ಸಿಂಗಪೂರ್ ಝಲಕ್ಕುಗಳು

Posted: ಜುಲೈ 17, 2010 in ಸಿಂಗಪೂರ್ ಸಂಗತಿಗಳು

ಸಿಂಗಪುರ್ ನಲ್ಲಿ ಸಿಂಗ ಅನ್ನುವ ಪದ ಸಿಂಹ ಅನ್ನುವ ಅರ್ಥದಲ್ಲಿ ಬಂದಿದ್ದು. ಇಲ್ಲಿ ನೀರುಗುಳುವ ಸಿಂಹದ ಮೂರ್ತಿ ಪ್ರಸಿದ್ಧ.

ಹೀಗೆ ಒಮ್ಮೆ ಸಿಂಹದ ಊರಿನ ಹೋಟೆಲೊಂದರಲ್ಲಿ ಹೋಗಿದ್ದೆ. ನನ್ನ ಪಕ್ಕದ ಟೇಬಲ್ಲಿನಿಂದ ಪುಟ್ಟ ಹುಡುಗನೊಬ್ಬನ ದನಿ ಕೇಳಿ ಬೆಚ್ಚಿಬಿದ್ದೆ. ಆ ಮಗು, "ಅಮ್ಮ.. ಅಮ್ಮ.. ನಂಗೆ ಲಯನ್ ಜೂಸ್ ಕೊಡ್ಸು" ಅಂತಿತ್ತು!

ಅದು ಲೈಮ್ ಜ್ಯೂಸ್ ಅಂತ ಅರ್ಥವಾಗೋಕೆ ಸ್ವಲ್ಪ ಹೊತ್ತು ಹಿಡೀತು!

****

ಎಸ್ಸೆಮ್ ಕೃಷ್ಣ, ಬೆಂಗ್ಳೂರನ್ನ ಸಿಂಗಾಪುರ್ ಮಾಡಹೊರಟ "ಗಣಪತಿ ಮದ್ವೆ ಕಥೆ" ನಿಮ್ಗೆಲ್ಲಾ ಗೊತ್ತಿದ್ದೇ ಇರುತ್ತೆ. ಆದರೆ ಸಿಂಗಾಪೂರ್ ದವರು ನಮ್ ಹಳ್ಳಿ ಭಾಷೆನ ಕದ್ಕೊಂಡಿರೋದು ಗೊತ್ತಿದೆಯಾ?

"ಏನ್ಲಾ? ಸಂದಾಕಿದಿಯೇನ್ಲಾ? ಹೆಂಗೈತೆ ಪ್ಯಾಟೆಲೈಪು? ಮತ್ತೇನ್ಲಾ ಸಮಾಚಾರ?" ಹಳ್ಳಿಬದಿಯಲ್ಲಿ ಇಂಥ ಮಾತುಗಳು ಸರ್ವೇಸಾಮಾನ್ಯ.

ನೋಡಿ, ಪದಗಳ ಕೊನೆಯಲ್ಲಿ "ಲಾ" ಬಳಸುವಾಗ ಮನುಷ್ಯ ಮನುಷ್ಯರ ನಡುವೆ ಎಷ್ಟೊಂದು ಆಪ್ತತೆ ಬರುತ್ತೆ ಅಲ್ವಾ? ಅದಕ್ಕೆ ಇರ್ಬೇಕು, ಸಿಂಗಪೂರ್ ದಲ್ಲೂ ಮಾತಾಡುವಾಗ ಈ ಲಾ ವನ್ನು ಪದಗಳ ಕೊನೆಗೆ ರಾಗವಾಗಿಯೂ ಸರಾಗವಾಗಿಯು ಬಳಸುತ್ತಾರೆ. ನೋ ಲಾ, ಕಾಂಟ್ ಬೀ ಲಾ, ನಥಿಂಗ್ ಲಾ ಹೀಗೆ ಕೇಳಿ ಕೇಳಿ ನಾನೂ ಈಗ ನಾನೂ ಒಬ್ಬ ಸಿಂಗಪೂರಿಯನ್ ಲಾ!

ನಮ್ ಹಳ್ಳಿ ಲಾ ಕದ್ದಿದ್ದಕ್ಕೆ ಸಿಂಗಾಪೂರ್ ಮೇಲೆ ಕೇಸ್ ಹಾಕೋಕೆ ಯಾವುದಾದ್ರೂ "ಲಾ" ಇದೆಯಾ ಹುಡುಕ್ಬೇಕಿದೆ ಈಗ.

*****

merlion

ಇಲ್ಲೂ ಕನ್ನಡ ಸಂಘವಿದೆ, ಸಿಂಗಾರ ಕನ್ನಡ ಸಂಘವೆಂಬ ಚಂದದ ಹೆಸರಿಟ್ಟಿದ್ದಾರೆ. ಇದೇ ಆಗಸ್ಟ್ ಹದಿನೈದಕ್ಕೆ ಮುಖ್ಯಮಂತ್ರಿ ಚಂದ್ರು, ರಿಚರ್ಡ್ ಲೂಯಿಸ್, ಕಿರ್ಲೋಸ್ಕರ್ ಸತ್ಯ, ಅಸ್ದುಲ್ಲಾ ಬೇಗ್, ಗುಂಡೂ ರಾವ್, ಬಸವರಾಜ್ ಮಹಾಮನಿ ಜತೆಗೆ ಇಂಥ ಹಾಸ್ಯ ಉತ್ಸವಗಳಲ್ಲಿ ಹಿಂದೆಂದೂ ಕಾಣಿಸಿಕೊಳ್ಳದ (ಕಾಣಿಸಿಕೊಂಡಿದ್ದರೂ ನನಗೆ ಗೊತ್ತಿಲ್ಲ) ಮಾ| (ಈಗಲಾದರೂ ಮಿಸ್ಟರ್ ಅನ್ನಬಾರದೇನ್ರಿ) ಆನಂದ್ ಬರುತ್ತಿದ್ದಾರೆ.

ಇಂಥ ಉತ್ಸವದ ಬಗ್ಗೆ ಉತ್ಸಾಹದಿಂದ ನನ್ನ ಬ್ಲಾಗಿನಲ್ಲಿ ಬರೆದುಕೊಂಡ ಕಾರಣ ಇಷ್ಟೇ. ಬೇರೆ ತುಂಬಾ ದೇಶದಲ್ಲೂ ಕನ್ನಡ ಸಂಘಗಳಿವೆ. ಆದರೆ ಭಟ್ಟರ ಕೃಪೆ ಇಲ್ಲ!

*****

"ಮೊಟ್ಟೆ ಹಾಕದ ವೆಜಿಟೇರಿಯನ್ ಫ್ರೈಡ್ ರೈಸ್ ಕೊಡಿ!"

ಇದೇನು ವನ್ ವೇ ರಸ್ತೆಯನ್ನು ಎರಡೂ ಕಡೆ ನೋಡಿಕೊಂಡು ದಾಟಿದ ಹಾಗಿದೆಯಾ?

ಹಾಗಲ್ಲ. ಈ ಹಿಂದೆ ಒಮ್ಮೆ ಮತ್ತೊಂದು ದೇಶದಲ್ಲಿದ್ದಾಗ ಅಲ್ಲಿನ ಹೋಟೆಲ್ಲಿನವರು ಮೊಟ್ಟೆಯನ್ನೂ ಸಸ್ಯಾಹಾರಕ್ಕೆ ನನಗರಿವಿರದಂತೆ ಸೇರಿಸಿದ್ದರು. ಹಾಗಾಗಿ ನನ್ನ ಬೇಡಿಕೆಯನ್ನು ಸಾಕಷ್ಟು ಸ್ಪಷ್ಟವಾಗಿ ತಿಳಿಸಲೋಸುಗ ಮೇಲೆ ತಿಳಿಸಿದಂತೆ ಆರ್ಡರ್ ಮಾಡುತ್ತಿದ್ದೆ.

ಸಿಂಗಪೂರ್ ನಲ್ಲಿ ಅಂಥ ಭಯವಿದ್ದುದರಿಂದ ಪಕ್ಕಾ ಸಸ್ಯಾಹಾರಿ ಅನ್ನುವ ಫಲಕ ನೋಡಿಯೇ ಆರಾಮಾಗಿ ಅಡಿಯಿಡುತ್ತಿದ್ದೆ. ಅಂಥ ಫಲಕ ಕಾಣಿಸಿಲ್ಲವೆಂದರೆ ನನ್ನ ಪರಿಸ್ಥಿತಿ ಥೇಟ್ ಯುದ್ಧಪ್ರದೇಶದಲ್ಲಿ ವಾಸಿಸುವ ಸಾಮಾನ್ಯ ನಾಗರಿಕನಂತೆ. ಎಚ್ಚರಾಗಿ ಒಳ ಅಡಿಯಿಡಬೇಕು. ಗಾಜಿನ ಹಿಂಭಾಗದಲ್ಲಿರುವ ಆಹಾರ ಪದಾರ್ಥವನ್ನು ಕಣ್ಣಲ್ಲೇ ಸ್ಕ್ಯಾನ್ ಮಾಡಿ, ಪ್ರಾಣಿಗಳ ರಕ್ತಕ್ಕೂ, ಮಸಾಲೆ ಪದಾರ್ಥಕ್ಕೂ ವ್ಯತ್ಯಾಸ ಪತ್ತೆ ಹಚ್ಚಿ, ಇದು ನನ್ನ ಬಾಯೊಳಗೆ ತೂರುವ ಅರ್ಹತೆ ಹೊಂದಿದೆಯಾ ಅಂತ ಸಮೀಕ್ಷೆಯನ್ನು ಕ್ಷಣಗಳ ಒಳಗೆ ವಿಶ್ಲೇಷಿಸಿ ತಿನ್ನಲು ತಯಾರಾಗಬೇಕು.

ಆದರೆ ಪಕ್ಕಾ ವೆಜಿಟೇರಿಯನ್ ಅಂತ ಬೋರ್ಡ್ ಹಾಕಿಕೊಂಡ ಹೋಟೇಲೊಳಗೆ ಮೆದುಳಿಗೆ ಕಸರತ್ತು ಕಡಿಮೆ. ಅಲ್ಲೇನಿದ್ದರೂ ನಾಲಿಗೆಗೆ.

ಹಾಗೆಯೇ ಒಮ್ಮೆ ಪಕ್ಕಾ ಸಸ್ಯಾಹಾರಿ ಹೋಟೆಲೊಳಕ್ಕೆ ಹೊಕ್ಕಿ ನಿರ್ವಿಘ್ನವಾಗಿ ಕೂತು ಪೂರಿ ಹೇಳಿದ್ದೆ. ಪೂರಿಯ ಜತೆಗೆ ಸಾಗು ನೀಡದೇ ಬೇರೆಂತದ್ದೋ ನೀಡಿದ್ದರಿಂದ ಕುತೂಹಲಕ್ಕೆ ಇದೇನಪ್ಪಾ ಅಂತ ಮಾಣಿಯನ್ನು (ಸರ್ವರ್ ಪದಕ್ಕೆ ಆಪ್ತವಾದ ಕನ್ನಡಪದ) ಕೇಳಿದೆ.

"ಇದು ಚಿಕನ್ ಕರ್ರಿ ಸಾರ್" ಅಂದ.

ಬಿಸಿಎಣ್ಣೆಗಿಳಿದ ಪೂರಿಯಂತೆ ಧಿಗ್ಗನೆದ್ದು ನಿಂತೆ.  ನನ್ನ ಸ್ಥಿತಿ ನೋಡಿ ಮಾಣಿಗೆ ತಾನಂದಿದ್ದು ಏನು ಅನ್ನುವ ಅನುಮಾನ ಮೂಡಿತು. ನಿಜಕ್ಕೂ ತಾನು  ಬಾಯಿತಪ್ಪಿ "ಜಾಪಾಳ ಚಟ್ನಿ" ಅಥವಾ "ಕಾಳಿಂಗ ವಿಷದ ಕರ್ರಿ" ಅಂದುಬಿಟ್ಟೆನಾ ಅಂತ ಅನುಮಾನ ಮೂಡುವಂತೆ ನನ್ನ ಮುಖವಿದ್ದಿರಬೇಕು.

ಇಲ್ಲಿನ ಜನಕ್ಕೆ ಬಹುಶಃ ವೆಜಿಟೇರಿಯನ್ನೆಂದರೆ ಸೊಪ್ಪು ತಿನ್ನುವವರು (ನಮ್ಮಲ್ಲಿ ಪುಳಿಚಾರು ಅಂದಂತೆ) ಅಂತ ಭಾವನೆ ಬರದಿರಲು ಇಂಥ ಪ್ರಯೋಗಗಳನ್ನು ಮಾಡುತ್ತಿದ್ದಿರಬೇಕು. ಆ ಚಿಕನ್ ಕರ್ರಿಯಲ್ಲಿ ಚಿಕನ್ ಏನೂ ಇದ್ದಿರಲಿಲ್ಲ. ಚಿಕನ್ ಕರ್ರಿ ಥರ ಆ ಪದಾರ್ಥವಿರುತ್ತೆ ಅಷ್ಟೆ. ಅದನ್ನು Mock chicken curry  ಅಂತಾರೆ. ಮತ್ತೊಂದು ಕಡೆಯಲ್ಲಿ ನನಗೆ "Mock Fish" ಕೂಡ ಸಿಕ್ಕಿತ್ತು.

ಯಾರಿಗ್ಗೊತ್ತು, ಮುಂದೊಂದು ದಿನ "ಚಿಕನ್ ಇಲ್ಲದ ತರಕಾರಿ ಪಲ್ಯ ಕೊಡಿ" ಮೀನು ಹಾಕದ ವೆಜ್ ಸಾಂಬಾರ್ ಕೊಡಿ" ಅನ್ನಬೇಕಾದರೂ ಅಚ್ಚರಿಯಿಲ್ಲ.

****

ಟಿಪ್ಪಣಿಗಳು
 1. ದಿವ್ಯಾ ಹೇಳುತ್ತಾರೆ:

  hehe 🙂 good to know !

 2. vanitha ಹೇಳುತ್ತಾರೆ:

  Hhi..hhi..very good:))

 3. shivu.k ಹೇಳುತ್ತಾರೆ:

  ಜಲಕ್ಕುಗಳು ಚೆನ್ನಾಗಿವೆ. ಇನ್ನಷ್ಟು ಬರಲಿ..

 4. Chamaraj Savadi ಹೇಳುತ್ತಾರೆ:

  ನಿಮ್ಮ ಅನುಭವಗಳು, ಅನುಮಾನಗಳು ಸಕತ್ತಾಗಿವೆ ರಂಜಿತ್‌. ನಿಮಗೆ ನಿರಂತರವಾಗಿ, ರುಚಿಯಾಗಿರುವ ಅಪ್ಪಟ ಸಸ್ಯಾಹಾರಿ ಹೋಟೆಲ್‌ಗಳು ಸಿಕ್ಕುತ್ತಿರಲಿ ಅಂತ ಹಾರೈಸುತ್ತೇನೆ. 🙂

 5. Shamala ಹೇಳುತ್ತಾರೆ:

  ರಂಜಿತ್…
  ನಿಮ್ಮ ಅವಸ್ಥೆ ಓದಿ ಬೇಜಾರಾಯ್ತು ರೀ… ನಿಜ ನೀವು ಹೇಳಿದಂತೆ ಚಿಕನ್ ಇಲ್ಲದ ತರಕಾರಿ ಪಲ್ಯ, ಮೀನು ಹಾಕದ ಸಾಂಬಾರ್ ಕೇಳುವ
  ದಿನ ಬಂದರೂ ಬರಬಹುದೇನೋ ? ಸಧ್ಯಕ್ಕೆ ನಿಮಗಂತೂ ಇದ್ಯಾವುದೂ ಇಲ್ಲದ ಅಪ್ಪಟ ಭಾರತೀಯ, ಸಸ್ಯಾಹಾರಿ ಆಹಾರ ಸಿಗುತ್ತಿರಲಿ
  ಎಂದು ಮನ:ಪೂರ್ವಕವಾಗಿ ಹಾರೈಸುತ್ತೇನೆ,….. ಅಂಥಹ ಒಳ್ಳೆಯ ಊಟ / ತಿಂಡಿ ಸಿಕ್ಕಾಗ, ನೀವು ಸಂತಸ ಪಟ್ಟಾಗಲೂ ಹೀಗೆ ನಮ್ಮೊಡನೆ
  ಹಂಚಿಕೊಳ್ಳಿ, ನಿಮ್ಮ ಸಂತೋಷವನ್ನೂ……… 🙂 🙂

  ಶ್ಯಾಮಲ

 6. ರಂಜಿತ್ ಹೇಳುತ್ತಾರೆ:

  ದಿವ್ಯಾ, ವನಿತಾ, ಗುರುಮೂರ್ತಿ ಸರ್

  ನನ್ನ ಪಾಡು ನೋಡಿ ನಗ್ತೀರೇನ್ರೀ?:)

  ಶಿವು, ಶ್ರೀಧರ್ ಭಟ್,

  ಥ್ಯಾಂಕ್ಸು.

  ಚಾಮರಾಜ ಸವಡಿ,

  ಇಂಥದ್ದು ಇನ್ನೂ ಬಹಳಿವೆ. ಟಿಟ್ ಬಿಟ್ಸ್ ಮಾದರಿಯಲ್ಲಿ ಆಗಾಗ್ಗೆ ಹಂಚಿಕೊಳ್ಳುವೆ. ಹಾರೈಕೆಗೆ ನನ್ನಿ.

  ಶಾಮಲಾ,

  ನನ್ ಅವಸ್ಥೆ ನೋಡಿ ನಿಮ್ಗೆ ಕರುಣೆ ಮೂಡಿಸಿಕೊಂಡಿದ್ದಕ್ಕೆ ಥ್ಯಾಂಕ್ಸ್ ಕಣ್ರೀ..:)
  ಮುಂದೆ ಹಂಚಿಕೊಳ್ಳುವಂಥ ಸಂತೋಷಗಳನ್ನೂ ಪದಗಳಲ್ಲಿ ಪಡಿಮೂಡಿಸುತ್ತೇನೆ. ಧನ್ಯವಾದಗಳು!

 7. vijayendra ಹೇಳುತ್ತಾರೆ:

  Please upload the complete video recording of Hasya sammelana to be held on August 15. We can not come to Singapure to watch the hasya habba. will you please do it? thanks and regards vijayendra,Bangalore

 8. ಎಂ ಜಿ ಹರೀಶ ಹೇಳುತ್ತಾರೆ:

  ಹಹ್ಹಾಹ್ಹಾ!!‌ ಸಖತ್ತಾಗಿದೆ!! ನಿಮ್ ಪಾಡು ನೋಡಿ ನಗದೇ ಅಳಕ್ಕಾಗುತ್ತಾ 😛

 9. vijji ಹೇಳುತ್ತಾರೆ:

  U r simply Superb Ranjith..

 10. ರಂಜಿತ್ ಹೇಳುತ್ತಾರೆ:

  ವಿಜಯೇಂದ್ರ,

  ಅದರ ವೀಡೀಯೋ ತೆಗೆಯಬಾರದೆಂದು ರಿಚರ್ಡ್ ಲೂಯಿಸ್ ರು ಕಾರ್ಯಕ್ರಮದ ಮೊದಲೇ ಅಂದುಬಿಟ್ಟರು.

  ಹರೀಶ್,

  🙂

  ವಿಜ್ಜಿ,

  ಧನ್ಯವಾದಗಳು!

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s