ನೆನಪು ಮತ್ತು ಪರಿಮಳ!

Posted: ಅಕ್ಟೋಬರ್ 7, 2010 in ಕವಿತೆ, ಕವಿತೆ ತರಹ, ಲಹರಿ
ಟ್ಯಾಗ್ ಗಳು:, , , , ,

 

ಹಾಂ..
ನಿನ್ನೆ ಬಂದಿದ್ದು ನಿಜಾ
ನನ್ನ ಹುಡುಕಿಕೊಂಡು
ಯಾವಾಗಲೂ ಬರುವುದಿಲ್ಲವದು

ಆ ಪರಿಮಳ
ಅದು ನೆನಪಿನಂತೆ

ವಾಸ್ತವದೊಳಗೆ ನಾವು
ಮೆಲ್ಲ ಕರಗುತ್ತಿರುವಾಗ
ಅಲಾರ್ಮು ಎಚ್ಚರಿಸುವಂತೆ
ನಮ್ಮನ್ನು ಏಳಿಸುತ್ತದೆ
ಕನಸಿನ ಹಗಲಿಗೆ
ಬದುಕಿನ ಬಗಲಿಗೆ

ಪುರ್ಸೋತು ಇದ್ದರೆ
ಹೊತ್ತು ನಮ್ಮ ಸ್ವತ್ತಾಗಿದ್ದರೆ
ಮನಸ್ಸಿದ್ದರೆ ಕೊಂಚ ಹೊತ್ತು ಅಲ್ಲೇ
ಬದುಕಬಹುದು
ಗಡಿಬಿಡಿ ಇಲ್ಲದೇ ಇದ್ದರೆ ಕ್ಷಣಗಳನು
ಗುಡುಗುಡಿಯಂತೆ ಸೇದಬಹುದು
ಇಲ್ಲಿ ಓಡಲಿಕ್ಕೆ ತುಂಬಾ ಇದ್ದರೆ ಕಷ್ಟ

ಆದರೂ ನನಗೆ ಚಕ್ರಸುಳಿಯೊಳಗೆ
ಸಿಲುಕಿದಂತೆ ಉಂಟುಮಾಡುವ
ಮಾಯದ ಗಾಯದಂತೆ
ಎದೆಯೊಳಗೇ ಉಳಿದುಹೋಗುವ
ಭಾಸ ಒಂದೇ ಪ್ರಶ್ನೆಯದ್ದು

ಹುಡುಕಿಕೊಂಡು ಬಂದಿದ್ದು
ಪರಿಮಳ ಹೊತ್ತು ತಂದ ನೆನಪಾ
ಅಥವಾ ನೆನಪು ತಂದ ಪರಿಮಳವಾ

ಟಿಪ್ಪಣಿಗಳು
 1. venkatakrishna.k.k. ಹೇಳುತ್ತಾರೆ:

  ಚೆನ್ನಾಗಿದೆ ಕವನ.

 2. usha ಹೇಳುತ್ತಾರೆ:

  nimma blog odoke shurumaDdaaglinda ee samasye Ranjit!!!
  bere inyaara barahagalu…ishtavaaGtaane illa. ellavannu nimma kavana galige holisinoDuvantaaG bittide…Tumbaa channaG bareeteera.

 3. ಅನಾಮಿಕ ಹೇಳುತ್ತಾರೆ:

  ರಂಜೀತ್…
  ತುಂಬಾ ಇಷ್ಟವಾಯಿತು. ಕೊನೆಯ ಪ್ಯಾರಾಗಳೆರಡೂ… ನಿಜ್ಜ ಹುಡುಕಿಕೊಂಡು ಬಂದಿದ್ದು ಯಾವುದು ಅಂತ ನಾನೂ ಯೋಚಿಸುವಂತೆ ಮಾಡಿತು.

  ಶ್ಯಾಮಲ

 4. ರಂಜಿತ್ ಹೇಳುತ್ತಾರೆ:

  ವೆಂಕಟಕೃಷ್ಣ,

  ಧನ್ಯವಾದಗಳು.

  ಉಷಾ, ಶ್ಯಾಮಲಾ

  ನಿಮ್ಮ ಮೆಚ್ಚುಗೆಗೆ ನನ್ನ ಧನ್ಯವಾದಗಳು,

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s