ಅದೊಂದು ದಿನ ರಂಗೀಲಾ ಮ್ಯೂಸಿಕ್ ಮಾಡಲೋಸುಗ ನಿರ್ದೇಶಕ ರಾಮ್ ಗೋಪಾಲ್ ವರ್ಮಾ, ಎ. ಆರ್. ರೆಹಮಾನ್ ರ ಸ್ಟೂಡಿಯೋದಲ್ಲಿದ್ದಾರೆ. ವರ್ಮಾಗೆ ಮೊದಲಿಂದಲೂ ಒಂದು ಕುತೂಹಲ ರೆಹಮಾನ್ ಯಶಸ್ಸಿನ ಬಗ್ಗೆ. ಚಿಕ್ಕ ವಯಸ್ಸಲ್ಲೇ ಮಾಡಿದ ಬ್ರಹ್ಮಾಂಡ ಸಾಧನೆಯ ಬಗ್ಗೆ. ಒಮ್ಮೆ ಜತೆಯಲ್ಲಿದ್ದಾಗ ರೆಹಮಾನ್ ಹೇಳುತ್ತಾರೆ,

1449977847

“ಈ ಸ್ಟೂಡಿಯೋದಿಂದ ಹೊರಹೋಗುವ ಗೀತೆಯೆಲ್ಲಾ ಚೆನ್ನಾಗಿರಬೇಕೆಂದು ನಿರ್ಧರಿಸಿಬಿಟ್ಟಿದ್ದೇನೆ!”

ನಾವೂ, ನೀವೂ, ರಾಮ್ ಗೋಪಾಲ್ ವರ್ಮಾರಂಥವರೂ ಇಂಥ ಪ್ರತಿಜ್ಞೆಗಳನ್ನು ಬಹಳ ಸಲ ಸಿಗರೇಟು ಬಿಡುವ ನಿರ್ಧಾರದಂತೆ ತೆಗೆದುಕೊಳ್ಳುತ್ತಿರುತ್ತೇವೆ. ಕೇವಲ ರೆಹಮಾನ್ ರಂಥವರಿಗೇ ಆ ನಿರ್ಧಾರವನ್ನು ಉಳಿಸಿಕೊಳ್ಳುವ, ಅದನ್ನೇ ಬದುಕುವ ಹಟ ಇರುತ್ತದೆ.

ಅದಕ್ಕೇ ರೆಹಮಾನ್ ಮೊಜಾರ್ಟ್ ಆಫ್ ಮದ್ರಾಸ್ ಅನ್ನಿಸಿಕೊಳ್ಳುತ್ತಾರೆ.

*******

ಇದು ಬಹುಶಃ ಬಹಳ ಜನಕ್ಕೆ ಗೊತ್ತಿರುವಂತ ಘಟನೆ.

೨೦೦೭ ನೇ ಇಸವಿಯಲ್ಲಿ ಹೈದರಾಬಾದ್ ನಲ್ಲಿ ನಡೆದ ಭಾರತ-ಆಸ್ಟ್ರೇಲಿಯಾ ನಡುವಿನ ಏಕದಿನ ಪಂದ್ಯ. (ಇಂಟರ್ನೆಟ್ ನಲ್ಲಿ ಇದು ೨೦೦೪ ರ ಕೋಲ್ಕತ್ತಾ ಟೆಸ್ಟ್ ಪಂದ್ಯ ಅಂತ ಹರಿದಾಡುತ್ತಿದೆ, ಆದರದು ನಿಜ ಅಲ್ಲ.) ಆಸ್ಟ್ರೇಲಿಯಾದ ಸ್ಪಿನ್ನರ್ ಬ್ರಾಡ್ ಹಾಗ್ ಗೆ ಸಚಿನ್ ವಿಕೆಟ್ ಪಡೆದರು. ಅದರಲ್ಲೂ ಕ್ಲೀನ್ ಬೌಲ್ಡ್ ಮಾಡಿ!. ಕ್ರಿಕೆಟ್ ದೈವ ಸಚಿನ್ ವಿಕೆಟ್ ಅಂದರೆ ಸಾಮಾನ್ಯವೇ? ಪ್ರಥಮ ದರ್ಜೆ ಪಂದ್ಯಗಳಲ್ಲಿ ಸಚಿನ್ ವಿಕೆಟ್ ಪಡೆದವರ ಹೆಸರು ಭಾರತ ದ ಕ್ರಿಕೆಟ್ ಆಯ್ಕೆಮಂಡಳಿ ಸದಸ್ಯರ ಬಾಯಲ್ಲಿ ಸುದ್ಧಿಯಾಗುತ್ತದಂತೆ (ವಿನಯ್ ಕುಮಾರ್). ಸಚಿನ್ ವಿಕೆಟ್ ಪಡೆದದ್ದಕ್ಕೆ ಪಂದ್ಯ ಗೆದ್ದಷ್ಟು ಸಂಭ್ರಮಿಸಿದವರಿದ್ದಾರೆ, ಸಚಿನ್ ಗೆ ಸ್ಲೆಡ್ಜಿಂಗ್ ಮಾಡಿ ನಂತರ ತಮ್ಮ ಕ್ರಿಕೆಟ್ ಬದುಕನ್ನೇ ಮುಗಿಸಿಕೊಂಡವರಿದ್ದಾರೆ (ಲಿಸ್ಟು ಭಾರೀ ದೊಡ್ಡದಿದೆ). ಸಚಿನ್ ಕ್ಯಾಚು ಕೈಬಿಟ್ಟಿದ್ದಕ್ಕೆ ಪಂದ್ಯವೇ ಕೈಜಾರಿಹೋಯಿತು ಅಂದವರಿದ್ದಾರೆ (ವಸೀಂ ಅಕ್ರಂ).

ಈ ಪಂದ್ಯದಲ್ಲಿ ಬ್ರಾಡ್ ಹಾಗ್ ಗಂತೂ ಸ್ವರ್ಗಕ್ಕೆ ಮೂರೇ ಗೇಣು. ತನ್ನ ಬೌಲಿಂಗ್ ಸಾಮರ್ಥ್ಯಕ್ಕೆ ಅದೊಂದು ದಾಖಲೆ ಅಂತ ಅಂದುಕೊಂಡರು.

ಹಾಗೇ ಪಂದ್ಯವಾದ ಬಳಿಕ ತಾನು ಬೌಲ್ಡ್ ಮಾಡಿದ ಅದೇ ಬಾಲ್ ನ ಮೇಲೆ ಸಚಿನ್ ರ ಆಟೋಗ್ರಾಫ್ ಪಡೆದರು. ಆಟೋಗ್ರಾಫ್ ಕೊಡುವಾಗ ಸಚಿನ್ ಆತನ ಬೌಲಿಂಗ್ ಬಗ್ಗೆ ಮೆಚ್ಚುಗೆ ಮಾತಾಡಿದರಾದರೂ ಆ ಬಾಲ್ ನ ಮೇಲೆ “ಇಟ್ ವಿಲ್ ನೆವರ್ ಹ್ಯಾಪ್ಪನ್ ಅಗೈನ್” ಅಂತ ಬರೆದರು.

ನಂತರ ಬ್ರಾಡ್ ಹಾಗ್ ಭಾರತದೆದುರು ಎಷ್ಟು ಪಂದ್ಯ ಆಡಿದರೂ ಸಚಿನ್ ವಿಕೆಟ್ ಸಿಕ್ಕಿಲ್ಲ!

****

will_smith

ಹಾಲಿವುಡ್ ನ ವಿಲ್ ಸ್ಮಿತ್ ನನ್ನ ಮೆಚ್ಚುಗೆಯ ನಟ. ಆತ ಬದುಕಿದ ಬಗೆಯೂ ಒಂದು ಸಾಹಸಗಾತೆ.

ಆತ ಯಶಸ್ಸಿನ ಬಗೆಗೆ ಮಾತೊಂದು ಹೇಳುತ್ತಾನೆ. ತುಂಬ ಸರಳವಾದ್ದು. ಯಶಸ್ಸಿಗೆ ಎರಡು ಸೂತ್ರಗಳು. ಒಂದು “ಓಡುವುದು” ಮತ್ತೊಂದು “ಓದುವುದು”!

ಇಷ್ಟೇನಾ? ಯಾವ ಆಧಾರದ ಮೇಲೆ ಹೇಗೆ ಈ ರೀತಿ ಅನ್ನುತ್ತಿದ್ದಾನೆ ಅಂದಿರಾ?

ಓಡುವುದು : ಓಡುವಾಗ ಮನಸ್ಸಿನೊಳಗಿನ ಆಲಸಿ, ಸಾಕು ನಿಲ್ಲಿಸು ಸುಸ್ತಾಗಿದ್ದೀಯಾ.. ಇವತ್ತಿಗಿಷ್ಟು ಸಾಕು ಅನ್ನುತ್ತದೆ. ಅದರ ಮಾತು ಧಿಕ್ಕರಿಸಿ ಓಡುತ್ತೇವೋ ಆಗ ಮನಸ್ಸಿನ ಮೇಲೆ ಹಿಡಿತ ದಕ್ಕುತ್ತದೆ.

ಓದುವುದು : ಜಗತ್ತಿನಲ್ಲಿ ಯಾವುದೂ ಹೊಸ ಸಮಸ್ಯೆ ಅನ್ನುವುದು ಒಂದಿಲ್ಲ. ಎಲ್ಲ ಸಮಸ್ಯೆಯೂ ಒಂದಲ್ಲ ಒಂದು ಸಮಯದಲ್ಲಿ ಒಬ್ಬರಿಗಾದರೂ ಬಂದಿದ್ದಿರುತ್ತದೆ. ಎಲ್ಲ ಸಮಸ್ಯೆಗಳಿಗೂ ಪರಿಹಾರವನ್ನು ಹಿಂದಿನವರು ಪುಸ್ತಕದಲ್ಲಿ ಬರೆದಿಟ್ಟಿದ್ದಾರೆ. ಇಂದಿನವರೂ ಬರೆಯುತ್ತಿದ್ದಾರೆ. ಅರೆ! ಇದು ಎಂಥ ಅದೃಷ್ಟ ಅಲ್ಲವಾ? ಓದುವುದರಿಂದ ಸಮಸ್ಯೆ ಬರದ ಹಾಗೆ, ಬಂದರೆ ಎದುರಿಸುವ ಸಾಮರ್ಥ್ಯ ದೊರಕುತ್ತದೆ. ಅದಕ್ಕೆ ಓದುವುದು ಕೂಡ ಯಶಸ್ಸಿಗೆ ಒಂದು ಕಾರಣ.

ತುಂಬಾ ಸರಳವಾದ್ದೇ ಅಲ್ಲವೇ?

***

ವಿಲ್ ಸ್ಮಿತ್ ಮತ್ತೊಂದೆಡೆ ಹೀಗನ್ನುತ್ತಾರೆ.

ನನಗಿಂತ ಹೆಚ್ಚು ಬುದ್ಧಿವಂತರಿರಬಹುದು. ನನಗಿಂತ ಸಾಮರ್ಥ್ಯವಿದ್ದಿರುವವರಿರಬಹುದು. ಆದರೆ ಟ್ರೆಡ್ ಮಿಲ್ ನಲ್ಲಿ ನಡೆವ ಪಂದ್ಯವಿಟ್ಟರೆ ಕೇವಲ ಎರಡೇ ಎರಡು ಸಾಧ್ಯತೆಗಳಿರುತ್ತದೆ.
ಒಂದು : ನೀವು ಟ್ರೆಡ್ ಮಿಲ್ ನಿಂದ ಇಳಿಯಬೇಕು
ಅಥವಾ
ಎರಡು : ನಾನು ಸಾಯಬೇಕು.

ಇದು ಬಿಟ್ಟು ಬೇರೆ ಸಾಧ್ಯತೆಗಳಿಲ್ಲ!

****

ನನಗೊಬ್ಬ ಗೆಳೆಯನಿದ್ದಾನೆ. ತುಂಬಾ ಕಷ್ಟಪಟ್ಟು ಕೆಲಸ ಮಾಡುತ್ತಾನೆ.

ಬಹಳ ಪ್ಯಾಷನೇಟ್ ಆಗಿ ಕೆಲಸ ಮಾಡುವ ಆತನನ್ನು ಕಂಡು ಒಮ್ಮೆ, “ಮಾರಾಯ, ಹೀಗೆ ರಕ್ಕಸನಂತೆ ಕೆಲಸ ಎದುರುಹಾಕಿಕೊಂಡು ನಮಗೆಲ್ಲಾ ಏನೂ ಕೆಲಸ ಮಾಡದ ಪಾಪಪ್ರಜ್ಞೆ ಮೂಡಿಸುವಷ್ಟು ಕೆಲಸ ಮಾಡುತ್ತೀಯಲ್ಲ, ಹಾಗೆ ಮಾಡಲು ನಿನಗೆ ಸ್ಪೂರ್ತಿ ಏನು ಅಂತ ಕೇಳಿದ್ದಕ್ಕೆ ಆತ ಹೀಗೆ ಹೇಳಿದ.

“ನಮ್ಮ ಸುತ್ತಮುತ್ತ ಗಮನಿಸಿದರೆ ಏನೂ ಅರ್ಹತೆಯಿಲ್ಲದ ವ್ಯಕ್ತಿಗಳೆಲ್ಲ ಮೇಲೆ ಬರುತ್ತಿದ್ದಾರೆ. ಐಸೆ ಕೈಸೋಂಕೋ ದಿಯಾ ಹೈ ಅನ್ನುವಂತೆ ಎಂಥೆಂತವರಿಗೆಲ್ಲಾ ಸುಖಗಳು ಹುದ್ದೆಗಳು ದೊರಕಿರುತ್ತದೆ. ಅಂಥವರಿಗೇ ಎಲ್ಲಾ ಸಿಗುವಾಗ ನನಗ್ಯಾಕೆ ಸಿಗಬಾರದು ಅನ್ನುವ ಪಾಯಿಂಟೇ ನನ್ನನ್ನು ಮತ್ತಷ್ಟು ಕೆಲಸ ಮಾಡುವಂತೆ ಸೆಳೆಯುತ್ತದೆ. ಯಾಕೆಂದರೆ ಅದೃಷ್ಟ ಹೇಗೆ ಪಡೆವುದೋ ನನಗೆ ಗೊತ್ತಿಲ್ಲ, ಬುದ್ಧಿವಂತರಾಗುವುದು ಹೇಗೋ ನನಗೆ ಗೊತ್ತಿಲ್ಲ. ಆದರೆ ಕಷ್ಟ ಪಟ್ಟು ಕೆಲ್ಸ ಮಾಡುವುದೊಂದೆ ನನಗೆ ಅರಿವಿರುವುದು. ಅದೊಂದರಲ್ಲಿ ಮಾತ್ರ ನನಗಿಂತ ಬೇರೆ ಯಾರೂ ಬೆಸ್ಟ್ ಅನ್ನಿಸಿಕೊಳ್ಳಬಾರದೆಂಬುದಷ್ಟೇ ನನ್ನ ಬಯಕೆ. ಅದಲ್ಲದೇ ಈಗೀಗ ನನಗೆ ಅದರಿಂದ ಖುಷಿಯೂ ಸಿಗುತ್ತಿದೆ ಆದ್ದರಿಂದ “ನಾನು ಕಷ್ಟಪಡುತ್ತಿದ್ದೇನೆಂಬುದರ ಅರಿವಿಲ್ಲದೇನೇ” ಕೆಲಸ ಮಾಡ್ತಿದ್ದೇನೆ.”

ಯಶಸ್ಸಿನ ಕೇಲಿಕೈ ಹೇಗೆಲ್ಲಾ ಇರುತ್ತದಲ್ಲವಾ?!

*****

ಚಿತ್ರಕೃಪೆ : ಗೂಗಲ್

Advertisements
ಟಿಪ್ಪಣಿಗಳು
 1. Pramod ಹೇಳುತ್ತಾರೆ:

  I like this article one 🙂

 2. Vanitha ಹೇಳುತ್ತಾರೆ:

  Nice write up 🙂
  Rehman, Sachin, Will Smith…I don’t have any words!!!!!!!!..
  Just finished watching ‘The pursuit of happyness’ movie by will Smith is an awesome movie..Do watch it:)

 3. Shamala ಹೇಳುತ್ತಾರೆ:

  ಇಷ್ಟವಾಯಿತು…. ಪುಟ್ಟ ಪುಟ್ಟ ಉದಾಹರಣೆಗಳು ಚೆನ್ನಾಗಿವೆ…….

 4. ರಂಜಿತ್ ಹೇಳುತ್ತಾರೆ:

  ಪ್ರಮೋದ್,

  ಇದ್ಯಾಕ್ರೀ, ಬೇರೆ ಯಾವ್ದೂ ಚೆನ್ನಾಗಿಲ್ಲ ಅನ್ನೋ ಅರ್ಥದಲ್ಲಿ ಅಂತಿದೀರಿ?!

  ಅದ್ರೂನು ಥ್ಯಾಂಕ್ಸು ಅನಿಸಿಕೆಗೆ.

  ಗುರುಮೂರ್ತಿ ಹೆಗ್ಡೆ, ಶಾಮಲಾ, ವನಿತಾ

  ನಿಮಗೂ ಧನ್ಯವಾದಗಳು!

  ವನಿತಾ,

  ತಂದೆ-ಮಗನ ಕಥೆ ಇರುವ ಪರ್ಸೂಟ್ ಆಫ್ ಹ್ಯಾಪ್ಪಿನೆಸ್ ಚಿತ್ರ ನನ್ನ ತುಂಬಾ ಕಾಡಿದೆ. ತಂದೆಯ ವಿಚಾರಕ್ಕೆ ಬಂದರೆ ನಾ ಕೊಂಚ ಭಾವುಕ. ಹಾಗಾಗಿ ಒಂದೂವರೆ ವರ್ಷದ ಹಿಂದೆ ಸಡಗರ ಮಾಸಿಕಕ್ಕೆ ಆ ಚಲನಚಿತ್ರದ ಬಗ್ಗೆ ಬರೆಯುತ್ತೇನೆ ಅಂದಿದ್ದರೂ, ಬರೆವ ಪ್ರಯತ್ನದಲ್ಲೆಲ್ಲಾ ಸೋತಿದ್ದೇನೆ ಭಾವುಕನಾಗುತ್ತ.

  ಹಾಗೇನೆ ಅವರ “ಸೆವೆನ್ ಪೌಂಡ್ಸ್” ಚಿತ್ರ ಮರೆಯದೇ ನೋಡಿ. ಸಾಧ್ಯವಾದರೆ ಅದರ ಕುರಿತು ಬರೆವ ಪ್ರಯತ್ನ ಮಾಡ್ತೇನೆ. ತುಂಬಾ ಅದ್ಭುತ ಕಥೆ ಅದರದ್ದು. ಅದರಲ್ಲೂ ವಿಲ್ ಅಭಿನಯ ಔಟ್ ಸ್ಟಾಂಡಿಂಗ್ ಆಗಿದೆ.

 5. Anantha ಹೇಳುತ್ತಾರೆ:

  ರಂಜಿತ್,

  ಮೇಲೆ ತಾವು ಬರೆದಿರುವ ಎಲ್ಲ ಘಟನೆಗಳೂ, ಸಂಭಾಷಣೆಗಳೂ ಅದ್ಭುತವಾಗಿವೆ..

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s