆ:

  ಸಾಗರ್,

  ನೀವು ಬಂದಿದ್ದು ಖುಷಿ. Im not discarding science here. Its one kind of feel , when a person(note here, its not me!) in a state where he is enjoying being in love. then somebody comes and tells him that ‘its not a big thing, its just a hormone response’ what would he tells. even-though science is the truth, he dont want to think about it and lose that magic moment of being in love.

  Seeing a rainbow – after knowing how it is created and – before knowing, there is a difference. same applies to the Magic shows.

  Thats what I wanted to clear.

  anyway, ನೀವು ನನ್ನ ಬ್ಲಾಗಿಗೆ ಬಂದಿದ್ದು ಖುಷಿಯಾಯ್ತು!

 12. Roopa ಹೇಳುತ್ತಾರೆ:

  hi Ranjit,
  Long time nimma blogige visit maadi!
  very nice….
  ನಿನ್ನ ಬರುವಿಕೆಗೆ ಮುಂಚೆಯೇ ಸುದ್ಧಿ ತಲುಪಿಸುವ ಗಂಧ ಮತ್ತೆ ಆ ಕ್ಷಣದಿಂದ ಕಾಲು ಕತ್ತರಿಸಿಕೊಳ್ಳುವ ಕಾಲ….
  saralavaagi ellavannu hELi biDuva nimma padagala baLake tumbaa chennaagide….
  🙂

 13. chethan ಹೇಳುತ್ತಾರೆ:

  ನೀಲಿಹೂವಿನ ಬಗ್ಗೆ ಅಲ್ಲಿ-ಇಲ್ಲಿ ಕೇಳಿದ್ದೆ. ಆದ್ರೆ ಇದು ಇನ್ನೇನೋ ರಿ!! ಭಾವನೆಗಳ ತೀವ್ರತೆಯನ್ನು ಎಷ್ಟು ಸಿ೦ಪಲ್ ಸಾಲುಗಳಲ್ಲಿ ಹೇಳಿಬಿಡ್ತೀರ. ಗ್ರೇಟ್.
  ಪ್ರೀತಿಯ ಭಾವನೆಗಳು ಡೋಪಮೈನು,ನೋರೆಪಿನೆಫ್ರಿನು,ಆಕ್ಸಿಟೋಸಿನು ಮು೦ತಾದ ಹಾರ್ಮೋನುಗಳ ಮ೦ಗಾಟಗಳಿ೦ದ ಸ್ಪೂರ್ಥಿ ಪಡೆದು ,ಮ೦ಕು ಹಿಡಿಸುವ೦ತವು ಎ೦ದು ಓದಿದ್ದೆ. ಏನೆ ಆಗಲಿ ಆ ಸುಮಧುರ ಕ್ಷಣಗಳಿಗೆ ಸಾಟಿ ಯಾವುದಿಲ್ಲ ಬಿಡಿ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s