ನಾ ಬರೆದಿದ್ದರಲ್ಲೇ ಅದ್ಭುತ ಕವಿತೆ

ಅಂದರೆ

 

ಅಂದು

ಹಿಂದೆಂದೋ ಆಗಿದ್ದ ಅನುಭವ

ಒಳಗೊಳಗೇ ಪಾಕಗೊಂಡು

ನೆನಪೊಂದು ಹಾಗೇಯೇ ಪರಿಮಳ

ದಂತೆ ನನ್ನ ಆಳ

ಇಳಿದು

ಪದರು ಪದರಾಗಿ

ಪದಗಳು

ಜಿನುಜಿನುಗುತ್ತ ಹಾಳೆಗಳ ತುಂಬಾ

ಚಲಿಸಿದವಲ್ಲಾ

poetry2

ಗೆಳೆಯ ಅದನ್ನೋದಿ

ಅವನ ಹಳೆಹುಡುಗಿ ನೆನಪಾಗಿ

ಕವಿತೆ ಥೇಟ್ ಅವಳ ನಗುವಂತಿದೆ

ಅಂತಲೇ ಜ್ಞಾನಪೀಠ ಇತ್ತನಲ್ಲ

 

ಮತ್ತು ಜನಗಳು ಓದಿದರೆ

ಮತ್ತು ಹೆಚ್ಚಿ

ಕವಿತೆಯ ಉದ್ದಗಲಕ್ಕೇ ತಮ್ಮ ಬದುಕನು ಚಾಚಿ

ವಿಸ್ತಾರವಾಗುವರಲ್ಲ

 

ಆ ಹಾಳೆ ಆ ಸಮಯ ಆ ನೆನಪು

ಆ ಸುವಾಸನೆ

ಅನುಭಾವದ ಆ ಘಳಿಗೆ

ಎಲ್ಲಾ ಮತ್ತೆ ಸಿಗದೇ ಇದ್ದಲ್ಲಿ

ಅಂತಾದ್ದೇ ಬಿಡಿ

ಅದನ್ನು ಬರೆಯಲೂ ಆಗದಂಥದ್ದು ಅಂದಿದ್ದೆನಲ್ಲಾ

poetry-prompts-nature

ಹಾಗೂ ಬರೆದು ಉನ್ಮತ್ತನಾಗಿ

ಅದರ ಗುಂಗಲೇ ನನ್ನ ನಾ ಕಳೆದುಹೋಗಿ

ಜತೆಯಲಿ ಆ ಹಾಳೆಯನೂ ಕಳೆದು

ಮರುದಿನ ನನ್ನಾಕೆ ಬಟ್ಟೆ ಒಣಗಿಸುವಾಗ

ಪ್ಯಾಂಟಿನಲಿ ಮುದ್ದುಮುದ್ದಾಗಿ ಮುದುರಾಗಿ

ಸಿಕ್ಕಿತ್ತಲ್ಲಾ

 

ಅದೇ ಕವಿತೆ!

 

****

 

(ಚಿತ್ರಕೃಪೆ : )

Advertisements
ಟಿಪ್ಪಣಿಗಳು
  1. ಶರಶ್ಚಂದ್ರ ಕಲ್ಮನೆ ಹೇಳುತ್ತಾರೆ:

    ಸರಳವಾಗಿಯೂ, ತಮಾಷೆಯಾಗಿಯೂ, ಸುಂದರವಾಗಿಯೂ ಇದೆ ಕವಿತೆ ರಂಜಿತ್ 🙂

  2. ರಂಜಿತ್ ಹೇಳುತ್ತಾರೆ:

    ಶರಶ್,

    ನಮ್ಮ ಇಷ್ಟಗಳೆಲ್ಲಾ ಹಾಗೆಯೆ ಅಲ್ವೇ? ಕಲಾವಿದನನ್ನು ಅವನ ಇಷ್ಟದ ಪಾತ್ರ ಯಾವುದು ಕೇಳಿದರೆ ಇನ್ನೂ ಅಂತಾದ್ದು ಸಿಕ್ಕಿಲ್ಲ ಅಂತಾರೆ, ಅದ್ಭುತವಾದ್ದು ಒಂದೇ ಮತ್ತೆ ಸಿಗದ ಹಾಗಿರಬೇಕು, (ಬಾಲ್ಯದಂತೆ) ಇಲ್ಲವೇ ಕೈಗೆ ಸಿಗದಷ್ಟು ದೂರದಲ್ಲಿರಬೇಕು. ಹಿತ್ತಲ ಗಿಡ ಮದ್ದಲ್ಲ ಅಂಬುದು ಹಳೇ ವಾಕ್ಯ ಆದರೂ ಅದರರ್ಥ ನಿತ್ಯನೂತನ, ಶಾಶ್ವತ!

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s