ತರ್ಕ ಮತ್ತು ಕಥನ ಕಲೆ

Posted: ಆಗಷ್ಟ್ 14, 2010 in ಕತೆ, ಕಥಾ ವಿಚಾರ, ದಿನದ ಎಸಳುಗಳು...
ಟ್ಯಾಗ್ ಗಳು:, , , ,

ಕಥೆ ಹೇಳುವವರ ಮುಖ್ಯಲಕ್ಷಣವೆಂದರೆ ಒಂದು ಸನ್ನಿವೇಶವನ್ನು ಕಥೆಯ ಓಘಕ್ಕೆ ತಕ್ಕಂತೆ ಮತ್ತು ಪಾತ್ರಧಾರಿಗಳ ನಡೆವಳಿಕೆಗಳು ಓದುಗನ(ಕೇಳುಗನ) ತರ್ಕಕ್ಕೆ ಸರಿಯಾಗಿ ಸಿಲುಕಿಕೊಳ್ಳುವಂತೆ ವಿವರಿಸುವುದೇ ಆಗಿದೆ. ಪಾತ್ರಧಾರಿಯ ವರ್ತನೆಗಳಿಗೆ, ಒಂದು ವಿಧವಾದ ಮಾತುಗಾರಿಕೆಗೆ ಅಥವ ಸನ್ನಿವೇಷಕ್ಕೆ ಪಾತ್ರಧಾರಿ ನೀಡುವ ಪ್ರತಿಕ್ರಿಯೆಗಳಿಗೆ, ಓದುಗನಿಗೆ ಮೂಡಿದ ಪ್ರಶ್ನೆಗಳನ್ನು ಸಮಯಕ್ಕೆ ತಕ್ಕಂತೆ(ಕೂಡಲೇ ಅಥವ ಕತೆಯ ಕೊನೆಯ ಒಳಗೆ) ನಿವಾರಿಸುವುದು ಕೂಡ ಅವನ ಕರ್ತವ್ಯಗಳಲ್ಲಿ ಒಂದು. ಅದೆಷ್ಟೇ ಗೊಂದಲಗಳು ಸಿಕ್ಕುಗಳು ಕತೆಯಲ್ಲಿದ್ದಾಗ್ಯೂ ಒಬ್ಬ ಬರಹಗಾರನ ಕಥೆಗಾರಿಕೆ ಉನ್ನತಮಟ್ಟದಲ್ಲಿದ್ದಾಗ ಓದುಗನಲ್ಲಿ ಪ್ರಶ್ನೆ ಮೂಡಿಸದೇ ಇರುವ ಹಾಗೆ ವಿವರಿಸುವುದು ಸಾಧ್ಯ. ಅಂಥ ವಿವರಣೆಯೂ ಒಂದು ಕಲೆ. ಮೇಲ್ನೋಟಕ್ಕೆ ಓದುಗನಿಗೆ ಓದುವ ಓಘದಲ್ಲಿ ಪ್ರಶ್ನೆ ಮೂಡದೇ ಇದ್ದರೆ ಅದು ಕಥೆಗಾರನ ವಿಜಯವೇ. ಇನ್ಯಾರೋ ಇನ್ಯಾವಾಗಲೋ ಅದ್ಯಾಕೆ ಹೀಗಾಗಬೇಕಿತ್ತು ಹೀಗಿದ್ದಿದ್ದರೆ ಆಗುತ್ತಿತ್ತಲ್ಲವಾ ಅಂತ ಕೇಳಿದಾಗ ಅರೆ! ಹೌದಲ್ಲವೇ ನಾನ್ಯಾಕೆ ಆಲೋಚಿಸಿರಲಿಲ್ಲ ಅಂದುಕೊಳ್ಳುವಾಗ, ಓದುಗನಿಗೆ ತರ್ಕಕ್ಕೆ ನೀಡದ ಕತೆಗಾರನ ಮೇಲೆ ಎಳ್ಳಷ್ಟೂ ಮುನಿಸು ಬರದೇ, ನನಗೇ ಬರದಿದ್ದ ಆಲೋಚನೆ ಆ ಪಾತ್ರಧಾರಿಗೆ ಹೇಗೆ ಬಂದೀತು ಓದುಗನಿಗನ್ನಿಸಿ ಕತೆಗಾರ ಬಚಾವ್ ಆಗುವನು.

storytelling (1)

ಇದನ್ನು ಒಂದು ಉದಾಹರಣೆ ಮೂಲಕ ವಿಶದೀಕರಿಸುತ್ತೇನೆ. ದಿ ಕೈಟ್ ರನ್ನರ್ ಅನ್ನುವ ಆಂಗ್ಲ ಚಿತ್ರದ ಸನ್ನಿವೇಷ ಇದು. ಇಬ್ಬರು ಹುಡುಗರು ಮಾತಾಡಿಕೊಳ್ಳುತ್ತಿರುತ್ತಾರೆ. ಒಬ್ಬ ಅದರಲ್ಲಿ ಬರಹಗಾರ. ಅವನ ಒಂದು ಕತೆಗೆ ಆಗಲೇ ಬಹುಮಾನ ಬಂದಿರುತ್ತದೆ. ಇನ್ನೊಬ್ಬ ಹುಡುಗ ಕೇಳುತ್ತಾನೆ, “ನಿನಗೆ ಬಹುಮಾನ ಬಂದ ಕತೆಯನ್ನು ನನಗೆ ಹೇಳುತ್ತೀಯಾ” ಎಂದು. ಆ ಕತೆಗಾರ ಹೇಳುವ ಕತೆ ಹೀಗಿದೆ.

ಒಬ್ಬನಿಗೆ ಒಂದು ವರ ಸಿಕ್ಕಿರುತ್ತದೆ. ಅದರ ಪ್ರಕಾರ ಅವನಿಗೆ ಎಷ್ಟು ಕಣ್ಣೀರು ಉಕ್ಕುತ್ತದೋ ಅಷ್ಟು ಚಿನ್ನದ ವರಹ ಸಿಗುತ್ತದೆ. ಸುಮ್ಮ ಸುಮ್ಮನೆ ದುಃಖ ಆವಾಹಿಸಿಕೊಂಡು ವರಹಗಳನ್ನು ಗಿಟ್ಟಿಸಿಕೊಳ್ಳುತ್ತಿರುತ್ತಾನೆ. ಯಾರದೋ ದುಃಖವನ್ನು ತನ್ನದಾಗಿಸಿಕೊಳುವ ಯತ್ನ ಮಾಡುತ್ತಾನೆ. ಮೊದಮೊದಲು ಚೆನ್ನಾಗೇ ಅನಿಸಿದರೂ ಸ್ವಲ್ಪ ದಿನ ಕಳೆದರೆ ಏನು ಮಾಡಿದರೂ ಅವನಿಗೆ ಅಳುವೇ ಬರುವುದಿಲ್ಲ. ಎಷ್ಟು ದುಃಖ ಹುಟ್ಟಿಸಿಕೊಂಡರೂ ಕಣ್ಣು ಬತ್ತಿದ ಕೆರೆ. ವರಹಕ್ಕಾಗಿ ಎಷ್ಟು ಅತ್ತಿರುತ್ತಾನೆಂದರೆ ಎಂಥ ದುಃಖಕ್ಕೂ ಅಳುವೇ ಬರದೆಂಬಂತಹ ಸ್ಥಿತಿ.

ಕತೆಯ ಕೊನೆಯಲ್ಲಿ ಅವನು ತನ್ನ ಪ್ರೀತಿಯ ಹೆಂಡತಿಯನ್ನೇ ವರಹಗಳ ಆಸೆಗೆ ಕೊಲ್ಲುತ್ತಾನೆ!

3075462-md

ಚೆನ್ನಾಗಿದೆ ಅನ್ನಿಸುತ್ತದಲ್ಲವ ಕತೆ. ಹಾಗೆ ಅನ್ನಿಸಿದರೆ ಅದುವೇ ಕತೆಗಾರನ ಜಯ. ಲೇಖನದ ಕೊನೆಯಲ್ಲಿ ಈ ಉದಾಹರಣೆ ಪೂರ್ಣಗೊಳಿಸುತ್ತೇನೆ.

ಇನ್ನೊಂದು ಉದಾಹರಣೆ ಕನ್ನಡದ ಓಂ ಚಿತ್ರ. ಈ ಸಿನೆಮಾವನ್ನು ಈಗ ಯಾವ ಚಿತ್ರಮಂದಿರದಲ್ಲಿ ಹಾಕಿದರೂ ಎಲ್ಲಾ ಹೊಸ ಚಿತ್ರಗಳಿಗೆ ಪಪೋಟಿ ನೀಡಿ ಭರ್ಜರಿಯಾಗಿ ಓಡುತ್ತದೆ. ಒಮ್ಮೆ ನೋಡಿದವರೂ ಮತ್ತೊಮ್ಮೆ ನೋಡಲು ಹಿಂಜರಿಯುವುದಿಲ್ಲ. ಅಂತಹ ಚಿತ್ರ ಓಂ. ಅದರಲ್ಲಿ ನಾಯಕನ ಚೇಲಾಗಳು, ನಾಯಕನಿಗೆ ಅಣ್ಣಾ ಅಂದರೆ ನಾಯಕಿಗೆ ಅತ್ತಿಗೆ ಅನ್ನಬೇಕಲ್ವೇ? ಹಾಗಾಗದು, ಚೇಲಾಗಳು ನಾಯಕಿಯನ್ನು ಅಕ್ಕಾ ಅನ್ನುತ್ತಾರೆ. ನಾಯಕ -ನಾಯಕಿಯನ್ನು ಸಹೋದರ ಸಹೋದರಿಯಾಗಿಸುತ್ತಾರೆ!

ಈಗ ಆ ದಿ ಕೈಟ್ ರನ್ನರ್ ಚಿತ್ರದ ಸನ್ನಿವೇಶದ ಉದಾಹರಣೆ ಮುಂದುವರಿಸುವೆ. ಆ ಬಹುಮಾನ ಪಡೆದಂಥ ಕತೆ ಕೇಳುತ್ತಿದ್ದ ಮತ್ತೊಬ್ಬ ಹುಡುಗ ಆ ಕತೆಗಾರನನ್ನು ಕೇಳುತ್ತಾನೆ, “ಅವನು ಹೆಂಡತಿಯನ್ನೇ ಯಾಕೆ ಕೊಲ್ಲಬೇಕಿತ್ತು, ಅಡುಗೆಮನೆಯಲಿ ಈರುಳ್ಳಿ ಕತ್ತರಿಸಿದ್ದರೆ ಆಗುತ್ತಿರಲಿಲ್ಲವಾ?”

*****

(ಚಿತ್ರಕೃಪೆ : ಕಥೆ ಹೇಳುತ್ತಿರುವ ಮುದುಕಿ ಮತ್ತು ಒಂದು ಕಥಾಕ್ಲಾಸು)

ಟಿಪ್ಪಣಿಗಳು
 1. supreeth ಹೇಳುತ್ತಾರೆ:

  ಖಂಡಿತಾ ಉತ್ತಮವಾದ ಪ್ರಶ್ನೆಯನ್ನು ಎತ್ತಿಕೊಂಡಿದ್ದೀರಿ.

  ಯಾವುದೇ ಘಟನೆಗೆ ನಾವು ಯಾವಾಗಲೂ ಶೇಕಡಾ ನೂರರಷ್ಟು ಸರಿಯಾದ ಪ್ರತಿಕ್ರಿಯೆಯನ್ನೇ ತೋರುವುದಿಲ್ಲ. ನಮ್ಮ ಆ ಘಳಿಗೆಯ ನಿರ್ಧಾರಗಳಿಗೆ ಯಾವ ಯಾವುದೋ ಹಿಡನ್ ಪರ್ಸುಯೇಶನ್ನುಗಳು ಕೆಲಸ ಮಾಡುತ್ತಿರುತ್ತವೆ. ಇದು ನಮ್ಮ ಬದುಕಿನಲ್ಲಿ ನಡೆಯುವಂಥದ್ದು. ಇಂಥ ಹಿಡನ್ ಪರ್ಸುಯೇಶನ್ ಗಳನ್ನು ಕಥನದಲ್ಲೂ ಹುದುಗಿಸಿ ಸನ್ನಿವೇಶಗಳನ್ನು ಸೃಷ್ಟಿಸುವುದು ನಿಜಕ್ಕೂ ಉತ್ತಮ ಕತೆಗಾರನ ಶಕ್ತಿಯನ್ನವಲಂಬಿಸಿರುತ್ತದೆ ಅನ್ನಿಸುತ್ತೆ.

 2. ರಂಜಿತ್ ಹೇಳುತ್ತಾರೆ:

  ಗುರುಮೂರ್ತಿ ಸರ್,

  ಥ್ಯಾಂಕ್ಸ್.

  ಸುಪ್ರೀತ್,

  ಹ್ಮ್… ವಿವರಗಳನ್ನು ಕಟ್ಟಿಕೊಡುವಾಗ ಉಂಟಾಗುವ ಮಗ್ನತೆಯಲ್ಲಿ ಪ್ರಶ್ನೆಗಳು ಹುದುಗಿ, ಬರೀ ಕುತೂಹಲ ಬೆಳೆದುಕೊಳ್ಳುವ ಸನ್ನಿವೇಶಗಳು ಬಹಳಷ್ಟು ಬಾರಿ ನಡೆಯುತ್ತದೆ. ಬತ್ತಳಿಕೆಯಲ್ಲಿ ಸುಮ್ಮನೆ ಪ್ರಶ್ನೆಗಳನ್ನು ಮಾತ್ರ ಇಟ್ಟುಕೊಂಡು ಓದಿದರೆ ಕಥೆಗೂ ಕಥೆಗಾರನಿಗೂ ಬಲು ಕಷ್ಟ..:)

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s