ನನ್ನ ಕೆಲವು ಬರಹಗಳಿಗೆ ಕೇವಲ ನಾನು ಬರೆದಿದ್ದು ಅಂಬೋ ಕಾರಣಕ್ಕೇ ಸರಿಯಾದ ಬೆಲೆ ಸಿಗದೇ ಹೋಗುತ್ತಿದೆ ಅನ್ನಿಸಿ (“ನಾನು ನಾನಾಗದೇ” ಎಂಬ ಕವಿತೆಯೊಳಗಿನ ಥಿಯರಿ) ಬೇರೊಂದು ಬ್ಲಾಗಿನಲ್ಲಿ ಬೇರೆ ಹೆಸರಲ್ಲಿ ಬರೆಯಲು ಶುರು ಮಾಡಿದ್ದೆ. ಬೆಲೆ ಸಿಕ್ಕಿತೇ? ಗೊತ್ತಿಲ್ಲ. ಬರಹದ ಬೆಳೆ ಚೆನ್ನಾಗಿ ಬಂತೆಂಬುದು ಅಷ್ಟೇ ನಿಜ. ಅನಾಮಿಕತೆಯನ್ನು ದುರುಪಯೋಗ ಪಡಿಸಿಕೊಳ್ಳದಿರುವ ನನ್ನ ಪ್ರಯೋಗ ಅದು ಅಂದರೂ ಆದೀತು. ಇಷ್ಟಕ್ಕೂ ಈ ಪೋಸ್ಟಿನ ಬಳಿಕ ಇನ್ನು ಅದು ಅನಾಮಿಕತೆ ಆಗಲಾರದು.

ನೀಲಿಹೂವಿನ ಜತೆಜತೆಗೆ ಆ ಬ್ಲಾಗಿನಲ್ಲೂ ಬರೆಯತೊಡಗಿದ್ದೆ. ಇತ್ತೀಚೆಗೆ ನನ್ನ ಜೀಮೈಲ್ ಅಕೌಂಟ್ ಹ್ಯಾಕ್ ಆಗಿದ್ದರ ಪರಿಣಾಮ ಅಲ್ಲೇನೂ ಬರೆಯಲಾಗುತ್ತಿಲ್ಲ. ಒಂದೆರಡು ಬುದ್ಧಿವಂತ ಓದುಗರು ಆಗಲೇ ನನ್ನ ಬರವಣಿಗೆ ಶೈಲಿ ಗುರುತಿಸಿ “ನಾನು ನಾನಲ್ಲ” ಅಂತ ಎಷ್ಟಂದರೂ “ಸ್ವಾಮಿ ನಮ್ಗೆ ಗೊತ್ತಾಯ್ತದೆ; ನಮ್ ಕಿವೀ ಮ್ಯಾಗೆ ಹೂವಿಕ್ಬೇಡಿ” ಅನ್ನುವಷ್ಟು ಆತ್ಮವಿಶ್ವಾಸ ಹೊಂದಿದ್ದರು.

ಅಲ್ಲದೇ ಒಂದಿಬ್ಬರು ಗೆಳೆಯರ ಪ್ರೀತಿಗೆ ಬಗ್ಗಿ ಅದು ನಾನೇ ಅಂತ ಒಪ್ಪಿಕೊಂಡೂ ಬಿಟ್ಟಿದ್ದೆ.

ನೀವೂ ಬುದ್ಧಿವಂತರು. ಅಲ್ಲದೇ ಎಲ್ಲಾ ಬ್ಲಾಗುಗಳನ್ನು ಸ್ಕ್ಯಾನ್ ಮಾಡಿರುತ್ತೀರಿ. ಕನ್ನಡದ ಹಸಿವಿನಿಂದ ಬ್ಲಾಗುಲೋಕದ ತುಂಬ ಓಡಾ(ದಾ)ಡಿದ್ದೀರಿ. ಈಗ ನಿಮಗೊಂದು ಕ್ವಿಜ್.

ನನ್ನ ಆ ಬ್ಲಾಗು ಯಾವುದು?

ಸುಳಿವು ಕೇಳಬೇಡಿ. ನಾನು ಇನ್ನೊಂದು ಬ್ಲಾಗು ಬರೆಯುತ್ತಿದ್ದೆ ಎಂಬುದೇ ದೊಡ್ದ ಸುಳಿವು ಎಂಬುದು ನನ್ನ ಅಭಿಮತ.

ಹಾಗೇನೇ ಕಾಫಿಕ್ಲಬ್ಬು, ಸಡಗರ ಈ ಬ್ಲಾಗುಗಳಲ್ಲಿ ನನ್ನ ಪಾಲುದಾರಿಕೆ ಮಾತ್ರ. ನೀವು ಕಂಡುಹಿಡಿಯಬೇಕಾದ ಬ್ಲಾಗು ಸಂಪೂರ್ಣ ನನ್ನದು. ಮತ್ತು ಈ ಕ್ವಿಜ್ ಈ ಹಿಂದೆ ನನ್ನ ಜತೆ ಆ ಬ್ಲಾಗ್ ಬಗ್ಗೆ ಚರ್ಚೆ ಮಾಡಿದವರು ಪಾಲ್ಗೊಳ್ಳುವಂತಿಲ್ಲ ಎಂಬ ನಿಯಮ ಮತ್ತು ಅವರು ಬೇರೆಯವರಿಗೆ ತಿಳಿಸದಿರಿ ಅನ್ನುವ ನಮ್ರ ಕೋರಿಕೆ.

ಕೊನೆಯ ತಾರೀಕು : ಮುಂದಿನ ಭಾನುವಾರದ ದಿನದ ಕೊನೆವರೆಗೆ.

Advertisements
ಟಿಪ್ಪಣಿಗಳು
 1. ಅನಾಮಿಕ ಹೇಳುತ್ತಾರೆ:

  ನನಗೆ ಗೊತ್ತಿದೆ. ಏನು ಬಹುಮಾನ?

 2. Sushrutha ಹೇಳುತ್ತಾರೆ:

  hELalla. 😛
  -Sushrutha

 3. Divya Hegde ಹೇಳುತ್ತಾರೆ:

  nanage gottu… ellru helid mele howdo alwo heltini…. 😉

 4. ಅನಾಮಿಕ ಹೇಳುತ್ತಾರೆ:

  ಬಹುಮಾನ ಏನು ಅಂತಾ ಹೇಳಲೇ ಇಲ್ಲ 😦

 5. ಅನಾಮಿಕ ಹೇಳುತ್ತಾರೆ:

  o, naavu participate madabahude?

 6. ಅನಾಮಿಕ ಹೇಳುತ್ತಾರೆ:

  ನನಗೆ ಹೆಸರು ಗೊತ್ತಾಯಿತು. ಮಸಾಲೆ ದೋಸೆ

 7. ರಂಜಿತ್ ಹೇಳುತ್ತಾರೆ:

  ಅನಾನಿಮಸ್ಸು,

  ನಿಮ್ಮ ಹೆಸರು ಹೇಳದಿದ್ರೆ ಹ್ಯಾಗೆ?

  ದಿವ್ಯಾ,

  “ಗೊತ್ತಿಲ್ಲ” ಅನ್ನೋ ಪದದ ಬುದ್ಧಿವಂತ ಸ್ವರೂಪವೇ?:)

  ಸುಶ್ರುತ,

  ಬಹುಮಾನ ಉಳೀತು!:)

  ರೂಪ ಮೇಡಮ್,

  ನಿಮ್ಗೆ ಗೊತ್ತಿದ್ರೆ ಪಾರ್ಟಿಸಿಪೇಟ್ ಮಾಡೋಹಂಗಿಲ್ಲ.
  ಮಸಾಲೆ ದೋಸೆ ಅಂತ ಬ್ಲಾಗೊಂದು ಇದೆಯೆ?!

 8. ಅನಾಮಿಕ ಹೇಳುತ್ತಾರೆ:

  naanu masale dose kodisthira andiddu 😉

 9. Vanitha ಹೇಳುತ್ತಾರೆ:

  oh..ninne/ monne ondu blog nalli idu ‘Adigara’ dde blog antha thumba vimarshe (comments) ittu..ade blog eno..hesru gottilla..!!!

 10. Vanitha ಹೇಳುತ್ತಾರೆ:

  Vanitha :
  oh..ninne/ monne ondu blog nalli idu ‘Adigara’ dde blog antha thumba vimarshe (comments) ittu.was last updated in 2009…ade blog eno..hesru gottilla..!!!

 11. ರಂಜಿತ್ ಹೇಳುತ್ತಾರೆ:

  ಅನಾನಿಮಸ್ಸು (ರೂಪ ಮೇಡಮ್ ಅಂದ್ಕೋತೇನೆ),

  ಬರೀ ಮಸಾಲೆದೋಸೆ ಸಾಕೆ?!:)

  ವನಿತಾ ಮೇಡಮ್,

  ಆ ಬ್ಲಾಗಲ್ಲಿ ಅದು “ಅಡಿಗರದ್ದೇ” ಅಂತ ಆದ ಕಾಮೆಂಟ್ಸ್ ಬಂದಂತಿಲ್ಲ. ಒಳಹರಿವಲ್ಲಿ ಅಂತದ್ದೊಂದು ಪುಟ್ಟ ವಾದ ನಡೆದದ್ದು ಹೌದು. ಅದು ನಮ್ಮ ಹತ್ತಿರದ ಗೆಳೆಯರೊಬ್ಬರಿಗೆ ಮೂಡಿದ ಅನುಮಾನದ ಪರಿಣಾಮ..:)

  ಇಷ್ಟಕ್ಕೂ ಬ್ಲಾಗಿನ ಹೇಸರೇ ಬೇಕಾದ್ದು..:)

  ನೀವು ಅಮೇರಿಕೆಯಲ್ಲಿರುವವರಲ್ವೇ? ನೀವು ಉತ್ತರಿಸಿದ್ರೆ ಬಹುಮಾನಕ್ಕಿಂತ, ಬಹುಮಾನದ ಪಾರ್ಸೆಲ್ ಚಾರ್ಜೇ ಹೆಚ್ಚಾಗುವ ಭಯ ಇದೆ..;) (ತಮಾಷೆಗೆ!)

 12. ವೈಶಾಲಿ ಹೇಳುತ್ತಾರೆ:

  Nanu helbidla?? 😉

 13. ರಂಜಿತ್ ಹೇಳುತ್ತಾರೆ:

  ವೈಶಾಲಿ ಮೇಡಮ್,

  ಕ್ಷಮಿಸಿ, ನೀವು ಹೇಳೋಹಂಗಿಲ್ಲ. (ಯಾರಿಗೂ ಅನ್ನೋದು ರಿಕ್ವೆಸ್ಟು:))

 14. Dr.Gurumurthy hegde ಹೇಳುತ್ತಾರೆ:

  nanagoo gottu

  elli helbeku heli 🙂

 15. ರಂಜಿತ್ ಹೇಳುತ್ತಾರೆ:

  ಗುರುಮೂರ್ತಿ ಸರ್,

  ಇಲ್ಲೇ ಹೇಳಬಹುದು, (ಕಾಮೆಂಟ್ ಮಾಡರೇಶನ್ ಸೌಲಭ್ಯ ಅಳವಡಿಸಿಕೊಂಡಿದ್ದೇನೆ) ಹಾಗೇನೆ ನನ್ನ ಈ-ಮೈಲ್ ಗೂ ಕಳಿಸಬಹುದು.(ಈ ಮೈಲ್ ಮಾಡುತ್ತೇನೆ)

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s