ಹೊಸತರಲ್ಲಿ ಎಲ್ಲ ವಿಷಯದಲ್ಲಿ ಗೊಂದಲಗಳಿರ್ತವೆ. ಬಲ್ಲವರರಿಂದ ಮೊದಲೇ ಕೇಳಿಕೊಂಡು ಅದರ ಪರಿಹಾರ ಎಲ್ಲಾ ವಿಷಯಗಳಲ್ಲಿ ಸಾಧ್ಯವಿಲ್ಲ. ಉದಾಹರಣೆಗೆ ಮೊದಲ ರಾತ್ರಿ. ಗೆಳೆಯನಿಂದ ಕೆಲ ಅನುಮಾನಗಳನ್ನು ಕ್ಲಿಯರ್ ಮಾಡಿಕೊಳ್ಳಬಹುದೇ ವಿನ: ಎಲ್ಲವನ್ನೂ ಕೇಳಿದರೆ ನಗೆಪಾಟಲು. ಅವ ಹೇಳಿದ್ದಕ್ಕೂ ಮತ್ತೆ ಅಲ್ಲಿ ಒಳಗೆ ರಣರಂಗಕ್ಕೂ ಸಾಮ್ಯತೆ ಇಲ್ಲದೇ ಹೋದರೆ ಮತ್ತಷ್ಟು ಪೇಚು! ಊಹಿಸದ ಕಡೆಯಿಂದ ಅಪಾಯ (ಇಂಥ ದೊಡ್ಡ ಪದ ಬ್ಯಾಡವಿತ್ತು, ಹೆದರಬೇಡಿ) ಬರಬಹುದು. ಅದಕ್ಕೆ ಕೆಲವೊಂದು ಅನುಭವಿಸಿಯೇ ಅನುಭವ ಪಡೆದುಕೊಳ್ಳಬೇಕು.

ಇಷ್ಟಕ್ಕು ಇದೆಲ್ಲಾ ನಾ ಅಂತಿರೋದು ಮೇಲೆ ಹೇಳಿದಂಥ ಘನಗಂಭೀರ ವಿಷಯವಲ್ಲ. ಸಂದರ್ಭವೇನೆಂದರೆ ಮೊದಲ ಬಾರಿಗೆ ಹೊಸ ಊರಿನ ಹೊಸ (ನನಗೆ ಮಾತ್ರ) ಹೋಟೆಲ್ ಗೆ ಹೊಕ್ಕಿದ್ದೇನೆ. ಅಲ್ಲಿನ ಕ್ಯಾಶಿಯರ್ ಮೊಗದಲ್ಲಿ ಕೃತಕವಾಗಿ ನಗು ಬಿಂಬಿಸಿದ್ದಾನೆ. ಅದರಲ್ಲಿ ಯಾಕೋ ಹೊಸ ಮಿಕ ಬಂತು ಅನ್ನುವ ಹಿಗ್ಗೇ ಹೆಚ್ಚು ಅನ್ನಿಸುತ್ತಿದೆ. ಅವನ ಆ ಅಸ್ತ್ರಕ್ಕೆ ನಾನು ಸೌಜನ್ಯಕ್ಕಾಗಿ ನಕ್ಕು, ಮತ್ತೆ ಮುಖ ಗಂಭೀರ ಮಾಡಿಕೊಳ್ಳುತ್ತಾ ’ಹೊಸಬನಿರಬಹುದು, ಆದರೆ ನಿಮ್ಮ ಹತ್ರ ಟೋಪಿ ಹಾಕ್ಸಿಕೊಳ್ಳಲ್ಲ, ಯಾವುದಕ್ಕೂ ನೀವು ಮತ್ತಷ್ಟು ಹುಶಾರಾಗಿರಿ’ ಎಂಬ ಸಂದೇಶ ರವಾನಿಸಿದೆ. ಸಪ್ಲಾಯರ್ ನನ್ನು ಕೂಗುತ್ತಾ ತಮಿಳಿನಲ್ಲಿ "ಸರ್ ಗೆ ಏನ್ ಬೇಕು ಕೇಳು ?" ಅನ್ನುತ್ತಿದ್ದರೂ ಅದರೊಳಗೆ "ನಿನ್ನಂತವನನ್ನ ಎಷ್ಟು ನೋಡಿಲ್ಲ, ಕೂತ್ಕೋ.. ಏ ಸಪ್ಲಾಯರ್.. ಬೇಗ ಬಲೆ ಬೀಸು!" ಅನ್ನುತ್ತಿದ್ದಂತಿತ್ತು.

 

07072010891

ತಿಂಡಿ ನಂತರ ಕಾಫಿ ಕುಡಿದು ನೋಡಾಣ ಅನ್ನಿಸಿ, ಒರು ಕಾಫಿ, ಬ್ರೂ ಕಾಫಿ ಇರುಕ್ಕಾ ಅಂತ ಹರುಕ್ಕು ಮುರುಕ್ಕು ತಮಿಳಿನಲ್ಲಿ ಕೇಳಿದೆ. ಕಾಪಿಯಾ ಇರುಕ್ಕು ಇರುಕ್ಕು ಅಂತಾ ಹೋದವ ತಂದಿಟ್ಟಿದ್ದು ಒಂದು ದೊಡ್ದ ಗ್ಲಾಸಿನಲ್ಲಿ ಕಾಫಿ. ಅದೆಷ್ಟು ದೊಡ್ಡದಿತ್ತೆಂದರೆ ನೋಡಿದಾಕ್ಷಣ ನನಗೆ ಬಾಲ್ಯದಲ್ಲಿ ಕಾಫಿ ಮೇಲೆ ಉಂಟಾಗಿದ್ದ ಮೊದಲ ಪ್ರೇಮವೆಲ್ಲಾ ಒಂದೇ ಕ್ಷಣದಲ್ಲಿ ಒಂದು ವರ್ಷದ ನಂತರ ಸಂಸಾರದಲ್ಲಿ ಗಂಡ-ಹೆಂಡತಿ ನಡುವಿನ ವಿರಸದಷ್ಟು ಇಳಿದುಹೋಯಿತು. ಗೆಳೆಯರು ಬಿಯರ್ರನ್ನು ಕೂಡ ಹೀಗೆ ಕುಡಿಯುವುದನ್ನು ಕಂಡಿರದ ನನಗೆ ಇದು ಕುಡಿತಕ್ಕಿಂತ ಹೆಚ್ಚು ಭಯ ಹುಟ್ಟಿಸಿತು.

ಎಷ್ಟು ಜಾಸ್ತಿ ದುಡ್ಡು ಕೊಟ್ಟರೂ ಕಾಫಿ ಲೋಟ ಸೈಜು ಕಡಿಮೆಯಾಗುತ್ತಿದೆ ಅಂತ ಪೇಚಾಡುವ ನಾಗರಿಕರನ್ನೆಲ್ಲಾ ಹತ್ತು ದಿನ ಇಂಥ ಕಾಫಿ ಕುಡಿಸಬೇಕು. ಅಲ್ಲದೇ ನನಗೆ ಹಿಂಸೆಯಿತ್ತ ಸಕಲ ವೈರಿಗಳಿಗೆ ಇಂಥ ಶಿಕ್ಷೆಯಿತ್ತರೆ ಹೇಗೆ ಅಂತಲೂ ಆಲೋಚನೆ ಉಕ್ಕಿತು. ಹೊಸ ಗರುಡಪುರಾಣ ಬರೆವ ಅವಕಾಶ ನನಗೆ ಸಿಕ್ಕರೆ ನೀರಿಗೆ ಹಾಲು ಬೆರೆಸುವ ಹಾಲು ಮಾರಾಟಗಾರರು, ಒಂದು ಕಾಫಿ ಕುಡಿಯಲು ಒಂದು ಘಂಟೆ ತೆಗೆದುಕೊಂಡು ಹೋಟೆಲ್ಲಿನ ಫ್ಯಾನಿಗಾದ ಖರ್ಚಿಗಿಂತಲೂ ಕಡಿಮೆ ಹಣ ಕೊಟ್ಟುಬರುವವರು, ತಮ್ಮ ಹೋಟೆಲ್ಲಿನಲ್ಲಿ ಕಾಫಿ ಕುಡಿಯುವವರನ್ನು ಕಂಡು ತಮ್ಮ ಮೀಸೆ ತುದಿಯಲ್ಲಿ ನಕ್ಕು , ಪಕ್ಕದ ಹೋಟೆಲ್ ನಲ್ಲಿ ತಿಂಡಿ ಕಾಪಿ ಮುಗಿಸಿ ಬರುವ ಹೋಟೆಲ್ ಓನರ್ ಗಳನ್ನು, ಲೋಟ ತೊಳೆಯುವ ಬದಲು ಕೆಂಗೇರಿ ಮೋರಿಯಲ್ಲಿನ ನೀರಿನಂತಾ ಕಲಗಚ್ಚನ್ನು ಬಕೆಟ್ ನಲ್ಲಿರಿಸಿ ಅದರಲ್ಲದ್ದಿ ತೊಳೆಯುವವರನ್ನು ಎಲ್ಲರನ್ನೂ ಪಟ್ಟಿಮಾಡಿ ಈ ಶಿಕ್ಷೆ ಕೊಡಬೇಕನ್ನಿಸಿತು. ಎಷ್ಟು ಅಂದುಕೊಳ್ಳುತ್ತಿದ್ದರೇನು, ಕಾಫಿ ಗ್ಲಾಸು ಜತೆ ಗಡಿಯಾರ ಮುಳ್ಳಿನ ರೇಸು.. ಗೆಲ್ಲುತ್ತಿರುವ ಲಕ್ಷಣ ಮಾತ್ರ ಗಡಿಯಾರದ್ದೇ. ಕುಡಿದಷ್ಟೂ ತಳ ಕಾಣದ ಅಕ್ಷಯ ಕಪ್ಪು.

ಕ್ಯಾಶಿಯರ್ರಿನ ಮುಖ ನೋಡಿದರೆ ನನಗೆ ಇನ್ನಿಂಗ್ಸ್ ಸೋಲಾಗುವ ಭೀತಿ. ನಮ್ಮನೆ ದನ ಕಲಗಚ್ಚು ಕುಡಿಯುವಾಗಲೂ ಮಾಡದ ಮೂತಿಯನ್ನು ನಾನು ಅನಿವಾರ್ಯವಾಗಿ ಧರಿಸಬೇಕಾಯಿತು. ದನದ ಕಷ್ಟ ನೆನಪಾಗಿ ಅದರ ಮೇಲೆ ಯದ್ವಾತದ್ವಾ ಕರುಣೆ ಉಕ್ಕಿತು.

ಗ್ಲಾಸು ಎತ್ತಲು ಸಹಾಯ ಮಾಡದ ಕೈ, ಒಳಗೆ ಸೇರಿಸಲು ಬಯಸದ ಗಂಟಲು, ತನ್ನ ಮೈ ಮೇಲೆ ಒಂದು ಕ್ಷಣವೂ ಇರಗೊಡಿಸದ ನಾಲಿಗೆ, ಕಷ್ಟಪಟ್ಟರೂ ಮೊಗದ ಪೇಚು ಅಡಗಿಸಲಾಗದ ಅಸಾಹಯಕತೆ ಇವೆಲ್ಲದರ ನಡುವೆ ನನ್ನ ಕಾಫಿ ಕುಡಿಯುವ ಪ್ರಯತ್ನಕ್ಕೆ ಕೊನೆಗೂ ಜಯ ಸಿಕ್ಕಿತು.

ಕಾಫಿ ಮುಗಿಯಿತು.

ಬಿಲ್ಲು ಎತ್ತುವಾಗ ಉಂಟಾದ ಜ್ಞಾನೋದಯ ಏನೆಂದರೆ ಈ ಕಾಪಿ ಗೆ ಐವತ್ತು ರೂಪಾಯಿ (ಇಲ್ಲಿನ ಡಾಲರನ್ನು ರೂಪಾಯಿಗೆ ಬದಲಿಸಿದಾಗ). ಐವತ್ತು ವಸೂಲಿ ಮಾಡಲೇಬೇಕು ಎಂಬ ಕಾರಣಕ್ಕಾಗೇ ಅಷ್ಟು ಕ್ವಾಂಟಿಟಿ ಕೊಡುವುದು. ಕಡಿಮೆ ಕೊಟ್ಟರೆ ಬಿಲ್ಲಿಗೆ ಪ್ರಶ್ನೆ ಬರಬಾರದಲ್ವ?

ಅಂತೂ ಬಿಲ್ಲು ಎತ್ತಿ ಕೊಟ್ಟಾಗ ನನಗೆ ಭಾರೀ ಸುಸ್ತು!

ಟಿಪ್ಪಣಿಗಳು
 1. Shamala ಹೇಳುತ್ತಾರೆ:

  ಚೆನ್ನಾಗಿದೆ ನಿಮ್ಮ ಕಾಫಿ ಪುರಾಣ…….. ನಿಮ್ಮ ಆರಂಭ ನೋಡಿ ತಲೆಬರಹ ನೋಡಿದ್ರೆ ಕಾಫಿಕತೆ ಅಂತ ಇದೆ…. ಇದೇನಪ್ಪಾ ಅನ್ಕೊಂಡೆ… ಆಹಾ ಏನು ಹೋಲಿಕೆ ರಂಜೀತ್…. ಎತ್ತಣ ಮಾಮರ ಎತ್ತಣ ಕೋಗಿಲೆಗೆ ಸಂಬಂಧ ಕಲ್ಪಿಸಿಬಿಟ್ಟಿರಿ. 🙂 … ಆದ್ರೆ ಓದಿ ನಿಜವಾಗಲೂ ನಗು ಬಂತು… ಆ ೫೦ ರೂಪಾಯಿನ ಕಾಫಿ ನಿಮ್ಮತ್ರ ಒಂದು ಸುಂದರ ಬರಹ ಮೂಡಿಸಿತು…. so… ೫೦ ರೂ ಖರ್ಚು ಮಾಡಿದ ಸುಸ್ತು, ಸುಂದರ ಬರಹ ನೋಡಿ ಮರೆತೋಯ್ತು ಬಿಡಿ… ಅಲ್ವಾ…?

 2. ಅನಾಮಿಕ ಹೇಳುತ್ತಾರೆ:

  ಮದುವೆಯಾಗದೇ ಮೊದಲ ರಾತ್ರಿ! ಎಂಥಾ ಅನುಭವಾಮೃತ…ಕಾಲ ಕೆಠೋಯ್ತು, ನಮ್ಕಡೆ ಮಾಣಿ ಮಕ್ಳೂ ಕೆಟ್ವು ;P
  ಅಲ್ಲಿ 1$ಗೆ ಕಾಫಿ;ಇಲ್ಲಿ 1Re ಗೆ ಪಪೆರ್ಮೆಂಟೂ ಬರಲ್ಲ ಮಗೂ 😀

 3. ಅನಾಮಿಕ ಹೇಳುತ್ತಾರೆ:

  ಮದುವೆ ಆಗದೇ ಮೊದಲ ರಾತ್ರಿ ಕರ್ಮಕಾಂಡ 🙂 ಕಾಲ ಕೆಠೋಯ್ತು ಮಕ್ಳೆ… ಅಲ್ಲಿ 1$ಗೆಲ್ಲಾ ಕಾಫಿ 😦 ಇಲ್ಲಿ ಪೇಪರ್ಮಿಂಟೂ ಸಿಗಲ್ಲ 1Reಗೆ. (unit currency ಲೆಕ್ಕ)

 4. ರಂಜಿತ್ ಹೇಳುತ್ತಾರೆ:

  ಶಾಮಲ,

  ಥ್ಯಾಂಕ್ಯೂ. ಸುಮ್ಮನೆ ತಮಾಶೆಗೆ ಹಾಗೆ ಶುರು ಮಾಡಿದೆ..:) ನಗು ಬಂದ್ರೆ ಬರ್ದಿದ್ದು, ನಾನು ಪಟ್ಟ ಪಾಡು ಕೂಡ ಸಾರ್ಥಕ ಆಯ್ತು ನೋಡಿ..

  ಸುಂದರ ಬರಹ ಬರೆದು ಆ ಸುಸ್ತು ಮರೆತೋಯ್ತು ಅಂದ್ರಾ? ಹ್ಮ್… ಮಾಮೂಲಾಗಿ ಬರೆಯೋದಕ್ಕಿಂತ ವಿಭಿನ್ನವಾಗಿ ಬರೆಯದೇ ಹೋದರೆ ಮಜಾ ಇರಲ್ಲ!:)

 5. ರಂಜಿತ್ ಹೇಳುತ್ತಾರೆ:

  ಅನಾನಿಮಸ್ಸು,

  ಹ್ಮ್… ಕರ್ಮಕಾಂಡ!

  ನೀವೇನು ಮೊದಲ ಪ್ಯಾರವನ್ನೇ ಚಪ್ಪರಿಸಿ ನಿಲ್ಲಿಸಿಬಿಟ್ಟಂತಿದೆ.

  ನಿಮ್ಮ ಗಮನಕ್ಕೆ : ಈ ಬರಹ ಮೊದಲ ರಾತ್ರಿ ಬಗೆಗಲ್ಲ..:)

 6. ವಿಜಯರಾಜ್ ಕನ್ನಂತ ಹೇಳುತ್ತಾರೆ:

  🙂

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s