ಕೊರಡುಕೊಂಬೆಗೆ ಮೂಡಿದ ರೋಮಾಂಚ..!

Posted: ಜುಲೈ 30, 2010 in ಒಂದ್ಸಾಲಿನಲಿ ಕವಿತೆ!, ಶಬ್ದಚಿತ್ರ
ಟ್ಯಾಗ್ ಗಳು:, , , , , ,

ಬರವಣಿಗೆ : ತನ್ನೊಳಗಿನ ಭಾವಗಳಿಗೆ ನ್ಯಾಯ ದೊರಕಿಸಿಕೊಡಲು ಬರಹಗಾರ ಮಾಡುವ ಪದಯಾತ್ರೆ.

ನೀಲಾಂಜನ : ಅಮ್ಮ ಹಚ್ಚಿಟ್ಟ ನೀಲಾಂಜನಕ್ಕೆ ರಾತ್ರಿ ಅಲ್ಲಾಡುತ್ತಿದೆ!

ಸಾವು :  ಕರೆಯದೇ ಬಂದವರು, ಕರೆದೊಡನೆ ಹೊರಡುವರು

ಲಾಂದ್ರ : ಪವರ್ ಕಟ್ ಸಮಯದಲ್ಲಿ ಮನೆಯಾಗಸದ ಚಂದ್ರ.

ಚಿಗುರು : ಸತ್ತು ಬಡಗಿಯ ಕೈಯಲ್ಲಿ ಭರ್ಜರಿ ಸರ್ಜರಿ ಮಾಡಿಸಿಕೊಂಡ ಕೊಳಲು ತನ್ನೆಲ್ಲಾ ತೂತುಗಾಯದ ಮಧ್ಯೆಯೂ ಎಲ್ಲರ ಎದೆಯೊಳಗೆ ರಾಗವಾಗಿ ಚಿಗುರೊಡೆದಿದೆ.

1126_OrangeMaples

 

ವಾಸ್ತವ :  ರಾತ್ರಿ ಮೆಲ್ಲ ಬಂದು ಕನಸು ಕದಿಯದಿರಲಿ ಎಂದು ರೆಪ್ಪೆಯ ಲಾಕರಿನೊಳಗಿಟ್ಟಿದ್ದೆ; ಮುಂಜಾವು ಕಣ್ಣೆದುರೇ ಎಲ್ಲಾ ಲೂಟಿಗೈದಿತು.

ಮಿನುಗು : ಚಂದಿರನಿಲ್ಲದ ರಾತ್ರಿಗೆ ಕತ್ತಲ ಆಗಸದಂಗಳದಲ್ಲಿ ಭಯದಿಂದ ನಡುತಿದೆ ನಕ್ಷತ್ರಗಳು.

ಚಿಗುರು : ನೀರ ಹನಿ ಬೇರಿಗಿತ್ತ ಮುತ್ತಿಗೆ ಕೊರಡು ಕೊಂಬೆಗೆ ಮೂಡಿದ ರೋಮಾಂಚ!

ಚಕ್ರ : ಅವನಿಗೆ ಬಿದ್ದ ಕನಸಲ್ಲಿ, ಹಗಲಾಗಿ ಕೆಲಸಕ್ಕೆ ಹೋಗಿ ಸಂಜೆ ಸುಸ್ತಾಗಿ ಬಂದು ನಿದಿರೆಯಲಿ ಮುಳುಗಿ ಕನಸು ಕಾಣತೊಡಗಿದ.

 

(ಚಿತ್ರಕೃಪೆ : ಇಲ್ಲಿಂದ )

Advertisements
ಟಿಪ್ಪಣಿಗಳು
  1. supreeth ಹೇಳುತ್ತಾರೆ:

    >>>ಸಾವು : ಕರೆಯದೇ ಬಂದವರು, ಕರೆದೊಡನೆ ಹೊರಡುವರು

    ಕರೆಯದೇ ಬಂದವರಷ್ಟೇ ಅಲ್ಲ ಸಾರ್, ಪುತ್ರ ಕಾಮೇಷ್ಟಿ ಮಾಡಿಸಿಕೊಂಡು ಬಂದವರೂ ಹೊರಡುವರು 🙂

  2. shridhar bhat ಹೇಳುತ್ತಾರೆ:

    good one liners 🙂

  3. Shamala ಹೇಳುತ್ತಾರೆ:

    ತುಂಬಾ ಚೆನ್ನಾಗಿದೆ……….

  4. ರಂಜಿತ್ ಹೇಳುತ್ತಾರೆ:

    ಸುಪ್ರೀತ್,

    🙂

    ಶ್ರೀಧರ್, ಮನಸು, ಶಾಮಲಾ, ರಾಘವೇಂದ್ರ,

    ನಿಮ್ಮ ಅನಿಸಿಕೆಗಳಿಗೆ ನನ್ನಿ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s