ಜನಜಂಗುಳಿಯ ಚಕ್ರವ್ಯೂಹದ ಮಧ್ಯೆ

ನಿಶ್ಯಸ್ತ್ರನಾಗಿ

ಒಬ್ಬೊಬ್ಬರ ಎದೆತಟ್ಟಿ

ದಯವಿಟ್ಟು ನಿಮಗೆಲ್ಲಾ ನಾನು ಕಾಣಿಸುತ್ತಿದ್ದೀನಾ

ನಾನು ನಿಜವಾಗೂ ಇರುವುದು ಹೌದಾ

ಅಂತ ಕೇಳುವಷ್ಟು ಒಂಟಿತನ.

 

ಸುಮ್ಮನೆ ಕಟ್ಟಿಗೆಯಂತಾಗಿ

ದೇಹವನ್ನು ಒಲೆಯೊಳಗೆ ಹಾಕಿ

ಯಾರಿಗಾದರೂ ರೊಟ್ಟಿ ಸುಡಲು

ಸಹಾಯ ಮಾಡಬೇಕು ಅನ್ನಿಸುವಷ್ಟು

ಬೇಸರ.

Will_Smith_in_Seven_Pounds_Wallpaper_2_800

ಈ ಸಹಿಸದ ದುಃಖ ನೀಗಲು

ಒಂದೇ ಒಂದು ಪರಿಹಾರವಂತೆ.

 

ವರ್ಷಾನುಗಟ್ಟಲೆ ಮಾತಾಡಿಸದೇ

ಉಳಿದುಹೋದ ಗೆಳೆಯನೊಬ್ಬನನ್ನು

ಅಪರಾತ್ರಿ ಎಬ್ಬಿಸಿ

ಮಾಡದ ತಪ್ಪಿಗೆ

ಕ್ಷಮೆ ಬೇಡಬೇಕು,

 

ಇಲ್ಲವಾದರೆ

 

ದಾರಿಯಲ್ಲಿ ಸಿಕ್ಕ

ಯಾವ ಗುರುತು ಪರಿಚಯ

ಇಲ್ಲದವನ ಕಷ್ಟವನ್ನೆಲ್ಲಾ ಪರಿಹರಿಸಿ

ಅವನ ಖಾಹಿಲೆಅಮ್ಮನಿಗೆ ನನ್ನ ಕಿಡ್ನಿಯನ್ನು

ದಾನ ಮಾಡಿ

ಅಡ್ರೆಸ್ಸು ಹೆಸರು ಬಿಡಿ

ನನ್ನ ಚಹರೆಯನ್ನೂ ಅವನ ಮನಸ್ಸಿನಿಂದ ಅಳಿಸಿ

ಮನೆಗೆ ಬಂದು

ನಿರಾಳವಾಗಬೇಕು!

2334834-3-loneliness3

 

 

******

(ಟಿಪ್ಪಣಿ : ವಿಲ್ ಸ್ಮಿತ್ ರ Seven Pounds ಚಿತ್ರ ನೋಡಿಯಾದ ತುಂಬಾ ದಿನದವರೆಗೂ ಬೆಂಬೆತ್ತಿಬಂದ ಭಾವವೊಂದನ್ನು ಪದಗಳಲ್ಲಿ ಸೆರೆಹಿಡಿವ ನನ್ನ ಪುಟ್ಟ ಪ್ರಯತ್ನವಿದು. ಯಾವುದೇ Expectation ಇಲ್ಲದೇ ಸಹಾಯ ಮಾಡುವುದರಲ್ಲಿ ಸಿಗುವ ತೃಪ್ತಿಯ ಭಾವಕ್ಕೆ ಏನೋ ಬೆರಗಿದೆ. ಬಣ್ಣಿಸಲಾಗದೊಂದು ಸವಿಯಿದೆ. ಚಿತ್ರದಲ್ಲಿ ಆ ಪಾತ್ರಕ್ಕೆ ಒಂದು Motive ಇದ್ದರೂನು, ಅಂಥ ಒಂದು motive ಇಲ್ಲದೇನೇ ಇದ್ದರೇ ಕಥೆಯ ರೂಪ ಇನ್ನೊಂದೇ ಮಜಲು ಪಡೆಯುತ್ತಿತ್ತು. ಬಹುಶಃ ಬೇರೊಂದು ಸ್ಥಾಯಿಗೆ ಏರುತ್ತಿತ್ತೇನೋ ಅಂತ ಅನ್ನಿಸಿ ಹಪಹಪಿಸಿದ್ದೇನೆ. ಚಿತ್ರದ ಕುರಿತು, ಅದು ಉಂಟು ಮಾಡಿದ ತಲ್ಲಣಗಳ ಕುರಿತು ಮುಂದೆಂದಾದರೂ ಬರೆವ ಪ್ರಯತ್ನ ಮಾಡ್ತೇನೆ)

ಚಿತ್ರಕೃಪೆ : Alonelyworld.com ಮತ್ತು ಗೂಗಲ್

Advertisements
ಟಿಪ್ಪಣಿಗಳು
 1. Sushrutha ಹೇಳುತ್ತಾರೆ:

  Liked the poem. Also agree with your note.

 2. ಚಾಮರಾಜ ಸವಡಿ ಹೇಳುತ್ತಾರೆ:

  ತುಂಬಾ ಚೆನ್ನಾಗಿ ಬಂದಿದೆ ಕವಿತೆ ರಂಜಿತ್‌. ಒಂಟಿತನದ ತೀವ್ರವಾಗಿ ಕಾಡಿದಾಗ, ಇಂಥ ಭಾವನೆಗಳು ನನಗೂ ಬಂದಿವೆ. ನನ್ನ ಬಹಳಷ್ಟು ಬರವಣಿಗೆಗೆ ಒಂಟಿತನವೇ ಪ್ರೇರಣೆ. ಗುಂಪಿನಲ್ಲಿದ್ದರೂ ಒಂಟಿ ಭಾವನೆ ಅನುಭವಿಸುವುದು ತೀರಾ ವಿಚಿತ್ರವಾದುದು.

  ನನ್ನದೇ ಮನಸ್ಸಿನ ತುಣುಕನ್ನು ಎತ್ತಿ ಕೊಟ್ಟಂತಿದೆ ಕವನ. ಆ ಕಾರಣಕ್ಕಾಗಿ ತುಂಬ ಆಪ್ತವೆನಿಸುತ್ತದೆ.

 3. ಮಂಜುನಾಥ ಹೇಳುತ್ತಾರೆ:

  ತುಂಬಾ ಚೆಂದದ ಕವಿತೆ. ಬಹಳ ಇಷ್ಟವಾಯಿತು

 4. Ganapati Bhat ಹೇಳುತ್ತಾರೆ:

  Nice 🙂

 5. Divya Hegde ಹೇಳುತ್ತಾರೆ:

  Nice one… Liked it… 🙂

 6. vijaykumarnargund ಹೇಳುತ್ತಾರೆ:

  ನಿಜ ರಂಜಿತ್! ನಾನು ಸೆವೆನ್ ಪೌಂಡ್ಸ ನೋಡಿದ ಮೇಲೆ ಅಂತಹ ಒಂದು ಘಾಡ ನೀರವತೆಯನ್ನು ಅನುಭವಿಸಿದ್ದೆ. ಯಾವ ಅಪೇಕ್ಷೆ ಇಲ್ಲದೆ ಸಹಾಯ ಮಾಡುವ ತೃಪ್ತ ಭಾವ ಕೇವಲ ಻ನುಭವಕ್ಕೆ ನಿಲುಕುವಂತಹದ್ದು. ನಿಮ್ಮ ಕವಿತೆ ಅಂತಹ ಒಂದು ನಿರಾಳತೆಯ ಹುಡುಕಾಟ ಮತ್ತು ಅದನ್ನು ನೀಗಿಸಿಕೊಳ್ಳುವ ಬಗೆಯನ್ನು ಚೆನ್ನಾಗಿ ಹೊರಹಾಕಿದೆ. ನಿಮ್ಮ ಬರವಣಿಗೆ ಮನಸಿಗೆ ತುಂಬಾ ಹತ್ತಿರ ಏನಿಸಿತು. “ಸುಮ್ಮನೆ ಕಟ್ಟಿಗೆಯಂತಾಗಿ,ದೇಹವನ್ನು ಒಲೆಯೊಳಗೆ ಹಾಕಿ,ಯಾರಿಗಾದರೂ ರೊಟ್ಟಿ ಸುಡಲು,ಸಹಾಯ ಮಾಡಬೇಕು ಅನ್ನಿಸುವಷ್ಟು ಬೇಸರ”. ಅದ್ಭುತ ಸಾಲುಗಳು……

 7. chethan ಹೇಳುತ್ತಾರೆ:

  ಹಾಯ್ ರ೦ಜಿತ್!! ಅದ್ಯಾವ ಸವೆನ್-ಪೌ೦ಡೋ ನಾನರಿಯೇ..ಆದ್ರೆ ಕವಿತೆ ಮಾತ್ರ ಸಿ೦ಪ್ಲಿ ಸೂಪರ್ಬ್!! ಎ೦ಥೆ೦ಥಾ ಭಾವನೆಗಳು !! ನಾಲ್ಕು ಸಿನೆಮಾ ನೊಡಿದ೦ಗಾಯ್ತು

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s